- ಪಕ್ಷ ಸಂಘಟನೆಯಲ್ಲಿ ಸಕ್ರಿಯವಾದ ಆಮ್ ಆದ್ಮಿ ಪಾರ್ಟಿ | ಗ್ರಾಮೀಣ ಜನರ ಸೇವೆಗೂ ಯೋಜನೆ ರೂಪಿಸಿದ ಎಎಪಿ | ಮಾಜಿ ಕೆಎಎಸ್ ಅಧಿಕಾರಿ ಕೆ ಮಥಾಯಿ ಅವರು ದ ಕ ಜಿಲ್ಲೆಗೆ ಎಂಟ್ರಿ | ಆನ್ ಲೈನ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ |
ಆಮ್ ಆದ್ಮಿ ಪಾರ್ಟಿಯ ಗ್ರಾಮ ಸಂಪರ್ಕ ಅಭಿಯಾನದ ಝೋನಲ್ ಸಂಘಟನಾ ಉಸ್ತುವಾರಿಯಾಗಿ ಪಕ್ಷದ ಮುಖಂಡ ಹಾಗೂ ಮಾಜಿ ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರು ನೇಮಕವಾಗಿದ್ದಾರೆ. ಈಚೆಗೆ ನಡೆದ ಪಕ್ಷದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಝೋನ್ ಉಸ್ತುವಾರಿಯನ್ನು ಕೆ.ಮಥಾಯಿ ವಹಿಸಿಕೊಂಡಿದ್ದಾರೆ.
ಗ್ರಾಮೀಣ ಭಾಗಗಳಲ್ಲೂ ಆಮ್ ಆದ್ಮಿ ಪಾರ್ಟಿಯನ್ನು ಬೆಳೆಸುವುದು ಹಾಗೂ ಹಲವು ವರ್ಷಗಳಿಂದ ಇರುವ ಮೂಲಭೂತ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದು ಹಾಗೂ ಸಮಸ್ಯೆ ನಿವಾರಣೆಗೆ ಜನರ ಜೊತೆ ಹೋರಾಟ ನಡೆಸುವ ಬಗ್ಗೆ ಚಿಂತನೆ ನಡೆಸಿದೆ. ಪಕ್ಷ ಸಂಘಟನೆ ಹಾಗೂ ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವ ಉದ್ದೇಶ ಹೊಂದುವುದು ಮುಖ್ಯ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ. ಇದೇ ವೇಳೆ ಪಕ್ಷ ಸೇರ್ಪಡೆ ಹಾಗೂ ಆಮ್ ಆದ್ಮಿ ಪಾರ್ಟಿ ಪರ ಒಲವು ಇರುವ ಮಂದಿಯ ಭೇಟಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಆಸಕ್ತರು ನೋಂದಣಿ ಮಾಡುವ ಬಗ್ಗೆ ಚರ್ಚೆ ನಡೆದು ಆನ್ ಲಿಂಕ್ ಉದ್ಘಾಟಿಸಲಾಯಿತು. ಆನ್ ಲೈನ್ ಲಿಂಕ್ ( ಬಿಡುಗಡೆಯಾದ ಸದಸ್ಯತ್ವ ಲಿಂಕ್ ಇಲ್ಲಿದೆ )
ಈ ಸಂದರ್ಭ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ಪ್ರಮುಖರಾದ ದಿವಾಕರ ಸನಿಲ್, ಶಾಂತಲಾ ದಾಮ್ಲೆ, ವಿಜಯ ಶರ್ಮ, ಎಎಪಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಮೊದಲಾದವರು ಇದ್ದರು.