ಅಡಿಕೆ ತೋಟಕ್ಕೆ ಔಷಧಿ ಸಿಂಪಡಣೆಗೆ ರಿಕ್ಷಾ…! | ಯುವ ಕೃಷಿಕನ ವಿಶೇಷ ಪ್ರಯತ್ನ |

September 5, 2024
11:02 PM
ಅಟೋ ರಿಕ್ಷಾವನ್ನು ಉಪಯೋಗಿಸಿ ಔಷಧಿ ಸಿಂಪಡಣೆಯೂ ಆಗುವಂತೆ ಮಾಡಿದ್ದಾರೆ ಒಬ್ಬ ಯುವಕ.ಸಾಗಾಟಕ್ಕೂ, ಔಷಧಿ ಸಿಂಪಡಣೆಗೂ ಒಂದೇ ಯಂತ್ರವನ್ನು ಬಳಕೆ ಮಾಡುವ ಮೂಲಕ ಶ್ರಮವನ್ನು ಸುಲಭವಾಗಿಸಿದ್ದಾನೆ ಇಲ್ಲೊಬ್ಬ ಯುವಕ.

ಕೃಷಿಯಲ್ಲಿ ಯಂತ್ರಗಳ ಹೊಸ ಹೊಸ ವಿನ್ಯಾಸಗಳನ್ನು ಕೃಷಿಕರು ತಮಗೆ ಬೇಕಾದಂತೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಯುವ ಕೃಷಿಕರದು ಹೊಸಹೊಸ ಯೋಜನೆಗಳು ಇರುತ್ತವೆ. ಇಲ್ಲೊಬ್ಬ ಯುವಕ ಅಟೋ ರಿಕ್ಷಾವನ್ನು ಉಪಯೋಗಿಸಿ ಔಷಧಿ ಸಿಂಪಡಣೆಯ ಯಂತ್ರ ಚಾಲೂ ಆಗುವಂತೆ ಮಾಡಿದ್ದಾರೆ. ಸಾಗಾಟಕ್ಕೂ, ಔಷಧಿ ಸಿಂಪಡಣೆಗೂ ಒಂದೇ ಯಂತ್ರವನ್ನು ಬಳಕೆ ಮಾಡುವ ಮೂಲಕ ಶ್ರಮವನ್ನು ಸುಲಭವಾಗಿಸಿದ್ದಾರೆ.…..ಮುಂದೆ ಓದಿ….

Advertisement
Advertisement
Advertisement

Advertisement
ಅನಂತಕೃಷ್ಣ ಮೊಗ್ರ

ಸುಳ್ಯ ತಾಲೂಕಿನ ಗುತ್ತಿಗಾರಿನ ಮೊಗ್ರದ ಅನಂತಕೃಷ್ಣ ಈ ಪ್ರಯತ್ನ ಮಾಡಿರುವ ಯುವಕ. ತೋಟದಿಂದ ಕೃಷಿ ವಸ್ತುಗಳ ಸಾಗಾಟಕ್ಕೆ ಅಟೋ ರಿಕ್ಷಾವನ್ನು ಬಳಕೆ ಮಾಡುತ್ತಾರೆ. ಡೀಸೆಲ್‌ ಇಂಜಿನ್‌ ಹೊಂದಿರುವ ಅಟೋದಲ್ಲಿ ತೋಟದ ಬಹುಪಾಲು ಎಲ್ಲಾ ಕೆಲಸವೂ ನಡೆಯುತ್ತದೆ. ಹೀಗಾಗಿ ಔಷಧಿ ಸಿಂಪಡಣೆಯ ಯಂತ್ರವನ್ನೂ ಏಕೆ ಇದಕ್ಕೆ ಜೋಡಿಸಬಾರದು ಎಂದು ಕೆಲಸ ಆರಂಭಿಸಿದ ಅನಂತ ಅವರು, ತಾನೇ ಐಡಿಯಾವನ್ನು ರೂಪಿಸಿ ಯಂತ್ರವನ್ನು ಜೋಡಿಸಿದರು. ಅಟೋದ ಹಿಂದಿನ ಭಾಗದಲ್ಲಿ ಔಷಧಿ ಸಿಂಪಡಣೆಯ ಯಂತ್ರ ಜೋಡಿಸಿ ತೋಟದ ಬೇಕಾದ ಕಡೆ ರಿಕ್ಷಾ ನಿಲ್ಲಿಸಿ ಔಷಧಿ ತಯಾರು ಮಾಡಿದರೆ ಮುಗಿಯಿತು. ಡೀಸೆಲ್‌ ರಿಕ್ಷಾವಾದ್ದರಿಂದ ಅತ್ಯಂತ ಕಡಿಮೆ ಡೀಸೆಲ್‌ ಮುಗಿಯುತ್ತದೆ, ಔಷಧಿ ಸಿಂಪಡಣೆಯ ಯಂತ್ರದ ಕಾರ್ಯಕ್ಷಮತೆಯೂ ಹೆಚ್ಚಿದೆ ಎನ್ನುತ್ತಾರೆ ಅನಂತ. ಬೇಕಾದಾಗ ಯಂತ್ರ ಚಾಲೂ ಆಗಲು ಕ್ಲಚ್‌ ಮಾದರಿಯ ವ್ಯವಸ್ಥೆಯನ್ನೂ ಅನಂತ ಕೃಷ್ಣ ಮಾಡಿದ್ದಾರೆ. ಇದೀಗ ಈ ವರ್ಷ ಇದೇ ವ್ಯವಸ್ಥೆಯ ಮೂಲಕ ತಮ್ಮ ತೋಟಕ್ಕೆ ಔಷಧಿ ಸಿಂಪಡಣೆ ಮಾಡಿದ್ದಾರೆ.

Advertisement

Ananthakrishna Mogra, from Sullia taluk, is a young Agriculturist who has attempted a new concept. He noticed that auto rickshaws are commonly used to transport farm produce and are equipped with diesel engines . This led Ananta to consider attaching a medicine spraying machine to the auto rickshaw. After assembling the necessary components, he successfully created the innovative machine.

Advertisement

A spraying machine was connected to the rear of the vehicle, and the rickshaw was parked at the designated spot in the farm with the medicine prepared. Ananta mentioned that the diesel rickshaw consumes very little fuel and the spraying machine is highly efficient. Ananta Krishna has also designed a clutch system to activate the machine as required. This year, he used the same system to spray medicine in his garden.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ| 21-11-2024 | ಮಳೆಯ ಸಾಧ್ಯತೆ ಕಡಿಮೆ | ನ.26 ಸುಮಾರಿಗೆ ಚಂಡಮಾರುತ ಸಾಧ್ಯತೆ |
November 21, 2024
2:52 PM
by: ಸಾಯಿಶೇಖರ್ ಕರಿಕಳ
ದ ಕ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ
November 20, 2024
8:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-11-2024 | ರಾಜ್ಯದಲ್ಲಿ ಒಣಹವೆ | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ |
November 20, 2024
5:38 PM
by: ಸಾಯಿಶೇಖರ್ ಕರಿಕಳ
ರಾಜ್ಯದ ಕೈಗಾರಿಕೆಗಳಲ್ಲಿ ಹಸಿರು ತಂತ್ರಜ್ಞಾನ ಅಳವಡಿಸಲು ಆದ್ಯತೆ | ಮುಖ್ಯಮಂತ್ರಿ ಸಿದ್ದರಾಮಯ್ಯ
November 20, 2024
5:05 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror