ಅಭ್ಯಂಗ -ಮಸಾಜ್…. ಇದು ಪಂಚಕರ್ಮ ಚಿಕಿತ್ಸೆಯ ಒಂದು ವಿಧಾನ | ಇದರಿಂದಾಗುವ ಪ್ರಯೋಜನಗಳೇನು..? |

November 30, 2023
1:03 PM
ಅಭ್ಯಂಗ -ಮಸಾಜ್ ಬಗ್ಗೆ ಡಾ.ಜ್ಯೋತಿ ಬರೆದಿದ್ದಾರೆ...

ಆಧುನಿಕ ಜೀವನ ಶೈಲಿ(Modern life style), ಸತ್ವವಲ್ಲದ ಆಹಾರ, ಶ್ರಮವಿಲ್ಲದ ದುಡಿಮೆ, ಇದರಿಂದಾಗಿ ಕೀಲು ನೋವು ಹಾಗೂ ಸಂಧಿವಾತ ಕಾಯಿಲೆಗಳು(Joint pain and rheumatic diseases) ಹೆಚ್ಚಾಗುತ್ತಿದ್ದು, ವಯಸ್ಸಿನ ಭೇದವಿಲ್ಲದೆ ಎಲ್ಲರನ್ನೂ ಬಾಧಿಸುತ್ತಿದೆ. ಈ ಕಾಯಿಲೆಗಳು ತೀವ್ರ ಸ್ವರೂಪಗೊಂಡಾಗ ಅತಿಯಾದ ನೋವು ಹಾಗೂ ಹಿಂಸೆ ಅನುಭವಿಸಬೇಕಾಗುತ್ತದೆ. ಈ ಸ್ಥಿತಿಯಲ್ಲಿ ರೋಗಿಗೆ ದಿನನಿತ್ಯದ ಕಾರ್ಯಗಳಿಗೆ ಹಾಗೂ ಚಟುವಟಿಕೆಗಳಿಗೆ ಬೇರೆಯವರನ್ನು ಅವಲಂಬಿಸುವ ಅನಿವಾರ್ಯತೆ ಬಂದರೂ ಬರಬಹುದು.

Advertisement

ಈ ಸಮಸ್ಯೆಗಳಿಂದ ಮುಕ್ತರಾಗಲು ಅಭ್ಯಂಗ ಚಿಕಿತ್ಸೆ(Abhyanga therapy)ಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇದೊಂದು ಸಾಮಾನ್ಯವಾದ ಪಂಚಕರ್ಮದ(Panchakarma) ಒಂದು ಚಿಕಿತ್ಸಾ ವಿಧಾನವಾಗಿದೆ. ಸರ್ವಾಂಗ ಮತ್ತು ಏಕಾಂಗ ಅಥವಾ ಸ್ಥಾನಿಕ ಅಭ್ಯಂಗ ಅಂತ ಎರಡು ವಿಧಗಳನ್ನಾಗಿ ಈ ಚಿಕಿತ್ಸೆ ನೀಡಲಾಗುವುದು. ಯಾವ ಭಾಗ ತೊಂದರೆಗೆ ಒಳಪಟ್ಟಿದೆಯೋ ಅಥವಾ ಎಲ್ಲೆಲ್ಲಿ ನೋವು ಗಳಿವೆಯೋ ಆ ಜಾಗಕ್ಕೆ ಮಾತ್ರ ಅಭ್ಯಂಗ ಮಾಡಬಹುದು ಅದನ್ನು ಏಕಾಂಗ ಅಥವಾ ಸ್ಥಾನಿಕ ಅಭ್ಯಂಗ ಎನ್ನುತ್ತೇವೆ. ಸರ್ವಾಂಗ ಅಭ್ಯಂಗ ಅಂದರೆ ಇಡೀ ದೇಹಕ್ಕೆ ಮಸಾಜ್ ಮಾಡುವಂತದ್ದು. ರೋಗದ ತೀವ್ರತೆಗೆ ಅನುಸಾರವಾಗಿ ಆಯುರ್ವೇದ ಗಿಡ ಮೂಲಿಕೆಗಳಿಂದ ತಯಾರಿಸಿದ ತೈಲಗಳನ್ನು ಅಭ್ಯಂಗ ಮಾಡಲು ಉಪಯೋಗಿಸಲಾಗುತ್ತದೆ. ಆಯುರ್ವೇದ ಚಿಕಿತ್ಸಾ ಪದ್ದತಿಯಲ್ಲಿ ಇದು ಎಲ್ಲಾ ಪಂಚಕರ್ಮ ಚಿಕಿತ್ಸೆಯ ಪೂರ್ವ ಕರ್ಮವಾಗಿ ಬಳಸಲಾಗುತ್ತದೆ.

ಅಭ್ಯಂಗವು ಕೇವಲ ನೋವು ನಿವಾರಕವಲ್ಲದೇ ಸಾಮಾನ್ಯ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ರೋಗ ಬರದಂತೆ ಮಾಡಬಹುದಾದ ಸರಳ ಚಿಕಿತ್ಸಾ ವಿಧಾನ. ಅಭ್ಯಂಗ ಮಾಡಿಕೊಳ್ಳುವುದರಿಂದ ಮೆದುಳಿನ ನರಗಳು ಪ್ರಚೋದಿತಗೊಂಡು ತಮ್ಮ ಕಾರ್ಯವನ್ನು ತ್ವರಿತಗೊಳಿಸುತ್ತದೆ ಆದ್ದರಿಂದ ಇದನ್ನು Gate controll Therapy ಎಂದು ಹೇಳಿದ್ದಾರೆ. ಕೇವಲ ಶಾರೀರಿಕ ಸಮಸ್ಯೆಗಳನ್ನು ಹೋಗಲಾಡಿಸುವುದಲ್ಲದೆ ಮಾನಸಿಕ ಒತ್ತಡವನ್ನು(Mental stress) ಕಡಿಮೆ ಮಾಡುವುದರಲ್ಲಿ ಅಭ್ಯಂಗವು ಮಹತ್ತರ ಪಾತ್ರವನ್ನು ವಹಿಸುತ್ತದೆ. ಈ ಚಿಕಿತ್ಸೆಯನ್ನು ಯಾವ ವಯಸ್ಸಿನಲ್ಲೂ ಮಾಡಬಹುದು ಸಾಮಾನ್ಯವಾಗಿ 30 ರಿಂದ 45 ನಿಮಿಷದವರೆಗೆ ಮಾಡಲಾಗುತ್ತದೆ ಇದೇ ರೀತಿ ಶಿರೋಭ್ಯಂಗ, ಪಾದಅಭ್ಯಂಗಗಳನ್ನು ಮಾಡಲಾಗುವುದು.

ಅಭ್ಯಂಗ….ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಚರ್ಮವನ್ನು ಮೃದುವಾಗಿರಿಸುವುದರ ಜೊತೆಗೆ ಸೌಂದರ್ಯವನ್ನು ಕಾಪಾಡುತ್ತದೆ. ಸಾಮಾನ್ಯವಾಗಿ ಕಂಡುಬರುವಂತಹ ಪಕ್ಷಾಘಾತ, ಬೆನ್ನು ನೋವು, ಸಂಧಿವಾತ ಮೊದಲಾದ ವಾತರೋಗಗಳಲ್ಲಿ ಅಭ್ಯಂಗ ಚಿಕಿತ್ಸೆಯು ಬಹಳ ಉತ್ತಮವಾದ ವಿಧಾನವಾಗಿದೆ. ಕೇವಲ ರೋಗಿಗಳಲ್ಲದೆ ಆರೋಗ್ಯವಂತರು ಈ ಚಿಕಿತ್ಸೆಯನ್ನು ರೋಗ ಬರದಂತೆಯೂ ಸಹ ತೆಗೆದುಕೊಳ್ಳಬಹುದು. ಎಲ್ಲ ಪಂಚಕರ್ಮ ಚಿಕಿತ್ಸೆಯನ್ನು ವೈದ್ಯರೊಂದಿಗೆ ಸಮಾಲೋಚಿಸಿ ನುರಿತ ವೈದ್ಯರ ಸಮ್ಮುಖದಲ್ಲಿ ತೆಗೆದುಕೊಳ್ಳುವುದು ಉತ್ತಮ.

ಬರಹ :
ಡಾ.ಜ್ಯೋತಿ
, ಆಯುರ್ವೇದ ವೈದ್ಯರು

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಾಷ್ಟ್ರೀಯ ಭದ್ರತೆ | ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ | ಹಲವು ವಿಷಯಗಳ ಕುರಿತು ಚರ್ಚೆ
May 8, 2025
8:57 PM
by: The Rural Mirror ಸುದ್ದಿಜಾಲ
ರಾಜ್ಯದ 6 ಜಿಲ್ಲೆಗಳಲ್ಲಿ ಶೀಥಲೀಕರಣ ಘಟಕ ನಿರ್ಮಾಣ
May 8, 2025
8:46 PM
by: The Rural Mirror ಸುದ್ದಿಜಾಲ
ಕೇಂದ್ರದ ಬೆಂಬಲಕ್ಕಾಗಿ  ವಿಶೇಷ ಜಾಥಾ | ಪಕ್ಷಾತೀತವಾಗಿ  ಬೆಂಬಲ
May 8, 2025
8:32 PM
by: The Rural Mirror ಸುದ್ದಿಜಾಲ
ಆಪರೇಷನ್ ಸಿಂದೂರ ಕಾರ್ಯಾಚರಣೆ | ಸರ್ವ ಪಕ್ಷಗಳ ಸಭೆಯಲ್ಲಿ ಬೆಂಬಲ |
May 8, 2025
8:25 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group