ಹಲವು ಬಗೆಯ ಸುರಕ್ಷತಾ ಹೆಲ್ಮೆಟ್‌ಗಳು ಇದೆ. ಆದರೆ ಇದೀಗ ಹವಾನಿಯಂತ್ರಿತ ಸುರಕ್ಷತಾ ಹೆಲ್ಮೆಟ್ ಇದೀಗ ಲಭ್ಯವಾಗುತ್ತಿದೆ. ವಿಶ್ವದಲ್ಲೇ ಮೊಟ್ಟ ಮೊದಲ ಎಸಿ ಸುರಕ್ಷತಾ ಹೆಲ್ಮೆಟ್ ಎನ್ನಲಾಗಿದೆ. ಈ ಸುರಕ್ಷತಾ ಹೆಲ್ಮೆಟ್ ವಿಶೇಷತೆಗಳು ಅಚ್ಚರಿ ಮೂಡಿಸುವಂತಿದ್ದು, ಭಾರತೀಯ ಮೂಲಕದ ಸ್ಟಾರ್ಟ್ ಅಪ್ ಕಂಪನಿಯು ಇದನ್ನು ಪರಿಚಯಿಸಿದೆ.
ದುಬೈನ ಎಕ್ಸ್‌ಪೋ 2020 ರಲ್ಲಿ ಭಾರತೀಯ ಪೆವಿಲಿಯನ್‌ನಲ್ಲಿ ಈ ಎಸಿ ಹೆಲ್ಮೆಟ್ ಅನಾವರಣಗೊಳಿಸಲಾಗಿದೆ. ಈ ಹೆಲ್ಮೆಟ್‌ಗಳ ಶ್ರೇಣಿಯನ್ನು ಭಾರತದ ಸ್ಟಾರ್ಟ್ ಅಪ್ ಕಂಪನಿ ಜಾರ್ಶ್ ಸೇಫ್ಟಿ ಅಭಿವೃದ್ಧಿಪಡಿಸಿದೆ. ದುಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಂಪನಿಯಾದ ಎಲೆಕ್ಟ್ರಾನಿಕ್ಸ್ ವಿತರಕ ಎನ್‌ಐಎ ಲಿಮಿಟೆಡ್ ಅನಾವರಣಗೊಳಿಸಿದೆ. ಇದು ಮುಖದ ಶೀಲ್ಡ್‌ನೊಂದಿಗೆ ಸಂಪೂರ್ಣವಾದ ವಿಶೇಷ ವೆಲ್ಡಿಂಗ್ ಹೆಲ್ಮೆಟ್ಟುಗಳು ನಾಲ್ಕು ಮಾರ್ಪಾಡುಗಳ ರಚನೆ ಪಡೆದಿದೆ.
ಮುಖ್ಯವಾಗಿ ಈ ಹೆಲ್ಮೆಟ್ ವಿವಿಧ ಫ್ಯಾಕ್ಟರಿಗಳಲ್ಲಿನ ಮೆಷಿನ್ ಆಪರೇಟರ್‌ಗಳು, ನುರಿತ ತಂತ್ರಜ್ಞರು, ಸೈಟ್ ಮ್ಯಾನೇಜರ್‌ಗಳು, ಹಾಗೆಯೇ ಅಧಿಕ ಉಷ್ಣತೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಇದು ಬಹಳ ಉಪಯುಕ್ತವಾಗಿದೆ ಎಂದು ಕಂಪನಿ ಹೇಳಿದೆ. ಈ ಹೆಲ್ಮೆಟ್ ಆವಿಷ್ಕಾರ ಮಾಡಿರುವ ಕೌಸ್ತುಬ್ ಕೌಂಡಿನ್ಯ, ಶ್ರೀಕಾಂತ್ ಕೊಮ್ಮುಲಾ ಮತ್ತು ಆನಂದ್ ಕುಮಾರ್ ಅವರು 2016 ರಲ್ಲಿ ಬಿಸಿ ವಾತಾವರಣದಲ್ಲಿ ಸುರಕ್ಷತಾ ಹೆಲ್ಮೆಟ್‌ಗಳನ್ನು ಬಳಸುವಾಗ ಅಸ್ವಸ್ಥತೆ ಅನುಭವಿಸಿದ ನಂತರ ಜಾರ್ಶ್ ಎಸಿ ಹೆಲ್ಮೆಟ್‌ನ ಮೂಲ ಮಾದರಿಯನ್ನು ತಯಾರಿಸಿದರು. ಇದನ್ನು ಅಭಿವೃದ್ಧಿಪಡಿಸಲು ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ಸಂಶೋಧನೆಯನ್ನು ತೆಗೆದುಕೊಂಡಿದೆ ಎಂದು ಕೌಸ್ತುಬ್ ಕೌಂಡಿನ್ಯ ಹೇಳಿದರು.
ಇದರಲ್ಲಿ ಯಾವುದೇ ಶೀತಕ ದ್ರವಗಳನ್ನು ಬಳಸಲಾಗುವುದಿಲ್ಲ, ಬದಲಾಗಿ ತಂಪಾದ ಗಾಳಿಯನ್ನು ಪ್ರಸಾರ ಮಾಡುವ ತಂತ್ರಜ್ಞಾನ ಅಳವಡಿಸಲಾಗಿದೆ. ಹೆಲ್ಮೆಟ್‌ನ ಟರ್ಬೊ ಕೂಲಿಂಗ್ ಹೆಲ್ಮೆಟ್‌ನೊಳಗಿನ ತಾಪಮಾನವನ್ನು ಮೂರರಿಂದ ಐದು ನಿಮಿಷಗಳಲ್ಲಿ ಕೇವಲ 15 ಡಿಗ್ರಿ ಸೆಲ್ಸಿಯಸ್‌ಗೆ ತಗ್ಗಿಸುತ್ತದೆ, ಹವಾನಿಯಂತ್ರಿತ ಹೆಲ್ಮೆಟ್‌ನಲ್ಲಿ ಒಂದೇ ಚಾರ್ಜ್ ಸುಮಾರು 10 ಗಂಟೆಗಳ ವರೆಗೆ ಇರುತ್ತದೆ.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…