ಕಸದ ಬಗ್ಗೆ, ತ್ಯಾಜ್ಯದ ಬಗ್ಗೆ, ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದ್ದರೂ ಜನರು ಜಾಗೃತಿಯಾದಂತೆ ಕಾಣುತ್ತಿಲ್ಲ. ಬೆಳಗಾವಿಯಲ್ಲಿ ಒಂದೇ ದಿನದ ತ್ಯಾಜ್ಯ 2 ಟನ್ ಗೂ ಹೆಚ್ಚು..!. ಇದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು ಎಸೆದ ಕಸ..!.
ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ರಾಣಿ ಚನ್ನಮ್ಮ ವೃತ್ತದಲ್ಲಿ ಲಕ್ಷಾಂತರ ಜನ ಭಾಗವಹಿಸಿದ್ದರು. ಹೀಗೇ ಬಂದವರು ಎಸೆದ ತ್ಯಾಜ್ಯ ಎರಡು ಟನ್ ಗೂ ಹೆಚ್ಚು. ಬೆಳಗಾವಿ ಮಹಾನಗರ ಪಾಲಿಕೆಯ ಶುಚಿತ್ವದ ಕಾರ್ಮಿಕರು ಬೆಳಗಿನಿಂದ ಸ್ವಚ್ಛತಾ ಕಾರ್ಯ ಮಾಡುತ್ತಿದ್ದರು. 10 ಜನರು 5 ಗಂಟೆಯಲ್ಲಿ ಸಂಗ್ರಹಿಸಿದ ತ್ಯಾಜ್ಯ ಇದು. ಕೇವಲ ಈ ತ್ಯಾಜ್ಯದಿಂದ 20 ಸಾವಿರ ರೂಪಾಯಿಯನ್ನು ಈ ಕಾರ್ಮಿಕರು ಪಡೆದರು. ಅಚ್ಚರಿ ಎಂದರೆ ಇಲ್ಲಿ ಮಹಾನಗರ ಪಾಲಿಕೆ ಪ್ಲಾಸ್ಟಿಕ್ ಕಸಗಳಿಗೆ ಹಣ ನೀಡುತ್ತದೆ. ಇಲ್ಲಿ ಒಟ್ಟು 470 ಕ್ಕೂ ಅಧಿಕ ಜನರು ಕಸ ಹೆಕ್ಕುವ ಸಿಬಂದಿಗಳು ಇದ್ದಾರೆ. ಇವರೆಲ್ಲರೂ ಪ್ರತೀ ದಿನ 200 ರೂಪಾಯಿ ಗಳಿಸುತ್ತಾರೆ. ರಾಜ್ಯೋತ್ಸವದ ದಿನದಂದು 10 ಮಂದಿ 2000 ಸಾವಿರಂತೆ ಗಳಿಸಿದ್ದಾರೆ…!.
ಇಲಾಖೆಗಳು, ಆಡಳಿತವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ಎಲ್ಲಾ ಕಡೆಯೂ ತೊಟ್ಟಿಗಳನ್ನು ಇರಿಸಿತ್ತು. ಹಾಗಿದ್ದರೂ ತ್ಯಾಜ್ಯ ಎಸೆಯುವವರ ಸಂಖ್ಯೆ ಕಡಿಮೆಯಾಗಿಲ್ಲ. ಪ್ರತೀ ಗ್ರಾಮದಿಂದ ತೊಡಗಿ ನಗರದವರೆಗೆ ಕಸ ಎಸೆಯುವ ಪ್ರವೃತ್ತಿ ಕಡಿಮೆಯಾಗಬೇಕು. ಸ್ವಚ್ಛ ಪರಿಸರ ಹಾಗೂ ಸುಂದರ ಪರಿಸರದ ಕಾಳಜಿ ಇನ್ನಷ್ಟು ಜನರಲ್ಲೇ ಜಾಗೃತಿಯಾಗಬೇಕಿದೆ.
Awareness should be created among people about less use of plastic. You have to get involved in the work of saving the environment.
ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮದಿಂದ ಮುಂಗಾರು ಆಗಮನ ನಿರೀಕ್ಷೆಗಿಂತಲೂ ಮೊದಲೇ ಆಗಲಿದೆ. ಜೊತೆಗೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಅಡಿಕೆ ಹಾಳೆ ತಟ್ಟೆಯ ನಿಷೇಧವು ಅಡಿಕೆ ಕೃಷಿಗೆ ನೇರವಾಗಿ ಮಾತ್ರವಲ್ಲ, ಪರೋಕ್ಷವಾಗಿ ಸತತ…
ತಿರುಗಾಟವು ಜ್ಞಾನವೃದ್ಧಿಗೆ ಹೇತು. ಓಡಾಡದವನ ಜ್ಞಾನಕ್ಕೆ ಉಸಿರು ಇರುವುದಿಲ್ಲ. ತಂತ್ರಜ್ಞಾನದ ವಾಯುವೇಗದ ಕಾಲಘಟ್ಟದಲ್ಲಿ…
ದೆಹಲಿಯಲ್ಲಿ ಆಯೋಜಿಸಿದ್ದ 58ನೇ ಜ್ಞಾನಪೀಠ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು…
ಮುಂದಿನ 5 ದಿನಗಳ ಕಾಲ ಕೇರಳದಲ್ಲಿಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ…