ಎಎಪಿ ಅಧಿಕಾರದಲ್ಲಿ ಜನರ ಹಣ ಯಾರದೋ ಜೇಬಿಗೆ ಹೋಗಲ್ಲ- ನೇರವಾಗಿ ಜನರಿಗೇ ತಲಪುತ್ತದೆ | ಪುತ್ತೂರಿನಲ್ಲಿ ವಿವೇಕಾನಂದ ಸಾಲಿನ್ಸ್‌ |

October 17, 2022
9:59 PM
ಪ್ರತೀ ರಾಜ್ಯದಲ್ಲಿ, ದೇಶದಲ್ಲಿ ಜನಪರವಾದ ಆಡಳಿತ ಅಗತ್ಯವಿದೆ. ಜನರ ತೆರಿಗೆಯ ಹಣ ಯಾರದೋ ಜೇಬಿಗೆ ಪರ್ಸಂಟೇಜ್‌ ಮೂಲಕ ಹೋಗುವುದು ಸಾಧ್ಯವಿಲ್ಲ. ಎಎಪಿ ಅಧಿಕಾರದಲ್ಲಿ ಜನರ ತೆರಿಗೆ ಹಣ ನೇರವಾಗಿ ಜನರಿಗೇ ಅಭಿವೃದ್ಧಿಯ ಮೂಲಕ ಲಭಿಸುತ್ತದೆ ಎಂದು ಎಎಪಿ ರಾಜ್ಯ ಜಂಟಿ ಕಾರ್ಯದರ್ಶಿ ವಿವೇಕಾನಂದ ಸಾಲಿನ್ಸ್‌ ಹೇಳಿದರು.
ಪುತ್ತೂರಿನ ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್‌ನಲ್ಲಿ  ಆಮ್‌ ಆದ್ಮಿ ಪಾರ್ಟಿಯ ನೂತನ ಕಚೇರಿ ಉದ್ಘಾಟನೆ ಬಳಿಕ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲಾ ಪಕ್ಷಗಳಂತೆಯೇ ಆಡಳಿತ ನಡೆಸುವುದು ಆಮ್‌ ಆದ್ಮಿ ಪಕ್ಷವಲ್ಲ. ಜನರ ತೆರಿಗೆ ಹಣ ಯಾವುದೋ ಪರ್ಸಂಟೇಜ್‌ ರೂಪದಲ್ಲಿ ಯಾರದೋ ಜೇಬಿಗೆ ಹೋಗುವುದು ಸಹಿಸಲು ಸಾಧ್ಯವಿಲ್ಲ. ಎಎಪಿಯು ಜನಪರವಾಗಿ, ಅಭಿವೃದ್ಧಿಯ ರೂಪದಲ್ಲಿ ಜನರಿಗೇ ತೆರಿಗೆ ಹಣವನ್ನು ನೀಡುತ್ತದೆ. ಇದೀಗ ರಾಜ್ಯದಲ್ಲೂ ಆಮ್‌ ಆದ್ಮಿ ಪಕ್ಷವು ಬೆಳೆಯುತ್ತಿದೆ. ಹಂತ ಹಂತವಾಗಿಯೇ ಪಕ್ಷದ ಸಂಘಟನೆಯಾಗುತ್ತಿದೆ. ಆರಂಭದಲ್ಲಿ  ದಿನಗಳಲ್ಲಿ ಆರೋಪಗಳು ಸಹಜವೇ ಇರುತ್ತದೆ. ಆದರೆ ಪಕ್ಷವು ತನ್ನ ಸಿದ್ಧಾಂತಗಳಲ್ಲಿ ರಾಜಿ ಮಾಡುವುದಿಲ್ಲ‌ ಎಂದರು. ಪಕ್ಷವು ತನ್ನ ಕಾರ್ಯಕರ್ತರಿಗೆ ದೇಶಪ್ರೇಮ, ವ್ಯಕ್ತಿಯ ದುಡಿಮೆ ಹಾಗೂ ಆದಾಯ, ಪಕ್ಷಪ್ರೇಮ, ಆರೋಗ್ಯ, ಶಿಕ್ಷಣ, ಉತ್ತಮ ಯೋಜನೆ ಹಾಗೂ ಯೋಚನೆಗಳ ಬಗ್ಗೆ ತಿಳಿಸುತ್ತದೆ. ಈ ಮೂಲಕ ಭ್ರಷ್ಟಾಚಾರ ರಹಿತ ನಾಯಕರುಗಳನ್ನು ಸೃಷ್ಟಿ ಮಾಡುತ್ತಿದೆ ಎಂದರು.
ಆಮ್‌ ಆದ್ಮಿ ಪಕ್ಷದ ದ ಕ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್‌ ಮಾತನಾಡಿ, ಆಮ್‌ ಆದ್ಮಿ ಪಕ್ಷವು ಪ್ರಮುಖವಾಗಿ ಐದು ವಿಚಾರಗಳ ಕಡೆಗೆ ಆದ್ಯತೆ ನೀಡುತ್ತಿದೆ. ದೇಶಪ್ರೇಮ, ಶಿಕ್ಷಣ, ಆರೋಗ್ಯ, ಅಭಿವೃದ್ಧಿ , ಮೂಲಭೂತ ಸೌಕರ್ಯಗಳ ಕಡೆಗೆ ಗಮನಹರಿಸುತ್ತಿದೆ. ಅನೇಕರು ಉಚಿತಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಉಚಿತಗಳ ಬಗ್ಗೆ ಕೆಲವು ಕಡೆ ಅಗತ್ಯ ಇರಬಹುದು, ಆದರೆ ದಕ ಜಿಲ್ಲೆಯಲ್ಲಿ ಅಭಿವೃದ್ಧಿ ಪರವಾಗಿಯೇ ಧ್ವನಿ ಎತ್ತಲಿದ್ದೇವೆ ಎಂದು ಹೇಳಿದರು. ಈಗಾಗಲೇ ದ ಕ ಜಿಲ್ಲೆಯಲ್ಲಿ ಎಎಪಿ ಬೆಳೆಯುತ್ತಿದೆ, ಪುತ್ತೂರಿನಲ್ಲಿಯೂ ಮುಂದಿನ ದಿನಗಳಲ್ಲಿ ಸಶಕ್ತವಾಗಿ ಪಕ್ಷವು ಬೆಳೆಯಲಿದೆ ಎಂದರು.
ಎಎಪಿ ರಾಷ್ಟ್ರೀಯ ಮಂಡಳಿ ಸದಸ್ಯ ಅಶೋಕ್‌ ಎಡಮಲೆ ಮಾತನಾಡಿ, ಆಮ್‌ ಆದ್ಮಿ ಪಕ್ಷವು ಜಾತಿ ಧರ್ಮಗಳ ಯಾವ ಬೇಧವೂ ಇಲ್ಲದೆ, ಬೆಳೆಯುತ್ತಿರುವ ಪಕ್ಷವಾಗಿದೆ. ಅಭಿವೃದ್ಧಿಯೇ ಪ್ರಮುಖ ಅಜೆಂಡಾವಾಗಿದೆ. ಪಕ್ಷವು ಸಾಮಾನ್ಯ ಜನರನ್ನೂ ಗುರುತಿಸಿ ಸ್ಥಾನ ನೀಡುತ್ತದೆ ಎಂದರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷ ಡಾ.ವಿಷುಕುಮಾರ್ ಮಾತನಾಡಿ, ಸಮಾಜದಲ್ಲಿ ಬದಲಾವಣೆಗಾಗಿ ಇಂದು ರಾಜಕೀಯ ಅಗತ್ಯವಿದೆ. ಸಮಾಜವು ಭ್ರಷ್ಟಾಚಾರ ಮುಕ್ತವಾಗಬೇಕು, ಪರಿಶುದ್ಧ ರಾಜಕಾರಣ ಅಗತ್ಯವಿದೆ, ಅಭಿವೃದ್ಧಿಯಾಗ ಕಲ್ಪನೆಗಳ ಅಗತ್ಯವಿದೆ ಎಂದರು. ದೇಶಪ್ರೇಮ ಹೊಂದಿರುವ ಅಧಿಕಾರಿಯೊಬ್ಬರು ರಾಜಕೀಯಕ್ಕೆ ಬಂದರೆ ಅಭಿವೃದ್ಧಿ ಸಾಧ್ಯವಿದೆ ಎಂಬುದನ್ನು ಅರವಿಂದ ಕೇಜ್ರೀವಾಲ್‌ ತೋರಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ  ಎಎಪಿ ಜಿಲ್ಲಾಕಾರ್ಯದರ್ಶಿ ವೇಣುಗೋಪಾಲ ಪುಚ್ಚಪ್ಪಾಡಿ ಉಪಸ್ಥಿತರಿದ್ದರು. ಆಮ್ ಆದ್ಮಿ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ  ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೋಲ್ಪೆ ಪ್ರಸ್ತಾವನೆಗೈದರು. ಸಂಘಟನಾ ಉಸ್ತುವಾರಿ ಜನಾರ್ಧನ ಬಂಗೇರ ಸ್ವಾಗತಿಸಿದರು.ಆಮ್ ಆದ್ಮಿ ಪಾರ್ಟಿ ಅಲ್ಪಸಂಖ್ಯಾತ ಮೋರ್ಛಾ ಅಧ್ಯಕ್ಷ ಮಹಮ್ಮದ್ ಆಲಿ ವಂದಿ

Advertisement
Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆಂಧ್ರಪ್ರದೇಶಕ್ಕೆ ನಾಲ್ಕು ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ರಾಜ್ಯಸರ್ಕಾರ
May 21, 2025
10:38 PM
by: The Rural Mirror ಸುದ್ದಿಜಾಲ
ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಸಮರ್ಪಕವಾಗಿ ಪೂರೈಸಲು ಕ್ರಮ
May 21, 2025
10:31 PM
by: The Rural Mirror ಸುದ್ದಿಜಾಲ
ಮಳೆ ಹಿನ್ನೆಲೆ | ಅಪಾಯಕಾರಿ ಸ್ಥಳಗಳಲ್ಲಿ ನಿರಂತರ ನಿಗಾವಹಿಸಲು ದ ಕ ಜಿಲ್ಲಾಧಿಕಾರಿ ಸೂಚನೆ
May 21, 2025
10:25 PM
by: The Rural Mirror ಸುದ್ದಿಜಾಲ
ವಾಯುಭಾರ ಕುಸಿತ ರಾಜ್ಯದಲ್ಲಿ ಮುಂದುವರಿದ ಮಳೆ | ಹಲವೆಡೆ ಪ್ರವಾಹ ಭೀತಿ
May 21, 2025
10:10 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group