ರೈತ ಹೋರಾಟದ ಭಾರತ ಬಂದ್ ಗೆ ಉಡುಪಿ ಹಾಗೂ ದ ಕ ಜಿಲ್ಲೆ ಸಂಪೂರ್ಣವಾಗಿ ಆಮ್ ಆದ್ಮಿ ಪಾರ್ಟಿ ಉಡುಪಿ ಜಿಲ್ಲೆ ಬೆಂಬಲಿಸಲಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಮಂಡಳಿ ಸದಸ್ಯ ಅಶೋಕ್ ಎಡಮಲೆ ತಿಳಿಸಿದ್ದಾರೆ.
ಭಾನುವಾರ ಉಡುಪಿ ಆಮ್ ಆದ್ಮಿ ಪಾರ್ಟಿ ಸಭೆ ನಡೆಯಿತು. ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಮಂಡಳಿ ಸದಸ್ಯರು ಹಾಗೂ ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ವೀಕ್ಷಕರಾದ ಅಶೋಕ ಎಡಮಲೆ ಸಮ್ಮುಖದಲ್ಲಿ ಉಡುಪಿಯ ಹಿಂದಿ ಪ್ರಚಾರ ಸಮಿತಿ ಸಭಾಂಗಣದಲ್ಲಿ ನಡೆದು, ಪಕ್ಷದ ಚಟುವಟಿಕೆಗಳು ಹಾಗೂ ಸಂಘಟನೆ ಬೆಳವಣಿಗೆ ಬಗ್ಗೆ ಚರ್ಚಿಸಿ ಮುಂದಿನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆಯ ಆಕಾಂಕ್ಷಿಗಳನ್ನು ಗುರುತಿಸುವುದು, ಕಾಪು ವಿಧಾನಸಭಾ ಕ್ಷೇತ್ರದ ಎಎಪಿ ಪಕ್ಷದ ಸಭೆಯನ್ನು ಮುಂದಿನ ಅಕ್ಟೋಬರ್ 10 ರಂದು ನಡೆಸುವುದು ಮತ್ತು ಹೆಬ್ರಿ ಅಟೋ ಸ್ಟ್ಯಾಂಡ್ ಸಮಸ್ಯೆ ಬಗ್ಗೆ ಎಎಪಿ ನಿಯೋಗ ತೆರಳಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮೂಲಕ ಪರಿಹಾರಕ್ಕೆ ಆಗ್ರಹ ಮಾಡಲು ನಿರ್ಣಯಿಸಿತು.
ಇದೇ ವೇಳೆ ರೈತ ಹೋರಾಟದ ಭಾರತ ಬಂದ್ ಗೆ ಉಡುಪಿ ಹಾಗೂ ದ ಕ ಜಿಲ್ಲೆ ಸಂಪೂರ್ಣವಾಗಿ ಆಮ್ ಆದ್ಮಿ ಪಾರ್ಟಿ ಉಡುಪಿ ಜಿಲ್ಲೆ ಬೆಂಬಲಿಸಲಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಮಂಡಳಿ ಸದಸ್ಯ ಅಶೋಕ್ ಎಡಮಲೆ ತಿಳಿಸಿದರು.
ಸಭೆಯಲ್ಲಿ ಪಕ್ಷದ ಮುಖಂಡರಾದ ಸುರೇಶ್ ಭಂಡಾರಿ, ಸ್ಟೀಫನ್ ರಿಚರ್ಡ್, ರಮೇಶ್ ಕೋಟ್ಯಾನ್, ವಿಜಯಾನಂದ್ ಪಂಗಳ, ಹರೀಶ್ ಟಿ ಸುವರ್ಣ, ಮೋಹನ್ ಸಾಲೆಕರ್, ಹಿಲ್ಡಾ ಡಿಸೋಜ, ಮಂಜುನಾಥ್ ಭಟ್, ಒಲಿವರ್ ಡಿಸೋಜ, ಆಕರ್ಷ್, ಸವಿತ ಹಾಗೂ ಆಶ್ಲಿ ಕೊರೆನೆಲಿಯೋ ಭಾಗವಹಿಸಿದ್ದರು.