ಜುಲೈ 11 | ರೇಡಿಯೋ ಪಾಂಚಜನ್ಯದಲ್ಲಿ ಆಟಿ- ವಿಶೇಷ ತುಳು ಭಾಷಣ ಸ್ಪರ್ಧೆ |

July 8, 2022
10:22 PM

ಆಟಿ ತಿಂಗಳ ಆಚರಣೆಯ ವಿಶೇಷತೆ ಮತ್ತು ಮಹತ್ವದ ಬಗ್ಗೆ 15 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ ತುಳು ಭಾಷಣ ಸ್ಪರ್ಧೆಯನ್ನು ರೇಡಿಯೋ ಪಾಂಚಜನ್ಯವು ಇನ್ನರ್‌ ವೀಲ್ ಮತ್ತು ಮುಳಿಯ ಜ್ಯುವೆಲ್ಸ್‌ ಸಹಯೋಗದಲ್ಲಿ ಆಯೋಜಿಸುತ್ತಿದೆ.

Advertisement
Advertisement

15 ವರ್ಷ ಮೇಲ್ಪಟ್ಟ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಆಯ್ಕೆಯಾದ ಭಾಷಣಗಳನ್ನು ರೇಡಿಯೋ ಪಾಂಚಜನ್ಯದಲ್ಲಿ ಪ್ರಸಾರ ಮಾಡಲಾಗುವುದು.

ಜುಲೈ 11ರಂದು ರೇಡಿಯೋ ಪಾಂಚಜನ್ಯದ ಸ್ಟುಡಿಯೋದಲ್ಲಿ ಈ ಸ್ಪರ್ಧೆ ನಡೆಯಲಿದೆ. ಆಸಕ್ತ ಸ್ಪರ್ಧಾಳುಗಳು ನೋಂದಣಿ ಮತ್ತು ಮಾಹಿತಿಗಾಗಿ 8050809885 ಸಂಖ್ಯೆಗೆ ಸಂಪರ್ಕಿಸಬಹುದು.

ರೇಡಿಯೋ ಪಾಂಚಜನ್ಯ 90.8 ಎಫ್‌ಎಂ ತರಂಗಾಂತರದಲ್ಲಿ ಪ್ರತಿದಿನ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಸುಮಾರು 15,000 ಕೇಳುಗರನ್ನು ಈ ಸಮುದಾಯ ಬಾನುಲಿ ಹೊಂದಿದ್ದು, ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಆಯ್ದ ಭಾಗಗಳಲ್ಲಿ ಪ್ರಸಾರವಾಗುತ್ತಿದೆ.ರೇಡಿಯೋ ಆಪ್ ಮೂಲಕ ಅಂತರ್ಜಾಲದಲ್ಲೂ ಬಿತ್ತರವಾಗುವ ರೇಡಿಯೋ ಪಾಂಚಜನ್ಯವು ದೇಶ-ವಿದೇಶಗಳಲ್ಲೂ ಸಾಕಷ್ಟು ಶ್ರೋತೃಗಳನ್ನು ತಲುಪುತ್ತಿದೆ.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಪ್ರವರ್ತಿತವಾಗಿರುವ ಈ ಸಮುದಾಯ ಬಾನುಲಿಯು ಕೃಷಿಲೋಕ, ವೈದ್ದೇವ ಭವ, ಯುವವಾಣಿ, ಪುಟಾಣಿ ಪ್ರಪಂಚ, ಕಲಾಮಹತಿ ಸೇರಿದಂತೆ 43ಕ್ಕೂ ಅಧಿಕ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದೆ.

Advertisement

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ
May 16, 2025
9:59 PM
by: The Rural Mirror ಸುದ್ದಿಜಾಲ
ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ
May 16, 2025
9:51 PM
by: The Rural Mirror ಸುದ್ದಿಜಾಲ
ಡೆಂಘೀ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರದ ಸೂಚನೆ
May 16, 2025
9:43 PM
by: The Rural Mirror ಸುದ್ದಿಜಾಲ
ಕನಿಷ್ಠ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಪ್ರಕ್ರಿಯೆ ಶೀಘ್ರ ಆರಂಭ
May 16, 2025
9:38 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group