Advertisement
ಸುದ್ದಿಗಳು

ಸುಳ್ಯ | ಬಿಜೆಪಿ ಅಭ್ಯರ್ಥಿ ಘೋಷಣೆ ಬಾಕಿ | ಕಾಂಗ್ರೆಸ್‌ಗೆ ಬಂಡಾಯದ ಬಿಸಿ | ಪ್ರಚಾರ ಆರಂಭಿಸಿದ ಎಎಪಿ ಅಭ್ಯರ್ಥಿ ಸುಮನ |

Share

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಸುಳ್ಯ ವಿಧಾನಸಭಾ ಕ್ಷೇತ್ರ ಈ ಬಾರಿ ಕುತೂಹಲ ಮೂಡಿಸಿದ ಕ್ಷೇತ್ರಗಳಲ್ಲಿ  ಒಂದು. ಕ್ಷೇತ್ರದ ಅಲ್ಲಲ್ಲಿ ಮತದಾನ ಬಹಿಷ್ಕಾರ, ಪ್ರತಿಭಟನೆಯ ಬಿಸಿ ಒಂದು ಕಡೆಯಾದರೆ ಇನ್ನೊಂದು ಕಡೆ ಅಭ್ಯರ್ಥಿ ಘೋಷಣೆಗಾಗಿ ಪಕ್ಷಗಳು ಬಿಸಿ ಬಿಸಿ ಚರ್ಚೆಯಲ್ಲಿವೆ. ಈ ನಡುವೆಯೇ ಆಮ್‌ ಆದ್ಮಿ ಪಕ್ಷವು ಅಭ್ಯರ್ಥಿ ಘೋಷಣೆ ಮಾಡಿ ಪ್ರಚಾರ ಕಾರ್ಯವನ್ನೂ ಆರಂಭಿಸಿದೆ.

ಸುಳ್ಯ ವಿಧಾನಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್‌ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಈಗಾಗಲೇ ಸುಳ್ಯದ ವಿವಿದೆಡೆ ಒಂದು ಸುತ್ತಿನ ಪ್ರವಾಸ ನಡೆಸಿ ಮೂಲಭೂತ ಸಮಸ್ಯೆಗಳ ಕಡೆಗೆ ಗಮನಹರಿಸಿ ಸುಳ್ಯಕ್ಕೆ ಪ್ರತ್ಯೇಕವಾದ ಪ್ರಣಾಳಿಕೆಗೆ ಮಾಹಿತಿ ಸಂಗ್ರಹಿಸಿದರು. ಇದೀಗ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಮೊದಲ ಸುತ್ತಿನಲ್ಲಿ ಕಾಲನಿಗಳ ಭೇಟಿ ನಡೆಸುತ್ತಿದ್ದಾರೆ. ಎಲ್ಲಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಎಎಪಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್‌ ಹೇಳಿದ್ದಾರೆ. ಎಎಪಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಹಾಗೂ ಎಎಪಿ ಜಿಲ್ಲಾ ಮುಖಂಡ‌ ವೇಣುಗೋಪಾಲ ಪುಚ್ಚಪ್ಪಾಡಿ ಅವರು ಭೇಟಿ ನೀಡಿ ಪಕ್ಷದ ಪರವಾದ ಪ್ರಚಾರ ಕಾರ್ಯಕ್ಕೆ ವೇಗ ನೀಡಿದರು.

ಪ್ರಚಾರ ಕಾರ್ಯದಲ್ಲಿ ಆಮ್‌ ಆದ್ಮಿ ಪಕ್ಷದ ಜಿಲ್ಲಾದ್ಯಕ್ಷ ಅಶೋಕ್‌ ಎಡಮಲೆ, ಪಕ್ಷದ ಪ್ರಮುಖರಾದ ರಾಮಕೃಷ್ಣ ಬೀರಮಂಗಲ, ಖಲಂದರ್‌ ಎಲಿಮಲೆ, ರಶೀದ್‌ ಜಟ್ಟಿಪಳ್ಳ , ಗುರುಪ್ರಸಾದ್‌ ಮೇರ್ಕಜೆ, ಪ್ರಸನ್ನ ಎಣ್ಮೂರು, ಗಣೇಶ್ ಪ್ರಸಾದ್ ಕಂದಡ್ಕ, ಸಂಶುದ್ದಿನ್ ಕೆ ಎಂ ಮೊದಲಾದವರು ಇದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!

ರಾಜ್ಯದಲ್ಲಿ ಇಂದಿನಿಂದ ಮಳೆಯ ಚಟುವಟಿಕೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಗುಡುಗು…

7 hours ago

ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ : ಕರಾವಳಿಯಲ್ಲಿ ಒಣಹವೆ ಮುಂದುವರಿಕೆ!

ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆಯ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ…

14 hours ago

ಆಟೋ ಗ್ಯಾಸ್ ಕೊರತೆ ವದಂತಿ- ರಾಜ್ಯ ಸರ್ಕಾರದಿಂದ ಸ್ಪಷ್ಟನೆ..!

ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಎಂಬುದು ಕೇವಲ ವದಂತಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.…

22 hours ago

ರಸ್ತೆ ಬದಿ ತ್ಯಾಜ್ಯ ಎಸೆತಕ್ಕೆ ಎಫ್‌ಐಆರ್ | ʼನಾನು ಎಸೆದಿಲ್ಲ’ ಎಂದರೂ ಸಿಕ್ಕ ಸಾಕ್ಷಿ…!

ರಸ್ತೆ ಬದಿ ತ್ಯಾಜ್ಯ ಎಸೆದ ಪ್ರಕರಣದಲ್ಲಿ ಅಂಗಡಿ ಮಾಲಿಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.…

23 hours ago

2026ರಲ್ಲಿ ಮಳೆ ಕಡಿಮೆ…? ಎಲ್‌ನಿನೊ ಪರಿಣಾಮದಿಂದ ಭಾರತಕ್ಕೆ ಸಾಮಾನ್ಯಕ್ಕಿಂತ ಕಡಿಮೆ ಮಳೆ…!

2026ರಲ್ಲಿ ಭಾರತದಲ್ಲಿ ಮಳೆಗಾಲ ಸಾಮಾನ್ಯಕ್ಕಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಮುನ್ಸೂಚನೆ…

2 days ago

ಭಾರತದ ಬಂದರುಗಳು ಚೇತರಿಕೆ..! 915 ಮಿಲಿಯನ್ ಟನ್ ಸರಕು ಸಾಗಣೆ – ಶೇ.7 ಹೆಚ್ಚಳ ದಾಖಲೆ

ದೇಶದ ಪ್ರಮುಖ ಬಂದರುಗಳು 915 ಮಿಲಿಯನ್ ಟನ್ ಸರಕು ಸಾಗಣೆ ಮಾಡಿ ಶೇ.7…

2 days ago