ಸುಳ್ಯದಲ್ಲಿ ಆಮ್‌ ಆದ್ಮಿ ಪಕ್ಷದ ಸಭೆ | ಮೂಲಭೂತ ಸೌಕರ್ಯದ ಕಡೆಗೆ ಭರವಸೆ | ನೂರಾರು ಮಂದಿ ಎಎಪಿ ಸೇರ್ಪಡೆ | AAP ಸೇರಿದವರು ಹೇಳಿದ್ದೇನು ?

March 21, 2022
11:45 PM

ಸುಳ್ಯದಲ್ಲಿ ಸೋಮವಾರ ಆಮ್‌ ಆದ್ಮಿ ಪಕ್ಷದ ಸಭೆ ಹಾಗೂ ಪಂಜಾಬ್‌ ಜನತೆಗೆ ಅಭಿನಂದನೆ ಮತ್ತು ಆಮ್‌ ಆದ್ಮಿ ಪಕ್ಷ ಸೇರ್ಪಡೆಯ ಕಾರ್ಯಕ್ರಮ ನಡೆಯಿತು. ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದಿಂದ ಮತ್ತು ರಾಜಕೀಯವಾಗಿ ತಟಸ್ಥರಾಗಿದ್ದವರೂ ಎಎಪಿ ಸೇರ್ಪಡೆಯಾದರು. ಮೂಲಭೂತ ಸೌಕರ್ಯಗಳ ಈಡೇರಿಕೆಯ ಕಡೆಗೆ ಭರವಸೆ ಇರಿಸಿ ನೂರಾರು ಮಂದಿ ಎಎಪಿ ಕಡೆಗೆ ಒಲವು ತೋರಿದ್ದರು.

Advertisement
Advertisement

ಎಎಪಿ ಗೆ ಸೋಮವಾರ ಸುಳ್ಯದಲ್ಲಿ 17 ಮಂದಿ ಪ್ರಮುಖರು ಸೇರ್ಪಡೆಯಾದರೆ, ನೂರಕ್ಕೂ ಹೆಚ್ಚು ಮಂದಿ ಹೆಸರು ಎಎಪಿ ಕಡೆಗೆ ಆಸಕ್ತರಾಗಿ ನೋಂದಾಯಿಸಿದ್ದರು. ಎಎಪಿ ರಾಜ್ಯ ಅಧ್ಯಕ್ಷ ಪೃಥ್ವಿ ರೆಡ್ಡಿ ಅವರು ಮಂಗಳೂರಿಗೆ ಆಗಮಿಸಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದರು. ಈ ಸಂದರ್ಭ ದ ಕ ಜಿಲ್ಲೆಯಲ್ಲಿನ ನೂತನ ಕಾರ್ಯಕರ್ತರ ಪಟ್ಟಿ ಹಾಗೂ ಪಕ್ಷ ಸೇರ್ಪಡೆಯ ಪಟ್ಟಿಯನ್ನು ಪರಿಶೀಲನೆ ನಡೆಸಿದರು.

ಸುಳ್ಯದಲ್ಲಿ ನಡೆದ ಸಭೆಯಲ್ಲಿ ಪ್ರಮುಖ 17 ಮಂದಿ ಪಕ್ಷ ಸೇರ್ಪಡೆಯಾದರು. ಅವರಲ್ಲಿ  ಬಿಜೆಪಿ ಹಾಗೂ ಸಹಕಾರ ಭಾರತಿ ಮುಖಂಡ ಪ್ರಸನ್ನ ಎಣ್ಮೂರು, ಮಾಜಿ ಶಾಸಕರ ಪುತ್ರಿ ಎಂಬಿಎ ಪದವೀಧರೆ ಸುಮನಾ, ಪ್ರಮುಖರಾದ ಕರುಣಾಕರ ಮೊದಲಾದವರು  ಇದ್ದರು.

ಆಮ್‌ ಆದ್ಮಿ ಪಕ್ಷ ಸೇರ್ಪಡೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಪ್ರಸನ್ನ ಎಣ್ಮೂರು, ಭ್ರಷ್ಟಾಚಾರದ ಜೊತೆ ಪಕ್ಷಗಳು ಹಾಗೂ ಆಡಳಿತವು  ಕೈಜೋಡಿಸಿರುವುದು ಇಂದು ಇಡೀ ರಾಜ್ಯದಲ್ಲಿದೆ. ಜನಸಾಮಾನ್ಯರ ಮೂಲಭೂತ ಆವಶ್ಯಕತೆಗಳಾದ ವಿದ್ಯಾಭ್ಯಾಸ, ರಸ್ತೆ,ಕುಡಿಯುವ ನೀರು,ಆರೋಗ್ಯ,ವಿದ್ಯುತ್,ಆಡಳಿತ ಯಂತ್ರ, ಬದಲಾದ ಜೀವನ ಶೈಲಿಗೆ ಹೊಂದಿರಬೇಕು. ಜಾತಿ ರಾಜಕಾರಣ,ದ್ವೇಷ ರಾಜಕಾರಣಗಳು ಭಾರತದ ಅಭಿವೃದ್ಧಿಗೆ, ಗ್ರಾಮೀಣ ಜನರಿಗೆ ಇಂದು ಅವಶ್ಯವಿಲ್ಲ. ಹೀಗಾಗಿ ಬದಲಾವಣೆ ಎಂಬ ಸುಧಾರಣೆ ನಮ್ಮಲ್ಲಿಂದಲೇ ಆಗಲಿ ಎನ್ನುವ ಅಭಿಲಾಷೆಯಿಂದ ಆಮ್‌ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದೇನೆ ಎಂದರು.

Advertisement

ಈ ಹಿಂದೆ ಅಡ್ಡಮತದಾನದ ವಿಷಯದಲ್ಲಿ ಎಲ್ಲಾ ದಾಖಲೆಗಳು ನನ್ನ ಬಳಿ ಇದ್ದರೂ ಸತ್ಯದ ಮಾತಿಗೆ ಬೆಲೆ ಇರಲಿಲ್ಲ. ಎಲ್ಲರಂತೆ ಮುಕ್ತ ಮಾಡಲಾಯಿತು. ಆಗ ಯಾರೊಬ್ಬರೂ ಸೂಕ್ತ ವ್ಯಕ್ತಿ ಎಂದು ಪರಿಗಣಿಸಿರಲಿಲ್ಲ, ಉಳಿಸಿಕೊಳ್ಳಲು ಪ್ರಯತ್ನಿಸಿದ್ದಿಲ್ಲ.ಮತ ಹಾಕಿರುವುದನ್ನು ದಾಖಲೆ ಸಹಿತ ತೋರಿಸಿದರೂ ,ನಿಷ್ಠೆಯಿಂದ ಇದ್ದರೂ ಕಳೆದ ಮೂರು ವರುಷಗಳಿಂದ ಕಡೆಗಣಿಸಲಾಗಿದೆ. ಅಡ್ಡಮತದಾನ ಕಾನತ್ತೂರಿನಲ್ಲಿ ಇತ್ಯರ್ಥ ಆದ ಮೇಲೆ  5 ತಿಂಗಳು ಸಂದರೂ ಯಾವುದೇ ಬೆಳವಣಿಗೆಯೂ ಇಲ್ಲವಾಗಿತ್ತು. ಈಗ ಬೇಕಾಗಿರುವುದು ಕಂಟ್ರಾಕ್ಟ್ ಜನಪ್ರತಿನಿಧಿಗಳ ಭ್ರಷ್ಟಾಚಾರ, ಅಧಿಕಾರಿಗಳ ಕೆಟ್ಟ ಮರ್ಜಿಗೆ ವಿದಾಯ. ಹೀಗಾಗಿ ಈಗ ಆಮ್‌ ಆದ್ಮಿ ಪಕ್ಷವು ಇದಕ್ಕೆ ಸೂಕ್ತವಾಗಿದೆ. ಸದ್ಯ ಯಾವುದೇ ಪಕ್ಷದ ಪ್ರಾಥಮಿಕ ಸದಸ್ಯನಲ್ಲವೆಂಬ ನನ್ನ ವೈಯಕ್ತಿಕ ತೀರ್ಮಾನವಿದೆ.ಈ ಕಾರಣದಿಂದ ಗ್ರಾಮ, ಜಿಲ್ಲೆ, ರಾಜ್ಯ, ದೇಶವು ಅಭಿವೃದ್ಧಿಯಾಗಬೇಕು ಎನ್ನುವ ಕಲ್ಪನೆಯಲ್ಲಿ ಆಮ್‌ ಆದ್ಮಿ ಪಕ್ಷ ಸೇರಿದ್ದೇನೆ. ಭ್ರಷ್ಟಾಚಾರ ಎಲ್ಲೇ ಆದರೂ ವಿರೋಧಿಸುತ್ತೇನೆ ಎಂದು ಪ್ರಸನ್ನ ಭಟ್‌ ಎಣ್ಮೂರು ಹೇಳಿದರು.

ಆಮ್‌ ಆದ್ಮಿ ಪಾರ್ಟಿ ಸೇರಿದ ಬಹುಪಾಲು ಮಂದಿಯ ಹೇಳಿದ್ದು ದಕ್ಷಿಣ ಕನ್ನಡ ಜಿಲ್ಲೆ ಅದರಲ್ಲೂ ಸುಳ್ಯ ಕ್ಷೇತ್ರದ ಮೂಲಭೂತ ಸೌಲಭ್ಯಗಳ ಕೊರತೆ ನಿವಾರಣೆ. ಭ್ರಷ್ಟಾಚಾರ ಮುಕ್ತ ಗ್ರಾಮಗಳ ಚಿಂತನೆ. ಆಮ್‌ ಆದ್ಮಿ ಪಾರ್ಟಿಯು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಧರ್ಮಾಧಾರಿತ ಸಂಘರ್ಷಗಳಿಂದ ದೂರವಾಗಿ ಅಭಿವೃದ್ಧಿ ಆಧಾರಿತ ಚರ್ಚೆಗಳು ಆರಂಭವಾಗಬೇಕು ಎನ್ನುವುದು  ನಿರೀಕ್ಷೆ ಇರಿಸಿಕೊಂಡಿರುವ ಬಗ್ಗೆ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಆಮ್‌ ಆದ್ಮಿ ಪಾರ್ಟಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ,ʼರಾಜ್ಯದಲ್ಲಿ ಎಎಪಿ ಸಂಘಟನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಸಮೀಕ್ಷೆ ನಡೆಸಿ ಅಭಿವೃದ್ಧಿ ಆಧಾರಿತವಾಗಿ ಆಯಾ ಕ್ಷೇತ್ರಗಳಿಗೆ ಅಗತ್ಯವಾದ ಯೋಜನೆ ರಚಿಸಿ ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು  ಎಂದರು. 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕರೆಂಟ್ ಹೊದ ಕೂಡ್ಲೆ ಬೊಬ್ಬೆ ಹೊಡೆಯೋದು ಯಾಕೆ..!?
May 25, 2025
9:29 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಮಳೆ Update | ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆ | ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆ | ಉಡುಪಿಯಲ್ಲಿ 164 ಮಿಮೀ ಮಳೆ |
May 25, 2025
9:07 AM
by: ದ ರೂರಲ್ ಮಿರರ್.ಕಾಂ
ಬಿತ್ತನೆ ಬೀಜ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ
May 25, 2025
6:13 AM
by: The Rural Mirror ಸುದ್ದಿಜಾಲ
ರೈತರು ಉತ್ತಮ ಇಳುವರಿ ಪಡೆಯಲು ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸೂಚನೆ
May 25, 2025
6:05 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group