ತರಹೇವಾರಿ ಗೆಡ್ಡೆ-ಗೆಣಸುಗಳದ್ದೇ ಲೋಕ | ಜೋಯಿಡಾದಲ್ಲಿ ನಡೆಯಿತು ಅಪರೂಪದ ವಿವಿಧ ಜಾತಿಯ ಗೆಡ್ಡೆ-ಗೆಣಸುಗಳ ಪ್ರದರ್ಶನ

January 29, 2024
1:44 PM

ಉತ್ತರ ಕನ್ನಡ ಜಿಲ್ಲೆಯ(Uttara Kannada) ಮಂದಿ ಇನ್ನು ತಮ್ಮ ಮೂಲ ಆಹಾರ ಪದ್ಧತಿ, ಕಾಡು ಮೇಡು, ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಅಲ್ಲಿನ ಜನ ಇಂದಿಗೂ ತರಕಾರಿ(vegetable), ಸೊಪ್ಪು(Green vegetable), ಗೆಡ್ಡೆ ಗೆಣಸುಗಳನ್ನು(tubers-Potato) ಸಾಂಪ್ರದಾಯಿಕ ರೀತಿಯಲ್ಲಿ ಬೆಳೆಯುತ್ತಿದ್ದಾರೆ. ಕಂದಮೂಲ ಆಹಾರಗಳು ಮನುಷ್ಯನ ಮೊದಲ ಆಹಾರವಾಗಿದ್ದವು. ಗೆಡ್ಗೆ-ಗೆಣಸುಗಳು  ಬಹುಷಃ ಮನುಷ್ಯನ ಊಟೋಪಚಾರಕ್ಕೆ ಉಪಯೋಗವಷ್ಟು ಮತ್ಯಾವ ವಸ್ತುಗಳೂ ಬಳಸಲ್ಪಟ್ಟಿಲ್ಲ. ಉತ್ತರ ಕನ್ನಡ  ಜಿಲ್ಲೆಯ ಅಂಕೋಲಾ ಹಾಗೂ ಜೋಯಿಡಾ ಇವೆರೆಡೂ ಯಥೇಚ್ಛವಾಗಿ ಗೆಡ್ಡೆ ಗೆಣಸು ಬೆಳೆಯುವ ಸ್ಥಳ . ಜೋಯಿಡಾದ ಗುಡ್ಡಗಾಡಲ್ಲಿ ಹತ್ತಾರು ವಿಧದ ಗೆಡ್ಡೆ ಗೆಣಸುಗಳು ಈ ಕಾಲದಲ್ಲಿ ಸಿಗುತ್ತವೆ. ಅವುಗಳ ಪ್ರದರ್ಶನವನ್ನು(Exhibition) ಪ್ರತಿ ವರ್ಷ ಕಾಳಿ ಪ್ರವಾಸೋದ್ಯಮ ಇಲಾಖೆ ನಡೆಸುತ್ತದೆ.

Advertisement

ಗೆಡ್ಡೆ ಗೆಣಸುಗಳು ಪ್ರದರ್ಶನ : ಇಲ್ಲಿರುವ ಗೆಡ್ಡೆ ಗೆಣಸುಗಳು 1 ಕೆಜಿಯಿಂದ-50 ಕೆಜಿಯರೆಗೆ ತೂಕ ಹೊಂದಿರುತ್ತವೆ. ಪಂಜರುಗಡ್ಡೆ, ಕೆಸುವಿನ ಗೆಡ್ಡೆ, ತುಪ್ಪಗೆಣಸು, ಮರಗೆಣಸು, ಸಿಹಿಗೆಣಸು, ಕೆಸುವಿನ ಗೆಡ್ಡೆ, ರಚ್ಚೇವು ಗೆಡ್ಡೆ, ಕಂಬಕೆಸು, ಚಿಪ್ಪಗೆಸು, ನೇಗಲಗೊನ್ನೆ, ಪಂಜರಗೆಡ್ಡೆ, ಹಾಲುಗೆಸು, ಚೆಂಗೆಣಸು, ಚಿರಕಾಂಡೆ ಮುಂತಾದ ಗೆಣಸುಗಳ ಪ್ರದರ್ಶನ ಇಲ್ಲಿ ನಡೆಯಿತು. ಒಂದೊಂದು ಗೆಣಸಿಗೆ 500-1000ದಷ್ಟು ದರ ಇದ್ದರೂ ಜನ ಕೊಂಡೊಯ್ದರು. ಸುಮಾರು 125 ಸ್ಟಾಲ್ ಗಳು ಇದ್ದವು.

ಗದೆಯನ್ನು ಮೀರಿಸುವ ಸೈಜಿನ ಗೆಣಸು : ಬರೀ ಜೊಯಿಡಾ ಮಾತ್ರವಲ್ಲದೇ ಬೇರೆ ಬೇರೆ ಭಾಗದಿಂದಲೂ ಕೂಡ ಗೆಡ್ಡೆ-ಗೆಣಸು ಬೆಳೆಯುವ ಜನರು ಇಲ್ಲಿ ಪ್ರದರ್ಶನಕ್ಕೆ ಆಗಮಿಸಿದ್ದರು. ಒಂದೊಂದು ಗೆಡ್ಡೆಯಂತು ಒಂದು ಟಿಪಾಯಿಯ ಸೈಜ್, ಒಂದು ಒನಕೆಯ ಸೈಜ್, ಗದೆಯನ್ನು ಮೀರಿಸುವ ಸೈಜಿನ ಗೆಡ್ಡೆ ಗೆಣಸುಗಳು ಕಂಡುಬಂದವು. ಕೋನ್ ಗಳೆಂದು ಕರೆಯಲ್ಪಡುವ ಗೆಡ್ಡೆಗಳದ್ದೇ ಸಿಂಹಪಾಲಾಗಿತ್ತು.

– ಅಂತರ್ಜಾಲ ಮಾಹಿತಿ

Both Ankola and Zoida in Uttara Kannada district are the places where sweet potato is grown in abundance. Tens of varieties of tubers can be found in the hills of Joida during this season. Their exhibition is conducted by Kali Tourism Department every year.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕದನ ವಿರಾಮ ಘೋಷಣೆ | ಭಾರತ ಮತ್ತು ಪಾಕಿಸ್ತಾನ ಗಡಿಯಾಚೆಗಿನ ದಾಳಿಯನ್ನು ಕೊನೆಗೊಳಿಸಲು ಒಪ್ಪಿಕೊಂಡಿವೆ
May 10, 2025
7:42 PM
by: The Rural Mirror ಸುದ್ದಿಜಾಲ
ಕೃಷಿಕರ ಸಂಸ್ಥೆ ಕ್ಯಾಂಪ್ಕೊ ವತಿಯಿಂದ ರಾಷ್ಟ್ರೀಯ ರಕ್ಷಣಾ ನಿಧಿಗೆ 5 ಕೋಟಿ ರೂಪಾಯಿ ದೇಣಿಗೆ
May 10, 2025
7:05 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 09-05-2025 | ಮೇ14 ರಿಂದ ಉತ್ತಮ ಮಳೆಯ ನಿರೀಕ್ಷೆ ಇದೆ
May 10, 2025
12:20 PM
by: ಸಾಯಿಶೇಖರ್ ಕರಿಕಳ
ಜೂನ್‌ನಿಂದ ಈ 6 ರಾಶಿಯವರ ಅದೃಷ್ಟ ಖುಲಾಯಿಸಲಿದೆ… ಕೋಟ್ಯಾಧಿಪತಿಗಳಾಗುವ ಯೋಗ!
May 10, 2025
8:07 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group