ಸರಕಾರಗಳು ಉಚಿತಗಳನ್ನು ನೀಡುತ್ತಿವೆ. ಹೀಗೆ ಉಚಿತಗಳು ನೀಡಿದರೆ ದೇಶದ ಕತೆ ಏನಾದೀತು ಎಂಬುದು ಎಲ್ಲರ ಪ್ರಶ್ನೆ. ಇದಕ್ಕೆ ಎಎಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ಅವರು ಪತ್ರಿಕಾಗೋಷ್ಠಿಯಲ್ಲಿ ನೀಡಿದ ವಿವರಣೆ ಹೀಗಿದೆ…
ಉಚಿತ ಎಂಬುದು ಯಾವುದೂ ಇಲ್ಲ, ಜನರ ಕಟ್ಟುವ ತೆರಿಗೆ ಹಣದಲ್ಲಿ ಸಣ್ಣ ಕ್ಯಾಶ್ ಬ್ಯಾಕ್ ಅಷ್ಟೇ. ಜನರು ಬೇರೆ ಬೇರೆ ರೀತಿಯಲ್ಲಿ ತೆರಿಗೆ ಕಟ್ಟುತ್ತಾರೆ. ಎಲ್ಲಾ ವಸ್ತುಗಳಿಗೂ ತೆರಿಗೆ ಇದೆ. ಆದರೆ ಆ ತೆರಿಗೆ ಹಣ ಸರಿಯಾದ ರೀತಿಯಲ್ಲಿ ಇಂದಿಗೂ ವಿನಿಯೋಗವಾಗುತ್ತಿಲ್ಲ. ಎಲ್ಲಾ ಕಾಮಗಾರಿಗಳು ತ್ವರಿತವಾಗಿ ನಡೆಯುವಂತೆ ಮಾಡಬೇಕು. ಕಾಮಗಾರಿಗಳಲ್ಲಿ ಭ್ರಷ್ಟಾಚಾರ, 40 % ಕಮಿಶನ್ ಮೂಲಕ ಯಾರದೋ ನಾಲ್ಕು ಜನ ಜೇಬಿಗೆ ತುಂಬಿಸುತ್ತಾರೆ, ಇದು ತಡೆಯಬೇಕು, ಟೆಂಡರ್ ಅವ್ಯಹಾರ ನಿಲ್ಲಿಸಿದರೆ ದುಂದುವೆಚ್ಚ ನಿಲ್ಲಿಸಿದರೆ, ಕಮಿಶನ್ ನಿಲ್ಲಿಸಿದರೆ ಜನರು ಕಟ್ಟುವ ತೆರಿಗೆ ಹಣ ಉಳಿಯಲು ಸಾಧ್ಯವಿದೆ. ಈ ಹಣದಲ್ಲಿ ಅಗತ್ಯ ಇರುವ ಮಧ್ಯಮ, ಸಾಮಾನ್ಯ ಜನರಿಗೆ ನಿಗದಿತ ರೂಪದಲ್ಲಿ ಒಂದಷ್ಟು ಸೇವೆಗಳನ್ನು ಉಚಿತ ರೂಪದಲ್ಲಿ ಕೊಟ್ಟರೆ, ಜನಸಾಮಾನ್ಯರಿಗೆ ಸಣ್ಣ ಪಾಲನ್ನು ಕೊಟ್ಟರೆ ತಪ್ಪಿಲ್ಲ. ಇದನ್ನು ಕೊಡಲು ಸಾಧ್ಯವಿದೆ. ಯಾರೂ ಕೂಡಾ ಉಚಿತ ಎಂದು ಭಾವಿಸಬೇಕಿಲ್ಲ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾದ್ಯಕ್ಷ ಸಂತೋಷ್ ಕಾಮತ್ ಹೇಳುತ್ತಾರೆ.
ಈ ಸಂದರ್ಭ ಈ ಸಂದರ್ಭ ಎಎಪಿ ಉಡುಪಿ-ದಕ ಜಿಲ್ಲಾ ವೀಕ್ಷಕ ಅಶೋಕ್ ಎಡಮಲೆ, ಜಿಲ್ಲಾ ಮುಖಂಡರುಗಳಾದ ಅರವಿಂದ್ ಡಿಸೋಜಾ, ಜೆ ಪಿ ರಾವ್ , ವೇಣುಗೋಪಾಲ್ ಪಿ ಕೆ ಮೊದಲಾದವರು ಇದ್ದರು.