Advertisement
MIRROR FOCUS

ಸಿರಿಧಾನ್ಯಗಳಿಂದ ಸಿರಿವಂತನಾದ ಪ್ರಗತಿಪರ ರೈತ | ಸ್ವಂತ ಬ್ರಾಂಡ್ ಮೂಲಕ ಆಧುನಿಕ ಮಾರುಕಟ್ಟೆಗಳಿಗೆ ಸೆಡ್ಡು ಹೊಡೆದು ವ್ಯಾಪಾರ |

Share

ಇತ್ತೀಚಿನ ದಿನಗಳಲ್ಲಿ ಆರೋಗ್ಯದ(Health) ಮೇಲೆ ಕಾಳಜಿ(Care) ಜಾಸ್ತಿಯಾಗುತ್ತಿದೆ. ಮರಳಿ ಮಣ್ಣಿಗೆ ಅನ್ನುವ ಮಾತು ಹೆಚ್ಚು ಪ್ರಚಲಿತಕ್ಕೆ ಬರುತ್ತಿದೆ. ನಮ್ಮ ಹಿರಿಯರು ಅಂದು ಗಟ್ಟಿಮುಟ್ಟಾಗಿ ಬದುಕಿ ಬಾಳಲು ತಿಂದ ಸಿರಿಧಾನ್ಯಗಳು(Millet) ಇಂದು ಮತ್ತೆ ಬಳಕೆಗೆ ಬರುತ್ತಿವೆ. ಇದನ್ನು ಬಂಡವಾಳ ಮಾಡಿಕೊಂಡ ರೈತರೊಬ್ಬರು(Farmer) ಇದನ್ನೇ ಉದ್ಯಮವನ್ನಾಗಿಸಿಕೊಂಡು(Business) ಮಹತ್ತರ ಸಾಧನೆಗೈದಿದ್ದಾರೆ. ವಿಶೇಷ ಸಾಧನೆ ಮಾಡಿರುವವರು (Positive Story) ರಾಮನಗರದ(Ramanagara) ಪ್ರಗತಿಪರ ರೈತ(Model Farmer). ಸಿರಿಧಾನ್ಯ ಬೆಳೆಗಳ ಮೂಲಕ ತನ್ನದೇ ಬ್ರ್ಯಾಂಡ್(Brand) ಸೃಷ್ಟಿಸಿಕೊಂಡ ರಾಮನಗರದ ಬಿಳಗುಂಬ ಗ್ರಾಮದ ಇವರ ಹೆಸರು ವಾಸು ಅಂತ. ಇವರ ಸಾಧನೆಗೆ ರಾಜ್ಯ ಕೃಷಿ ಇಲಾಖೆಯಿಂದ(State Agricultural Department) ಅತ್ಯುತ್ತಮ ರೈತ ಪ್ರಶಸ್ತಿಯೂ(Best Farmer Award) ದೊರೆತಿದೆ.

ಸ್ವಂತ ಬ್ರಾಂಡ್ ಸೃಷ್ಟಿಸಿದ ರೈತ ವಾಸು ಸಾಮಾನ್ಯದವರಲ್ಲ, ತಮ್ಮದೇ ಆದ ರಾಮ್ ಗೋಲ್ಡ್ ಹೆಸರಿನಲ್ಲಿ ಈಸಿ ರಾಗಿಮುದ್ದೆ – ರಾಗಿ ಮಾಲ್ಟ್ ತಯಾರು ಮಾಡಿ ಮಾರಾಟ ಮಾಡ್ತಾರೆ. ಬೃಹತ್ ಮಷಿನ್ಗಳ ಮೂಲಕ ಸಿರಿಧಾನ್ಯ ಮಿಶ್ರಿತ ರಾಗಿಹಿಟ್ಟು – ಮಾಲ್ಟ್ ಪೌಡರ್ ತಯಾರಿಸಿ ಮಾರಾಟ ಮಾಡ್ತಾರೆ. ಅಂದಹಾಗೆ ಇಷ್ಟೆಲ್ಲ ಮಾರಾಟ ಮಾಡುವ ವಾಸು ತಾವು ಮಾರೋ ವಸ್ತುಗಳಿಗೆ ಹೆಸರಿಟ್ಟು ಸ್ವಂತ ಬ್ರಾಂಡ್ ಒಂದನ್ನು ಸಹ ಸೃಷ್ಟಿಸಿದ್ದಾರೆ. ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ ತರಬೇತಿ ಪಡೆದ ನಂತರ ಇವರ ಜೀವನ ಎಲ್ಲರಿಗೂ ಮಾದರಿಯಾಗಿ ಬದಲಾಗಿದೆ.

ರಾಮ್ ಗೋಲ್ಡ್ ಆರ್ಗ್ಯಾನಿಕ್ಸ್ ವಾಸು ಅವರು ತಯಾರಿಸುವ ರಾಗಿ ಮಾಲ್ಟ್ ಬಿಪಿ, ಶುಗರ್ ಇದ್ದವರಿಗೆ ಇದು ರಾಮಬಾಣವಂತೆ. ರಾಗಿಯ ಜೊತೆಗೆ 14 ಬಗೆಯ ಸಿರಿಧಾನ್ಯ ಮಿಶ್ರಿತ ರಾಗಿ ಮಾಲ್ಟ್‌ನ್ನು ಸಹ ಇವ್ರು ತಯಾರಿಸ್ತಾರೆ. ಇಡ್ಲಿ ರೀತಿಯಲ್ಲಿ10 ನಿಮಿಷಗಳಲ್ಲಿ ಮಾತ್ರ ರಾಗಿಮುದ್ದೆ ತಯಾರಿಸುವ ಉತ್ಪನ್ನವೂ ಸಹ ಸಿಗುತ್ತೆ ಅನ್ನೋದು ವಾಸು ಅವರ ರಾಮ್ ಬ್ರಾಂಡ್‌ನ ವಿಶೇಷ. ಯಾರಿಗಾದ್ರೂ ಬೇಕಾದ್ರೆ ರಾಮ್ ಗೋಲ್ಡ್ ಆರ್ಗ್ಯಾನಿಕ್ಸ್ ಹೆಸರಿನ ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು.

ಆನ್‌ಲೈನ್ ಕಂಪನಿಗಳಿಗೆ ಸೆಡ್ಡು ಅಲ್ಲದೇ, ದೊಡ್ಡ ದೊಡ್ಡ ಆನ್‌ಲೈನ್ ಕಂಪನಿಗಳಂತೆ ವಾಸು ಅವರು ತಮ್ಮ ಪ್ರಾಡಕ್ಟ್‌ಗಳನ್ನ ನಿಮ್ಮ ಮನೆ ಬಾಗಿಲಿಗೆ ಫ್ರೀ ಡೆಲಿವರಿ ಕೊಡ್ತಾರೆ. ಹೀಗೆ ಸ್ವಂತ ಪ್ರಯತ್ನ-ಛಲದಿಂದ ತಮ್ಮದೇ ಬ್ರಾಂಡ್ ಕಟ್ಟಿಕೊಂಡ ಈ ರೈತ ಮಾತ್ರ ಹಲವರಿಗೆ ಪ್ರೇರಣೆಯಾಗಿದ್ದಾರೆ.

– ಅಂತರ್ಜಾಲ ಮಾಹಿತಿ

Advertisement
His name is Vasu from Bilagumba village of Ramanagara who created his own brand through cereal crops. He has also received the Best Farmer Award from the State Agricultural Department for his achievement.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ಸಿಂಗಾರ ಒಣಗುತ್ತಿದೆಯೇ..? ನಿಮ್ಮ ತೋಟದ ಶತ್ರು ನೀವು ಬಳಸುವ ಬೇವಿನ ಎಣ್ಣೆಯೇ ಇರಬಹುದು…!

ಅಡಿಕೆ ತೋಟಗಳಲ್ಲಿ ಹೂಗೊಂಚಲುಗಳು ಅರಳಿದರೂ ಕಾಯಿ ಕಟ್ಟದಿರುವುದಕ್ಕೆ ರೈತರು ಬಳಸುವ ಬೇವಿನ ಎಣ್ಣೆಯೇ…

5 hours ago

ಕಳಪೆ ಅಡಿಕೆ ಪತ್ತೆ | 15.5 ಲಕ್ಷ ದಂಡ ವಿಧಿಸಿದ ನ್ಯಾಯಾಲಯ

ಕಳಪೆ ಗುಣಮಟ್ಟದ ಅಡಿಕೆ ಸಾಗಣೆ ಪ್ರಕರಣ ಪತ್ತೆಯಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ…

5 hours ago

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ

ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್‌ Z ಗಾಗಿ…

14 hours ago

ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ

ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…

14 hours ago

ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?

ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…

14 hours ago

ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್‌ ಸಿಂಗ್‌ ಚೌಹಾನ್‌ ಅವರು…

15 hours ago