ಸುದ್ದಿಗಳು

ಮಾ.21 ರಂದು ಸುಳ್ಯದಲ್ಲಿ ಆಮ್‌ ಆದ್ಮಿ‌ ಪಾರ್ಟಿ ವಿಜಯೋತ್ಸವ | ದಕ್ಷಿಣ ಕನ್ನಡದಲ್ಲಿ ಆಮ್‌ ಆದ್ಮಿ ಬೆಳವಣಿಗೆಯ ನೋಟ ? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅರವಿಂದ ಕೇಜ್ರೀವಾಲ್‌ ನೇತೃತ್ವದಲ್ಲಿ ಬೆಳೆದ ಆಮ್‌ ಆದ್ಮಿ ಪಾರ್ಟಿ ಈಗ  ಪಂಜಾಬ್‌ ರಾಜ್ಯಕ್ಕೆ ವಿಸ್ತರಣೆಗೊಂಡಿದೆ. ಇಡೀ ದೇಶದ ಎಲ್ಲಾ ರಾಜ್ಯಗಳಲ್ಲೂ ಘಟಕಗಳನ್ನು ಹೊಂದಿರುವ ಎಎಪಿ ರಾಜ್ಯದಲ್ಲೂ ಸಮಿತಿಯನ್ನು ಹೊಂದಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪಕ್ಷ ಗಟ್ಟಿಯಾಗಲಿದೆಯೇ ? ಹೀಗೊಂದು ಪ್ರಶ್ನೆ ಈಗ ಇದೆ. ಈಗಾಗಲೇ ನಡೆಸಿದ ಸದಸ್ಯತ್ವ ಅಭಿಯಾನಕ್ಕೂ ಉತ್ತಮ ಪ್ರತಿಕ್ರಿಯೆ ಬಂದಿದೆ ಎನ್ನಲಾಗಿದೆ. ಇದೀಗ ಮಾ.21 ರಂದು ಸುಳ್ಯದಲ್ಲಿ ಆಮ್‌ ಆದ್ಮಿ ಪಾರ್ಟಿಯ ಸುಳ್ಯ ವಿಧಾನಸಭಾ ಕ್ಷೇತ್ರದ ವತಿಯಿಂದ ಪಂಜಾಬ್‌ ಜನತೆಗೆ  ಅಭಿನಂದನೆ, ವಿಜಯೋತ್ಸವ ಹಾಗೂ ಪಕ್ಷಕ್ಕೆ  ಸೇರ್ಪಡೆ ಹಾಗೂ ಸಾರ್ವಜನಿಕ ಸಭೆ ನಡೆಯಲಿದೆ. 

Advertisement

ದೆಹಲಿಯಲ್ಲಿ ಮಾತ್ರವೇ ಇದ್ದ ಎಎಪಿ ಈಗ ಪಂಜಾಬ್‌ ಪ್ರವೇಶಿಸಿದೆ. ಈ ನಡುವೆಯೇ ಇಡೀ ದೇಶದಲ್ಲಿ ಎಎಪಿ ಸಂಘಟನೆ ಬಲಗೊಳ್ಳುವತ್ತ ಸಾಗಿದೆ. ರಾಜ್ಯದಲ್ಲೂ ಘಟಕಗಳನ್ನು ಹೊಂದಿದ್ದ ಆಮ್‌ ಆದ್ಮಿ ಪಾರ್ಟಿ ದಕ್ಷಿಣ ಕನ್ನಡದಲ್ಲೂ ಸಮಿತಿಯನ್ನು  ಹೊಂದಿತ್ತು. ಸದ್ದಿಲ್ಲದೆ ಕೆಲಸ ಮಾಡುತ್ತಲೇ ಇದೆ. ಕೆಲ ಉದ್ಯಮಿಗಳೂ ಎಎಪಿಯನ್ನು ಬೆಂಬಲಿಸುತ್ತಿದ್ದಾರೆ. ಇದೀಗ ದಕ್ಷಿಣ ಕನ್ನಡಜಿಲ್ಲೆಯಲ್ಲೂ ಎಎಪಿ ವಿಸ್ತಾರಗೊಳ್ಳುವ ಬಗ್ಗೆ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.ಈಗಾಗಲೇ ಆನ್‌ ಲೈನ್‌ ಮೂಲಕ ಸದಸ್ಯತ್ವ ಅಭಿಯಾನ ನಡೆಸಿದ್ದು ಹಲವಾರು ಮಂದಿ ಉತ್ತಮ ಪ್ರತಿಕ್ರಿಯೆ ತೋರಿದ್ದು ಮುಂದೆ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ, ಜಿಲ್ಲೆಯ ಪ್ರಮುಖ ಬೆಳೆ ಅಡಿಕೆಗಾರರ ಹಿತ ಕಾಪಾಡಲು , ಜಿಲ್ಲೆಯಲ್ಲಿ ಶಾಂತಿಯನ್ನು ಗುರಿಯಾಗಿಸಿಕೊಂಡು, ಯುವಕರಿಗೆ ಉದ್ಯೋಗದ ಒದಗಿಸುವ ಹಾಗೂ ಉದ್ಯಮಗಳ ಸ್ಥಾಪನೆಯನ್ನು ಗುರಿಯಾಗಿಸಿಕೊಂಡು ಐದು ಕ್ಷೇತ್ರದ ಪ್ರಮುಖರೊಂದಿಗೆ ಜಿಲ್ಲೆಯಲ್ಲಿ ಎಎಪಿ ಬಲವರ್ಧನೆಯ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ನ್ಯಾಯವಾದಿಯೊಬ್ಬರ ನೇತೃತ್ವದ ಈ ತಂಡದಲ್ಲಿ ವೈದ್ಯರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಹಾಗೂ ಸಂಘಟನೆಗಳ ಪ್ರಮುಖರು ಭಾಗಿಯಾಗಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಇದೀಗ ಇದೆಲ್ಲದರ ಭಾಗಿವಾಗಿಯೇ ಎಂಬಂತೆ ರಾಜಕೀಯ ಕ್ಷೇತ್ರದ ಪ್ರಮುಖ ಅಂಗಳವಾದ ಸುಳ್ಯ ವಿಧಾನಸಭಾ ಕ್ಷೇತ್ರದಿಂದಲೇ ಈ ಹೆಜ್ಜೆ ಆರಂಭವಾಗಿದೆ ಎನ್ನಲಾಗುತ್ತಿದೆ. ಸುಳ್ಯದಲ್ಲಿ ಹಲವು ಪ್ರಮುಖರ ಜೊತೆ ಈಗಾಗಲೇ ಮಾತುಕತೆ ನಡೆಸಿರುವ ಎಎಪಿ ಅಭಿವೃದ್ಧಿಯ ಅಜೆಂಡಾ ಮುಂದಿಟ್ಟಿದೆ. ಇದೆಲ್ಲದರ ಭಾಗವಾಗಿ ಮಾ.21  ರಂದು ಸುಳ್ಯದಲ್ಲಿ ಸಾರ್ವಜನಿಕ ಸಭೆ ಆಯೋಜಿಸಿದ್ದು ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿಯವರು ಆಗಮಿಸುತ್ತಿದ್ದಾರೆ. ಇವರ ಜೊತೆಗೆ ರಾಜ್ಯ ಸಂಘಟನಾ ಮುಖ್ಯಸ್ಥ ವಿಜಯ್‌ ಶರ್ಮ, ಜಂಟಿ ಕಾರ್ಯದರ್ಶಿ ದರ್ಶನ್‌ ಜೈನ್‌ , ಮಾಧ್ಯಮ ವಕ್ತಾರ ಜಗದೀಶ್‌ ವಿ ಸದಮ್‌ ಮೊದಲಾದ ಪ್ರಮುಖರೂ ಭಾಗವಹಿಸುವರು. ಈ ಸಂದರ್ಭ ಪಂಜಾಬ್‌ ಜನತೆಗೆ  ಅಭಿನಂದನೆ, ವಿಜಯೋತ್ಸವ ಹಾಗೂ ಪಕ್ಷಕ್ಕೆ  ಸೇರ್ಪಡೆ ಹಾಗೂ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದೇ ವೇಳೆ ಆಮ್‌ ಆದ್ಮಿ ಪಾರ್ಟಿಗೆ ಹಲವಾರು ಮಂದಿ ಸೇರ್ಪಡೆಯಾಗಲಿದ್ದು ಕೆಲವು ಪ್ರಮುಖರೂ ಕೂಡಾ ಎಎಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಾಷ್ಟ್ರೀಯ ಭದ್ರತೆ | ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ | ಹಲವು ವಿಷಯಗಳ ಕುರಿತು ಚರ್ಚೆ

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ಎಲ್ಲಾ…

13 minutes ago

ರಾಜ್ಯದ 6 ಜಿಲ್ಲೆಗಳಲ್ಲಿ ಶೀಥಲೀಕರಣ ಘಟಕ ನಿರ್ಮಾಣ

ರಾಜ್ಯದ 6 ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಗಳಿಗೆ ಅನುಕೂಲವಾಗುವಂತೆ ಶೀಥಲೀಕರಣ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಎಂದು…

24 minutes ago

ಕೇಂದ್ರದ ಬೆಂಬಲಕ್ಕಾಗಿ  ವಿಶೇಷ ಜಾಥಾ | ಪಕ್ಷಾತೀತವಾಗಿ  ಬೆಂಬಲ

ದೇಶದ  ಸೈನಿಕರಿಗೆ ಗೌರವ ಸಲ್ಲಿಸಿ  ಕೇಂದ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ  ನಾಳೆ…

39 minutes ago

ಆಪರೇಷನ್ ಸಿಂದೂರ ಕಾರ್ಯಾಚರಣೆ | ಸರ್ವ ಪಕ್ಷಗಳ ಸಭೆಯಲ್ಲಿ ಬೆಂಬಲ |

ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಿನ್ನೆಯಷ್ಟೇ ನಡೆಸಿತು. ಇದಕ್ಕೆ…

45 minutes ago

ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು

ಕೃಷಿಯಲ್ಲಿ ಯಾವುದೇ ಬಲವಾದ ಸಂಘಟನೆ ಇಲ್ಲ. ನಮ್ಮ ಧ್ವನಿ ಎತ್ತಲು ಯಾರೂ ಇಲ್ಲ.ಇಂತಹ…

14 hours ago

ಮೇ 13 ರಿಂದ 25 ರವರೆಗೆ ಈ ರಾಶಿಗಳಿಗೆ ಅದೃಷ್ಟ!, ಕೆಲವು ರಾಶಿಗಳಿಗೆ ಕಠಿಣ ಕಾಲ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದು ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

14 hours ago