ಒನಕೆ ಎಂಬ ಉಕ್ಕಿನ ಆಯುಧ…!!! ಬಲು ಅಪರೂಪದ ಒಂದು ಮಾಹಿತಿ

June 29, 2024
2:15 PM

ಒನಕೆ(Onake) ಎಂದಾಕ್ಷಣಾ ನೆನಪಾಗುವುದು ಚಿತ್ರದುರ್ಗದ ಉಕ್ಕಿನ ಕೋಟೆಯ(Chitradurga Fort) ‘ಒನಕೆ ಓಬವ್ವ”(Onake Obavva). ಉಕ್ಕಿನ ಕೋಟೆಗೆ ಕನ್ನ ಹಾಕಲು ಪ್ರಯತ್ನಿಸಿದ ಶತೃ ಸೈನಿಕರನ್ನು(Solider) ಬಲಿ ಹಾಕಲು ಓಬ್ಬವ್ವ ಬಳಸಿದ್ದು ಇದೇ ಒನಕೆ ಎಂಬ ಉಕ್ಕಿನ ಆಯುಧವನ್ನು. ಆಧುನಿಕ ಗಿರಣಿಗಳಿಗೂ ಮುನ್ನ‌ ಭತ್ತ(Paddy) ಸೇರಿ ವಿವಿಧ ಧಾನ್ಯಗಳನ್ನು ಕುಟ್ಟಿ ಪುಡಿಗಟ್ಟಲು ಬಳಸುತ್ತಿದ್ದದ್ದು ಇದೇ ಒನಕೆಗಳನ್ನು.

ನಾನು ಕೇಳಿದಂತೆ ನಮ್ಮ ಮೈಸೂರು ಕಡೆ ಒನಕೆಗಳನ್ನು ತಯಾರಿಸಲು ಕಗ್ಗಲಿ (Senegalia catechu) ಮರವನ್ನು ಬಳಸುತ್ತಾರೆ. ಈ ಕಗ್ಗಲಿ ಮರವನ್ನು ಬಹಳಷ್ಟು ಜನ ದೈವಿಕ ಭಾವನೆಯಿಂದ ನೋಡುತ್ತಾರೆ. ಬಂಡೀಪುರ ಅರಣ್ಯದ ಕಾಡಂಚಿನ ಗ್ರಾಮಗಳಲ್ಲಿನ ಊರ ದೇವತೆಗಳ ವಾರ್ಷಿಕ ಜಾತ್ರೆಯಲ್ಲಿ ‘ಕೊಂಡ’ಕ್ಕಾಗಿ ಇದೇ ಕಗ್ಗಲಿ ಮರಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಕಗ್ಗಲಿ ಮರಗಳು ಎಲ್ಲಾ ಕಡೆಗಳಲ್ಲಿ ಕಂಡು ಬರುವುದಿಲ್ಲ. ಕೆಲವೊಂದು ನಿರ್ದಿಷ್ಟ ಸ್ಥಳಗಳಲ್ಲಿ ಇವು ಬೆಳೆಯುತ್ತವೆ. ಹೆಚ್ಚಾಗಿ ಕಲ್ಲುಗಳಿಂದ ಕೂಡಿದ ಪ್ರದೇಶಗಳು, ಬೆಟ್ಟ- ಗುಡ್ಡದ ಪ್ರದೇಶಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ.

Advertisement

ಇನ್ನು ಚಿತ್ರದುರ್ಗ ಸೇರಿ ಬಯಲು ಸೀಮೆಯ ಒಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಕಮರ (Hardwickia binata) ಮರವನ್ನೂ ಕೂಡ ಆ ಭಾಗಗಳಲ್ಲಿ ಹೆಚ್ಚಾಗಿ ಬಳಸುತ್ತಿದ್ದರು. ಇವೆರಡು‌ ಮರಗಳು ಉಕ್ಕಿನಂತೆ ಗಟ್ಟಿ ಮುಟ್ಟಾದವು‌. ಕರ್ನಾಟಕದ ಬೆಟ್ಟಗುಡ್ಡಗಳಿಂದ ಕೂಡಿದ ಒಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಸ್ಥಳೀಯ ಮರಗಳು.

ಚಿತ್ರದುರ್ಗದ ಮೊಳಕಾಲ್ಮೂರು ತಾಲ್ಲೂಕಿನ ಬಾಂಡ್ರಾವಿ ಮೀಸಲು ಅರಣ್ಯದಲ್ಲಿ 1970 ರಿಂದ 2000 ನೇ ಇಸವಿವರೆಗೆ ಅರಣ್ಯ ರಕ್ಷಕರಾಗಿ, ವನಪಾಲಕರಾಗಿ ಹಗಲು ರಾತ್ರಿ ಕರಲಸ ಮಾಡಿ, ಕಮರ ಮರಗಳು ಸ್ವಾಭಾವಿಕವಾಗಿ ಬೆಳೆಯುತ್ತಿದ್ದ, ಬೆಳೆದಷ್ಟೆ ವೇಗವಾಗಿ ಕಡಿತಲೆಗೆ ಗುರಿಯಾಗಿದ್ದ ಅರಣ್ಯ ಪ್ರದೇಶಕ್ಕೆ ರಕ್ಷಣೆ ನೀಡಿ ಅತ್ಯುತ್ತಮ ಸ್ವಾಭಾವಿಕ ಅರಣ್ಯ ನಿರ್ಮಾಣಕ್ಕೆ ಕಾರಣವಾಗಿದ್ದ ನಾಗಪ್ಪ ಮೇಟಿಯವರ ಸ್ಮರಣಾರ್ಥವಾಗಿ ಆ ಅರಣ್ಯ ಪ್ರದೇಶಕ್ಕೆ “ವನಪಾಲಕ ನಾಗಪ್ಪ ಮೇಟಿ ಬಾಂಡ್ರಾವಿ ಅರಣ್ಯ ಪ್ರದೇಶ” ಎಂದು ನಾಮಕರಣ ಮಾಡಿರುವುದು ಕಮರ ಮರಗಳ ಹಿನ್ನಲೆಯಲ್ಲಿ ಅತ್ಯಂತ ಸ್ಮರಣಾರ್ಹ!

ಒನಕೆಗಳ ನಿರ್ಮಾಣಕ್ಕೆ ಸ್ಥಳೀಯವಾಗಿ ಬೇರೆ ಮರಗಳ‌ ಬಳಕೆಯೂ ಇರಬಹುದು. ದಕ್ಷಿಣ ಕನ್ನಡದ ಕಡೆ ತಾಳೆ ಮತ್ತು ತೆಂಗಿನ ಮರದಿಂದ ಒನಕೆಗಳನ್ನು ತಯಾರಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅದರ ಬಳಕೆ ಇಲ್ಲ. ಹಾಗಾಗಿ ಯಾರ ಮನೆಯಲ್ಲೂ ಇದು ಕಾಣಲು ಸಿಗುವುದಿಲ್ಲ. ಪುಡಿ ಮಾಡಲು ವಿವಿಧ ರೀತಿಯ ಮಿಷನ್‌ಗಳು ಬಂದ ಮೇಲೆ ಇದರ ಬಳಕೆ ಕಡಿಮೆ ಆಯ್ತು. ಇನ್ನು ಕೆಲವರ ಮನೆಯ ಅಟ್ಟ ಸೇರಿದೆ.

✍️ ಸಂಜಯ್‌ ಹೊಯ್ಸಳ

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

223 ಕಾಡ್ಗಿಚ್ಚು ಘಟನೆ – 130 ಹೆಕ್ಟೇರ್ ಅರಣ್ಯ ನಾಶ
March 30, 2025
11:24 PM
by: The Rural Mirror ಸುದ್ದಿಜಾಲ
ಜಲಸಂರಕ್ಷಣೆಯ ಮಾದರಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ | 8 ವರ್ಷಗಳಲ್ಲಿ ದೇಶದಲ್ಲಿ 11 ಶತಕೋಟಿ ಘನ ಮೀಟರ್ ನೀರು ಸಂರಕ್ಷಣೆ |
March 30, 2025
10:20 PM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ಹಾಲಿನ ಬೆಲೆ ಏರಿಕೆ | ಯುಗಾದಿಗೆ ರೈತರಿಗೆ ಕೊಡುಗೆ |
March 30, 2025
9:53 PM
by: The Rural Mirror ಸುದ್ದಿಜಾಲ
‘ಪರಿಸರ-2025’ ರಾಷ್ಟ್ರೀಯ ಸಮ್ಮೇಳನ | ಉಸಿರಾಡುವ  ಗಾಳಿ , ಕುಡಿಯುವ ನೀರು ,  ಪಕ್ಷಿಗಳ ಕೂಗಿನ ಬಗ್ಗೆ ಯೋಚಿಸುವ ಅಗತ್ಯವಿದೆ
March 30, 2025
9:26 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group