ಯಶಸ್ವಿಯಾಗುತ್ತೇನೆ ಎಂಬ ನಿರ್ಧಾರ ನಿಮ್ಮಲ್ಲಿದ್ದರೆ ಸೋಲು ಎಂದಿಗೂ ಬಾರದು – ಡಾ.ಎ ಪಿ ಜೆ ಅಬ್ದುಲ್‌ ಕಲಾಂ

October 15, 2020
11:19 AM
ಯಶಸ್ವಿಯಾಗುತ್ತೇನೆ ಎಂಬ ನಿರ್ಧಾರ ನಿಮ್ಮಲ್ಲಿ ಪ್ರಬಲವಾಗಿದ್ದರೆ ಸೋಲು ಎಂದಿಗೂ ನಿಮ್ಮನ್ನು ಹಿಮ್ಮೆಟ್ಟಿಸುವುದಿಲ್ಲ. ” ಅಬ್ದುಲ್ ಕಲಾಂ

ತಮಿಳುನಾಡಿನ ರಾಮೇಶ್ವರದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹುಡುಗ ಭಾರತದ  ʼಕ್ಷಿಪಣಿಗಳ ಜನಕ’ನಾಗಿ ಪ್ರಸಿದ್ಧರಾದರೆಂದರೆ ಸಣ್ಣ ಸಾಧನೆಯಲ್ಲ. ಈ ಪರಿಶ್ರಮದ ಹಿಂದೆ ಅಪಾರವಾದ ಜೀವನ ಪ್ರೀತಿಯಿದೆ. ಮಾತ್ರವಲ್ಲ ಸದಾ ಕ್ರಿಯಾಶೀಲತೆ, ನಿರಂತರ ಪ್ರಯತ್ನ, ಸ್ಷಷ್ಟವಾದ ಭವಿಷ್ಯದ ಬಗೆಗಿನ ಕನಸುಗಳು ಅವರ ಯಶಸ್ವಿನ ಗುಟ್ಟುಗಳು.
15 ಒಕ್ಟೋಬರ್ 1931 ರಂದು ಜೈನುಲಬ್ದೀನ್ ಹಾಗೂ ಆಶಿಮಾ ದಂಪತಿಗಳ ಪುತ್ರರಾಗಿ ಅಬ್ದುಲ್ ಕಲಾಂರವರು ಜನಿಸಿದರು. ಹೆತ್ತವರ ಬಡತನದ ಅರಿವಿದ್ದ ಕಲಾಂರು ಬೆಳಗ್ಗಿನ ತಮ್ಮ ಅಭ್ಯಾಸವನ್ನು ಮುಗಿಸಿ ಪತ್ರಿಕಾ ವಿತರಣೆಯನ್ನು ಮಾಡಿ ಶಾಲೆಗೆ ಹೋಗುತ್ತಿದ್ದರು.

Advertisement

 

ನೆಗೆಟಿವ್ ಪರಿಸ್ಥಿತಿಗಳಲ್ಲೂ ಪಾಸಿಟಿವ್ ಆಗಿದ್ದರೆ ನೀವು ಪ್ರತಿ ಬಾರಿಯೂ ಗೆಲ್ಲುತ್ತಿರಿ” ಎಂಬ ಮಾತುಗಳನ್ನು ಹೇಳಿದ್ದು ಮಾತ್ರವಲ್ಲ ಬಾಳಿ ತೋರಿಸಿದರು. ತಮ್ಮ ಜೀವನದ ಪ್ರತಿ ಹಂತದಲ್ಲೂ , ಎಲ್ಲಾ ನಡೆಗಳಲ್ಲೂ, ನಿರ್ಧಾರಗಳಲ್ಲೂ ಪಾಸಿಟಿವ್ ಚಿಂತನೆಗಳನ್ನೇ ಪ್ರತಿಪಾದಿಸಿದರು.

ಮೂಲತಃ ಅವರೊಬ್ಬ ವಿಜ್ಞಾನಿ. ಅಂತರಿಕ್ಷಯಾನ ವಿಜ್ಞಾನಿ. ಅವರಲ್ಲೊಬ್ಬ ಉಪನ್ಯಾಸಕನಿದ್ದ, ಗಣಿತಜ್ಞ, ತಮಿಳು ಕವಿ, ಲೇಖಕ, ವೀಣಾವಾದಕ. ನಮ್ಮ ದೇಶದ ಪ್ರತಿಷ್ಠಿತ ಸಂಸ್ಥೆಗಳಾದ DRDO ಹಾಗೂ ಇಸ್ರೋ ಸಂಸ್ಥೆಗಳ ಹೆಮ್ಮೆಯ ವಿಜ್ಞಾನಿ ನಮ್ಮ ಅಬ್ದುಲ್ ಕಲಾಂ. ಭಾರತದ ಮೊದಲ ಉಪಗ್ರಹ ಉಡಾವಣೆಯ ಯೋಜನಾ ನಿರ್ದೇಶಕರಾಗಿ ಯಶಸ್ವಿಯಾದವರು. ಭಾರತದ ಅಣುಬಾಂಬ್ ಹಾಗೂ ಕ್ಷಿಪಣಿಗಳ ಜನಕನೆಂದೇ ಖ್ಯಾತ ರಾದವರು. 1998 ರಲ್ಲಿ ಪೋಖ್ರಾನ್ 2 ನ್ಯೂಕ್ಲಿಯರ್ ಪರೀಕ್ಷೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದವರು ಕಲಾಂರವರು. 1997 ರಲ್ಲಿ ಅರ್ಹವಾಗಿಯೇ ಭಾರತರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಮ್ಮ ದೇಶ ಕಂಡ ಕೆಲವೇ ಕೆಲವು ಕ್ರಿಯಾಶೀಲ ರಾಷ್ಟ್ರಪತಿಗಳಲ್ಲಿ ಅಬ್ದುಲ್ ಕಲಾಂರವರು ಒಬ್ಬರು. ತಮ್ಮ ಎಂದಿನ ಸರಳತೆಯನ್ನು ರಾಷ್ಟ್ರಪತಿಯಾಗಿದ್ದಾಗಲೂ ನಿಭಾಯಿಸಿ ಜನಮನ್ನಣೆಗೆ ಪಾತ್ರರಾಗಿದ್ದರು. ತಮ್ಮ ಭಾಷಣಗಳಿಂದ , ಉಪನ್ಯಾಸಗಳಿಂದ ಖ್ಯಾತರಾಗಿದ್ದರು. ತಮ್ಮ ಕೊನೆಯ ಉಸಿರನ್ನು ಕೂಡ ಭಾಷಣ ಮಾಡುತ್ತಿದ್ದಂತೆ ವೇಧಿಕೆಯಲ್ಲೇ ಪ್ರಾಣ ತ್ಯಾಗ ಮಾಡಿದರು.

Advertisement

ಮಕ್ಕಳ ಪ್ರೀತಿಯ ಕಲಾಂ ಅಜ್ಜ ಆಗಿದ್ದರು. ಇಂದು ಅವರ ಹುಟ್ಟು ಹಬ್ಬ. ಅವರ ಹುಟ್ಟುಹಬ್ಬವನ್ನು ಮಕ್ಕಳ ಹಬ್ಬವಾಗಿ ಆಚರಿಸುವುದರಲ್ಲಿ ನಿಜವಾಗಿಯೂ ಒಂದು ಅರ್ಥವಿದೆಯಲ್ಲವೇ.?!
 

#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಅಡಿಕೆ ಮಾರುಕಟ್ಟೆ ಏನಾಗುತ್ತಿದೆ…? | 500 ರೂಪಾಯಿ ಯಾವಾಗ ಆಗುತ್ತೆ…?
July 17, 2025
6:27 AM
by: ಮಹೇಶ್ ಪುಚ್ಚಪ್ಪಾಡಿ
ಕರಾವಳಿ ಕರ್ನಾಟಕ, ಕೇರಳ ಭಾರೀ ಮಳೆ ಸಾಧ್ಯತೆ
July 16, 2025
10:18 PM
by: The Rural Mirror ಸುದ್ದಿಜಾಲ
ಕರಾವಳಿ-ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ | ಶಾಲೆಗಳಿಗೆ ಜು.17 ರಂದು ರಜೆ
July 16, 2025
10:07 PM
by: The Rural Mirror ಸುದ್ದಿಜಾಲ
ಗ್ರಾಮೀಣಾಭಿವೃದ್ಧಿಯೇ ನಮ್ಮ ಗುರಿ ಎಂದ ಶಾಲಿನಿ ರಜನೀಶ್
July 16, 2025
9:24 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group