Advertisement
The Rural Mirror ವಾರದ ವಿಶೇಷ

ಬೆಳೆ ವೈವಿಧ್ಯತೆಯಿಂದ ಕೃಷಿ ಯಶಸ್ವಿ | ಗೋವಾದ ಯುವ ಕೃಷಿಕನ ಯಶೋಗಾಥೆ |

Share

ಬೆಳೆ ವೈವಿಧ್ಯತೆ ಹಾಗೂ ಹೊಸ ವಿಧಾನದ ಕೃಷಿ ಪದ್ಧತಿಯ ಮೂಲಕ ಕೃಷಿ ಯಶಸ್ವಿಗೊಳಿಸಿದ ಯುವಕನ ಯಶೋಗಾಥೆ  ಇದು. ತಮ್ಮ ಕೃಷಿ ಭೂಮಿಯನ್ನು ಸಾವಯವ ಕೃಷಿಯಾಗಿ ಮಾರ್ಪಡಿಸಿ ಯಶಸ್ವಿಯಾಗಿ ವಿವಿಧ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಈ ಯುವ ಕೃಷಿನ ಹೆಸರು ಚಿನ್ಮಯ್‌ ತನ್ಷೀಕರ್.…..ಮುಂದೆ ಓದಿ….

Advertisement
Advertisement
Advertisement

ಗೋವಾದ ಸಾಂಗೇಮ್‌ನ ನೇತ್ರಾವಳಿ ಗ್ರಾಮದ ನಿವಾಸಿಯಾಗಿರುವ ಚಿನ್ಮಯ್ ತನ್ಷೀಕರ್ ಅವರು ಪಿತ್ರಾರ್ಜಿತವಾಗಿ ಲಭ್ಯವಾಗಿರುವ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ.ಬಿ.ಕಾಂ ಪದವೀಧರರಾಗಿರುವ ಚಿನ್ಮಯ್  ತೆಂಗು ಮತ್ತು ಅಡಿಕೆ ತೋಟದೊಂದಿಗೆ ಅವರ ತಂದೆಯಿಂದ ಕೃಷಿ ಪಯಣ ಆರಂಭಿಸಿದ್ದರು.  ಕೃಷಿಗೆ ಇಳಿದ ಬಳಿಕ  ಚಿನ್ಮಯ್ ಅವರು ಅಡಿಕೆ, ತೆಂಗು ಮಾತ್ರವಲ್ಲ ಹೊಸ ಬಗೆಯ ಕೃಷಿಯ ಕಡೆಗೂ ಮನಸ್ಸು ಮಾಡಿದರು. ವೆನಿಲ್ಲಾ, ಕರಿಮೆಣಸು ಮತ್ತು ದಾಲ್ಚಿನ್ನಿಗಳಂತಹ ಕೃಷಿಯನ್ನೂ ಬೆಳೆದರು. ಈಗ ತಮ್ಮ ಇಡೀ ಕೃಷಿಯನ್ನೂ ಸಾವಯವ ಕೃಷಿಯಾಗಿ ಪರಿವರ್ತಿಸಿದ್ದಾರೆ.

Advertisement

ವೆನಿಲ್ಲಾ, ಕೇಸರಿ ನಂತರ ವಿಶ್ವದ ಎರಡನೇ ಅತ್ಯಂತ ದುಬಾರಿ ವಸ್ತು ವೆನಿಲ್ಲಾ. ವೆನಿಲ್ಲಾ ಬೆಲೆಗಳು ಕಿಲೋಗ್ರಾಮ್‌ಗೆ 50,000 ರೂಪಾಯಿ ಏರಿಕೆಯ ಸಮಯದಲ್ಲಿ ಚಿನ್ಮಯ್‌ ಅವರು ವೆನಿಲ್ಲಾ ಕೃಷಿಯನ್ನು ಮಾಡಿದ್ದರು. ಅಂದು ವೆನಿಲ್ಲಾ ಮಾರುಕಟ್ಟೆಯು ಸಂಚಲನ ಮೂಡಿತ್ತು. ನಂತರ ಬೆಲೆ ಕುಸಿದವು, ಅನೇಕ ಕೃಷಿಕರು ವೆನಿಲ್ಲಾದಿಂದ ಹೊರಬಂದರು. ಆದರೂ ಚಿನ್ಮಯ್  ವೆನಿಲ್ಲಾ ಬಿಡಲಿಲ್ಲ,  ವೆನಿಲ್ಲಾ ಕೃಷಿಯನ್ನು ಮುಂದುವರೆಸುತ್ತಿರುವ ಗೋವಾದ ಕೆಲವೇ ರೈತರಲ್ಲಿ ಒಬ್ಬರಾಗಿದ್ದಾರೆ ಮತ್ತು ಇದು ಇಂದೂ ಅವರ ಜಮೀನಿನಲ್ಲಿ ಅತಿದೊಡ್ಡ ಆದಾಯವನ್ನು ತರುವ ಕೃಷಿಯೂ ಆಗಿದೆ.

Advertisement

2020-21 ರಲ್ಲಿ, ಚಿನ್ಮಯ್ ಅವರು  ವೆನಿಲ್ಲಾವನ್ನು ಪ್ರತಿ ಕಿಲೋಗ್ರಾಂಗೆ 30,000 ರೂ.ಗೆ ಮಾರಾಟ ಮಾಡಿದರು. ಪ್ರತಿ ಎಕರೆಗೆ ಸುಮಾರು 15 ಲಕ್ಷ ರೂಪಾಯಿ ಆದಾಯವನ್ನು ಪಡೆಯಲು ಸಾಧ್ಯವಾಗಿದೆ ಎನ್ನುತ್ತಾರೆ ಚಿನ್ಮಯ್.

ಚಿನ್ಮಯ್ ತನ್ನ ಬೆಳೆಗಳು ಮತ್ತು ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು  ಸಾವಯವ ಕೃಷಿಯನ್ನು ಮಾಡುತ್ತಾರೆ. ಒಣಗಿದ ಎಲೆಗಳು ಮತ್ತು ಇತರ ಕೃಷಿ ತ್ಯಾಜ್ಯಗಳು ಗೊಬ್ಬರವಾಗಿ ಬಳಕೆ ಮಾಡುವುದು ಹಾಗೂ ಕೀಟಗಳನ್ನು ಸಮಗ್ರ ಕೃಷಿಯ ಮೂಲಕ ನಿರ್ವಹಿಸಲಾಗುತ್ತದೆ ಎನ್ನುತ್ತಾರೆ. ರೋಗ ನಿಯಂತ್ರಣಕ್ಕಾಗಿ,  ಟ್ರೈಕೋಡರ್ಮಾ ಮತ್ತು ಸ್ಯೂಡೋಮೊನಾಸ್‌ನಂತಹ ಜೈವಿಕ ನಿಯಂತ್ರಣಗಳನ್ನು ಅವಲಂಬಿಸಿದ್ದಾರೆ. ಈ ನೈಸರ್ಗಿಕ ಪರಿಹಾರಗಳು ಬೆಳೆಗಳನ್ನು ರಕ್ಷಿಸುವುದಲ್ಲದೆ ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಭಾರೀ ಮಳೆಯನ್ನು ಅನುಭವಿಸುವ ಗೋವಾದಂತಹ ಪ್ರದೇಶದಲ್ಲಿ, ವೆನಿಲ್ಲಾದಂತಹ ಬೆಳೆಗಳಲ್ಲಿ ಶಿಲೀಂಧ್ರಗಳ ಸೋಂಕನ್ನು ತಡೆಗಟ್ಟಲು ಈ ಸಾವಯವ ವಿಧಾನಗಳು ವಿಶೇಷವಾಗಿ ಗಮನಸೆಳೆದಿದೆ.

Advertisement

ಚಿನ್ಮಯ್ ಅವರ ಕೃಷಿ ಭೂಮಿ ವೈವಿಧ್ಯತೆಯ ಮಾದರಿಯಾಗಿದೆ, ಕೃಷಿಯಲ್ಲಿ ದೀರ್ಘಾವಧಿಯ ಯಶಸ್ಸಿಗೆ ತಂತ್ರವು ಅತ್ಯಗತ್ಯ ಎಂದು ಅವರು ಹೇಳುತ್ತಾರೆ. ತಮ್ಮ 25 ಎಕರೆ ಜಮೀನಿನಲ್ಲಿ 1 ಎಕರೆಯಲ್ಲಿ ವೆನಿಲ್ಲಾ ನಾಟಿ ಮಾಡಿದ್ದಾರೆ. ವೆನಿಲ್ಲಾ ಜೊತೆಗೆ, ಅವರು ತೆಂಗು, ಅಡಿಕೆ, ಕರಿಮೆಣಸು, ದಾಲ್ಚಿನ್ನಿ, ಜಾಯಿಕಾಯಿ ಮತ್ತು ಲವಂಗವನ್ನು ವಾಣಿಜ್ಯ ಉದ್ದೇಶದಿಂದಲೇ ಬೆಳೆಯುತ್ತಾರೆ. ಈ ವೈವಿಧ್ಯಮಯ ಬೆಳೆ  ವರ್ಷವಿಡೀ ಸ್ಥಿರ ಆದಾಯವನ್ನು ನೀಡುತ್ತದೆ ಎನ್ನುವುದು ಅವರ ಅನುಭವ.

ಒಂದೇ ಬೆಳೆಯನ್ನು ಯಾವತ್ತೂ ಅವಲಂಬಿಸಬೇಡಿ ಎಂದು ಚಿನ್ಮಯ್ ಇತರ ರೈತರಿಗೆ ಸಲಹೆ ನೀಡುತ್ತಾರೆ. ಒಂದು ಬೆಳೆ ವಿಫಲವಾದರೆ, ಇತರ ಬೆಳೆ ನಷ್ಟವನ್ನು ಸರಿದೂಗಿಸಬಹುದು. ಸಮಗ್ರ ಕೃಷಿ ವೆಚ್ಚಕಡಿಮೆ ಹಾಗೂ ಪರಿಣಾಮಕಾರಿ ಮಾತ್ರವಲ್ಲದೆ ಪರಿಸರ ಸ್ನೇಹಿಯಾಗಿದೆ ಎನ್ನುತ್ತಾರೆ.

Advertisement

ಚಿನ್ಮಯ್ ಅವರು ಅನಾನಸ್, ಜಾಯಿಕಾಯಿ ಮುಂತಾದ ಬೆಳೆಗಳ ಉಪ-ಉತ್ಪನ್ನಗಳನ್ನು ಸಹ ಮಾರಾಟ ಮಾಡುತ್ತಾರೆ. ಅವರು ಐಸಿಎಆರ್‌ನಿಂದ ಕ್ಯಾಂಡಿ ತಯಾರಿಸಲು ಜಾಯಿಕಾಯಿ ಸಿಪ್ಪೆಯನ್ನು ಬಳಸುವ ತಂತ್ರದ ಅಭಿವೃದ್ಧಿಯ ಬಗ್ಗೆಯೂ ಕೆಲಸ ಮಾಡುತ್ತಿದ್ದಾರೆ. ಈ ಉಪ ಉತ್ಪನ್ನಗಳಿಂದ ವರ್ಷಕ್ಕೆ ಸುಮಾರು 12 ಲಕ್ಷ ಆದಾಯ ಬರುತ್ತಿದೆ ಎಂದು ಹೇಳುತ್ತಾರೆ.ಇದಲ್ಲದೆ ಚಿನ್ಮಯ್ ಅವರು ಜೇನು ಸಾಕಾಣಿಕೆಯನ್ನು ಮಾಡುತ್ತಾರೆ , ಈ ಬಗ್ಗೆ ತರಬೇತಿ ನೀಡುತ್ತಾರೆ. ಎಲ್ಲಾ ಕೃಷಿ ಹಾಗೂ ಕೃಷಿ ಪೂರಕ ಕೆಲಸ  ಒಟ್ಟುಗೂಡಿಸಿ ಚಿನ್ಮಯ್ ವರ್ಷಕ್ಕೆ 50 -60 ಲಕ್ಷದವರೆಗೆ ಗಳಿಸುತ್ತಾರೆ.

Advertisement

ಕೃಷಿ ವಸ್ತುಗಳ ಮಾರುಕಟ್ಟೆ ಬಗ್ಗೆಯೂ ಚಿನ್ಮಯ್‌ ತಮ್ಮದೇ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ. ಅವರು ಪ್ರವಾಸೋದ್ಯಮದ ಮೂಲಕ ತಮ್ಮ ತೋಟಕ್ಕೆ ಭೇಟಿ ನೀಡುವ ಆಸಕ್ತರಿಗೂ ಮಾರಾಟ ಮಾಡುತ್ತಾರೆ. ತೋಟದಲ್ಲಿ ಬೆಳೆದ ಸುಮಾರು 90 ಪ್ರತಿಶತದಷ್ಟು ವೆನಿಲ್ಲಾ ಮತ್ತು ಹೆಚ್ಚಿನ ಉಪಉತ್ಪನ್ನಗಳನ್ನು ಸಂದರ್ಶಕರಿಗೆ ನೇರವಾಗಿ ಮಾರಾಟ ಮಾಡಲಾಗುತ್ತದೆ ಎಂದು ಚಿನ್ಮಯ್ ಹೇಳುತ್ತಾರೆ. ಈ ನೇರ-ಗ್ರಾಹಕ ವಿಧಾನವು ತನ್ನ ಉತ್ಪನ್ನಗಳಿಗೆ ಮೌಲ್ಯವನ್ನು ಹೆಚ್ಚಿಸುವುದಲ್ಲದೆ,  ಮಧ್ಯವರ್ತಿಗಳು ಇಲ್ಲದೆಯೇ ಕೃಷಿಕನಿಗೇ ಹೆಚ್ಚಿನ ಲಾಭಾಂಶವನ್ನು ಕಾಪಾಡಿಕೊಳ್ಳಲು ಅವಕಾಶ ನೀಡುತ್ತದೆ ಎನ್ನುತ್ತಾರೆ.

ಚಿನ್ಮಯ್ ತನ್ಷೀಕರ್ ಅವರ ಯಶೋಗಾಥೆಯು ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಸುಸ್ಥಿರತೆಯ ಕಡೆಗೆ ಹೇಗೆ ಪರಿವರ್ತಿಸಬಹುದು ಎಂಬುದಕ್ಕೆ  ಉದಾಹರಣೆಯಾಗಿದೆ. ಸಾವಯವ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ಬೆಳೆ ವೈವಿಧ್ಯದ ಮೂಲಕ  ಕೃಷಿಯನ್ನು ಲಾಭವಾಗಿಸಲು ಸಾಧ್ಯವಿದೆ.

Advertisement

This is the tale of a young man who achieved success in agriculture by implementing crop diversity and innovative farming techniques. Chinmay Tanshikar, a successful farmer, has transformed his land into a thriving organic farm and has been recognized with multiple awards for his achievements.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

9 hours ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

12 hours ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

13 hours ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

3 days ago

ಮುಂಜಾನೆ ಏಳಬೇಕು, ಬೇಗನೇ ಏಳಬೇಕು

ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…

4 days ago

ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |

ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…

4 days ago