ಸುಳ್ಯ : ಕ್ಯಾಂಪಸ್ ಫ್ರಂಟ್‌ ಕಾರ್ಯಕರ್ತರ ವರ್ತನೆಗೆ ಎಬಿವಿಪಿ ಖಂಡನೆ

April 22, 2021
8:30 AM
ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ನಿಯಮ ಉಲ್ಲಂಘಿಸಿದ ಬಗ್ಗೆ ಧಾರ್ಮಿಕ ವಿಚಾರ ಮುಂದಿಟ್ಟು ಕ್ಯಾಂಪಸ್ ಫ್ರಂಟ್‌ ಕಾರ್ಯಕರ್ತರ ವರ್ತನೆಯನ್ನು ಎಬಿವಿಪಿ ಖಂಡಿಸಿದೆ.
ಕಾಲೇಜು ಆವರಣದಲ್ಲಿ ಗೊಂದಲವನ್ನು ಸೃಷ್ಟಿಸಿದ ಕ್ಯಾಂಪಸ್ ಫ್ರಂಟ್‌ ಪ್ರಮುಖರು ಅನಾಗರಿಕ ವರ್ತನೆ ತೋರಿದ್ದಾರೆ. ಕ್ಯಾಂಪಸ್ ಫ್ರಂಟ್‌ನ ಕಾರ್ಯಕರ್ತರೆಂದು ಹೇಳಿಕೊಳ್ಳುವ ವ್ಯಕ್ತಿಗಳು ಕಾಲೇಜಿನ ಆವರಣಕ್ಕೆ ಅಕ್ರಮ ಪ್ರವೇಶ ಮಾಡಿ ಕಾಲೇಜಿನ ಗೇಟಿಗೆ ಬೀಗ ಹಾಕಿ ಪರೀಕ್ಷಾ ಸಮಯದಲ್ಲಿ ದಾಂಧಲೆ ನಡೆಸಿ ಗೊಂದಲ ಹುಟ್ಟಿಸಿರುವುದು ಕಾನೂನು ಬಾಹಿರವಾಗಿರುತ್ತದೆ. ಕಾಲೇಜಿಗೆ ಬರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಸಮಾನ ರೀತಿಯ ನೀತಿ ನಿಯಮಗಳಿದ್ದು, ಅದನ್ನು ಉಲ್ಲಂಘಿಸುವ ಯಾವುದೇ ವಿದ್ಯಾರ್ಥಿನಿಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವರೇ ಆಡಳಿತ ಮಂಡಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ನಮ್ಮ ವಿದ್ಯಾರ್ಥಿ ಪರಿಷತ್ತು ಘಟಕ ಬೆಂಬಲಿಸುತ್ತದೆ ಎಂದು ಎಬಿವಿಪಿ ಪ್ರಕಟಣೆ ತಿಳಿಸಿದೆ.
ಈ ವಿಚಾರದ ಬಗ್ಗೆ ಕೆ.ವಿ.ಜಿ.ಕಾನೂನು ಕಾಲೇಜು ಆಡಳಿತ ಮಂಡಳಿ ಕಾಲೇಜಿನ ನಿಯಮವನ್ನು ಉಲ್ಲಂಘನೆ ಮಾಡಿ, ಕೋಮು ಭಾವನೆಯನ್ನು ಕೆರಳಿಸಲು ವರ್ತಿಸುವವರ ವಿರುದ್ಧ ಯಾವುದೇ ಪ್ರಭಾವ ಮತ್ತು ಬೆದರಿಕೆಗೆ ಬಗ್ಗದೆ ಕಠಿಣ ನಿಲುವನ್ನು ವ್ಯಕ್ತಪಡಿಸಬೇಕು. ಶಿಕ್ಷಣ ಸಂಸ್ಥೆಯ ಮತ್ತು ಶೈಕ್ಷಣಿಕ ನಿಯಮಗಳಿಗೆ ವಿದ್ಯಾರ್ಥಿಗಳ ಭಾವನೆಗಳಿಗೆ ಕುಂದು ಉಂಟಾದಾಗ ಅದರ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಹೋರಾಟಕ್ಕೆ ಸದಾ ಸಿದ್ಧವಾಗಿರುತ್ತದೆ ಎಂದು ಕೆ.ವಿ.ಜಿ ಕಾನೂನು ಕಾಲೇಜು ಅ.ಭಾ.ವಿ.ಪ. ಘಟಕದ ಕಾರ್ಯದರ್ಶಿ ಕಾರ್ತಿಕ್ ಬದಿವನ ಹೇಳಿಕೆಯಲ್ಲಿ ತಿಳಿಸಿದ್ದಾರೆ
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸುಸ್ಥಿರ ಕೃಷಿ ತರಬೇತಿ ಕಾರ್ಯಗಾರ : ಯುವ ಕೃಷಿಕರಿಗೆ ಕೃಷಿ ಬಗ್ಗೆ ಉಪಯುಕ್ತ ಮಾಹಿತಿ
May 16, 2024
5:58 PM
by: The Rural Mirror ಸುದ್ದಿಜಾಲ
ಕೆರೆಯಲ್ಲಿ ಸಾಕಿದ್ದ ಮೀನುಗಳ ಮಾರಣಹೋಮ | ಬೃಹತ್‌ ಗಾತ್ರ ಮೀನು ಸಾವು | ಅಪಾರ ನಷ್ಟ |
May 16, 2024
5:43 PM
by: The Rural Mirror ಸುದ್ದಿಜಾಲ
ಮೇ 31ಕ್ಕೆ ದೇಶದಲ್ಲಿ ಮುಂಗಾರು ಪ್ರವೇಶ ಸಾಧ್ಯತೆ | ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಮಳೆ |
May 16, 2024
5:23 PM
by: The Rural Mirror ಸುದ್ದಿಜಾಲ
ಭಾರತ ಚಂದ್ರನಂಗಳದಲ್ಲಿದೆ | ನಮ್ಮ ಮಕ್ಕಳು ಚರಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ | ಪಾಕ್ ಸಂಸದ ಪಾಕ್‌ ಆಡಳಿತ ವಿರುದ್ಧ ಕಿಡಿ
May 16, 2024
5:06 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror