ಕಾಶಿ ಯಾತ್ರೆ ರೀತಿಯಲ್ಲೇ ಅಯೋಧ್ಯೆಗೂ ರಿಯಾಯಿತಿ ದರದಲ್ಲಿ ಯಾತ್ರೆ ಪ್ಲ್ಯಾನ್ | ಬಿಜೆಪಿಯ ಐಡಿಯಾಕ್ಕೆ ಟಕ್ಕರ್‌ ಕೊಡಲು ಮುಂದಾದ ಕಾಂಗ್ರೆಸ್ |

January 25, 2024
12:15 PM

ದೇಶದಾದ್ಯಂತ ಇರುವ ಅನೇಕ ಧಾರ್ಮಿಕ ಕೇಂದ್ರಗಳ ಪಟ್ಟಿಗೆ ಈಗ ಅಯೋಧ್ಯೆ(Ayodhya) ರಾಮ ಮಂಂದಿರವೂ(Ram Mandir) ಸೇರ್ಪಡೆಗೊಂಡಿದೆ. ಸರ್ಕಾರ(Govt) ಪುಣ್ಯ ಕ್ಷೇತ್ರಗಳಿಗೆ ಹೋಗುವವರಿಗೆ ರಿಯಾಯಿತಿ ದರದಲ್ಲಿ ಯಾತ್ರೆಗಳನ್ನು(Tour) ಕೈಗೊಳ್ಳು ಅವಕಾಶಗಳನ್ನು ಕಲ್ಪಿಸಿದೆ. ಇದೀಗ ಅದೇ ರೀತಿಯಲ್ಲಿ ಕರ್ನಾಟಕ ಕಾಂಗ್ರೆಸ್‌ ಸರ್ಕಾರ(Congress Govt) ಹೊಸ ಯೋಜನೆಯೋಂದನ್ನು ಜಾರಿ ತರಲು ಅಲೋಚಿಸಿದೆ. ಲೋಕಸಭಾ ಚುನಾವಣೆ (Loksabha Election) ವೇಳೆ ಬಿಜೆಪಿ(BJP) ಅಯೋಧ್ಯೆಗೆ  ರಾಮಭಕ್ತರನ್ನು ಕರೆದುಕೊಂಡು ಹೋಗುವ ಪ್ಲ್ಯಾನ್ ರೂಪಿಸಿದೆ. ಇದಕ್ಕೆ ಠಕ್ಕರ್ ಕೊಡಲು ಈಗ ಕಾಂಗ್ರೆಸ್ ಸರ್ಕಾರವೂ ಸಜ್ಜಾಗಿದೆ.

Advertisement

ಈಗಾಗಲೇ ಮುಜರಾಯಿ ಇಲಾಖೆಯಿಂದ ಕರ್ನಾಟಕ ಭಾರತ ಗೌರವ ಕಾಶಿ ರೈಲು ಯಾತ್ರೆ ಇದೆ. ರಿಯಾಯಿತಿ ದರದಲ್ಲಿ ಕಾಶಿ ಸೇರಿದಂತೆ ಅನೇಕ ಪುಣ್ಯ ಕ್ಷೇತ್ರಗಳಿಗೆ ಜನರು ಬುಕ್ ಮಾಡಿ ಹೋಗಬಹುದಾಗಿದೆ. ಈಗ ಈ ಪ್ಲ್ಯಾನ್‍ನಲ್ಲಿ ಮುಜರಾಯಿ ಇಲಾಖೆಯು ಅಯೋಧ್ಯೆಯನ್ನು ಕೂಡ ಸೇರಿಸಿಕೊಳ್ಳಲಿದೆ.

ಮಾರ್ಚ್‍ನಲ್ಲೇ ಯಾತ್ರೆ ಭಾಗ್ಯ: ಸದ್ಯ ಈಗ ವಿಪರೀತ ಚಳಿ ಇರೋದ್ರಿಂದ ಮಾರ್ಚ್‍ನಲ್ಲಿ ಮುಜರಾಯಿಯಿಂದ ಅಯೋಧ್ಯೆ ಯಾತ್ರೆ ಭಾಗ್ಯ ಸಿಗಲಿದೆ. ಈ ಬಗ್ಗೆ ಖಾಸಗಿ ವಾಹಿನಿಗೆ ಮುಜರಾಯಿ ಇಲಾಖೆ ಸಚಿವ ಸ್ಪಷ್ಟಪಡಿಸಿದ್ದು, ಜನರ ಬೇಡಿಕೆಗೆ ತಕ್ಕಂತೆ ಕಡಿಮೆ ದರದಲ್ಲಿ ಯಾತ್ರೆಯನ್ನು ಕಲ್ಪಿಸಲಿದ್ದೇವೆ. ಹೊಸ ಆಯೋಧ್ಯೆಯ ಯಾತ್ರೆಯೂ ಇದ್ರಲ್ಲಿದೆ ಅಂತೇಳಿದ್ದಾರೆ. ಒಟ್ಟಾರೆ ರಾಜಕೀಯ ಕಾರಣಕ್ಕೆ ಪರಸ್ಪರ ಠಕ್ಕರ್ ಕೊಡೋದಕ್ಕೆ ಅಯೋಧ್ಯೆ ಯಾತ್ರೆ ಜಾರಿಗೆ ತಂದ್ರೋ ಗೊತ್ತಿಲ್ಲ. ಆದರೆ ರಾಜ್ಯದ ಜನರಿಗಂತೂ ನಿಜಕ್ಕೂ ಇದು ಗುಡ್‍ನ್ಯೂಸ್ ಆಗಿದೆ.

  • ಅಂತರ್ಜಾಲ ಮಾಹಿತಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಪುತ್ತೂರು ಜಾತ್ರೆ ಎಂದರೆ “ನಮ್ಮ ಮನೆ ಉತ್ಸವ”
April 17, 2025
10:44 AM
by: ದ ರೂರಲ್ ಮಿರರ್.ಕಾಂ
ಕೆಲವು ವಿಶೇಷ ಯೋಗಗಳು ಮತ್ತು ಗ್ರಹಗಳ ಸಂಯೋಜನೆ
April 17, 2025
5:27 AM
by: ದ ರೂರಲ್ ಮಿರರ್.ಕಾಂ
ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ
April 16, 2025
9:41 PM
by: ಡಾ.ಚಂದ್ರಶೇಖರ ದಾಮ್ಲೆ
ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ
April 16, 2025
8:40 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group