ಸಾಮಾಜಿಕ ಕಾರ್ಯಕರ್ತ ಧನಂಜಯ ವಾಗ್ಲೆ ಇನ್ನಿಲ್ಲ | ಅವರು ಬರೆದಿರುವ ಓದಲೇಬೇಕಾದ ಬರಹ ಇಲ್ಲಿದೆ…

July 13, 2025
5:09 PM

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಧನಂಜಯ ವಾಗ್ಲೆ ಅವರು ಈಚೆಗೆ ನಿಧನರಾದರು. ಮೂಲತ: ಸುಳ್ಯದ ಕೊಡಿಯಾಲಬೈಲಿನವರಾಗಿದ್ದ ಅವರು ಕೆಲವು ವರ್ಷಗಳಿಂದ ಪುತ್ತೂರಿನ ಬೆದ್ರಾಳದಲ್ಲಿ ವಾಸವಾಗಿದ್ದರು. ಸುಳ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಕಟ್ಟಲು, ಜನಸಂಘ-ಬಿಜೆಪಿಯನ್ನು ಕಟ್ಟಲು ಅವಿರತ ಶ್ರಮಪಟ್ಟಿದ್ದರು. 20 ವರ್ಷಗಳ ಕಾಲ ಸಂಪೂರ್ಣವಾಗಿ ತೊಡಗಿಸಿಕೊಂಡದ್ದರು. ತುರ್ತು ಪರಿಸ್ಥಿತಿ, ಅಯೋಧ್ಯೆಯ ಹೋರಾಟ ಸಂದರ್ಭದಲ್ಲೂ ತೊಡಗಿಸಿಕೊಂಡಿದ್ದರು. ಕೆಲವು ಸಮಯಗಳಿಂದ ಅವರು ಸಕ್ರಿಯವಾಗಿ ಯಾವುದೇ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿಲ್ಲ. ಅವರು ತನ್ನ ಮನಸಿನ ಭಾವನೆಗಳನ್ನು ಬ್ಲಾಗ್‌ ಮೂಲಕ ದಾಖಲಿಸಿಕೊಳ್ಳುತ್ತಿದ್ದರು. ಅಂತಹ ಹಾಗೂ 2018 ರಲ್ಲಿ ಅವರು ದಾಖಲಿಸಿ ಒಂದು ಬರಹ ಮಾರ್ಮಿಕವಾಗಿದೆ. ಅದರ ಹಿನ್ನೆಲೆಯಲ್ಲಿ ಒಂದು ಸುತ್ತು… (ಅವರ ಬರಹ ಕೊನೆಯಲ್ಲಿದೆ..)

ಧನಜಂಯ ವಾಗ್ಲೆ ಅವರು ಅಂದು ಬರೆದಿರುವ ಬರಹ ಈಗಲೂ ವಾಸ್ತವ ಕೈಗನ್ನಡಿಯಾಗಿದೆ. ಯಾವುದೇ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು “ಸಿದ್ದಾಂತ-ಹಾಗೂ ವಾಸ್ತವದಲ್ಲಿ” ವ್ಯತ್ಯಾಸ ಕಂಡಾಗ ಹೊರಬರುತ್ತಾರೆ. ಅಂತಹವರೇ ವಿರೋಧಿಯಾಗುತ್ತಾರೆ. ಯಾವುದೇ ಸಂಘಟನೆ, ಪಕ್ಷಗಳೇ ಇರಲಿ. ಸಕ್ರಿಯವಾಗಿದ್ದವರು ಹೊರಬಂದಾಗಲೇ ವಿರೋಧಿ ಅಂತ ಅನಿಸಿಕೊಳ್ಳುತ್ತಾರೆ ಅಥವಾ ವಿರೋಧಿ ಅಂತ ಬಿಂಬಿಸುತ್ತಾರೆ. ಏಕೆಂದರೆ ಅಂತಹ ಮಂದಿಗೆ ಯಾರದೋ ಇತಿಹಾಸಗಳು, ಅವರ ಒಳಗುಟ್ಟುಗಳು ತಿಳಿದಿರುತ್ತದೆ. ಅದಕ್ಕಾಗಿ ಮೊದಲೇ ವಿರೋಧಿ ಎನ್ನುವ ಭಾವನೆಯನ್ನು ಸಂಘಟನೆಯೊಳಗೆ ಬಿಂಬಿಸುತ್ತಾರೆ. ಇಂತಹ ಸಂಗತಿಗಳ ನಡುವೆ ಧನಂಜಯ ವಾಗ್ಲೆ ಅವರು ಯಾವುದಕ್ಕೂ ಉತ್ತರಿಸಿದೆ ಮೌನವಾಗಿದ್ದರು. ಎಲ್ಲಿ ಎಡವಿದ್ದೇವೆ ಎಂಬುದನ್ನು ತಿಳಿದುಕೊಂಡಿದ್ದರು. “ಸಂಘ ನನ್ನನ್ನು ಧ್ಯೇಯ ನಿಷ್ಟತೆಯಿಂದ ವಿಮುಖನಾಗದೆ ಉಳಿಸಿದೆ” ಎಂಬುದನ್ನೂ ಹೇಳಿಕೊಂಡಿದ್ದಾರೆ. ಅದಕ್ಕಾಗಿ ಡೈರಿಯ ಬದಲಾಗಿ ಬ್ಲಾಗ್ ಬರಹವನ್ನು ಅವರು ದಾಖಲಿಕೊಂಡರು.‌ ತಮ್ಮ ಆಪ್ತರ ಬಳಿ ಅವರು ಹೇಳಿಕೊಂಡದ್ದು,”ಹೊಸಬರಿಗೆ ಗೊತ್ತಾಗಲಿ, ಅಂದಿನ ಕಷ್ಟ” ಅಂತಲೇ.  ಕರಾವಳಿ ಜಿಲ್ಲೆಯನ್ನು ಗಮನಿಸಿದರೆ ಹೀಗೆ ಸಂಘಟನೆಗಳಿಂದ ಹೊರಬಂದಿರುವ, ಮೌನವಾಗಿರುವ, ವಿರೋಧಿಯಾಗಿರುವ, ಬೇರೆ ಪಕ್ಷಗಳನ್ನು-ಸಂಘಟನೆಗಳನ್ನು ಸೇರಿಕೊಂಡಿರುವ ಅನೇಕರು ಇದ್ದಾರೆ. ಅವರೆಲ್ಲರೂ ಸುಮಾರು 15-20 ವರ್ಷಗಳ ಹಿಂದೆ ಸಂಘಟನೆಗಳಲ್ಲಿ ತೊಡಗಿಸಿಕೊಂಡವರು.

ಅನೇಕ ಬಾರಿ ಹೇಳುವುದು ಒಂದು ಮಾಡುವುದು ಇನ್ನೊಂದು. ಭಾಷಣಗಳು ಆದರ್ಶವನ್ನು ಹೇಳುತ್ತವೆ, ಪ್ರಾಮಾಣಿಕತೆಯನ್ನು ಹೇಳುತ್ತವೆ. ಆದರೆ ವಾಸ್ತವದಲ್ಲಿ ಆದರ್ಶಗಳ ಪಾಲನೆಯೇ ಕಷ್ಟ. ಭ್ರಷ್ಟತೆ ಕಣ್ಣಿಗೆ ಕಾಣುತ್ತವೆ. ಹಾಗಿದ್ದರೂ ಆದರ್ಶಗಳನ್ನು ಬೋಧಿಸುವ ಮಂದಿಯಲ್ಲಿ ಎಳ್ಳಷ್ಟೂ ಕಾಣುವುದಿಲ್ಲ. ಈ ಕಾರಣದಿಂದಾಗಿಯೇ ಧನಂಜಯ ವಾಗ್ಲೆ ಅಂತಹ ಮಂದಿ ಪ್ರಮುಖವಾಗಿ ಕಾಣುತ್ತಾರೆ. ಅಂತಹ ಅನೇಕ ಮಂದಿ ಇದ್ದಾರೆ. ಆದರೆ ಬರಹವನ್ನು ದಾಖಲಿಸಿದ ಧನಂಜಯ ವಾಗ್ಲೆ ಅವರ ಬರಹದಲ್ಲಿಯೇ ಈಗ ಅವರ ಶ್ರಮ ಕಾಣುತ್ತದೆ… ಅವರು ಬರೆದಿರುವ ಎಲ್ಲಾ ಬರಹಗಳೂ ಓದಬೇಕಾದ್ದೇ ಆಗಿದೆ. ಸಾಹಿತ್ಯವಾಗಿ, ಸಾಮಾಜಿಕವಾಗಿ, ಸೈದ್ಧಾಂತಿಕವಾಗಿ ಅವರಲ್ಲಿದ್ದ ಬದ್ಧತೆ, ವೈಚಾರಿಕ ಗಟ್ಟಿತನವೂ ಕಾಣುತ್ತದೆ. ಇಂದು ಅಂತಹದ್ದರ ಕೊರತೆ ಕಾಣುತ್ತಿದೆ. ಇದಕ್ಕಾಗಿಯೇ ಧನಂಜಯ ವಾಗ್ಲೆ ಅವರಂತಹವರು ಮಾದರಿ. ಅವರು ಅವರದೇ ಬ್ಲಾಗ್‌ “ನನ್ನ ವಿಚಾರಗಳು” ಗಳಲ್ಲಿ 2018 ಅಕ್ಟೋಬರ್‌ 7 ರಂದು ಸ್ಪಷ್ಟವಾಗಿ ಬರೆದಿದ್ದಾರೆ. ಅದರ ಯಥಾವತ್ತಾದ ರೂಪ ಇಲ್ಲಿದೆ…

ಆ ಕರಾಳ ರಾತ್ರಿಯ ನೆನಪಿನೊಂದಿಗೆ ಜೀವನ:

ಪ್ರತಿ ವರ್ಷ ಜೂನ್ 25 ಬಂತೆಂದರೆ ಆ ಕರಾಳ ರಾತ್ರಿಯ ಘನಘೋರ ದುರಂತಗಳು ಕಣ್ಣೆದುರಿಗೆ ಬಂದು ಧುತ್ತನೆ ನಿಲ್ಲುತ್ತದೆ. ಮನುಷ್ಯನ ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ನ್ಯಾಯಾಂಗ, ಕಾರ್ಯಾಂ ಗಳನ್ನು ನಿರ್ಬಂಧಿಸಿ ದೇಶದಲ್ಲಿ ತುರ್ತುಸ್ಥಿತಿ ಹೇರುವ ಮುಖಾಂತರ ವಿರೋಧ ಪಕ್ಷಗಳ ರಾಜಕೀಯ ನಾಯಕರನ್ನು ಏಕಾಏಕಿ ಬಂಧಿಸಿ ಕಾರಾಗೃಹಕ್ಕೆ ತಳ್ಳಿ ರಾತ್ರಿ ಬೆಳಗಾಗುತ್ತಲೇ ದೇಶ ನಿಶ್ಯಬ್ಧವಾಗಿತ್ತು.  ನಂತರದ ದಿನಗಳಲ್ಲಿ ಪೊಲೀಸರ ಮುಖಾಂತರ ಹಿಂಸಾತ್ಮಕ ದಮನಚಕ್ರ, ಸಂಘದ, ವಿರೋಧ ಪಕ್ಷಗಳ ಕಾರ್ಯಕರ್ತರ ಮೇಲೆ ನಿರಂತರವಾಗಿ ಹಿಂಸಿಸಿ ನೂರಾರು ಮಂದಿಯ ಮನೆಗಳು ನಿರ್ಗತಿಕವಾದವು. ಸಂಘದ ಕಾರ್ಯಕರ್ತರ ಮನೆಗಳಂತೂ ನರಕ ಸದೃಶವಾದವು.   ಆಗಸ್ಟ್ 15, 1947 ಮಧ್ಯರಾತ್ರಿ ನಮಗೆ ಬ್ರಿಟಿಷರಿಂದ ಸ್ವಾತಂತ್ರ್ಯದೊರಕಿದ ದಿನ, ದುರಂತವೆಂದರೆ ಸ್ವಾತಂತ್ರ್ಯ ತೆಗೆದು ಕೊಂಡ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರಿಂದಲೇ ಸಂವಿಧಾನ ಬಾಹಿರ ಸ್ವಾತಂತ್ರ್ಯ ಹರಣವಾಯಿತೆಂಬುದು ಐತಿಹಾಸಿಕ ದುರಂತವಾಯಿತು.

Advertisement

ಅಂದು ಜೂನ್ 25, 1975 ಸುಮಾರು ನಾಲ್ಕು ಗಂಟೆಯ ಸಮಯಕ್ಕೆ ಸಂಘದ ಸುಳ್ಯ ನಗರ ಕಾರ್ಯವಾಹಕರಾಗಿದ್ದ ಪುಟ್ಟಪ್ಪ ಜೋಶಿಯವರು ನಮ್ಮ ಮನೆಗೆ ಅಥಿತಿಯೋರ್ವರನ್ನು  ಕರೆದುಕೊಂಡು ಬಂದರು. ಇವರು ಇನ್ನು ಮುಂದೆ ಸುಳ್ಯ ತಾಲೂಕಿಗೆ ಸಂಘದ ಪ್ರಚಾರಕರಾಗಿರುತ್ತಾರೆಂದು ಪರಿಚಯಿಸಿದರು ಮತ್ತು ನನ್ನ ಅಮ್ಮನನ್ನು ಪರಿಚಯಿಸಿದರು. ಉಭಯ ಕುಶಲೋಪರಿಯ ನಂತರ ನಾವು ಮೂವರು ಸುಳ್ಯದ ಪೇಟೆಯ  ಕಡೆಗೆ ಬಂದೆವು.  ಪ್ರಚಾರಕರು ಕಾರ್ಯಾಲಯಕ್ಕೂ  ಜೋಶಿಯವರು ಅವರ ಮನೆಗೆ ಹೋದರು. ನಾನು ಏಳು ಗಂಟೆಯ ಹೊತ್ತಿಗೆ ಮನೆಗೆ ತಲುಪಿದೆ.  ಮಳೆಗಾಲವಾದ್ದರಿಂದ ಬೇಗ ಊಟ ಮಾಡಿ ಮಲಗಿದೆ.  ಮಾರನೆಯ ದಿನ ಬೆಳಗಾಗುತ್ತಲೇ ಜೋಶಿಯವರು ಮನೆಗೆ ಬಂದಿದ್ದರು.  ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗಿದೆ ಸಂಘದ ನಿಷೇಧವಾಗಿದೆ. ಬಹಳ ಜಾಗರೂಕರಾಗಿರುವಂತೆ ಹೇಳಿ ಹೊರಟರು.

ನಾನು ಬೇಗನೆ ಪೇಟೆಗೆ ಹೋಗಿ ಪತ್ರಿಕೆಯನ್ನು ಕೊಂಡು ನೋಡಿದರೆ ಸಂಪಾದಕೀಯದ ಸ್ಥಳ  ಕಪ್ಪಾಗಿ ಅಚ್ಚಾಗಿತ್ತು. ರಾತ್ರಿ 2 ಗಂಟೆಗೆ ಶ್ರೀಮತಿ ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿಯನ್ನು ಘೋಸಿಷಿ ಜನರ ಮತ್ತು ಪತ್ರಿಕೆಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ರಾಜಕೀಯ ವಿರೋಧಿ  ಮುಖಂಡರನ್ನು ಬಂಧಿಸಿದ ಸುದ್ದಿಯೊಂದಿಗೆ ದಪ್ಪ ಅಕ್ಷರಗಳಲ್ಲಿ ಆರ್ ಯಸ್ ಯಸ್ ನ್ನು ನಿಷೇಧಿಸಿದ ಸುದ್ದಿ ಪ್ರಕಟವಾಗಿತ್ತು. ತುರ್ತುಪರಿಸ್ಥಿತಿಯ ಆ ಕರಾಳ ದಿನಗಳು ಅತ್ಯಂತ ಭಯಾನಕವಾಗಿದ್ದರೂ ಧೃತಿಗೆಡದ ಸಂಘದ ಕಾರ್ಯಕರ್ತರು ಆಗಸ್ಟ್ ಪ್ರಥಮ ವಾರದಲ್ಲಿ ಸರ್ವಾಧಿಕಾರದ ವಿರುದ್ಧ ಆ ಕರಾಳ ದಿನಗಳಲ್ಲಿ ನಡೆಯುತ್ತಿದ್ದ ಹಿಂಸಾತ್ಮಕ ದಮನ ಚಕ್ರದ ಸತ್ಯ ಸಂಗತಿಗಳನ್ನು  ತಲುಪಿಸುವ ಸಲುವಾಗಿ “ಕಹಳೆ” ಎಂಬ ಪತ್ರಿಕೆ ಪ್ರಕಟವಾಗಿ ಕೈಸೇರಿತು. ಅಂದಿನಿಂದ ಭೂಗತರಾಗಿ ಕೆಲಸ ನಿರ್ವಹಿಸುತ್ತಿದ್ದ ಪುಟ್ಟಪ್ಪ ಜೋಷಿಯವರು ಒಂದುವರೆ ವರುಷದ ನಂತರ ಕಹಳೆ ಪತ್ರಿಕೆಯ ಪ್ರಿಂಟಿಂಗ್ ಮಷೀನ್ ಸಾಗಿಸುತ್ತಿದ್ದಾಗ ಬಂಧಿಯಾದರು ನಂತರ ಸ್ವಲ್ಪ ಸಮಯದ ನಂತರ ಬಿಡುಗಡೆಯಾದರು.  ಪ್ರಚಾರಕರಾಗಿ ಬಂದಿದ್ದ  ದು. ಗು. ಲಕ್ಷ್ಮಣ ರವರು ಭೂಗತರಾಗಿ ಸಂಘ ಕಾರ್ಯದಲ್ಲಿ ತೊಡಗಿದ್ದರು. ಹೊಸದಿಗಂತ ಪತ್ರಿಕೆಗೆ ಸಂಪಾದಕರಾಗಿ ಬಂದ ನಂತರ ಅವರ ಕಚೇರಿಯಲ್ಲಿ ನಾನು ಅವರನ್ನು ಭೇಟಿಯಾದೆ. ಸುಳ್ಯದ ಒಂದು ಭಾಗದ ಆಯ್ದ ಮನೆಗಳಿಗೆ ಪತ್ರಿಕೆ ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸಿದೆ. ಪ್ರಸಕ್ತ ಪರಿಸ್ಥಿತಿಯನ್ನು ಎದುರಿಸಲು ಅದಾಗಲೇ ಜಯಪ್ರಕಾಶ್ ನಾರಾಯಣಜಿಯವರ ನೇತ್ರತ್ವದಲ್ಲ್ಲಿ ಜನ ಸಂಘರ್ಷ ಸಮಿತಿ ತುರ್ತುಪರಿಸ್ಥಿತಿಯನ್ನು ವಿರೋಧಿಸುವ ಕಾರ್ಯವನ್ನು  ಆರಂಭಮಾಡಿತ್ತು.   ಸುಳ್ಯದ ಪ್ರಥಮ ಸತ್ಯಾಗ್ರಹ 1976 ನವೆಂಬೆರ್ 9 ರಂದು ಶ್ರೀ ರಾಮ ಭಜನಾ ಮಂದಿರದಿಂದ ಆರಂಭವಾಗಿ 25 ಜನರ ತಂಡವನ್ನು ಪೊಲೀಸರು ಬಂಧಿಸಿ ದೈಹಿಕವಾಗಿ ಹಿಂಸೆಗೆ ಒಳಪಟ್ಟಿದ್ದರೂ ಯಾರು ಧೃತಿಗೆಡಲಿಲ್ಲ. ಯುವಜನ ಮೇಳದ ಅಂಗವಾಗಿ ಸುಳ್ಯದ ಹೈಸ್ಕೂಲಿಗೆ ಬಂದ ಅಂದಿನ ಕರ್ನಾಟಕ ಸರಕಾರದ ಕ್ರೀಡಾ ಸಚಿವರದ ಶ್ರೀ ವೀರಪ್ಪ ಮೊಯ್ಲಿಯವರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಸತ್ಯಾಗ್ರಹ ನಡೆಸಿ 24 ಜನರ ಬಂಧನವಾಗಿತ್ತು. ಪೋಲಿಸ್ ಇಲಾಖೆಯು  ನಮ್ಮೆಲ್ಲರನ್ನು ಹಿಂಸೆಗೆ ಒಳಪಡಿಸಿದ್ದಲ್ಲದೆ ಅವರ ಹೊಡೆತದಿಂದ  ನನ್ನ ಬಲ ಕಿವಿಯ ತಮ್ಮಟೆ ಒಡೆದು ಕಿವಿ ಶಾಶ್ವತವಾಗಿ ಕಿವುಡಾಯಿತು. ನಮ್ಮ ತಂಡವು   ಡಿ ಐ ಆರ್ ಕೇಸಿನಲ್ಲಿ 49 ದಿನಗಳ ಕಾಲ ಜೈಲುಶಿಕ್ಷೆಯನ್ನು ಅನುಭವಿಸಿ ಆರೋಪ ಮುಕ್ತವಾಗಿ ಹೊರಬಂದೆವು. ಬಾಬಲುಬೆಟ್ಟು ವೆಂಕಪ್ಪ ಗೌಡರು ನಮ್ಮ ಪರವಾಗಿ ವಾದಿಸಿದ್ದರು.

1977ರ  ನವೆಂಬರ್ ಕೊನೆಯ ವಾರ ಸ್ವಲ್ಪವೇ ಇರುವ ನಮ್ಮ ತೋಟಕ್ಕೆ ನಾನು ಮತ್ತು ಅಮ್ಮ ನೀರು ಹಾಕುತ್ತಿದ್ದೆವು. ಸುಮಾರು 11 ಗಂಟೆಯ ಸಮಯ ಪೊಲೀಸರೊಬ್ಬರು ಬಂದು ಬೇಗನೆ ಹೊರಟು ಬರುವಂತೆ ಸೂಚಿಸಿದರು. ಏನನ್ನು ಮಾತನಾಡದೆ ಅವರೊಂದಿಗೆ ಹೊರಟೆ. ಅಮ್ಮನ ಕಣ್ಣಲ್ಲಿ ನೀರಿತ್ತು.  ಆದರೂ ಧೈರ್ಯ ಹೇಳಿ ಹೊರಟೆ. ರಸ್ತೆಯಲ್ಲಿ ಕಾರೊಂದು ನಿಂತಿತ್ತು, ಆಧಿಕಾರಿಯೊಬ್ಬರು ಕುಳಿತ್ತಿದ್ದರು ಹಾಗೂ  ನನ್ನನ್ನು ಕುಳಿತುಕೊಳ್ಳುವಂತೆ ಹೇಳಿದರು. ಸುಮಾರು 1 ಘಂಟೆಯ ಕಾಲ ಪ್ರಶ್ನೆಗಳ ಸುರಿಮಳೆ…!  ಪ್ರತಿಯೊಂದಕ್ಕೂ ನಿರ್ಭೀತಿಯಿಂದ ಉತ್ತರಿಸಿದೆ.  ಸಂಘಕ್ಕೆ ಯಾಕೆ ಸೇರಿದ್ದೀ?? ಎಂದಾಗ “ಸಂಘ ಹಿಂದೂ ಸಂಘಟನೆ, ನಾನು ಹಿಂದೂ ಅದಕ್ಕಾಗಿ ಸಂಘದಲ್ಲಿ ಅಲ್ಪ ಕೆಲಸ ಮಾಡಿದ್ದೇನೆ”.  “ಸಂಘ ನಿಷೇದಗೊಂಡಿದೆ”… ಎಂದರು.  “ಈಗ ಸಂಘದ ಯಾವುದೇ  ಚಟುವಟಿಕೆಗಳಲ್ಲಿ ನಾನು ಇಲ್ಲ” ಎಂದೆ.  ಕಾರು ಮುಂದುವರಿದು ಪ್ರವಾಸಿ ಮಂದಿರಕ್ಕೆ ಬಂತು, ಅಲ್ಲಿ ಪುಟ್ಟಪ್ಪ ಜೋಷಿಯವರ ತಮ್ಮ ರಾಮಚಂದ್ರ ರನ್ನು ಪೊಲೀಸರು ಕರೆದುಕೊಂಡು ಬಂದಿದ್ದರು. ಒಟ್ಟಿಗೆ ಸೇರಿದಾಗ ಅವರ ಪ್ರಶ್ನೆಗಳ ಧಾಟಿಯೇ ಬೇರೆಯಾಗಿತ್ತು.  “ಚಂದ್ರು ಟೈಲರ್ ನಿಮಗೆ ಗೊತ್ತೆ?”  “ ಗೊತ್ತು”,  “ನಾಲ್ಕು ದಿನಗಳ ಹಿಂದೆ ನಿಮ್ಮ ಮನೆಗೆ ಬಂದಿದ್ದ”… “ಹೌದು”. “ಅವನು ಇರುವ ಸ್ಥಳ ನಿಮಗೆ ಗೊತ್ತಿದೆ”.  “ಇಲ್ಲ” ಎಂದೆವು ನಾವು. ಹೊರಗೆ ಮತ್ತೊಂದು ಕಾರೊಂದು ಬಂದು ನಿಂತಿತ್ತು. ಅದ್ರಲ್ಲಿ ಚಂದ್ರು ಟೈಲರ್ರವರ ಸಂಬಂಧಿಕರಿದ್ದರು. ಒಬ್ಬೊಬ್ಬರನ್ನೇ ಕರೆದು ಪೋಲಿಸ್ ಭಾಷೆಯಲ್ಲಿ ವಿಚಾರಿಸಿದರು ಉಪಯೋಗವಿಲ್ಲದಾಗ ಸಿಕ್ಕಸಿಕ್ಕಲ್ಲಿ ದನಗಳಿಗೆ ಬಡಿದಂತೆ ಬಡಿದರು. ನಾವು ನಿಂತಲ್ಲೇ ಗರಬಡಿದವರಂತೆ ನಿಂತಿದ್ದೆವು. ಆನಂದ ನಾಯಕ್, ಅಚ್ಚುತ್ತ ನಾಯಕ್, ಸುಂದರ ನಾಯಕ್ ಮೂವರಿಗೂ ಕೊಟ್ಟ ಹಿಂಸೆ ಅಸಹನೀಯವಾಗಿತ್ತು. ಅಷ್ಟಾದರೂ ಅವರ ಉತ್ತರ ಒಂದೇ ಆಗಿತ್ತು. “ಮನೆಗೆ ಬಂದದ್ದು ಹೌದು” “ಈಗ ಎಲ್ಲಿದ್ದಾರೆ ಎಂದು ಗೊತ್ತಿಲ್ಲ”. ಇದರಿಂದಾಗಿ ನಾವಿಬ್ಬರು ಪೋಲಿಸ್ ಕಾರ್ಯಾಚರಣೆಯಿಂದ ಬಚಾವಾದೆವು ಎಂದೆನಿಸುತ್ತದೆ.

ಉಳಿದವರನ್ನೆಲ್ಲಾ ಮನೆಗೆ ಕಳುಹಿಸಿ ಚಂದ್ರು ಎಲ್ಲೆಲ್ಲ ಹೋಗಿದ್ದಾನೆ ಅಲ್ಲೆಲ್ಲ ಹೋಗಿ ಅವನ ವಿಳಾಸ ತರಲು ಹೇಳಿದರು. 1000 ರೂಪಾಯಿಯ ಕಟ್ಟನ್ನು ಮೇಜಿನಮೇಲಿಟ್ಟರು. ಇದು ನಿಮ್ಮ ಖರ್ಚಿಗೆ ಎಂದರು. ನಾವು ಬೇಡವೆಂದೆವು. ನೀವು ಚಂದ್ರುವಿನ ವಿಳಾಸ ಪತ್ತೆ ಹಚ್ಚದಿದ್ದರೆ ನಿಮಗೆ ಬಿಡುಗಡೆ ಇಲ್ಲವೆಂದರು. ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡಿ ಎಂದರು. ನಾವೇನು ತಪ್ಪು ಮಾಡಲ್ಲಿಲ್ಲ ಪ್ರಯತ್ನವಂತೂ ಮಾಡುತ್ತೇವೆ ಎಂದೆವು. ನಾಳೆ ಸಂಜೆಯ ಒಳಗೆ ನೀವು ಹೋದ ವಿವರ ಕೊಡಬೇಕೆಂದರು. ಸುಮಾರು ಒಂದು ವಾರಗಳ ಕಾಲ ಪರಿಚಯವಿರುವವರಲ್ಲಿ ಹೋಗಿ ಬಂದು ವರದಿ ಮಾಡುತ್ತಿದ್ದೆವು. ಏಳನೇ ದಿನಕ್ಕೆ  ಬಂದಾಗ ಪೊಲೀಸರು ಅಲ್ಲಿಂದ ಹೋಗಿದ್ದಾರೆ ಎಂದು ತಿಳಿಯಿತು. ಅವರೇ ಕೆ. ಯಲ್. ಏನ್. ರಾವ್ CIDಯ ಮುಖ್ಯಸ್ಥರಾಗಿದ್ದರು. ಅವರು ಪುತ್ತೂರು ತಾಲೂಕಿನ ಕಾವು ಎಂಬಲ್ಲಿಯ ನಿವಾಸಿಯಾಗಿದ್ದರು ಎಂದು ಪುಟ್ಟಪ್ಪ ಜೋಷಿಯವರು ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ ತಿಳಿಸಿದರು. ಇಷ್ಟಕ್ಕೂ ಚಂದ್ರು ಟೈಲರ್ ಕಲ್ಲಡ್ಕದ ಕೇಸಿನಲ್ಲಿ ಎರಡನೇ ಅಪರಾಧಿಯಾಗಿದ್ದರಿಂದ ಹುಡುಕುತ್ತಿದ್ದರು. 1990 ರಲ್ಲಿ 14 ವರ್ಷಗಳ ನಂತರ ಸುಳ್ಯಕ್ಕೆ ಬಂದು ಕೋರ್ಟಿನ ಮೊರೆಹೋಗಿ ಬಿಡುಗಡೆಯಾದರು.

ಆರ್ಥಿಕವಾಗಿ ಬಹಳ ಕಷ್ಟದ ದಿನಗಳಿದ್ದಾಗಲೇ, 1968ರ  ಆಗಸ್ಟ್ ನಲ್ಲಿ ರಕ್ಷಾಬಂಧನ ಕಾರ್ಯಕ್ರಮಕ್ಕೆ ಕೊಡಿಯಾಲ ಬೈಲಿಗೆ ಸಂಪರ್ಕಕ್ಕೆಂದು ಬಂದ ಜೋಷಿ ಮತ್ತು ಚಂದ್ರು ಟೈಲರ್ ಅವರ ಮುಖಾಂತರ ನಾನು ಸಂಘದ ಸ್ವಯಂಸೇವಕನಾದೆ. ಕೆಲಸದ ಮನೆಗೆ ಬೆಳಿಗ್ಗೆ 7 ಘಂಟೆಗೆ  ಹೋಗಿ ಸಂಜೆ 5 ಘಂಟೆಗೆ ಕೆಲಸಬಿಟ್ಟು 5 ರಿಂದ 6ರರ ತನಕ ಸಂಘದ ಶಾಖೆ, ನಂತರ ಮನೆಗಳ ಸಂಪರ್ಕ. ಇದು ನನ್ನ ಜೀವನದ ಅವಿಭಾಜ್ಯ ಅಂಗವಾಯಿತು. ಸುಮಾರು 13 ವರ್ಷಗಳ ಕಾಲ ನಿರಂತರ ಸಂಘದ ಶಾಖೆಯ ಕೆಲಸ ನಿರ್ವಹಿಸಿದೆ.  ನಮ್ಮ ಶಾಖೆಯಿಂದ ಸ್ವಯಂಸೇವಕರಾಗಿ ಗಂಗಾಧರ ವಾಗ್ಲೆಯವರು 7 ವರ್ಷಗಳ ಕಾಲ ಕೊಡಗು ಜಿಲ್ಲೆಯಲ್ಲಿ ಪ್ರಚಾರಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಹಾಗೆಯೇ  ಪ್ರಕಾಶ ವಾಗ್ಲೆ ಯವರು  ಸುಮಾರು 3 ವರುಷಗಳ ಕಾಲ ಮುಖ್ಯ ಶಿಕ್ಷರರಾಗಿ  ಶಾಖೆಯನ್ನು ನಿರ್ವಹಿಸಿದ್ದರು ಮತ್ತು ರಾಧಾಕೃಷ್ಣ ವಾಗ್ಲೆಯವರು ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಸಿದ್ದರು. ಪೂಜನೀಯ ಹೋ. ವೆ. ಶೇಷಾದ್ರಿಯವರು ನಮ್ಮ ಶಾಖೆಗೆ ದ್ವಜ ಪ್ರಧಾನ ಮಾಡಿದ್ದು  ನನ್ನ ಜೀವನದ ಸೌಭಾಗ್ಯವೆನಿಸುತ್ತದೆ.

Advertisement

ಸುಮಾರು 15 ವರುಷಗಳ ಕಾಲ ಜನತಾ ಪಾರ್ಟಿ BJPಯಲ್ಲಿ ಸಕ್ರಿಯನಾಗಿ ಕೆಲಸ ನಿರ್ವಹಿಸಿದೆ. ಇದೇ ಸಮಯದಲ್ಲಿ 1 ವರುಷ ಕಾಲ ವಯಸ್ಕರ ರಾತ್ರಿ ಶಾಲೆಯೊಂದನ್ನು  ನಡೆಸಿದೆ. ಆರಂಭದಲ್ಲಿ ಸುಮಾರು 15 ಜನ ವಯಸ್ಕರಿದ್ದು ಕೊನೆಗೆ ಜೀರ್ಣವಾಗುತ್ತಾ ಬಂದು 5 ಜನ ಉಳಿದುಕೊಂಡರು ಮತ್ತು ಅವರಿಗೆ ವಯಸ್ಕರ ಶಿಕ್ಷಣ ಮಂಡಳಿಯಿಂದ  ಕಲಿಕೆಯ ಪ್ರಮಾಣ ಪತ್ರಗಳನ್ನು  ದೊರಕಿಸಿಕೊಟ್ಟೆ. ಇದರಲ್ಲಿ ಗುರುವ ಮತ್ತು ಬಾಬು ಎಂಬವರಿಗೆ ತೋಟಗಾರಿಕಾ ಇಲಾಖೆಯಲ್ಲಿ  ಸರಕಾರಿ ನೌಕರರಾಗಿ  ಕೆಲಸ ದೊರಕಿತಲ್ಲದೆ ಭಡ್ತಿ ಹೊಂದಿ ನಿವೃತ್ತರಾಗಿದ್ದಾರೆ. 1983 ರಲ್ಲಿ ಬಾಕಿಲ ಹುಕ್ರಪ್ಪನವರು ಸುಳ್ಯ ದಿಂದ BJP ಯಲ್ಲಿ ಆಯ್ಕೆಯಾದಾಗ ಭಾಷಣಗಾರರ ಕೊರತೆ ತುಂಬಾ ಇತ್ತು. ಅನಿವಾರ್ಯವಾದಾಗ ನಾನೇ ಭಾಷಣಕಾರನಾಗಿದ್ದೆ. ಅದೇ ಸಮಯಕ್ಕೆ ಸುಳ್ಯ ಪುರ ಸಭೆಯ ಚುನಾವಣೆ ಘೋಷಣೆಯಾಗಿತ್ತು. ಕಾಂಗ್ರೆಸ್ ನ ಭದ್ರಕೋಟೆಯಲ್ಲಿ ನಾನು, ಎಂ. ಚೆನ್ನಕೇಶವ ಗೌಡ ಶೇರ್ಕಜೆ ಮತ್ತು ಜಿ. ವಿ. ಕೃಷ್ಣ ಪ್ರಥಮ ಬಾರಿಗೆ ಆಯ್ಕೆಯಾಗಿ ಬಂದೆವು. ಮಿಲಿಟರಿ ಗ್ರೌಂಡ್ ಎಂಬ ಸ್ಥಳದಲ್ಲಿ ಬಡವರಿಗೆ ಹಂಚಲು ತಹಶೀಲ್ದಾರರು ಮಂಜೂರು ಗೊಳಿಸಿದ 10 ಎಕರೆ ಸ್ಥಳವು ನಮ್ಮ ವಾರ್ಡಿನದಾಗಿದ್ದು  ತಲಾ 5 ಸೆಂಟಿನಂತೆ ಆಳತೆ ಮಾಡಿ ಗಡಿಗುರುತು ಹಾಕಿ ನಾವೇ ನಿಂತು ಮಾಡಿದ ಜನವಸತಿಗೆ ಜಯನಗರ ಎಂದು ನಾಮಕರಣವಾಯಿತು. ಇಂದು ಜನನಿಬಿಡ ಪ್ರದೇಶವಾಗಿ ಬೆಳೆದು ನಿಂತಿರುವುದನ್ನು ನೋಡಿದರೆ ಆಶ್ಚರ್ಯವನ್ನುಂಟುಮಾಡುತ್ತದೆ.

ಆ ನಂತರ ಬಿಜೆಪಿಯ ಯಶೋಗಾಥೆ  ಆರಂಭವಾಯಿತೆಂದೇ ಹೇಳಬೇಕು. ಸುಳ್ಯ ಸಿ ಎ ಬ್ಯಾಂಕ್ ಕಾಂಗ್ರೆಸಿನ ಬಹುದೊಡ್ಡ ಅಡ್ಡೆಯಾಗಿತ್ತು. ಇಡೀ ತಾಲೂಕಿನ ಎಲ್ಲಾ ಗ್ರಾಮಗಳನ್ನು ನಿಯಂತ್ರಿಸುವ ಶಕ್ತಿಕೇಂದ್ರ ವಾಗಿ ಕಾರ್ಯಾಚರಿಸುತ್ತಿತ್ತು. ಅದನ್ನು ಕೈವಶ ಮಾಡಲು ತೀರ್ಮಾನಿಸಿದ ನಾವು ಪ್ರತಿವರ್ಷ ಸದಸ್ಯರನ್ನು ಸೇರಿಸುವುದು, ಚುನಾವಣೆ ಬಂದಾಗ ಸ್ಪರ್ಧಿಸಿ  ಸಮೂಲ ಸೋಲುವುದು. ಈ ಮಧ್ಯೆ ಎ  ಎಸ್ ವಿಜಯ ಕುಮಾರ್ ಆಯ್ಕೆಯಾದುದು ಇಡಿ ಚುನಾವಣೆ ಗೆದ್ದಷ್ಟು ಸಂತಸವಾಗಿತ್ತು. ಮುಂದುವರೆದ ಹೋರಾಟದ 3 ನೇ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಒಂದೇ ಒಂದು ಸ್ಥಾನ ದೊರಕದೆ ಅದರ ಅವಸಾನವಾಯಿತೆಂದೇ ಹೇಳಬಹುದು. ಶೇ. 90 ಭಾಗ ಸಹಕಾರ ಸಂಘಗಳು 85 ಭಾಗ ಗ್ರಾಮ ಪಂಚಾಯತಿಗಳು ಇಂದಿನವರೆವಿಗೂ ನಮ್ಮ ಕೈಯಲ್ಲೇ ಉಳಿದಿರುವುದು ಸಂತೋಷವೆನಿಸುತ್ತದೆ.

ನಾನು ನನ್ನ ವೈಯಕ್ತಿಕ ಜೀವನವನ್ನು 1996 ರಕ್ಕೆ ಆರಂಭಿಸಿದೆ. ಅದಾಗಲೇ 4.5 ಲಕ್ಷ ಸಾಲ ಮೀರಿಹೋಗಿತ್ತು. ಜೀವನಕ್ಕೆ ದಾರಿಯೇ ಕಾಣದಾದಾಗ ರಾಜಕೀಯ ಕ್ಷೇತ್ರದಿಂದ ದೂರವಾಗದೆ ಬೇರೆ ದಾರಿಯೇ ಇರಲಿಲ್ಲ. ಪೂರ್ವ ಜನ್ಮದ ಪುಣ್ಯದ ಫಲವೋ ಎಂಬಂತೆ ನನ್ನ ತಂದೆಯವರ ಸ್ನೇಹಿತರು ಆಗಿದ್ದ ಶ್ರೀ.ವಿಟ್ಟಲ ನಾಯಕ್ ರವರು 2 ಬಸ್ ನಿಲ್ದಾಣದ  ಮಧ್ಯೆ ತಾವೇ ನಡೆಸುತ್ತಿದ್ದ ಸಣ್ಣ ಗೂಡoಗಡಿಯನ್ನು ತನ್ನ ಅನಾರೋಗ್ಯದಿಂದ ನಡೆಸಲು ಕಷ್ಟವಾಗುತ್ತದೆ, ನೀನೇ ಈ ಅಂಗಡಿಯನ್ನು ನಡೆಸು ಎಂದರು. ಸಾಲದಿಂದ ಜರ್ಜರಿತನಾಗಿದ್ದ ನನಗೆ ಏನೂ ಮಾಡಲು ತೋಚದಾದಾಗ ಅವರೇ ಹಣವನ್ನು ನೀಡಿ, ಎಲ್ಲವನ್ನು ಬಿಟ್ಟು ವ್ಯಾಪರದಲ್ಲೇ ಮನಸ್ಸುಕೊಟ್ಟು ದುಡಿದರೆ ಉದ್ಧಾರ ಆಗುತ್ತೀಯ ಎಂದರು. ನನ್ನ ಆತ್ಮೀಯ ಮಿತ್ರರಾಗಿದ್ದ ಸುಳ್ಯದ ಹೋಟೆಲ್ ಉದ್ಯಮಿ ಶ್ರೀ ಜಯಂತ ಕೆದಿಲಾಯರ ಹತ್ತಿರ ಅಂಗಡಿಯ ಪ್ರಸ್ತಾಪವನ್ನು ಇಟ್ಟೆ. ಕೂಡಲೇ ಅವರು  ಅಂಗಡಿ ಮಾಡಿಕೊಳ್ಳುವಂತೆ ಹೇಳಿದರು. ಈ ಹಿಂದೆ ಅಂಗಡಿ  ಮಾಡಿ ಸೋತ ಕಾರಣಗಳನ್ನು ಮುಂದಿರಿಸಿದೆ. ಅದಕ್ಕವರು ವ್ಯಾಪಾರದಲ್ಲಿ ಯಾರು ಸೋಲಲು ಸಾದ್ಯವಿಲ್ಲ ದೌರ್ಬಲ್ಯಗಳನ್ನೂ ಮೀರಿ ಧೃಡನಿರ್ಧಾರದಿಂದ ವ್ಯಾಪಾರ ಮಾಡಿದರೆ ಸೋಲು ಸಾಧ್ಯವೇ ಇಲ್ಲ. ಸಣ್ಣ ಉದಾಹರಣೆಗೆ ಉತ್ತರ ಕಂಡುಕೊಳ್ಳುವಂತೆ, ಅತೀ ಸಣ್ಣ ಆದರೆ ಅತೀ ಕ್ಲಿಷ್ಟಕರವಾದ ಒಂದು ಸಂಗತಿಯನ್ನು ನನ್ನ ಮುಂದಿರಿಸಿದರು.

1 ರೂಪಾಯಿ ಬಿಸ್ಕೆಟ್ ತಂದು 90 ಪೈಸೆಗೆ ಮಾರಿದರೆ ನಷ್ಟವಾಗುತ್ತದೆ.  ಅದೇ ಬಿಸ್ಕೆಟ್ ನ್ನು 1 ರೂಪಾಯಿ  10 ಪೈಸೆಗೆ ಮಾರಿದರೆ 10 ಪೈಸೆ ಲಾಭ ಬರುತ್ತದೆ.  ಆ 10 ಪೈಸೆಯನ್ನು ನೀವು ಜೀವನದಲ್ಲಿ ಹೇಗೆ ವಿನಿಯೋಗಿಸುತ್ತೀರಿ ಎನ್ನುವುದರ ಮೇಲೆ ಬದುಕು ನಿರ್ಧಾರಿತವಾಗುತ್ತದೆ ಎಂದರು.  ಅವರ ಮಾತಿನಿಂದ ಮೆದುಳು ಒಂದರೆಗಳಿಗೆ ಸ್ತಬ್ಧವಾದಂತಾಯ್ತು.  ಆ ದಿನ ಅವರ ಮಾತೇ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದಾದರೂ ಉತ್ತರ ಕಂಡು ಹಿಡಿಯಲಾಗಲಿಲ್ಲ.  ಬೆಳಗ್ಗಿನ ಜಾವ ಜೀವನವನ್ನು ಹಿಂತಿರುಗಿ ನೋಡಿದೆ.  ಸ್ವಯಂ ಸೇವಕನಾಗಿ ಸಂಘದಲ್ಲಿ ಕಲಿತ ಶಿಸ್ತು, ಸಂಯಮ, ಧ್ಯೇಯ ನಿಷ್ಠೆಗಳು ಜಾಗ್ರತಗೊಂಡವೆಂದೇ ಹೇಳಬೇಕು.  10 ಪೈಸೆ ಖರ್ಚು ಮಾಡುವ ಕುರಿತು ಒಂದು ಗಟ್ಟಿ ನಿರ್ಧಾರಕ್ಕೆ ಬಂದೆ.  ನನ್ನ ಎರಡು ಜನ ಗಂಡು ಮಕ್ಕಳ ವಿದ್ಯಾಭ್ಯಾಸಕ್ಕೆ 2 ಪೈಸೆ, 3 ಪೈಸೆ ಸಾಲಕ್ಕೆ, 2 ಪೈಸೆ ಅಂಗಡಿ ಅಭಿವೃದ್ಧಿಗೆ, 2 ಪೈಸೆ ಮನೆಗೆ, 1 ಪೈಸೆಯನ್ನು ನನ್ನ ವೈಯಕ್ತಿಕ ಖರ್ಚಿಗೆಂದು ಕಾಗದದಲ್ಲಿ ಬರೆದುಕೊಂಡು ನೋಡಿದಾಗ ಬೆಳಗ್ಗಿನ ಜಾವ ಆಗಿತ್ತು.  ಅದನ್ನು ಅವರಿಗೆ ತೋರಿಸಿದೆ, ವ್ಯಾಪಾರ ಎಂಬ ಕರ್ತವ್ಯದ ಮೇಲೆ ನಂಬಿಕೆಯನ್ನಿಟ್ಟು ತಪಸ್ಸನ್ನಾಚರಿಸಿದರೆ 100 – 1000 ದ ದಾಮಾಶಯದಲ್ಲಿ ನಿತ್ಯ ಸಂಜೆಗೆ ಸಂಬಂಧಪಟ್ಟ ಖಾತೆಗಳಿಗೆ ತನ್ನದಲ್ಲದ ಹಣವೆಂದು ಕೂಡುತ್ತ ಬಂದರೆ ನಿಮ್ಮ  ಜೀವನ ಯಶಸ್ವಿಯಾಗುತ್ತದೆ ಎಂದರು.  ಅಂದಿನಿಂದ ಸುಮಾರು 16 ವರುಷಗಳ ಕಾಲ ಗೆಳೆಯರು, ಸಂಬಂಧಿಕರು, ಹುಟ್ಟು ಸಾವು, ಮದುವೆ  ಮುಂಜಿ, ವೈಯಕ್ತಿಕ ಆಕಾಂಕ್ಷೆಗಳು, ರಾಜಕೀಯ ಕ್ಷೇತ್ರ ಎಲ್ಲವನ್ನೂ ತ್ಯಜಿಸಿ ಉದ್ದೇಶ ಸಾಧನೆಗೆ ಮಾಡಿದ ಪ್ರಯತ್ನದಿಂದ ಸ್ವಂತ ಕಾಲ ಮೇಲೆ ನಿಲ್ಲಲು ಸಾಧ್ಯವಾಯಿತು.

ಇಂದಿಗೂ ಸರಿಯಾಗಿ ಕಾರ್ಯಾಚರಿಸದ ಸುಳ್ಯಕ್ಕೆ ಶಾಪವಾಗಿಯೇ ಉಳಿದ ಒಳಚರಂಡಿ ಯೋಜನೆ, ನನ್ನ ಬದುಕನ್ನೇ ಕಿತ್ತು ಸುಳ್ಯವನ್ನೇ ಬಿಟ್ಟುಬಿಡಬೇಕಾಗಿ ಬಂದಿರುವುದು ನನ್ನ ಜೀವನದ ಅತ್ಯಂತ ನೋವಿನ ದುಃಖಕರ ಘಟನೆಗೆ ನಾಂದಿ ಹಾಡಿದವರು, ನಾವೇ ತನುಮನಧನ ಸಂಪೂರ್ಣ ಸಮಯವನ್ನು ಕೊಟ್ಟು ಬೆಳೆಸಿದ ಬಿ.ಜೆ.ಪಿ. ಯ ಕೆಲ ಕಾರ್ಯಕರ್ತರೆಂದು ಹೇಳಲು ಅತ್ಯಂತ ನೋವಾಗುತ್ತದೆ.  ಇಡೀ ವ್ಯವಸ್ಥೆಯ ವಿರುದ್ಧ ನನ್ನನ್ನು ನಾನೇ ರಕ್ಷಿಸಿಕೊಳ್ಳಲು ಮಾಡಿದ ಹೋರಾಟಕ್ಕೆ ಸೋಲಾಗುದರಿಂದ ನನಗಿದ್ದ ಅಲ್ಪ ಸ್ವಲ್ಪ ಸ್ಥಳದಲ್ಲಿ ಒಂದಷ್ಟು ಭಾಗ ಸರಕಾರದ ಕೈ ವಶವಾದಾಗ ಅತ್ಯಂತ ದಯನೀಯ ನೋವಿನಿಂದ ಉಳಿದ ಸ್ವಲ್ಪ ಜಮೀನನ್ನು ಮಾರಾಟ ಮಾಡಿ 2006 ಕ್ಕೆ ನನ್ನ ಕುಟುಂಬ ಸಮೇತ ಸುಳ್ಯಕ್ಕೆ ವಿದಾಯ ಹೇಳಬೇಕಾಗಿ ಬಂದಿರುವುದು ನೆನೆಸುವಾಗ  ಹೃದಯ ಭಾರವಾಗಿ ಇಂದಿಗೂ ಕಣ್ಣೀರು ಬರುತ್ತದೆ.  ಇಷ್ಟಾದರೂ ಸಹ ಸಂಘ ನನ್ನನ್ನು ಧ್ಯೇಯ ನಿಷ್ಟತೆಯಿಂದ ವಿಮುಖನಾಗದೆ ಉಳಿಸಿದೆ.  ಸ್ವಯಂ ಸೇವಕನಾಗಿ, ಬಿ.ಜೆ.ಪಿ ಯ ನಿಷ್ಠನಾಗಿ ಉಳಿಯುವಂತೆ ಮಾಡಿದೆ.  ಸ್ವಾತಂತ್ರ್ಯ ಹರಣದ ಆ ಕರಾಳ ರಾತ್ರಿಯ ನೆನಪುಗಳ ನೆನಪಿನಂಗಳಕ್ಕೆ ಜಾರಿದಾಗ ನನ್ನ ಇಡೀ ಜೀವನದ ಸಂಕ್ಷಿಪ್ತ ಭಾಗ ಅಕ್ಷರಗಳಾಗಿ ಮೂಡಿ ಬಂತು.         ಬ್ಲಾಗ್‌ ಲಿಂಕ್‌ ಇಲ್ಲಿದೆ ಕ್ಲಿಕ್‌ ಮಾಡಿ…

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅರಣ್ಯ ಉಳಿದರೆ ಮಾತ್ರ ಭೂಮಿ ಉಳಿಯಲು ಸಾಧ್ಯ – ವನ್ಯಜೀವಿ ಸಪ್ತಾಹ ಸಮಾರೋಪದಲ್ಲಿ ಮುಖ್ಯಮಂತ್ರಿ
October 9, 2025
7:05 AM
by: The Rural Mirror ಸುದ್ದಿಜಾಲ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹೊಸದಾಗಿ 900 ಬಸ್ ಗಳು ಸೇರ್ಪಡೆ
October 9, 2025
7:01 AM
by: The Rural Mirror ಸುದ್ದಿಜಾಲ
ಗದಗದಲ್ಲಿ ಶೇಂಗಾ ಹುಟ್ಟುವಳಿ  ಖರೀದಿಸಲು ಪ್ರತಿ ಕ್ವಿಂಟಾಲ್ ಗೆ 7263 ರೂಪಾಯಿ ದರ ನಿಗದಿ
October 9, 2025
6:57 AM
by: The Rural Mirror ಸುದ್ದಿಜಾಲ
ಸರ್ಕಾರದಿಂದ 200 ಕಾಲು ಸಂಕ ನಿರ್ಮಾಣದ ಗುರಿ
October 9, 2025
6:54 AM
by: The Rural Mirror ಸುದ್ದಿಜಾಲ
ಹಲಸಿನ ಕೃಷಿಗೆ ಭವಿಷ್ಯ ಇದೆ ಏಕೆ..?, ಈಗ ಹಲಸಿನ ಬೀಜದ ಹುಡಿಗೂ ಮಾರುಕಟ್ಟೆ ವಿಸ್ತರಣೆಗೆ ಕಾರಣವೇನು..?

ಪ್ರಮುಖ ಸುದ್ದಿ

MIRROR FOCUS

ಗದಗದಲ್ಲಿ ಶೇಂಗಾ ಹುಟ್ಟುವಳಿ  ಖರೀದಿಸಲು ಪ್ರತಿ ಕ್ವಿಂಟಾಲ್ ಗೆ 7263 ರೂಪಾಯಿ ದರ ನಿಗದಿ
October 9, 2025
6:57 AM
by: The Rural Mirror ಸುದ್ದಿಜಾಲ
ಗದಗದಲ್ಲಿ ಶೇಂಗಾ ಹುಟ್ಟುವಳಿ  ಖರೀದಿಸಲು ಪ್ರತಿ ಕ್ವಿಂಟಾಲ್ ಗೆ 7263 ರೂಪಾಯಿ ದರ ನಿಗದಿ
October 9, 2025
6:57 AM
by: The Rural Mirror ಸುದ್ದಿಜಾಲ
ಉತ್ತರ ಕರ್ನಾಟಕದಲ್ಲಿ ಸೀಗೆ ಹುಣ್ಣಿಮೆ ಆಚರಣೆ | ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಉತ್ತಮ ಫಸಲಿಗೆ ಪ್ರಾರ್ಥನೆ
October 9, 2025
6:48 AM
by: The Rural Mirror ಸುದ್ದಿಜಾಲ
ಕರ್ನಾಟಕದಲ್ಲಿ ಮುಗಿಯದ ಸಮೀಕ್ಷೆ | ಗಡುವು ದೀಪಾವಳಿಯವರೆಗೆ ವಿಸ್ತರಣೆ
October 9, 2025
6:42 AM
by: The Rural Mirror ಸುದ್ದಿಜಾಲ
ಹಲಸಿನ ಕೃಷಿಗೆ ಭವಿಷ್ಯ ಇದೆ ಏಕೆ..?, ಈಗ ಹಲಸಿನ ಬೀಜದ ಹುಡಿಗೂ ಮಾರುಕಟ್ಟೆ ವಿಸ್ತರಣೆಗೆ ಕಾರಣವೇನು..?
October 9, 2025
6:33 AM
by: ದ ರೂರಲ್ ಮಿರರ್.ಕಾಂ

Editorial pick

ಸರ್ಕಾರದಿಂದ 200 ಕಾಲು ಸಂಕ ನಿರ್ಮಾಣದ ಗುರಿ
October 9, 2025
6:54 AM
by: The Rural Mirror ಸುದ್ದಿಜಾಲ
ಟರ್ಕಿ ದೇಶದ ತಳಿಯ ಸಜ್ಜೆ  ಬಿತ್ತನೆ | ರಾಸಾಯನಿಕ ಸಿಂಪಡಿಸದೆಯೇ ಉತ್ತಮ ಬೆಳೆ..!
October 8, 2025
7:47 AM
by: The Rural Mirror ಸುದ್ದಿಜಾಲ
ಕೃಷಿಗೆ ಕಾಡಾನೆ ಹಾವಳಿ, ಚಿರತೆ ದಾಳಿ | ಕಾರ್ಯಪಡೆಗಳಿಗೆ ಸಿಬಂದಿಗಳ ನಿಯೋಜನೆ
October 7, 2025
6:25 AM
by: The Rural Mirror ಸುದ್ದಿಜಾಲ

ವಿಡಿಯೋ

ಕರುಣಾಮಯಿ ತಾಯಿ..
September 19, 2025
10:05 PM
by: ದ ರೂರಲ್ ಮಿರರ್.ಕಾಂ
ಉದ್ಯಮ ಹಾಗೂ ಸಮಾಜ ಸೇವೆ
September 19, 2025
10:03 PM
by: ದ ರೂರಲ್ ಮಿರರ್.ಕಾಂ
60 ಸೆಕೆಂಡುಗಳಲ್ಲಿ 10 ಆಸನಗಳ ಪ್ರದರ್ಶಿಸಿದ ಋತ್ವಿ | ಯೋಗದಲ್ಲಿ ಚನ್ನರಾಯಪಟ್ಟಣದ ಬಾಲಕಿ ಸಾಧನೆ
June 19, 2025
11:21 PM
by: The Rural Mirror ಸುದ್ದಿಜಾಲ
ಇದು ಬರೀ ಚಿಪ್ಪಿಯಲ್ಲ..!
June 14, 2025
8:17 AM
by: ದ ರೂರಲ್ ಮಿರರ್.ಕಾಂ

ಸುದ್ದಿಗಳು

ಅರಣ್ಯ ಉಳಿದರೆ ಮಾತ್ರ ಭೂಮಿ ಉಳಿಯಲು ಸಾಧ್ಯ – ವನ್ಯಜೀವಿ ಸಪ್ತಾಹ ಸಮಾರೋಪದಲ್ಲಿ ಮುಖ್ಯಮಂತ್ರಿ
October 9, 2025
7:05 AM
by: The Rural Mirror ಸುದ್ದಿಜಾಲ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹೊಸದಾಗಿ 900 ಬಸ್ ಗಳು ಸೇರ್ಪಡೆ
October 9, 2025
7:01 AM
by: The Rural Mirror ಸುದ್ದಿಜಾಲ
ಗದಗದಲ್ಲಿ ಶೇಂಗಾ ಹುಟ್ಟುವಳಿ  ಖರೀದಿಸಲು ಪ್ರತಿ ಕ್ವಿಂಟಾಲ್ ಗೆ 7263 ರೂಪಾಯಿ ದರ ನಿಗದಿ
October 9, 2025
6:57 AM
by: The Rural Mirror ಸುದ್ದಿಜಾಲ
ಸರ್ಕಾರದಿಂದ 200 ಕಾಲು ಸಂಕ ನಿರ್ಮಾಣದ ಗುರಿ
October 9, 2025
6:54 AM
by: The Rural Mirror ಸುದ್ದಿಜಾಲ
ಉತ್ತರ ಕರ್ನಾಟಕದಲ್ಲಿ ಸೀಗೆ ಹುಣ್ಣಿಮೆ ಆಚರಣೆ | ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಉತ್ತಮ ಫಸಲಿಗೆ ಪ್ರಾರ್ಥನೆ
October 9, 2025
6:48 AM
by: The Rural Mirror ಸುದ್ದಿಜಾಲ
ಕರ್ನಾಟಕದಲ್ಲಿ ಮುಗಿಯದ ಸಮೀಕ್ಷೆ | ಗಡುವು ದೀಪಾವಳಿಯವರೆಗೆ ವಿಸ್ತರಣೆ
October 9, 2025
6:42 AM
by: The Rural Mirror ಸುದ್ದಿಜಾಲ
ಹಲಸಿನ ಕೃಷಿಗೆ ಭವಿಷ್ಯ ಇದೆ ಏಕೆ..?, ಈಗ ಹಲಸಿನ ಬೀಜದ ಹುಡಿಗೂ ಮಾರುಕಟ್ಟೆ ವಿಸ್ತರಣೆಗೆ ಕಾರಣವೇನು..?
October 9, 2025
6:33 AM
by: ದ ರೂರಲ್ ಮಿರರ್.ಕಾಂ
ಏನಾಗ್ತಾ ಇದೆ ಶಿಕ್ಷಣದಲ್ಲಿ ಎಂತ ಯಾರಾದ್ರೂ ಕೇಳ್ತಾರಾ?
October 8, 2025
9:53 PM
by: ಡಾ.ಚಂದ್ರಶೇಖರ ದಾಮ್ಲೆ
ಹವಾಮಾನ ವರದಿ | 08-10-2025 | ಎಲ್ಲೆಲ್ಲಿ ಹೇಗಿದೆ ಮಳೆಯ ಲಕ್ಷಣ..? | ವಾಯುಭಾರ ಕುಸಿತ ಏನಾಗುತ್ತಿದೆ…?
October 8, 2025
2:04 PM
by: ಸಾಯಿಶೇಖರ್ ಕರಿಕಳ
ಟರ್ಕಿ ದೇಶದ ತಳಿಯ ಸಜ್ಜೆ  ಬಿತ್ತನೆ | ರಾಸಾಯನಿಕ ಸಿಂಪಡಿಸದೆಯೇ ಉತ್ತಮ ಬೆಳೆ..!
October 8, 2025
7:47 AM
by: The Rural Mirror ಸುದ್ದಿಜಾಲ

ವಿಶೇಷ ವರದಿ

ಹಲಸಿನ ಕೃಷಿಗೆ ಭವಿಷ್ಯ ಇದೆ ಏಕೆ..?, ಈಗ ಹಲಸಿನ ಬೀಜದ ಹುಡಿಗೂ ಮಾರುಕಟ್ಟೆ ವಿಸ್ತರಣೆಗೆ ಕಾರಣವೇನು..?
October 9, 2025
6:33 AM
by: ದ ರೂರಲ್ ಮಿರರ್.ಕಾಂ
ಟರ್ಕಿ ದೇಶದ ತಳಿಯ ಸಜ್ಜೆ  ಬಿತ್ತನೆ | ರಾಸಾಯನಿಕ ಸಿಂಪಡಿಸದೆಯೇ ಉತ್ತಮ ಬೆಳೆ..!
October 8, 2025
7:47 AM
by: The Rural Mirror ಸುದ್ದಿಜಾಲ
ಗ್ರಾಮೀಣ ಭಾಗದ ಮಳೆಗಾಲದ ಸಂಪರ್ಕಕ್ಕೆ ಕಾಲು ಸಂಕ | 234 ಕಾಲು ಸಂಕ ನಿರ್ಮಾಣಕ್ಕೆ 60 ಕೋಟಿ
September 16, 2025
6:33 AM
by: The Rural Mirror ಸುದ್ದಿಜಾಲ
ಬಾಹ್ಯಕಾಶದಲ್ಲಿ ಮೊಳಕೆಯೊಡೆದ ಮೆಂತ್ಯೆ, ಹೆಸರು ಕಾಳು | ಧಾರವಾಡ ಕೃಷಿ ವಿವಿಯಲ್ಲಿ ಹೆಚ್ಚಿನ ಸಂಶೋಧನೆ
September 10, 2025
6:35 AM
by: The Rural Mirror ಸುದ್ದಿಜಾಲ

OPINION

ನವರಾತ್ರಿಯಲ್ಲಿ ವಿಜಯದಶಮಿಯ ಮಹತ್ವ ಮತ್ತು ತಾತ್ವಿಕತೆ
October 2, 2025
10:23 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ನವರಾತ್ರಿಯಲ್ಲಿ ವಿಜಯದಶಮಿಯ ಮಹತ್ವ ಮತ್ತು ತಾತ್ವಿಕತೆ
October 2, 2025
10:23 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಗಣತಿದಾರರ ಒಂದು ದಿನ | ಗ್ರಾಮೀಣ ಭಾಗದಲ್ಲಿ ಆಗಬೇಕಿರುವ ಗಣತಿ ಯಾವುದು…?
September 28, 2025
4:04 PM
by: ದ ರೂರಲ್ ಮಿರರ್.ಕಾಂ
ಶರಾವತಿ ಯೋಜನೆ | ಜೀವವೈವಿಧ್ಯಕ್ಕೆ ಆಪತ್ತು- ಮನುಕುಲಕ್ಕೆ ವಿಪತ್ತು
September 23, 2025
11:05 AM
by: ದ ರೂರಲ್ ಮಿರರ್.ಕಾಂ
ನವರಾತ್ರಿ – ದಸರಾ | ಶಕ್ತಿ ತತ್ತ್ವದ ವಿಜ್ಞಾನ ಮತ್ತು ಸಂಸ್ಕೃತಿ
September 22, 2025
7:35 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror

Join Our Group