ಅರವತ್ತು ಪ್ಲಸ್ ವಯಸ್ಸಿನವರ ಕುರಿತಾಗಿ ಇತ್ತೀಚಿನ ಸಮೀಕ್ಷೆಯಲ್ಲಿ ಬಹಿರಂಗವಾದ ವಿಷಯಗಳು…! |

November 6, 2023
10:53 AM

ಒಂದು ಮನೆಯಲ್ಲಿ ಹಿರಿಯರು ಇದ್ದರೆ ಅದು ಒಂದು ಮಾಣಿಕ್ಯಕ್ಕೆ ಸಮಾ ಅನ್ನುವ ಮಾತಿತ್ತು. ಹಿರಿಯರು(Old age) ಅಂದರೆ 80, 90, 100 ವಯಸ್ಸು ದಾಟಿದ ಹಣ್ಣು ಹಣ್ಣು ಮುದುಕರು. ಅವರು ಮನೆಯಲ್ಲಿದ್ರೆನೇ ಚಂದ. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳನ್ನು ಸಾಕುತ್ತಾ ಸಲಹುತ್ತಾ, ಒಂದಷ್ಟು ಧೈರ್ಯ, ಸಲಹೆಗಳನ್ನು ನೀಡುತ್ತಿದ್ದರೆ ಆ ಮನೆ ಸ್ವರ್ಗ. ಆದರೆ ಇತ್ತೀಚೆಗೆ ಅಂತ ಹಿರಿಯರು ಹೆಚ್ಚಿನ ಮನೆಗಳಲ್ಲಿ ಕಾಣ ಸಿಗುವುದು ಅಪರೂಪ. ತೊಂಬತ್ತು, ನೂರು ವರ್ಷ ಬದುಕುತಿದ್ದ ಮನುಷ್ಯರ ಆಯಸ್ಸು ಇದೀಗ 60-70 ಕ್ಕೆ ಬಂದು ನಿಂತಿದೆ. ಅದು ತೀರಾ ಅನಾರೋಗ್ಯ (Illness)ಪೀಡಿತರಾಗಿ. ನಮ್ಮ ಆಯಸ್ಸನ್ನು ವೃದ್ಧಿಸಿಕೊಳ್ಳಲಿಕ್ಕಾಗಿ ಮನೋವೈದ್ಯರು(Psychiatrist) ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದ್ದಾರೆ ನೋಡಿ.

Advertisement
Advertisement
11% ರಷ್ಟು ಮಂದಿ ಮಾತ್ರ 60 ವರ್ಷ ದಾಟುತ್ತಿದ್ದಾರೆ. 
7% ರಷ್ಟು ಮಾತ್ರ 65 ರಿಂದ 70 ಕ್ಕೆ ತಲುಪಬಹುದು.
5% ಮಾತ್ರ 80 ತಲುಪಲು ಸಾಧ್ಯವಾಗುತ್ತದೆ.
3% ಮಾತ್ರ 80 ದಾಟಬಹುದು.

50-55 ವರ್ಷಕ್ಕಿಂತ ಮೇಲ್ಪಟ್ಟ ಜನರು ಸಹ ಈ ಅಂಶಗಳನ್ನು ಗಮನಿಸಬೇಕು:

ಆದರೂ..,,, ಚಿಂತೆ ಮುಕ್ತ ಮತ್ತು ಉದ್ವೇಗ ಮುಕ್ತ ಜೀವನಕ್ಕಾಗಿ ಈ ಸರಳ ತತ್ವಗಳನ್ನು ಅನುಸರಿಸಿ..
1) ಸಂತೋಷವು(Happy) ಅರ್ಧ ಶಕ್ತಿ.. ಯಾವಾಗಲೂ ಸಂತೋಷವಾಗಿರಲು ಪ್ರಯತ್ನಿಸಿ..
2) ಕೋಪ, ದ್ವೇಷ, ಕ್ರೋಧ, ಅಹಂಕಾರ.. ಈ ದುಶ್ಚಟಗಳನ್ನು ಬಿಡಿ..
3) ಸಿಹಿ(Sweet) ಮತ್ತು ಉಪ್ಪನ್ನು(Salt) ಸಾಧ್ಯವಾದಷ್ಟೂ ಕಡಿಮೆ ಮಾಡಿ.
4) ದೇವರಲ್ಲಿ ನಿಮ್ಮ ನಂಬಿಕೆಯನ್ನು ಹೆಚ್ಚಿಸಿಕೊಳ್ಳಿ.
5) ಹೊಟ್ಟೆಯಲ್ಲಿ ಯಾವಾಗಲೂ ನೀರು ಇರುವಂತೆ ನೋಡಿಕೊಳ್ಳಿ, ಮೂತ್ರ ವಿಸರ್ಜನೆಯ ನಂತರ ಅರ್ಧ ಲೋಟ ಒಳ್ಳೆಯ ನೀರು ಕುಡಿಯಲು ಮರೆಯದಿರಿ.
6) ವ್ಯಾಯಾಮ, ನಡಿಗೆ, ಸೈಕ್ಲಿಂಗ್.. ಇವುಗಳಲ್ಲಿ ಒಂದೆರಡನ್ನಾದರೂ ನಿಯಮಿತವಾಗಿ ಮಾಡಿ.
7) ಪ್ರತಿ ಅರ್ಧಗಂಟೆಗೆ ಕದಲಿಕೆಗಳಿರುವಂತೆ (ಜಡವಾಗಿ ಕೂತಿರದೆ)ಖಚಿತಪಡಿಸಿಕೊಳ್ಳಿ.
8) ಬದುಕಲು ತಿನ್ನಿರಿ, ತಿನ್ನುವುದಕ್ಕಾಗಿಯೇ ಬದುಕದಿರಿ - ಜಿಡ್ಡಿನ,ಕುರುಕಲು ತಿಂಡಿಗಳನ್ನು ಕಡಿಮೆ ಮಾಡಿ ಪ್ರೋಟೀನ್ಗಳು ಮತ್ತು ವಿಟಮಿನ್ಗಳು ಹೆಚ್ಚು ಇರುವ ಆಹಾರ ತೆಗೆದುಕೊಳ್ಳಿ.
9) ದಿನಕ್ಕೆ ಮೂರು ಬಾರಿಗಿಂತ ಕಾಫಿ ಅಥವಾ ಚಹಾವನ್ನು ತೆಗೆದುಕೊಳ್ಳಬೇಡಿ (ಅದೂ ನಿಮಗೆ ಅಭ್ಯಾಸವಿದ್ದರೆ).
10) ಮೋಹ,ವ್ಯಾಮೋಹಗಳನ್ನು ಬಿಡಿ.
11) ಆರೋಗ್ಯ ಅನುಮತಿಸುವವರೆಗೆ ವರ್ಷಕ್ಕೆ ಎರಡು ಬಾರಿ ಚಿಕ್ಕ ಚಿಕ್ಕ ಪ್ರವಾಸಗಳನ್ನು ಮಾಡಿ. ವಿದೇಶಿ ಪ್ರವಾಸಗಳನ್ನು ಕಡಿಮೆ ಮಾಡಿ.
12) ಯಾರನ್ನೂ ಟೀಕಿಸಬೇಡಿ ಮತ್ತು ದ್ವೇಷಿಸಬೇಡಿ.
13) ಮಕ್ಕಳು ಬೆಳೆದಿರುತ್ತಾರೆ,ಅವರ ವಿಷಯಗಳಲ್ಲಿ ಮೂಗು ತೂರಿಸದಿರಿ. ಸಲಹೆಗಳನ್ನು ಕೇಳಿದಾಗ ಮಾತ್ರ ನೀಡಿ..
14) ಲಭ್ಯವಿದ್ದರೆ ಧ್ಯಾನ ಕೇಂದ್ರಗಳಿಗೆ ಹೋಗಿ.
15) ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ.
16) ನಿಮ್ಮಲ್ಲಿರುವ ಹವ್ಯಾಸಗಳನ್ನು(hobby) ಬೆಳೆಸಿಕೊಳ್ಳಿ. ಮೆದುಳನ್ನು ಹರಿತಗೊಳಿಸುವ ಪದಬಂಧ, ಸುಡೋಕು ಪೂರೈಸುವುದನ್ನು ಮುಂದುವರಿಸಿ.
17) ನಿಮ್ಮ ಆಯ್ಕೆಯ ಪುಸ್ತಕಗಳನ್ನು ವೀಕ್ಷಿಸಿ/ಓದಿ..
18) ಬೆಂಬಲವಿಲ್ಲದೆ ಮೆಟ್ಟಿಲುಗಳನ್ನು ಹತ್ತಿ ಇಳಿಯಬೇಡಿ.. ಎಸ್ಕಲೇಟರ್‌ಗಳನ್ನು ಬಳಸಬೇಡಿ..
19) ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿ ಮತ್ತು ವೈದ್ಯರ ಸಲಹೆಯನ್ನು ಅನುಸರಿಸಿ.
20) ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳಿ ಮತ್ತು ಅವುಗಳನ್ನು ನಿಮ್ಮ ಹಿರಿಯರೊಂದಿಗೆ ಹಂಚಿಕೊಳ್ಳಿ.
21) ಕೊನೆಯದಾಗಿ ಯಾವಾಗಲೂ ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಳ್ಳಿ.

ಇವು ಮನೋವೈದ್ಯರು ನೀಡಿದ ಸೂತ್ರಗಳ ಸಂಗ್ರಹವಾಗಿದೆ, ನಿಮ್ಮ ಒಳಿತಿಗಾಗಿ ಪಾಲಿಸಿ….

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ ಕಾಯಿದೆ ಜಾರಿಗೆ ತರಲು ಆಗ್ರಹ | ದಾವಣಗೆರೆಯಲ್ಲಿ ರೈತರ ಪ್ರತಿಭಟನೆ
May 19, 2025
9:05 PM
by: The Rural Mirror ಸುದ್ದಿಜಾಲ
ಅತೀ ಹೆಚ್ಚು ಪ್ರಮಾಣದ ತೊಗರಿ ಖರೀದಿಸಿದ ವಿಜಯಪುರ ಜಿಲ್ಲೆ
May 19, 2025
8:59 PM
by: The Rural Mirror ಸುದ್ದಿಜಾಲ
ಮಳೆಗೆ ರಾಜಧಾನಿ ಬೆಂಗಳೂರು ಅಸ್ತವ್ಯಸ್ತ | ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ | ಕೋಲಾರದಲ್ಲಿ ಬೆಳೆ ನಷ್ಟ | ಚಿಕ್ಕಮಗಳೂರಿನಲ್ಲಿ ನಿರಂತರ ಮಳೆ
May 19, 2025
8:46 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 19-05-2025 | ಮೇ 24 ರಿಂದ ಮುಂಗಾರು ಮಳೆ ಉತ್ತಮವಾಗಿ ಆರಂಭವಾಗುವ ಲಕ್ಷಣ
May 19, 2025
11:35 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group