ನಾನು ಕೇಳಿದಂತೆ ನಮ್ಮ ಮೈಸೂರು ಕಡೆ ಒನಕೆಗಳನ್ನು ತಯಾರಿಸಲು ಕಗ್ಗಲಿ (Senegalia catechu) ಮರವನ್ನು ಬಳಸುತ್ತಾರೆ. ಈ ಕಗ್ಗಲಿ ಮರವನ್ನು ಬಹಳಷ್ಟು ಜನ ದೈವಿಕ ಭಾವನೆಯಿಂದ ನೋಡುತ್ತಾರೆ. ಬಂಡೀಪುರ ಅರಣ್ಯದ ಕಾಡಂಚಿನ ಗ್ರಾಮಗಳಲ್ಲಿನ ಊರ ದೇವತೆಗಳ ವಾರ್ಷಿಕ ಜಾತ್ರೆಯಲ್ಲಿ ‘ಕೊಂಡ’ಕ್ಕಾಗಿ ಇದೇ ಕಗ್ಗಲಿ ಮರಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಕಗ್ಗಲಿ ಮರಗಳು ಎಲ್ಲಾ ಕಡೆಗಳಲ್ಲಿ ಕಂಡು ಬರುವುದಿಲ್ಲ. ಕೆಲವೊಂದು ನಿರ್ದಿಷ್ಟ ಸ್ಥಳಗಳಲ್ಲಿ ಇವು ಬೆಳೆಯುತ್ತವೆ. ಹೆಚ್ಚಾಗಿ ಕಲ್ಲುಗಳಿಂದ ಕೂಡಿದ ಪ್ರದೇಶಗಳು, ಬೆಟ್ಟ- ಗುಡ್ಡದ ಪ್ರದೇಶಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ.
ಇನ್ನು ಚಿತ್ರದುರ್ಗ ಸೇರಿ ಬಯಲು ಸೀಮೆಯ ಒಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಕಮರ (Hardwickia binata) ಮರವನ್ನೂ ಕೂಡ ಆ ಭಾಗಗಳಲ್ಲಿ ಹೆಚ್ಚಾಗಿ ಬಳಸುತ್ತಿದ್ದರು. ಇವೆರಡು ಮರಗಳು ಉಕ್ಕಿನಂತೆ ಗಟ್ಟಿ ಮುಟ್ಟಾದವು. ಕರ್ನಾಟಕದ ಬೆಟ್ಟಗುಡ್ಡಗಳಿಂದ ಕೂಡಿದ ಒಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಸ್ಥಳೀಯ ಮರಗಳು.
ಚಿತ್ರದುರ್ಗದ ಮೊಳಕಾಲ್ಮೂರು ತಾಲ್ಲೂಕಿನ ಬಾಂಡ್ರಾವಿ ಮೀಸಲು ಅರಣ್ಯದಲ್ಲಿ 1970 ರಿಂದ 2000 ನೇ ಇಸವಿವರೆಗೆ ಅರಣ್ಯ ರಕ್ಷಕರಾಗಿ, ವನಪಾಲಕರಾಗಿ ಹಗಲು ರಾತ್ರಿ ಕರಲಸ ಮಾಡಿ, ಕಮರ ಮರಗಳು ಸ್ವಾಭಾವಿಕವಾಗಿ ಬೆಳೆಯುತ್ತಿದ್ದ, ಬೆಳೆದಷ್ಟೆ ವೇಗವಾಗಿ ಕಡಿತಲೆಗೆ ಗುರಿಯಾಗಿದ್ದ ಅರಣ್ಯ ಪ್ರದೇಶಕ್ಕೆ ರಕ್ಷಣೆ ನೀಡಿ ಅತ್ಯುತ್ತಮ ಸ್ವಾಭಾವಿಕ ಅರಣ್ಯ ನಿರ್ಮಾಣಕ್ಕೆ ಕಾರಣವಾಗಿದ್ದ ನಾಗಪ್ಪ ಮೇಟಿಯವರ ಸ್ಮರಣಾರ್ಥವಾಗಿ ಆ ಅರಣ್ಯ ಪ್ರದೇಶಕ್ಕೆ “ವನಪಾಲಕ ನಾಗಪ್ಪ ಮೇಟಿ ಬಾಂಡ್ರಾವಿ ಅರಣ್ಯ ಪ್ರದೇಶ” ಎಂದು ನಾಮಕರಣ ಮಾಡಿರುವುದು ಕಮರ ಮರಗಳ ಹಿನ್ನಲೆಯಲ್ಲಿ ಅತ್ಯಂತ ಸ್ಮರಣಾರ್ಹ!
ಒನಕೆಗಳ ನಿರ್ಮಾಣಕ್ಕೆ ಸ್ಥಳೀಯವಾಗಿ ಬೇರೆ ಮರಗಳ ಬಳಕೆಯೂ ಇರಬಹುದು. ದಕ್ಷಿಣ ಕನ್ನಡದ ಕಡೆ ತಾಳೆ ಮತ್ತು ತೆಂಗಿನ ಮರದಿಂದ ಒನಕೆಗಳನ್ನು ತಯಾರಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅದರ ಬಳಕೆ ಇಲ್ಲ. ಹಾಗಾಗಿ ಯಾರ ಮನೆಯಲ್ಲೂ ಇದು ಕಾಣಲು ಸಿಗುವುದಿಲ್ಲ. ಪುಡಿ ಮಾಡಲು ವಿವಿಧ ರೀತಿಯ ಮಿಷನ್‌ಗಳು ಬಂದ ಮೇಲೆ ಇದರ ಬಳಕೆ ಕಡಿಮೆ ಆಯ್ತು. ಇನ್ನು ಕೆಲವರ ಮನೆಯ ಅಟ್ಟ ಸೇರಿದೆ.
✍️ ಸಂಜಯ್ ಹೊಯ್ಸಳ
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…