ಮಂಗಳೂರಿನಲ್ಲಿ ಆಮ್‌ ಆದ್ಮಿ ಪಾರ್ಟಿ ಕಚೇರಿ ಉದ್ಘಾಟನೆ | ರಾಜ್ಯದಲ್ಲಿ ಶೂನ್ಯ ಪರ್ಸಂಟೇಜ್ ಸರ್ಕಾರ ಮಾಡಿ ತೋರಿಸುತ್ತೇವೆ | ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ |

November 1, 2022
9:40 PM

ಕರ್ನಾಟಕ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣಸೌಲಭ್ಯ, ವೈದ್ಯಕೀಯ ಸೌಲಭ್ಯದೊಂದಿಗೆ ಶೂನ್ಯ ಪರ್ಸೆಂಟ್ ಕಮೀಷನ್- ನೂರು ಪರ್ಸೆಂಟ್ ಕೆಲಸ ಮಾಡಿ ತೋರಿಸುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಅಧ್ಯಕ್ಷ ಪೃಥ್ವಿ ರೆಡ್ಡಿ‌ ಹೇಳಿದರು.

Advertisement
Advertisement
Advertisement
Advertisement

Advertisement

 

ಅವರು ಮಂಗಳವಾರ ಮಂಗಳೂರು ನಗರದ ಡಾನ್ ಬಾಸ್ಕೋ ಸ‌ಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆಮ್ ಆದ್ಮಿ ಪಕ್ಷದ ವತಿಯಂದ ಆಯೋಜಿಸಲಾದ ಪಕ್ಷದ ಕಾರ್ಯಕರ್ತರ ಸಮಾವೇಶ ಹಾಗೂ ನೂತನ ಕಚೇರಿ ಉದ್ಘಾಟನಾ ಸಮಾರದಂಭದಲ್ಲಿ  ಮಾತನಾಡಿದರು. ಮಂಗಳೂರು ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷವು ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಜನಜಾಮಾನ್ಯರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ದೇಶದಲ್ಲೇ ಮೊದಲ ಸ್ಥಾನ ಮಂಗಳೂರಿನಲ್ಲಿದೆ.

Advertisement

ದೆಹಲಿ, ಪಂಜಾಬ್ ರಾಜ್ಯಗಳ ಅನಂತರ ನಾವು ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆಯನ್ನು ಗೆಲ್ಲಲಿದ್ದೇವೆ ಎಂದು ಭರವಸೆಯನ್ನು ವ್ಯಕ್ತಪಡಿಸಿದ ಪೃಥ್ವಿ ರೆಡ್ಡಿ,  ಕರ್ನಾಟಕದ ಜನತೆಯೂ  ಎಎಪಿಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ಇದೆ. ಕಮಿಶನ್‌ ದಂಧೆಯಲ್ಲಿ  ಜನರು ರೋಸಿ ಹೋಗಿದ್ದಾರೆ, ಗ್ರಾಮೀಣ ಭಾಗದಿಂದ ತೊಡಗಿ ನಗರದವರೆಗೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಹೀಗಾಗಿ ನಾವು ಜನರಲ್ಲಿ ಓಟು ಕೇಳಬೇಕಾಗಿಲ್ಲ. ನಾವು ಇದ್ದೇವೆ ಎಂದು ಪ್ರತಿ ಬೂತುಗಳಲ್ಲಿ ಕೂಡ ಮನವರಿಕೆ ಮಾಡಿದರೆ ಸಾಕು ಎಂದು ಪೃಥ್ವಿ ರೆಡ್ಡಿ ಹೇಳಿದರು. ಈಗ ಕರಾವಳಿ ಜಿಲ್ಲೆಗಳಲ್ಲೂ ಅಭಿವೃದ್ಧಿ ಮರೀಚಿಕೆಯಾಗಿದೆ. ಹೀಗಾಗಿ ಕರಾವಳಿಯ ಜಿಲ್ಲೆಗಳಲ್ಲಿ ಪಕ್ಷವನ್ನು ಕಟ್ಟಲು ಸಾಧ್ಯವಿದೆ ಎಂಬ ವಿಶ್ವಾಸವನ್ನು ದೊಡ್ಡ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ನೀಡಿದ್ದಾರೆ ಎಂದು ಹೇಳಿದರು.

Advertisement

ಸಭಾಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಸಂತೋಷ್ ಕಾಮತ್ , ದಕ್ಷಿಣ ಕನ್ನಡ ಜಿಲ್ಲೆಯಿಂದ ಈ ಬಾರಿ ಕನಿಷ್ಟ ಒಬ್ಬ ಶಾಸಕರನ್ನು ಗೆಲ್ಲಿಸಿಕೊಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

Advertisement

ಸಮಾವೇಶಕ್ಕು ಮುನ್ನ ಮಂಗಳೂರು ನಗರದ ಸೋಜ ಆರ್ಕೇಡಿನಲ್ಲಿ ಆಮ್ ಆದ್ಮಿ ಪಕ್ಷದ ನೂತನ ಕಚೇರಿಯನ್ನು ಎಎಪಿ ಹಿತೈಷಿ ಮೈಕಲ್ ಡಿ ಸೋಜ ಅವರು ಉದ್ಘಾಟಿಸಿ, ಆಮ್ ಆದ್ಮಿ ಪಕ್ಷವು ಜಾತಿ, ಧರ್ಮ ಭೇದಭಾವ ಇಲ್ಲದ ಪಕ್ಷವಾಗಿದ್ದು, ಭ್ರಷ್ಟಚಾರ ರಹಿತವಾಗಿ ಆಡಳಿತ ನೀಡುವ ದೇಶದ ಏಕೈಕ ಪಕ್ಷವಾಗಿದೆ. ಉತ್ತಮ ದೇಶವನ್ನು ಕಟ್ಟಲು ಜನರು ಆಮ್ ಆದ್ಮಿಯನ್ನು ಬೆಂಬಲಿಸಬೇಕು ಎಂದು ಮೈಕಲ್ ಡಿ ಸೋಜ ಹೇಳಿದರು.

Advertisement

ವೇದಿಕೆಯಲ್ಲಿ ಪಕ್ಷದ ರಾಜ್ಯ ಜತೆ ಕಾರ್ಯದರ್ಶಿ ವಿವೇಕಾನಂದ ಸಾಲಿನ್ಸ್, ರಾಷ್ಟ್ರೀಯ ಸಮಿತಿ ಸದಸ್ಯ ಅಶೋಕ ಎಡಮಲೆ,  ಎಎಪಿ ಜಿಲ್ಲಾ ಕಾರ್ಯದರ್ಶಿ ವೇಣುಗೋಪಾಲ್ ಪುಚ್ಚಪ್ಪಾಡಿ, ಮಂಗಳೂರು ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷೆ ಬೆನೆಟ್ ನವಿತಾ ಮೊರಾಸ್, ಉಡುಪಿ ಜಿಲ್ಲಾಧ್ಯಕ್ಷ ದಿವಾಕರ್ ಸನಿಲ್, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಬಾಲಕೃಷ್ಣ ನಾಯ್ಕ, ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ವಿಜಯನಾಥ ವಿಠಲ ಶೆಟ್ಟಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಡಾ.ಬಿ.ಕೆ.ವಿಶುಕುಮಾರ್, ಸುಳ್ಯ ವಿಧಾನಸಭಾ ಕ್ಷೇತ್ರದ ಸುಮನ ಬೆಳ್ಳಾರ್ಕರ್   ಉಪಸ್ಥಿತರಿದ್ದರು.

Advertisement

ಎಎಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಪುರುಷೋತ್ತಮ ಕೊಲ್ಪೆ ಸ್ವಾಗತಿಸಿದರು. ಸಂದೀಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement
ಈಗಿನ ಆಡಳಿತದಿಂದ ಭ್ರಮನಿರಸನಗೊಂಡಿದ್ದೇವೆ...

ಕರಾವಳಿ ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದನ್ನು ಶ್ಲಾಘಿಸಿದ ಎಎಪಿ ಬೆಂಬಲಿಗ ನಾರಾಯಣ ಪ್ರಭು ಅವರು ಸಮಾವೇಶದಲ್ಲಿ ಮಾತನಾಡಿ, ನಾವು ಜನಸಂಘದ ಕಾಲದಿಂದಲೂ ಆರ್ ಎಸ್ ಎಸ್ ಬಿಜೆಪಿಗಾಗಿ ಕೆಲಸ ಮಾಡುತ್ತಾ ಬಂದಿದ್ದೇವೆ. ನಮ್ಮ ಪರಿಸರದಲ್ಲಿ ಇರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಕಾಳಜಿ ಆಡಳಿತ ನಡೆಸುವವರಿಗೆ ಇಲ್ಲ. ಇವರಿಗೆ ಆಗುವುದಿಲ್ಲವಾದರೆ ಮನೆಯಲ್ಲಿ ಇರಬಹುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ನನ್ನಂತೆಯೇ ಅನೇಕರು ಈ ಆಡಳಿತದಿಂದ ಭ್ರಮನಿರಸನಗೊಂಡವರು ಇದ್ದಾರೆ ಎಂದರು.

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror