ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಚುರುಕುಗೊಂಡ ಮುಂಗಾರು | ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಜನ ಜೀವನ ಅಸ್ತವ್ಯಸ್ಥ

July 5, 2024
11:15 AM

ರಾಜ್ಯದಾದ್ಯಂತ ಮುಂಗಾರು ಮಳೆ(Mansoon Rain) ಚುರುಕುಗೊಳ್ಳದಿದ್ದರೂ,ಮಡಿಕೇರಿ(Madikeri) ಉತ್ತರ ಕನ್ನಡ(Uttar kannada), ಉಡುಪಿ(Udupi), ಮಂಗಳೂರು (Mangaluru) ಸೇರಿದಂತೆ ಮಲೆನಾಡು, ಕರಾವಳಿ(coastal) ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು (Rain) ಹಲವೆಡೆ ಜನ ಜೀವನ ಅಸ್ತವ್ಯಸ್ಥವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ ನದಿ ನೀರು ಹೆಚ್ಚಳವಾಗಿ ಅಂಕೋಲ ತಾಲೂಕಿನ ಬಿಳೆಹೊಂಗಿ, ಹೊನ್ನೆಬೈಲು, ಮಂಜುಗುಣಿಯಲ್ಲಿ ರಸ್ತೆ ಮತ್ತು ಮನೆಗಳು ಜಲಾವೃತವಾಗಿವೆ. ಹೊನ್ನೆಬೈಲಿನಲ್ಲಿ 20 ಮನೆ ಜಲಾವೃತವಾಗಿದ್ದು, ಬಿಳೆಹೊಂಗಿ, ಹೊನ್ನೆಬೈಲು, ಶಿಂಗನಮಕ್ಕಿ ಮಂಜುಗುಣಿ ಶಾಲೆಗಳಲ್ಲಿ ಕಾಳಜಿ ಕೇಂದ್ರವನ್ನು ಜಿಲ್ಲಾಡಳಿತ ತೆರೆದಿದೆ.

Advertisement
Advertisement
ಉಡುಪಿ (Udupi) ಜಿಲ್ಲೆಯ ಬೈಂದೂರು ತಾಲೂಕಿನ ಬಡಾಕೆರೆ ಸಾಲ್ಬುಡ ವ್ಯಾಪ್ತಿಯಲ್ಲಿ ನೆರೆ ಉಂಟಾಗಿದ್ದು, ಜನ ಮನೆಯಿಂದ ಹೊರಬರಲು ಸಿದ್ಧವಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ ಗ್ರಾಮಕ್ಕೆ ಭೇಟಿ ಕೊಟ್ಟು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದ್ದಾರೆ. ಈ ವೇಳೆ ಜನರು ಜಾನುವಾರು, ದಿನಸಿ, ಮನೆಯ ವಸ್ತುಗಳನ್ನು ಬಿಟ್ಟು ನಾವು ಬರುವುದಿಲ್ಲ ಎಂದಿದ್ದಾರೆ. ನೀರಿನ ಮಟ್ಟ ಜಾಸ್ತಿಯಾದರೆ ಅಪಾಯದ ಮಟ್ಟ ಮೀರಿದರೆ ಜನರನ್ನ ಸ್ಥಳಾಂತರಿಸುತ್ತೇವೆ ಎಂದು ಅಗ್ನಿಶಾಮಕದಳದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಭಾಗದಲ್ಲಿ ಜಿಲ್ಲಾಡಳಿತ ಶಾಲೆಗಳಿಗೆ ಮಾತ್ರ ರಜೆ ನೀಡಿದ್ದು, ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಡಳಿತ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೀವ ಕೈಯಲ್ಲಿ ಹಿಡಿದುಕೊಂಡು ದೋಣಿಯಲ್ಲಿ ಹೋಗಬೇಕಾಗುತ್ತದೆ. ನೆರೆ ಇದ್ದರೂ ರಜೆ ನೀಡಿಲ್ಲ ಓಡಾಟಕ್ಕೆ ದೋಣಿ ಇಲ್ಲ. ಸೂಕ್ತ ಮೂಲಭೂತ ಸೌಕರ್ಯ ಒದಗಿಸಿ ಎಂದು ಒತ್ತಾಯಿಸಿದ್ದಾರೆ. ಮಂಗಳೂರಿನಲ್ಲಿ ಸಮುದ್ರದ ಅಲೆಯ ಹೊಡೆತಕ್ಕೆ ನಿರ್ಮಾಣ ಹಂತದಲ್ಲಿದ್ದ ನಾಡದೋಣಿ ಮೀನಿಗಾರಿಕಾ ಜೆಟ್ಟಿ ಸಮುದ್ರ ಪಾಲಾಗಿದೆ. ಹೊರವಲಯದ ಕುಳಾಯಿ ಸಮುದ್ರ ತೀರದಲ್ಲಿ 184 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಜೆಟ್ಟಿಯ ಒಂದು ಭಾಗ ಸಮುದ್ರ ಪಾಲಾಗಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಾರೀ ಮಳೆಯಾಗುತ್ತಿದ್ದು, ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಜೋರಾಗಿ ಮಳೆ ಸುರಿಯುತ್ತಿದೆ. ಪ್ರಮುಖವಾಗಿ ಬೆಳ್ತಂಗಡಿ ಹಾಗೂ ಬಂಟ್ವಾಳದಲ್ಲಿ ಜೋರಾದ ಮಳೆಯ ಹಿನ್ನೆಲೆ ಅಂಗನವಾಡಿ, ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದೆ. ಅಲ್ಲದೇ ನದಿ ಹಾಗೂ ಸಮುದ್ರ ತೀರದ ನಿವಾಸಿಗಳು ಎಚ್ಚರಿಕೆ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ ಈ ಹಿನ್ನೆಲೆ ಕಾವೇರಿ ನದಿ ಹಾಗೂ ಹಾರಂಗಿ ಜಲಾಶಯಕ್ಕೆ ಜೀವಕಳೆ ಬಂದಿದೆ. ಮಡಿಕೇರಿ (Madikeri)  ತಾಲೂಕಿನ ಹಮ್ಮಿಹಾಲ, ಮುಟ್ಲು, ಕಾಲೂರು, ಭಾಗದಲ್ಲಿ ಹೆಚ್ಚಾಗಿ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯಕ್ಕೆ ಹೆಚ್ಚಾಗಿ ನೀರು ಹರಿದು ಬರುತ್ತಿದೆ. ಪ್ರಸ್ತುತ ಹಾರಂಗಿ ಜಲಾಶಯದಲ್ಲಿ 2,842 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

– ಅಂತರ್ಜಾಲ ಮಾಹಿತಿ

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವರ್ಷಪೂರ್ತಿ ಜನರಿಗೆ ಮಾವು, ಹಲಸು..! | ಆಹಾರ ಭದ್ರತೆಯ ಕಡೆಗೆ ಹೆಜ್ಜೆ | ಹೊಸ ರೀತಿಯ ಹಣ್ಣುಗಳ ಪರಿಚಯಕ್ಕೆ ಇಳಿದ ಬಾಂಗ್ಲಾದೇಶ |
July 7, 2024
9:08 PM
by: ದ ರೂರಲ್ ಮಿರರ್.ಕಾಂ
ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯರಿಗೆ ಪುತ್ತೂರು ‘ಗೋಪಣ್ಣ’ ಸ್ಮೃತಿ ಗೌರವ ಪ್ರದಾನ
July 7, 2024
3:23 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 07-07-2024 | ರಾಜ್ಯದ ಕೆಲವು ಕಡೆ ಸಾಮಾನ್ಯ, ಕೆಲವು ಕಡೆ ಉತ್ತಮ ಮಳೆ ನಿರೀಕ್ಷೆ |
July 7, 2024
2:43 PM
by: ಸಾಯಿಶೇಖರ್ ಕರಿಕಳ
ಬೆಳೆಗಾರರೇ, ಅಡಿಕೆ ಹಳದಿ ಎಲೆರೋಗದ ಕಾರಣದಿಂದ ಆತ್ಮಹತ್ಯೆ ಮಾಡಬೇಡಿ | ಹಾಗೆಂದು ಹೊಸ ಹೊಸ ಗೊಬ್ಬರದ ಆಮಿಷಗಳಿಗೂ ಬಲಿಯಾಗಬೇಡಿ…!
July 7, 2024
12:22 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror