G7 ಶೃಂಗಸಭೆಯಲ್ಲಿ (G7- Summit) ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಇಟಲಿಗೆ ತಲುಪಿದ್ದಾರೆ. ಇಟಲಿಯ ಬರಿ (Bari) ನಗರದಲ್ಲಿ ನಡೆದ ಜಿ7 (G7) ರಾಷ್ಟ್ರಗಳ ಸಭೆಯಲ್ಲಿ ಮೋದಿ ಮಾತನಾಡಿ ತಂತ್ರಜ್ಞಾನವು(Technology) ಸೃಜನಶೀಲವಾಗಿರಬೇಕು, ವಿನಾಶಕಾರಿಯಾಗಬಾರದು ಎಂದು ಕರೆ ನೀಡಿದ್ದಾರೆ. 21ನೇ ಶತಮಾನವನ್ನು ತಂತ್ರಜ್ಞಾನದ ಯುಗ ಎಂದು ಬಣ್ಣಿಸಿದ ಮೋದಿ, ತಂತ್ರಜ್ಞಾನವು ಮನುಷ್ಯನನ್ನು ಚಂದ್ರನತ್ತ(Moon) ಕರೆದೊಯ್ಯುವ ಧೈರ್ಯವನ್ನು ನೀಡುತ್ತದೆ. ಆದರೆ ಸೈಬರ್ ಭದ್ರತೆಯಂತಹ(Cyber Safety) ಸವಾಲುಗಳನ್ನು ಸಹ ಸೃಷ್ಟಿಸುತ್ತದೆ ಎಂದು ಹೇಳಿದರು.
ತಂತ್ರಜ್ಞಾನದ ಪ್ರಯೋಜನಗಳು ಸಮಾಜದ ಎಲ್ಲಾ ವರ್ಗಗಳನ್ನು ತಲುಪುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಸಾಮಾಜಿಕ ಅಸಮಾನತೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ಅವುಗಳನ್ನು ಸೀಮಿತಗೊಳಿಸುವ ಬದಲು ಮಾನವ ಶಕ್ತಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಎಂದರು. ನಾವು ತಂತ್ರಜ್ಞಾನವನ್ನು ವಿನಾಶಕಾರಿಯಾಗಿ ಬಳಸದೇ ಸೃಜನಾತ್ಮಕಗೊಳಿಸಬೇಕು. ಆಗ ಮಾತ್ರ ನಾವು ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ನಿರ್ಮಿಸಬಹುದು ಎಂದು ಹೇಳಿದರು.
ಜಾಗತಿಕ ವೇದಿಕೆಯಲ್ಲಿ ಗ್ಲೋಬಲ್ ಸೌತ್ ದೇಶಗಳ ಕಳವಳಗಳನ್ನು ವ್ಯಕ್ತಪಡಿಸುವುದು ತನ್ನ ಜವಾಬ್ದಾರಿ ಎಂದು ಭಾರತ ಪರಿಗಣಿಸಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಮ್ಮೇಳನದಲ್ಲಿ ಆಫ್ರಿಕಾ ಒಕ್ಕೂಟವನ್ನು ಜಿ20 ಖಾಯಂ ಸದಸ್ಯರನ್ನಾಗಿ ಸ್ವೀಕರಿಸಲಾಗಿದೆ. ಇದು ಭಾರತದ ಗಮನಾರ್ಹ ಸಾಧನೆ ಮತ್ತು ಗೌರವವನ್ನು ಸೂಚಿಸುತ್ತದೆ ಎಂದು ಮೋದಿ ತಿಳಿಸಿದರು. ಜಿ7 ಸಭೆ ಮುಗಿದ ಬಳಿಕ ಕೊನೆಯಲ್ಲಿ ಎಲ್ಲಾ ದೇಶದ ನಾಯಕರ ಗ್ರೂಪ್ ಫೋಟೋ ತೆಗೆಯಲಾಗಿತ್ತು. ಈ ಫೋಟೋದಲ್ಲಿ ಪ್ರಧಾನಿ ಮೋದಿ ಮಧ್ಯದಲ್ಲಿ ನಿಂತಿದ್ದು ವಿಶೇಷವಾಗಿತ್ತು.
ಭಾರತದ ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ ಪ್ರಧಾನಿ ಮೋದಿ ಅವರಿಗೆ ಏಪ್ರಿಲ್ ತಿಂಗಳಿನಲ್ಲಿ ಜಿ7 ಸಭೆಗೆ ಆಗಮಿಸುವಂತೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಆಹ್ವಾನ ನೀಡಿದ್ದರು. ಭಾರತ ಜಿ7 ದೇಶಗಳ ಒಕ್ಕೂಟದಲ್ಲಿ ಇಲ್ಲ. ಆದರೆ ವಿಶೇಷ ಅತಿಥಿಯಾಗಿ ಈ ಸಭೆಯಲ್ಲಿ ಭಾಗವಹಿಸಲು ಇಟಲಿ ಆಹ್ವಾನ ನೀಡಿತ್ತು.
ಸ್ಮಾರ್ಟ್ ಕೃಷಿಯು ಕೃಷಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ. ತಂತ್ರಜ್ಞಾನ, ಯಾಂತ್ರೀಕರಣ ಮತ್ತು…
ಮಂಡ್ಯ ಮೈಷುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಪ್ರಕ್ರಿಯೆ ಜೂನ್ 30ರಿಂದ…
ಇಂದು ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯಾಗುತ್ತಿದೆ. 8 ಲಕ್ಷಕ್ಕೂ ಅಧಿಕ ಸಹಕಾರಿ ಸಂಘಗಳು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಬೆಂಗಳೂರು, ಶಿವಮೊಗ್ಗ, ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ…
ಅಕ್ರಮವಾಗಿ ಸುಮಾರು 68 ಟನ್ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…