ದಕ್ಷಿಣ ಕನ್ನಡ ಎಎಪಿ | ನಗರ ಹಾಗೂ ಗ್ರಾಮೀಣ ಭಾಗದಿಂದಲೂ ಎಎಪಿ ಸದಸ್ಯತ್ವ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ |

June 1, 2022
11:11 PM

ಆಮ್‌ ಆದ್ಮಿ ಪಾರ್ಟಿಯ ಗ್ರಾಮ ಸಂಪರ್ಕ ಅಭಿಯಾನ ಮುಂದುವರಿದಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಭಿಯಾನ ನಡೆಯುತ್ತಿದ್ದು ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದಲೂ ಬೆಂಬಲಿಗರು ವ್ಯಕ್ತವಾಗಿದ್ದಾರೆ . ಇದರಲ್ಲಿ ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ,ಮೂಡಬಿದ್ರೆ ಹಾಗೂ ಸುಳ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡಿದ್ದಾರೆ ಎಂದು ಎಎಪಿ ತಿಳಿಸಿದೆ. 

Advertisement
Advertisement
Advertisement

ಆಮ್‌ ಆದ್ಮಿ ಪಾರ್ಟಿಯ  ವಲಯ ಸಂಯೋಜಕರಾದ  ಮಾಜಿ ಕೆಎಎಸ್‌ ಅಧಿಕಾರಿ ಕೆ.ಮಥಾಯಿ ಮತ್ತು ಎಎಪಿ ರಾಷ್ಟ್ರೀಯ ಸಮಿತಿ ಸದಸ್ಯ ಅಶೋಕ್‌ ಎಡಮಲೆ  ಹಾಗೂ  ದ ಕ ಜಿಲ್ಲಾ ಅಧ್ಯಕ್ಷ ಸಂತೋಷ್‌ ಕಾಮತ್‌ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಟನೆ ಬಲಪಡಿಸಲಾಗುತ್ತಿದೆ. ಈಗಾಗಲೇ ಮಂಗಳೂರಿನಲ್ಲಿ ಕಾರ್ಯಕರ್ತರ ಸಭೆ ನಡೆದ ಬಳಿಕ ಸದಸ್ಯತ್ವ ಅಭಿಯಾನ ಚುರುಕುಗೊಂಡಿದ್ದು ಗ್ರಾಮೀಣ ಭಾಗದಿಂದಲೂ ಆಮ್‌ ಆದ್ಮಿ ಪಾರ್ಟಿ ಕಡೆಗೆ ಬೆಂಬಲ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ದ ಕ ಜಿಲ್ಲೆಯಲ್ಲಿ ಕೋಮು ಅಶಾಂತಿಗಳಿಂದ ಅಭಿವೃದ್ಧಿ ಕುಂಟಿತವಾಗುತ್ತಿದೆ ಎನ್ನುವುದನ್ನು ಈಗಾಗಲೇ ಜನರು ತಿಳಿದುಕೊಂಡಿದ್ದು ಯುವಕರಿಗೆ ಉದ್ಯೋಗದ ಕೊರತೆ, ಕೃಷಿಕರ ಸಮಸ್ಯೆಗಳಿಗೆ ಉತ್ತರ ಸಿಗುತ್ತಿಲ್ಲ, ಭ್ರಷ್ಟಾಚಾರ ಹೆಚ್ಚುತ್ತಿದೆ. ಇದೆಲ್ಲಾ ಕಾರಣಗಳಿಂದ ಬೇಸತ್ತ ಜನರು ಆಮ್‌ ಆದ್ಮಿ ಪಾರ್ಟಿ ಕಡೆಗೆ ಜನರು ಆಸಕ್ತರಾಗಲು ಕಾರಣವಾಗುತ್ತಿದೆ ಎಂದು ಎಎಪಿ ಜಿಲ್ಲಾಧ್ಯಕ್ಷ ಸಂತೋಷ್‌ ಕಾಮತ್‌ ಹೇಳಿದ್ದಾರೆ. http://bdc.pe.hu/aap/

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನ ಚುರುಕಾಗಿದ್ದು ಈಗಾಗಲೇ ಮಂಗಳೂರು ದಕ್ಷಿಣ ಶೇ.32 , ಮಂಗಳೂರು ಉತ್ತರ ಶೇ.16 ,ಮೂಡಬಿದ್ರೆ ಶೇ 16 , ಸುಳ್ಯ ಶೇ.11 , ಪುತ್ತೂರು ಶೇ 8, ಬೆಳ್ತಂಗಡಿ ಶೇ 3 , ಬಂಟ್ವಾಳ ಶೇ.7 , ಮಂಗಳೂರು ಶೇ 5.5  ರಷ್ಟು ಸದಸ್ಯತ್ವದ ಪ್ರಗತಿಯಾಗಿದೆ ಎಂದು ಸದಸ್ಯತ್ವ ಅಭಿಯಾನ ಪ್ರಮುಖ, ಎಎಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಪುಚ್ಚಪ್ಪಾಡಿ ಹೇಳಿದ್ದಾರೆ. ಸದಸ್ಯತ್ವದ ಲಿಂಕ್‌ http://bdc.pe.hu/aap/

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗದಗದ ಲಕ್ಕುಂಡಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮಕ್ಕೆ ಚಾಲನೆ
November 25, 2024
7:33 AM
by: The Rural Mirror ಸುದ್ದಿಜಾಲ
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ
November 25, 2024
7:26 AM
by: The Rural Mirror ಸುದ್ದಿಜಾಲ
ಮಲೆನಾಡಿನಲ್ಲಿ ಕಾಡಾನೆ ಹಾವಳಿ ತಡೆಗೆ ಅಧಿವೇಶನದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ
November 25, 2024
7:15 AM
by: The Rural Mirror ಸುದ್ದಿಜಾಲ
ಅಡಿಕೆ ಹಳದಿ ಎಲೆರೋಗ ಬಾಧಿಸಿದ ನಂತರದ ಕೃಷಿ ಬದುಕು ಹೇಗೆ ? ಕೃಷಿಕರು ಸವಾಲನ್ನು ಹೇಗೆ ಸ್ವೀಕರಿಸಬಹುದು..? | ಸಂಪಾಜೆಯ ಕೃಷಿಕ ಶಂಕರಪ್ರಸಾದ್‌ ರೈ ಅವರ ಅಭಿಪ್ರಾಯ |
November 25, 2024
6:52 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror