ಗಣಪನ ಬೆಳಗುವ ಭಕ್ತರು | ಸಾರ್ವಜನಿಕ ಗಣೇಶೋತ್ಸವದಲ್ಲಿ ಭಕ್ತರಿಂದಲೇ ಗಣಪನಿಗೆ ಆರತಿ | ಉಬರಡ್ಕದಲ್ಲಿ ಮಾದರಿ ಗಣೇಶೋತ್ಸವ |

September 20, 2023
10:14 PM
ಭಕ್ತರೇ ಗಣಪನಿಗೆ ಆರತಿ ಬೆಳಗುವ ಮೂಲಕ  ಸಾರ್ವಜನಿಕ ಉತ್ಸವದ ಮೂಲ ಉದ್ದೇಶವನ್ನು ಉಬರಡ್ಕದ ಸಾರ್ವಜನಿಕ ಗಣೇಶೋತ್ಸವದಲ್ಲಿ ಉಳಿಸಲಾಗಿದೆ.

ಗಣೇಶ ಚತುರ್ಥಿಯಿಂದ ಆರಂಭಗೊಂಡ ಹಲವು ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ಹಲವು ಕಡೆ ನಡೆಯುತ್ತದೆ. ಕೆಲವು ಕಡೆ ಒಂದು ದಿನ, ಎರಡು ದಿನ, ಹೀಗೇ ವಾರಗಳ ಕಾಲವೂ ಗಣೇಶೋತ್ಸವ ನಡೆಯುತ್ತದೆ. ಈ ಸಾರ್ವಜನಿಕ ಉತ್ಸವದ ಮೂಲಕ ಸಂಭ್ರಮ ನಡೆಯುತ್ತದೆ. ಈ ಉತ್ಸವದ ಮೂಲ ಉದ್ದೇಶಗಳು ಹಲವು ಕಡೆ ಮರೆಯಾಗುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಉಬರಡ್ಕದಲ್ಲಿ  ಕಳೆದ 13  ವರ್ಷಗಳಿಂದ ಸಾರ್ವಜನಿಕ ಉತ್ಸವದ ಮೂಲ ಆಶಯವನ್ನು ಇರಿಸಿಕೊಂಡು ಉತ್ಸವ ಆಚರಿಸಲಾಗುತ್ತದೆ.

Advertisement
Advertisement
Advertisement

ಸಾರ್ವಜನಿಕ ಗಣೇಶ ಉತ್ಸವವು  ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯರನ್ನು ಒಟ್ಟುಗೂಡಿಸುವ ಉದ್ದೇಶದಿಂದ ಲೋಕಮಾನ್ಯ ಬಾಲಗಂಗಾಧರ್ ತಿಲಕರು  ಮಹಾರಾಷ್ಟ್ರದಲ್ಲಿ ಹುಟ್ಟು ಹಾಕಿದ್ದರು. ಸಾರ್ವಜನಿಕವಾಗಿ ಗಣೇಶನನ್ನು ಪ್ರತಿಷ್ಠಾಪಿಸಿ ಜನರನ್ನು ಒಗ್ಗೂಡಿಸುವ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದ್ದರು. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ನಡೆಸಿದ ಹೋರಾಟಕ್ಕೆ ಸ್ಫೂರ್ತಿಯಾಗಿದ್ದ ಗಣೇಶೋತ್ಸವ ಇಂದಿಗೂ ನಡೆಯುತ್ತಿದೆ. ಈಗ ಸಂಘಟನೆ ಹಾಗೂ ಒಂದಾಗಿಸುವ ಉದ್ದೇಶ ಹೇಳಲಾಗುತ್ತಿದ್ದರೂ, ಹಲವು ಕಡೆ ಮೂಲ ಉದ್ದೇಶಗಳಿಂದ ನಡೆಯುತ್ತಿಲ್ಲ. ಸುಳ್ಯದ ಉಬರಡ್ಕ ಮಾತ್ರಾ ಇದಕ್ಕೆ ಅಪವಾದ, ಇಲ್ಲಿ  ಭಕ್ತರೇ ಗಣಪನಿಗೆ ಆರತಿ ಬೆಳಗುವ ಮೂಲಕ  ಸಾರ್ವಜನಿಕ ಉತ್ಸವದ ಮೂಲ ಉದ್ದೇಶವನ್ನು ಇಲ್ಲಿನ ಸಾರ್ವಜನಿಕ ಗಣೇಶೋತ್ಸವದಲ್ಲಿ ಉಳಿಸಲಾಗಿದೆ.

Advertisement
ಭಕ್ತರಿಂದ ಗಣಪನಿಗೆ ಆರತಿ

ಉಬರಡ್ಕದ ನರಸಿಂಹ ಶಾಸ್ತಾವು ದೇವಾಲಯ ಹಾಗೂ ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ  ಗಣೇಶೋತ್ಸವ ನಡೆಯುತ್ತದೆ. ಕಳೆದ 13 ವರ್ಷಗಳಿಂದ ಉತ್ಸವ ನಡೆದುಕೊಂಡು ಬರುತ್ತಿದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಈ ಗಣೇಶೋತ್ಸವ ಅಚ್ಚುಕಟ್ಟಾಗಿ ನಡೆಯುತ್ತಿದೆ. ಎರಡು ದಿನಗಳ ಕಾಲ ನಡೆಯುವ ಉತ್ಸವದ ಆರಂಭದಲ್ಲಿ ಇಲ್ಲಿನ ಅರ್ಚಕರು ಗಣಪತಿ ಪ್ರತಿಷ್ಟೆ ಹಾಗೂ ಪೂಜಾ ವಿಧಿವಿಧಾನ ಮಾಡಿದ ಬಳಿಕ ಗಣಪನಿಗೆ ಸೇವೆ ನಡೆಯುತ್ತದೆ. ಹಲವು ಸೇವೆಗಳ ನಡುವೆ ಮಂಗಳಾರತಿ ಇಲ್ಲಿ ವಿಶೇಷವಾಗಿರುವ ಸೇವೆ. ಭಕ್ತರೇ ಆರತಿ ಮಾಡುತ್ತಾರೆ, ಅರ್ಚಕರು ಮಂತ್ರ ಪಠಣ ಮಾಡುತ್ತಾರೆ, ಪ್ರಸಾದ ವಿತರಣೆ ಮಾಡುತ್ತಾರೆ. ಭಾವವೇ ಪ್ರಧಾನವಾಗಿರುವ ಈ ಸೇವೆ ಇಲ್ಲಿ ಹೆಚ್ಚು ಮಹತ್ವ ಪಡೆದಿದೆ. ಇಲ್ಲಿ ಗಣಪತಿ ಪ್ರತಿಷ್ಟೆಯ ಸಂದರ್ಭದಿಂದಲೇ ಭಕ್ತರಿಂದಲೇ ಆರತಿ ಬೆಳಗುವ ಸಂಕಲ್ಪ ಮಾಡಲಾಗಿತ್ತು, ಈ ಮೂಲಕ ಸಾರ್ವಜನಿಕ ಆಚರಣೆಗೆ ಮಹತ್ವ ನೀಡಲಾಗಿತ್ತು.

Advertisement
ಶ್ಯಾಮ್ ಪಾನತ್ತಿಲ
ಈಗ ಭಕ್ತರು ಆರತಿ ಬೆಳಗುವ ಮೂಲಕ ಗಣಪನನ್ನು ಹೆಚ್ಚು ಆಪ್ತವಾಗಿ ಆರಾಧನೆ ಮಾಡುತ್ತಾರೆ.  ಊರಿನ ಬಹುಪಾಲು ಮಂದಿ ಈ ಕಾರ್ಯದಲ್ಲಿ ಭಾಗವಹಿಸುತ್ತಾರೆ ಎಂದು ಹೇಳುತ್ತಾರೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶ್ಯಾಮ್ ಪಾನತ್ತಿಲ.‌
ಮಧ್ವರಾಜ ಭಟ್
ಸಂಕಲ್ಪ ಶಕ್ತಿಯೇ ದೊಡ್ಡದು. ಇಲ್ಲಿ ಭಕ್ತರು ಆರತಿ ಬೆಳಗಲು ಯಾವ ಅಡ್ಡಿಗಳಿಲ್ಲ, ಸರಳವಾಗಿ ಆರತಿ ಮಾಡುವ ಮೂಲಕ ತಾವೇ ಆರಾಧನೆ ಮಾಡುತ್ತಾರೆ,‌ ಭಾವನೆಗಳೇ ಇಲ್ಲಿ ಪ್ರದಾನವಾಗಿದೆ, ನಿಯಮಗಳು ಇಲ್ಲ ಎಂದು ಹೇಳುತ್ತಾರೆ ಅರ್ಚಕರಾದ ಮಧ್ವರಾಜ ಭಟ್

ಗಣಪನ ಬೆಳಗುವ ಭಕ್ತರು – ವಿಡಿಯೋ…

ಉಬರಡ್ಕದಲ್ಲಿ ಸುಮಾರು 13 ವರ್ಷಗಳ ಹಿಂದೆ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡುವ ವೇಳೆಯೇ ಆಗ ಈ ಉತ್ಸವದ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ಹಿರಿಯರು ಈ ಬಗ್ಗೆ ಯೋಚಿಸಿ, ಸಾರ್ವಜನಿಕ ಉತ್ಸವಗಳಲ್ಲಿ ನಿಯಮಗಳು ಕಡಿಮೆ ಇದ್ದು, ಊರಿನ ಜನರೆಲ್ಲಾ ಒಂದಾಗುವ ದಾರಿಗಳು ಇರಬೇಕು ಎಂದು ಯೋಚಿಸಿದ್ದರು. ಇಲ್ಲಿ ಗಣೇಶೋತ್ಸವದ ದಿನ ಆಟೋಟಗಳು ನಡೆಯುತ್ತಿತ್ತು, ಇದರ ಬದಲಾಗಿ ಗಣಪತಿ ಹವನ ನಡೆಸುವ ಯೋಚನೆ ಬಂದಾಗ ಗಣೇಶ ಉತ್ಸವವವೇ ನಡೆಸಲು ಯುವಕರು ಯೋಚಿಸಿದಾಗ ಬಾಲಗಂಗಾಧರ್ ತಿಲಕ ಯೋಚನೆಗಳು ಹಳ್ಳಿಯಲ್ಲೂ ಜಾರಿಗೆ ಬರಲು ಯೋಚನೆ ನಡೆಯಿತು. ಅಂದು ಸಮಿತಿಯ ಮಾರ್ಗದರ್ಶನ ನೀಡಿದ್ದ ಹಾಗೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಊರಿನ  ಪ್ರಮುಖರ ತಂಡವು ಗ್ರಾಮೀಣ ಭಾಗದಲ್ಲೂ ಬದಲಾವಣೆಗೆ ನಾಂದಿ ಹಾಡಿದ್ದರು. ಈ ತಂಡವು, ಮುಂದೆ ಹಂತ ಹಂತವಾಗಿ ಬದಲಾವಣೆಯನ್ನು ಬಯಸಿತ್ತು. ತಾಲೂಕಿನ ಪ್ರಮುಖ ಪುರೋಹಿತರು ಕೂಡಾ ಈ ಕ್ರಮವನ್ನು ಮೆಚ್ಚಿಕೊಂಡಿದ್ದರು.ಸಾಮಾಜಿಕ ಸಾಮರಸ್ಯಕ್ಕೆ ಇದು ನಾಂದಿಯಾಗಿದೆ ಎಂದೂ ಅಭಿಪ್ರಾಯಪಟ್ಟಿದ್ದರು.

Advertisement

ಗ್ರಾಮೀಣ ಭಾಗದಲ್ಲಿ ಈಗಲೂ ಇಂತಹದ್ದೊಂದು ಸಾಮರಸ್ಯದ , ಭಾವನೇ ಪ್ರದಾನವಾಗಿ ನಡೆಯುತ್ತಿರುವ ವಿಶೇಷವಾದ ಗಣೇಶೋತ್ಸವಗಳ ಸಾಲಿನಲ್ಲಿ ಉಬರಡ್ಕದ ಗಣೇಶೋತ್ಸವ ಮಾದರಿಯಾಗಿದೆ. ಪ್ರತೀ ಊರಿನಲ್ಲೂ ಸಾರ್ವಜನಿಕ ಗಣೇಶೋತ್ಸವ, ಆಚರಣೆಗಳೂ ಈ ಮಾದರಿಯಲ್ಲಿ ನಡೆಯಬೇಕಿದೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ
ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
November 23, 2024
6:21 AM
by: The Rural Mirror ಸುದ್ದಿಜಾಲ
ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ
November 23, 2024
6:12 AM
by: The Rural Mirror ಸುದ್ದಿಜಾಲ
ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror