ಒಂದೇ ದಿನದ ತ್ಯಾಜ್ಯ 2 ಟನ್…!‌ | ನಮಗೆ ಕಸದ ಬಗ್ಗೆ ಅರಿವು ಆಗುವುದು ಯಾವಾಗ…?

November 3, 2023
12:24 PM

ಕಸದ ಬಗ್ಗೆ, ತ್ಯಾಜ್ಯದ ಬಗ್ಗೆ, ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದ್ದರೂ ಜನರು ಜಾಗೃತಿಯಾದಂತೆ ಕಾಣುತ್ತಿಲ್ಲ. ಬೆಳಗಾವಿಯಲ್ಲಿ ಒಂದೇ ದಿನದ ತ್ಯಾಜ್ಯ 2 ಟನ್‌ ಗೂ ಹೆಚ್ಚು..!.  ಇದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು ಎಸೆದ ಕಸ..!.

Advertisement
Advertisement

ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ  ರಾಣಿ ಚನ್ನಮ್ಮ ವೃತ್ತದಲ್ಲಿ ಲಕ್ಷಾಂತರ ಜನ ಭಾಗವಹಿಸಿದ್ದರು. ಹೀಗೇ ಬಂದವರು ಎಸೆದ ತ್ಯಾಜ್ಯ ಎರಡು ಟನ್‌ ಗೂ ಹೆಚ್ಚು.  ಬೆಳಗಾವಿ ಮಹಾನಗರ ಪಾಲಿಕೆಯ ಶುಚಿತ್ವದ ಕಾರ್ಮಿಕರು ಬೆಳಗಿನಿಂದ ಸ್ವಚ್ಛತಾ ಕಾರ್ಯ ಮಾಡುತ್ತಿದ್ದರು. 10 ಜನರು 5 ಗಂಟೆಯಲ್ಲಿ ಸಂಗ್ರಹಿಸಿದ ತ್ಯಾಜ್ಯ ಇದು. ಕೇವಲ ಈ ತ್ಯಾಜ್ಯದಿಂದ 20 ಸಾವಿರ ರೂಪಾಯಿಯನ್ನು ಈ ಕಾರ್ಮಿಕರು ಪಡೆದರು. ಅಚ್ಚರಿ ಎಂದರೆ ಇಲ್ಲಿ ಮಹಾನಗರ ಪಾಲಿಕೆ ಪ್ಲಾಸ್ಟಿಕ್‌ ಕಸಗಳಿಗೆ ಹಣ ನೀಡುತ್ತದೆ. ಇಲ್ಲಿ ಒಟ್ಟು 470 ಕ್ಕೂ ಅಧಿಕ ಜನರು ಕಸ ಹೆಕ್ಕುವ ಸಿಬಂದಿಗಳು ಇದ್ದಾರೆ. ಇವರೆಲ್ಲರೂ ಪ್ರತೀ ದಿನ 200 ರೂಪಾಯಿ ಗಳಿಸುತ್ತಾರೆ. ರಾಜ್ಯೋತ್ಸವದ ದಿನದಂದು 10 ಮಂದಿ 2000 ಸಾವಿರಂತೆ ಗಳಿಸಿದ್ದಾರೆ…!.

ಇಲಾಖೆಗಳು, ಆಡಳಿತವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ಎಲ್ಲಾ ಕಡೆಯೂ ತೊಟ್ಟಿಗಳನ್ನು ಇರಿಸಿತ್ತು. ಹಾಗಿದ್ದರೂ ತ್ಯಾಜ್ಯ ಎಸೆಯುವವರ ಸಂಖ್ಯೆ ಕಡಿಮೆಯಾಗಿಲ್ಲ. ಪ್ರತೀ ಗ್ರಾಮದಿಂದ ತೊಡಗಿ ನಗರದವರೆಗೆ ಕಸ ಎಸೆಯುವ ಪ್ರವೃತ್ತಿ ಕಡಿಮೆಯಾಗಬೇಕು. ಸ್ವಚ್ಛ ಪರಿಸರ ಹಾಗೂ ಸುಂದರ ಪರಿಸರದ ಕಾಳಜಿ ಇನ್ನಷ್ಟು ಜನರಲ್ಲೇ ಜಾಗೃತಿಯಾಗಬೇಕಿದೆ.

Awareness should be created among people about less use of plastic. You have to get involved in the work of saving the environment.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ 2 ದಿನ ಭಾರಿ ಮಳೆ
July 22, 2025
10:01 PM
by: The Rural Mirror ಸುದ್ದಿಜಾಲ
ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?
July 22, 2025
9:52 PM
by: The Rural Mirror ಸುದ್ದಿಜಾಲ
 ಇಂದು ವಿಶ್ವ ಮಾವು ದಿನಾಚರಣೆ | ರಾಜ್ಯದ ಮಾವಿಗೆ ಜಗತ್ತಿನಾದ್ಯಂತ ಬೇಡಿಕೆ |
July 22, 2025
9:34 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group