ದ ಕ ಜಿಲ್ಲೆಯಲ್ಲಿ ಎಎಪಿ ಬಲಗೊಳ್ಳುತ್ತಿರುವುದೇಕೆ ? | ದ ಕ ಜಿಲ್ಲೆಯಲ್ಲಿಯೂ ಚುನಾವಣಾ ಕಣಕ್ಕೆ ಎಎಪಿ | ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅಭ್ಯರ್ಥಿ ಪಕ್ಕಾ..? |

August 12, 2022
3:36 PM

ಕಳೆದ ಕೆಲವು ಸಮಯಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಮ್‌ ಆದ್ಮಿ ಪಕ್ಷ ಸದ್ದು ಮಾಡುತ್ತಿದೆ. ಈಚೆಗೆ ಸಕ್ರಿಯ ಕಾರ್ಯಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆಯೇ ದ ಕ ಜಿಲ್ಲೆಯಲ್ಲಿ ಚುನಾವಣಾ ಕಣಕ್ಕೆ ಇಳಿಯಲು ಆಮ್‌ ಆದ್ಮಿ ಪಕ್ಷ ಸಜ್ಜಾಗುತ್ತಿದೆ. ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಎಎಪಿ ಜಿಲ್ಲಾಧ್ಯಕ್ಷ ಸಂತೋಷ್‌ ಕಾಮತ್‌ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. 

Advertisement
Advertisement

ಆಮ್‌ ಆದ್ಮಿ ಪಕ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಅಭಿವೃದ್ಧಿಯ ಅಜೆಂಡಾ ಇರಿಸಿಕೊಂಡು ಮುನ್ನೆಲೆಗೆ ಬಂದಿರುವ ಎಎಪಿ ಇದೀಗ ದ ಕ ಜಿಲ್ಲೆಯಲ್ಲೂ ತನ್ನದೇ ಆದ ಅಭಿವೃದ್ಧಿಯ ಅಜೆಂಡಾ ಇರಿಸಿಕೊಂಡಿದೆ. ಈಗಾಗಲೇ ದ ಕ ಜಿಲ್ಲೆಯಲ್ಲಿ  ಕೋಮುದ್ವೇಷದ ಕಾರಣದಿಂದ ಜಿಲ್ಲೆಯ ವ್ಯಾಪಾರ ವಹಿವಾಟುಗಳು, ಆರ್ಥಿಕತೆಯ ಮೇಲೆ ಪರಿಣಾಮ ಬಿದ್ದಿದೆ, ಈ ಹಂತದಲ್ಲಿ ಎಎಪಿ ತನ್ನ ಕಾರ್ಯಕ್ಷೇತ್ರವನ್ನು ದ ಕ ಜಿಲ್ಲೆಯಲ್ಲೂ ವಿಸ್ತರಿಸಿಕೊಳ್ಳುತ್ತಿದೆ. ಈಗಾಗಲೇ ಸದಸ್ಯತ್ವ ಅಭಿಯಾನದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದು ಪಕ್ಷದ ಮೂಲಗಳು ಹೇಳಿದೆ. ಮಂಗಳೂರು, ಪುತ್ತೂರು, ವಿಟ್ಲ , ಸುಳ್ಯದಲ್ಲಿ ಸಾಕಷ್ಟು ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ಉತ್ತರ ಕ್ಷೇತ್ರದಲ್ಲೂ ಎಎಪಿ ಕೆಲಸ ಆರಂಭವಾಗಿದೆ ಎನ್ನುತ್ತದೆ ಪಕ್ಷದ ಮೂಲಗಳು.

ಸಂತೋಷ್‌ ಕಾಮತ್, ಎಎಪಿ ದ ಕ ಜಿಲ್ಲಾಧ್ಯಕ್ಷ

ಇದೀಗ ದಕ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಚುನಾವಣೆಗೆ ಸ್ಫರ್ಧೆ ಮಾಡಲು ಎಎಪಿ ಸಿದ್ಧತೆ ನಡೆಸುತ್ತಿದೆ. ಅದರಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಎಎಪಿ ಜಿಲ್ಲಾಧ್ಯಕ್ಷ ಸಂತೋಷ್‌ ಕಾಮತ್‌ ಸ್ಫರ್ಧೆಗೆ ಸಜ್ಜಾಗುತ್ತಿದ್ದಾರೆ. ಕಾಲೇಜು ದಿನಗಳಲ್ಲಿಯೇ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಸಂತೋಷ್‌ ಕಾಮತ್‌ ಅವರು ಎಬಿವಿಪಿ ಸಹಿತ ವಿವಿಧ ಸಂಘಟನೆಯಲ್ಲಿ ಕೆಲಸ ಮಾಡಿದ್ದರು. ಉದ್ಯಮಿಯೂ ಆಗಿರುವ ಸಂತೋಷ್‌ ಕಾಮತ್‌ ಅವರು ಕಳೆದ ಬಾರಿ ಲಾಕ್ಡೌನ್‌ ಸಮಯದಲ್ಲಿ ವರ್ತಕರ ಪರವಾಗಿ ಧ್ವನಿ ಎತ್ತಿದ್ದರು. ಸಾಮಾಜಿಕ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದು ಅಭಿವೃದ್ಧಿ ಪರವಾಗಿ ತನ್ನದೇ ಆದ ಯೋಜನೆಗಳನ್ನು ಹೊಂದಿದ್ದಾರೆ.

Advertisement

ದ ಕ ಜಿಲ್ಲೆಯಲ್ಲಿ ಕೋಮುದ್ವೇಷಗಳು ಕಡಿಮೆಯಾಗದೇ ಇದ್ದರೆ ಅಭಿವೃದ್ಧಿಯೂ ಹಿನ್ನಡೆಯಾಗಲಿದೆ. ಇಲ್ಲಿ ಎಲ್ಲಾ ಸಮುದಾಯಗಳೂ ಒಂದಾಗಿ ಈ ಸಮಾಜದಲ್ಲಿ ಸಾಗಲೇಬೇಕಾದ ಅನಿವಾರ್ಯತೆ ಇದೆ. ಆದರೆ ಕೋಮು ದ್ವೇಷಗಳ ಕಾರಣದಿಂದ, ಸಮುದಾಯಗಳ ನಡುವಿನ ಗುದ್ದಾಟಗಳ ಕಾರಣಗಳಿಂದ ಅಭಿವೃದ್ಧಿಯ ಮೇಲೂ ಪರೋಕ್ಷ ಹೊಡೆತ ಬೀಳುತ್ತಿದೆ. ಹೀಗಾಗಿ ಆಮ್‌ ಆದ್ಮಿ ಪಕ್ಷ ದ ಕ ಜಿಲ್ಲೆಯಲ್ಲಿ ಈಗ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು  ಹೇಳುತ್ತಾರೆ ಎಎಪಿ ಜಿಲ್ಲಾ ಕಾರ್ಯದರ್ಶಿ ವೇಣುಗೋಪಾಲ ಪುಚ್ಚಪ್ಪಾಡಿ.  ಯಾವುದೇ ಕೋಮು ದ್ವೇಷಗಳು ನಡೆದಾಗಲೂ ಸರ್ಕಾರವು ಧರ್ಮಾತೀತವಾಗಿ, ಪಕ್ಷಾತೀತವಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳುತ್ತಾರೆ. ಈಚೆಗೆ ಎಎಪಿ ಪಕ್ಷವು ಆಂತರಿಕ ಸರ್ವೆ ಮಾಡಿದ ಸಂದರ್ಭವೂ ದ ಕ ಜಿಲ್ಲೆಯಲ್ಲಿನ ಅನೇಕ ವಿದ್ಯಾವಂತ ಜನರು, ಯುವಕರು, ವರ್ತಕರು, ಉದ್ಯಮಿಗಳು ಕೋಮುಗಲಭೆ, ದ್ವೇಷಗಳ ಕಾರಣದಿಂದ ಅಸಮಾಧಾನಗೊಂಡಿರುವುದು  ತಿಳಿದಿದೆ. ಪರ್ಯಾಯ ರಾಜಕೀಯ ಶಕ್ತಿಯ ಅಗತ್ಯವನ್ನೂ ಅವರೆಲ್ಲಾ ಅಭಿಪ್ರಾಯದಲ್ಲಿ ವ್ಯಕ್ತಪಡಿಸಿದ್ದಾರೆ. ಕೋಮು ದ್ವೇಷಗಳ ಕಾರಣದಿಂದ ಅಭಿವೃದ್ಧಿ ಕುಂಠಿತ, ಭಯ ರಹಿತ ಓಡಾಟವೂ , ಯೋಜನಾ ಬದ್ಧವಾಗಿ ಉದ್ದಿಮೆಗಳ ಕಾರ್ಯವೂ ನಡೆಯದೇ ಇರುವುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ವೇಣುಗೋಪಾಲ ಪುಚ್ಚಪ್ಪಾಡಿ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಮ್‌ ಆದ್ಮಿ ಪಕ್ಷ ಬೆಳವಣಿಗೆಯ ಹಂತದಲ್ಲಿದೆ. ಅಭಿವೃದ್ಧಿ ಪರವಾದ ನಿಲುವು ಹೊಂದಿರುವ ಪಕ್ಷದಲ್ಲಿ  ಈಗಾಗಲೇ ವಿವಿಧ ಸ್ಥರದಲ್ಲಿ ಚಿಂತಕರ ತಂಡ ಇದೆ. ದ ಕ ಜಿಲ್ಲೆಯಲ್ಲಿ ಈ ಬಾರಿ ಚುನಾವಣೆಗೆ ಸ್ಫರ್ಧಿಸುವ ನಿಲುವನ್ನು  ಹೊಂದಿದೆ.
– – ವೇಣುಗೋಪಾಲ ಪುಚ್ಚಪ್ಪಾಡಿ, ಎಎಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗುರು ಮತ್ತು ಬುಧ ದಶಾಂಕ ಯೋಗ | ಉದ್ಯೋಗದ ಮೇಲೆ ಜಾಕ್ಪಾಟ್ ದೊರೆಯಲಿದೆ
May 24, 2025
5:42 AM
by: ದ ರೂರಲ್ ಮಿರರ್.ಕಾಂ
ರೈತರಿಗೆ ಆಶಾದಾಯಕ ಕೃಷಿಭಾಗ್ಯ ಯೋಜನೆ
May 23, 2025
10:32 PM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆ | ದತ್ತಾಂಶ ತಾಳೆ ಹೊಂದಿಸಲು  ಮೇ 31 ಕೊನೆಯ ದಿನ
May 23, 2025
10:27 PM
by: The Rural Mirror ಸುದ್ದಿಜಾಲ
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ | ಕೊಡಗು ಜಿಲ್ಲೆಯ ಬಹುತೇಕ ಕಡೆ ಮಳೆ |
May 23, 2025
10:22 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group