4750 ಕೋಟಿ ಅನುದಾನ ಬಂದರೂ ಮಂಗಳೂರು ನಗರದೊಳಗೆ ಹಲವು ರಸ್ತೆಗಳು ದುರಸ್ತಿಯಾಗಿಲ್ಲ…! | ಇದಾ ಅಭಿವೃದ್ಧಿ….? | ಎಎಪಿ ಜಿಲ್ಲಾಧ್ಯಕ್ಷ ಸಂತೋಷ್‌ ಕಾಮತ್‌ ಪ್ರಶ್ನೆ |

January 19, 2023
10:33 PM

ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 4750 ಕೋಟಿ ರೂ ಅಭಿವೃದ್ಧಿ ಕೆಲಸಗಳು ನಡೆದಿದೆ ಎಂದಿರುವ  ಶಾಸಕ ವೇದವ್ಯಾಸ ಕಾಮತ್ ಅವರ ಹೇಳಿಕೆಗೆ  ಆಮ್ ಆದ್ಮಿ ಪಾರ್ಟಿ, 4750 ಕೋಟಿ ರೂಪಾಯಿ ಖರ್ಚಾದರೂ ನಗರದ ರಸ್ತೆ ಮಾತ್ರಾ ಏಕೆ ಹದಗೆಟ್ಟ ಸ್ಥಿತಿಯಲ್ಲಿದೆ ಎಂದು ಪ್ರಶ್ನಿಸಿದೆ.‌

Advertisement

ಎಎಪಿ ಜಿಲ್ಲಾಧ್ಯಕ್ಷ ಸಂತೋಷ್‌ ಕಾಮತ್‌ ಪತ್ರಿಕಾ ಹೇಳಿಕೆ ನೀಡಿದ್ದು, 4750 ಕೋಟಿ ರೂ. ಮೊತ್ತದ ಕಾಮಗಾರಿ ಆಗಿದ್ದರೆ ನಗರದ ಪ್ರತಿಯೊಬ್ಬನಿಗೂ ಅದು ಅನುಭವಕ್ಕೆ ಬರುತಿತ್ತು. ಹಾಗೇನು ಆಗಿಲ್ಲ. ಇಷ್ಟೊಂದು ಮೊತ್ತದ ಕಾಮಗಾರಿಗಳ ವಿವರವನ್ನು ಶಾಸಕರು ಜನರ ಮುಂದಿಡಲಿ. ಜನರಿಗೆ ಇವರ ಅಭಿವೃದ್ಧಿ ಕೆಲಸದ ಸತ್ಯಾಸತ್ಯತೆ ಗೊತ್ತಾಗಲಿ ಎಂದವರು ಹೇಳಿದ್ದಾರೆ. ಕೆಲವು ವೃತ್ತಗಳನ್ನು ಮರುವಿನ್ಯಾಸ ಮಾಡಿ ಮರುನಾಮಕರಣ ಮಾಡಿದ್ದೇ ಹೊರತು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಮಾಡಲಾಗಿಲ್ಲ. ನಗರದೊಳಗೆ ಹಲವು ರಸ್ತೆಗಳನ್ನು ದುರಸ್ಥಿ ಮಾಡಿಲ್ಲ. ಘನತ್ಯಾಜ್ಯ ವಿಲೇವಾರಿ ವೈಫಲ್ಯಕ್ಕೆ ಹೈಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಒಳ ಚರಂಡಿ ಕೊಳಚೆ ನೀರನ್ನು ರಾಜ ಕಾಲುವೆಗಳಲ್ಲಿ ಬಿಡಲಾಗುತ್ತಿದೆ. ನಗರದ ಬಹುತೇಕ ಕಡೆ ಯುಜಿಡಿ ಸೌಲಭ್ಯವೇ ಇಲ್ಲ. ಇವುಗಳ ಬಗ್ಗೆ ಶಾಸಕರು ಯಾಕೆ ಮಾತನಾಡುತ್ತಿಲ್ಲ ಎಂದು ಸಂತೋಷ್ ಕಾಮತ್ ಪ್ರಶ್ನಿಸಿದ್ದಾರೆ.

ಮಂಗಳೂರು ನಗರದಲ್ಲಿ ಉರ್ವ, ಅಳಕೆ,ಕಾವೂರು ಸೇರಿದಂತೆ ಬಹುತೇಕ ಎಲ್ಲ ಕಡೆ ನಿರ್ಮಾಣ ಮಾಡಲಾದ ಹೊಸ ಮಾರುಕಟ್ಟೆಗಳು ಬಂದ್ ಆಗಿವೆ. ಸಾರ್ವಜನಿಕರ ಉಪಯೋಗಕ್ಕಾಗುವ ಯಾವ ಕೆಲಸವೂ ಕಾಣುತ್ತಿಲ್ಲ ಎಂದು ಸಂತೋಷ್‌ ಕಾಮತ್‌ ಟೀಕಿಸಿದರು. ಸೆಂಟ್ರಲ್ ಮಾರ್ಕೆಟ್ ತೆರವು ಮಾಡಿ ವ್ಯಾಪಾರಿಗಳು ಬೀದಿಗೆ ಬಂದಿದ್ದಾರೆ. ಇವರಿಗೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿರುವಷ್ಟು ಆಸಕ್ತಿ ಇವರಿಗೆ ಮೂಲಭೂತ ಸೌಕರ್ಯ ನೀಡುವಲ್ಲಿ ಇಲ್ಲ. ಇವರಿಗೆ ಇಚ್ಛಾಶಕ್ತಿ ಇದ್ದರೆ ಈ ಮಾರ್ಕೆಟುಗಳನ್ನು ಓಪನ್ ಮಾಡಿಸಬಹುದಾಗಿದೆ ಎಂದವರು ಹೇಳಿದ್ದಾರೆ.

ಮಂಗಳೂರು ಹೃದಯ ಭಾಗ ಹಂಪನಕಟ್ಟೆ ಸೇರಿದಂತೆ ಬಹುತೇಕ ನಗರದ ರಸ್ತೆಗಳಲ್ಲಿ, ಫುಟ್ ಪಾಟುಗಳಲ್ಲಿ ಗುಂಡಿ ಬಿದ್ದಿವೆ. ಅದನ್ನು ದುರಸ್ತಿ ಮಾಡುವ ಗೋಜಿಗೆ ಯಾರೂ ಹೋಗುತ್ತಿಲ್ಲ. ಸರ್ಕಾರದ ವಿವಿಧ ಇಲಾಖೆಗಳು, ಖಾಸಗಿ ಕಂಪೆನಿಗಳು ರಸ್ತೆ, ಫುಟ್ ಪಾತ್ ಗಳನ್ನು ಬೇಕಾಬಿಟ್ಟಿ ಅಗೆದು ಹಾಕಿ ಮಂಗಳೂರು ನಗರದ ಸ್ವರೂಪವನ್ನು ಕೆಡಿಸಿ ಹಾಕಿದ್ದಾರೆ. ಸ್ವರೂಪ ಬದಲಾಗಲು ಇನ್ನೇನು ಉಳಿದಿದೆ ಎಂದು ಶಾಸಕರೇ ಹೇಳಬೇಕು.

Advertisement

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 16-08-2025 | ಮಲೆನಾಡು-ಕರಾವಳಿಯಲ್ಲಿ ಉತ್ತಮ ಮಳೆ | ಆ.20 ರ ನಂತರ ಮಳೆ ಹೇಗೆ..?
August 16, 2025
3:30 PM
by: ಸಾಯಿಶೇಖರ್ ಕರಿಕಳ
ಹೊಸರುಚಿ | ಹಲಸಿನ ಹಣ್ಣಿನ ಬಜ್ಜಿ
August 16, 2025
11:33 AM
by: ದಿವ್ಯ ಮಹೇಶ್
ಎತ್ತಿನಹೊಳೆ ಯೋಜನೆಯಡಿ ವಿವಿಧ ಜಿಲ್ಲೆಗಳಿಗೆ ನೀರು ತುಂಬಿಸುವ ಚಿಂತನೆ
August 16, 2025
11:25 AM
by: The Rural Mirror ಸುದ್ದಿಜಾಲ
ದೇಶದ ಉತ್ಪನ್ನಗಳನ್ನು ಬಳಸಲು ರೈತರ ಸಂಕಲ್ಪ
August 16, 2025
11:17 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group