#AAP | ಮಂಗಳೂರು ನಗರದಲ್ಲಿ ರಸ್ತೆ ಸಮಸ್ಯೆ | ರಸ್ತೆ ದುರಸ್ತಿಗೆ ಆಮ್‌ಆದ್ಮಿಪಾರ್ಟಿ ಒತ್ತಾಯ |

August 18, 2022
9:19 PM

ಮಂಗಳೂರು ನಗರದ ರಸ್ತೆ ಹಾಗೂ ಬೀದಿದೀಪಗಳನ್ನು ತಕ್ಷಣವೇ ದುರಸ್ತಿ ಪಡಿಸಬೇಕು ಎಂದು ಆಮ್‌ ಆದ್ಮಿ ಪಕ್ಷವು ಒತ್ತಾಯಿಸಿದೆ. ದ ಕ ಜಿಲ್ಲಾ ಎಎಪಿ ಗುರುವಾರ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ನೀಡಿದೆ.

Advertisement

ಮಂಗಳೂರು ನಗರದ ಮೂಲಸೌಕರ್ಯವು ತೀರಾ ಕಳಪೆ ಸ್ಥಿತಿಯಲ್ಲಿದೆ. ನಗರದ ಹಲವು ರಸ್ತೆಗಳು ಮತ್ತು ಬೀದಿ ದೀಪಗಳು ದಯನೀಯ ಸ್ಥಿತಿಯಲ್ಲಿದೆ. ಮುಖ್ಯವಾಗಿ ಈಗ ನಡೆಯುತ್ತಿರುವ ಕಾಮಗಾರಿಗಳು, ಮಳೆಯ ಪ್ರಮಾಣ ಮತ್ತು ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ರಸ್ತೆಗಳು ಹದಗೆಟ್ಟಿವೆ. ಹಲವೆಡೆ ರಸ್ತೆಗಳು ದುರಸ್ತಿ ಕಾಣದೇ ಬಹಳ ದಿನಗಳಾಗಿವೆ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಗುಂಡಿ, ಹೊಂಡಗಳಿದ್ದು, ಮಳೆಗಾಲದಲ್ಲಿ ಮಾತ್ರ ಇವುಗಳ ಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಇದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ರಾತ್ರಿ ವೇಳೆ ಪಾದಚಾರಿಗಳೂ ಎಡವಿ ಬೀಳುತ್ತಾರೆ. ಇದಲ್ಲದೆ, ಈ ಗುಂಡಿಗಳು ಮತ್ತು ಹೊಂಡಗಳಲ್ಲಿ ಸಂಗ್ರಹವಾಗುವ ನೀರು ಸೊಳ್ಳೆಗಳ ಸಂತಾನೋತ್ಪತ್ತಿಗೆ ಸ್ಥಳವನ್ನು ಒದಗಿಸುತ್ತದೆ, ಇದರ ಪರಿಣಾಮವಾಗಿ ಮಲೇರಿಯಾ ಮತ್ತು ಡೆಂಗ್ಯೂ ಮುಂತಾದ ರೋಗಗಳು ಹರಡುವ ಸಾಧ್ಯತೆ ಇದೆ ಎಂದು ಆಮ್‌ ಆದ್ಮಿ ಪಕ್ಷವು ಮನವಿಯಲ್ಲಿ ತಿಳಿಸಿದೆ.

ಮಂಗಳೂರು ನಗರದ ಹಲವೆಡೆ ಬೀದಿ ದೀಪಗಳು ಕೆಟ್ಟು ನಿಂತಿದ್ದು, ರಸ್ತೆ ಕತ್ತಲಾಗಿದೆ. ಇಂತಹ ಸ್ಥಳಗಳು ಮಹಿಳೆಯರು ಮತ್ತು ಮಕ್ಕಳು, ಹಿರಿಯ ನಾಗರಿಕರು ಇತ್ಯಾದಿಗಳಿಗೆ ಅಸುರಕ್ಷಿತವಾಗಿದ್ದು, ಈ ಪ್ರದೇಶಗಳಲ್ಲಿ ಅಪರಾಧಗಳ ಭಯವಿದೆ. ಸಂಜೆಯ ವೇಳೆ ಚೈನ್ ಸ್ನ್ಯಾಚ್ ಮಾಡುವ ಕೆಲವು ಘಟನೆಗಳು ನಡೆದಿದ್ದು, ಕತ್ತಲೆಯ ಮರೆಯಲ್ಲಿ ಅಪರಾಧಿಗಳು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ, ತಾವು ಕೂಡಲೇ ಕಾರ್ಯೋನ್ಮುಖರಾಗಿ ಅಗತ್ಯ ಕ್ರಮಗಳನ್ನು ಜರುಗಿಸಿ ಮಂಗಳೂರಿನ ಜನರು ರಸ್ತೆಗಳು ಮತ್ತು ಬೀದಿ ದೀಪಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸುವಂತೆ ಮಾಡಿಕೊಡಬೇಕು ಎಂದು ಆಮ್‌ ಆದ್ಮಿ ಪಕ್ಷವು ಒತ್ತಾಯಿಸಿದೆ.

ಮನವಿ ನೀಡುವ ವೇಳೆ ಆಮ್‌ ಆದ್ಮಿ ಪಕ್ಷದ  ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಪುಚ್ಚಪ್ಪಾಡಿ, ಎಎಪಿ ರಾಷ್ಟ್ರೀಯ ಮಂಡಳಿ ಸದಸ್ಯರಾದ ಅಶೋಕ್ ಎಡಮಲೆ, ಪಕ್ಷದ  ಪ್ರಮುಖರಾದ ಶಾನನ್ ಪಿಂಟೋ, ಜೆರಾರ್ಡ್ ಟವರ್ಸ್, ಜಯಪ್ರಕಾಶ್ ರಾವ್, ಮಂಗಳೂರು ಉತ್ತರ ವಿಧಾನಸಭಾ ಅಧ್ಯಕ್ಷ ನವೀನ್ ಚಂದ್ರ ಪೂಜಾರಿ, ಬೆನೆಟ್ ನವಿತಾ ಕ್ರಾಸ್ತಾ, ರೋನಿ ಕ್ರಾಸ್ತಾ, ಕೆ.ಎನ್.ಶ್ರೀನಿವಾಸ್, ಅವ್ರೆನ್ ಡಿಸೋಜ, ಸಿರಿಲ್ ಜಿವಾನ್, ವಲ್ಸ ಜಿವಾನ್ ಹಾಗೂ ಮತ್ತಿತರ  ಸದಸ್ಯರು ಉಪಸ್ಥಿತರಿದ್ದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 25-04-2025 | ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ |
April 25, 2025
2:04 PM
by: ಸಾಯಿಶೇಖರ್ ಕರಿಕಳ
ಒತ್ತುವರಿಯಾಗಿರುವ  ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿ ಸೂಚನೆ
April 25, 2025
7:47 AM
by: The Rural Mirror ಸುದ್ದಿಜಾಲ
ಭಾರತದಿಂದ ಅಫ್ಘಾನಿಸ್ತಾನಕ್ಕೆ 4.8 ಟನ್ ಜೀವರಕ್ಷಕ ಲಸಿಕೆ ರವಾನೆ
April 25, 2025
7:42 AM
by: The Rural Mirror ಸುದ್ದಿಜಾಲ
ಭ್ರಷ್ಟಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ  | ಉಪಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ
April 25, 2025
7:31 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group