Advertisement
MIRROR FOCUS

ರಬ್ಬರ್‌ ಬೆಳೆಗಾರರ ಸಂಕಷ್ಟವನ್ನು ಪ್ರಧಾನಿಗಳಿಗೆ ಪತ್ರದ ಮೂಲಕ ವಿವರಿಸಿದ ಕೃಷಿಕ | ರಬ್ಬರ್‌ ಆಮದು ಕಡಿವಾಣಕ್ಕೆ ಯತ್ನ ಎಂದ ಸಚಿವಾಲಯ |

Share

ರಬ್ಬರ್‌  ಧಾರಣೆ ಕಳೆದ ಕೆಲವು ಸಮಯಗಳಿಂದ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗುತ್ತಿಲ್ಲ. ರಬ್ಬರ್‌ ಧಾರಣೆ ಏರಿಕೆಯಾಗದೆ ಕೃಷಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ರಬ್ಬರ್‌ ಬೆಳೆಗಾರ ಮತ್ತು ಉದ್ಯಮಿಯೂ ಆಗಿರುವ ಸುಳ್ಯ ತಾಲೂಕಿನ ಗುತ್ತಿಗಾರಿನ ಬಿ ಕೆ ಶ್ರೀಧರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಇದಕ್ಕೆ ವಾಣಿಜ್ಯ ಸಚಿವಾಲಯದಿಂದ ಉತ್ತರಿಸಿದ್ದು, ರಬ್ಬರ್‌ ಆಮದು ಕಡಿವಾಣಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಉತ್ತರ ನೀಡಿದೆ.

Advertisement
Advertisement
Advertisement

ರಬ್ಬರ್‌ ಬೆಳೆಗಾರರ ಸಂಕಷ್ಟದ ಬಗ್ಗೆ ವಿವರಿಸಿದ್ದ ರಬ್ಬರ್‌ ಬೆಳೆಗಾರ ಬಿ ಕೆ ಶ್ರೀಧರ್‌, ನೈಸರ್ಗಿಕ ರಬ್ಬರ್ ಬೆಲೆಯು ಗಮನಾರ್ಹವಾಗಿ ಕಡಿಮೆಯಾಗಿದೆ. ಹೀಗಾಗಿ ರಬ್ಬರ್‌ ಬೆಳೆಗಾರರಿಗೆ ತೀರಾ ಸಂಕಷ್ಟ ಎದುರಾಗಿದೆ. ಸಾಮಾನ್ಯವಾಗಿ ರಬ್ಬರ್‌ ಬೆಳೆಗಾರರಿಗೆ ಪ್ರತಿ ವರ್ಷ 8 ತಿಂಗಳ ಟ್ಯಾಪಿಂಗ್ ಅವಧಿ ಮಾತ್ರಾ ಲಭ್ಯವಿದೆ. ಇದರಲ್ಲಿ ಎರಡು ಅವಧಿಯಲ್ಲಿ ತೋಟದ ಕಳೆ ತೆಗೆಯಬೇಕು, ಗೊಬ್ಬರ, ಔಷಧಿ ಬಳಕೆ ಇತ್ಯಾದಿ ನಡೆಯಬೇಕಿದೆ. ಮಳೆಗಾಲದಲ್ಲಿ ಟ್ಯಾಪಿಂಗ್ ಗೆ  ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಿದೆ. ಹೀಗಾಗಿ ಇದೆಲ್ಲಾ ಅಂಶಗಳನ್ನು ಗಮನದಲ್ಲಿರಿಸಿ ತಾವುಗಳು ರಬ್ಬರ್ ಬೋರ್ಡ್ ಮತ್ತು ಟೈರ್ ಉತ್ಪಾದನಾ ಸಂಸ್ಥೆಗಳಿಗೆ ನೆರವು ನೀಡಬೇಕು ಎಂದು ಬಿ ಕೆ ಶ್ರೀಧರ್‌ ಅವರು ಪತ್ರದಲ್ಲಿ ಮನವಿ ಮಾಡಿದ್ದರು.

Advertisement
ಬಿ ಕೆ ಶ್ರೀಧರ್‌, ಗುತ್ತಿಗಾರು

ಈಗಿನ ಬೆಲೆ ಹಾಗೂ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ರಬ್ಬರ್‌ ಧಾರಣೆಯು 170 ರೂಪಾಯಿಗಿಂತ ಕಡಿಮೆ ಬಾರದಂತೆ ಸ್ಥಿರತೆಯಾಗಲು ಕ್ರಮ ಆಗಬೇಕಿದೆ. ಇದಕ್ಕಾಗಿ ರಬ್ಬರ್‌ ಉದ್ಯಮಗಳಿಗೆ ದೇಶೀಯ ರಬ್ಬರ್‌ ಬಳಕೆಗೆ ಸೂಚನೆ, ರಬ್ಬರ್‌ ಆಮದು ಕಡಿತ, ಆಮದು ನೀತಿಗಳ ಪ್ರಭಾವವನ್ನು ಕಡಿಮೆ ಮಾಡುವುದು ಸೇರಿದಂತೆ ರಬ್ಬರ್ ಆಮದನ್ನು ಅವಲಂಬಿಸದೆ ದೇಶೀಯ ರಬ್ಬರ್ ಉತ್ಪಾದನೆಗೆ ಆದ್ಯತೆ ನೀಡುವ ‌ ವ್ಯವಸ್ಥೆ ಮಾಡಬೇಕು. ಸರಾಸರಿ ರಬ್ಬರ್ ಬೆಲೆ ಪ್ರತಿ ಕಿಲೋಗ್ರಾಂಗೆ ಸುಮಾರು 200 ರೂಪಾಯಿಗಳಿಗೆ ಅವಕಾಶವಿದೆ ಎಂದು ಪತ್ರದಲ್ಲಿ ವಿವರಿಸಿದ್ದರು.

ಈ ಪತ್ರಕ್ಕೆ ವಾಣಿಜ್ಯ ಸಚಿವಾಲಯದಿಂದ ಉತ್ತರ ಬಂದಿದ್ದು, ಬೇಡಿಕೆ ಮತ್ತು ಪೂರೈಕೆಯ ಆಧಾರದ ಮೇಲೆ ಮುಕ್ತ ಮಾರುಕಟ್ಟೆಯಲ್ಲಿ ನೈಸರ್ಗಿಕ ರಬ್ಬರ್ ಬೆಲೆಗಳನ್ನು ನಿರ್ಧರಿಸಲಾಗುತ್ತದೆ ಹಾಗೂ ಅಂತರಾಷ್ಟ್ರೀಯ ರಬ್ಬರ್ ಬೆಲೆಗಳು ದೇಶಿಯ ಮೇಲೂ ಪ್ರಭಾವ ಬೀರುತ್ತವೆ ಎಂದು ಸಚಿವಾಲಯ ತಿಳಿಸಿದೆ.

Advertisement

ದೇಶೀಯ ಬೆಲೆಗಳ ಮೇಲೆ ಅಂತಾರಾಷ್ಟ್ರೀಯ ರಬ್ಬರ್ ಬೆಲೆಗಳ ಪ್ರಭಾವವನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರವು ಆಮದು ಮೇಲಿನ ಸುಂಕವನ್ನು ಏರಿಕೆ ಮಾಡಿದೆ. ಅಲ್ಲದೆ ಮುಂಗಡ ಪರವಾನಗಿ ಯೋಜನೆಯಡಿಯಲ್ಲಿ ಆಮದು ಮಾಡಿಕೊಂಡ ಒಣ ರಬ್ಬರ್ ಬಳಕೆಯ ಅವಧಿಯನ್ನು 18 ತಿಂಗಳಿನಿಂದ 6 ತಿಂಗಳಿಗೆ ಕಡಿತಗೊಳಿಸಿದೆ. ನೈಸರ್ಗಿಕ ರಬ್ಬರ್ ಆಮದು ಮಾಡಿಕೊಳ್ಳಲು ಪ್ರವೇಶ ಬಂದರನ್ನು ನಿರ್ಬಂಧಿಸಲಾಗಿದೆ. ಕಸ್ಟಮ್‌ ಸುಂಕದ ದರವೂ ಏರಿಕೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

Rubber prices have not been rising at the expected levels for some time now. Farmers are suffering without increase in rubber price. Therefore, the rubber grower of Sulya, BK Sridhar, appealed to Prime Minister Narendra Modi through a letter. The Ministry of Commerce replied that they are trying to reduce the import of rubber.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

6 hours ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

6 hours ago

ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |

ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…

6 hours ago

ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ

ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…

7 hours ago

ಧರ್ಮಸ್ಥಳ ಯಕ್ಷಗಾನ ಮೇಳ |  ಸೇವೆ ಬಯಲಾಟ ಪ್ರದರ್ಶನ

ನಾಡಿನ ಪವಿತ್ರ ಕ್ಷೇತ್ರ  ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…

7 hours ago

ಜೇನು ತುಪ್ಪ ಮಾರಾಟ | ಅರ್ಜಿ ಆಹ್ವಾನ

ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…

7 hours ago