ರಸ್ತೆಯಲ್ಲಿ ಮಲಗಿದ ವ್ಯಕ್ತಿಯ ಮೇಲೆ ವೇಗವಾಗಿ ಬಂದ ದ್ವಿಚಕ್ರ ವಾಹನ ಓಡಿದ ಪರಿಣಾಮ ಆಸ್ಪತ್ರೆಯಲ್ಲಿ ಗಾಯಾಳು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕೋಯಮಜಲು ಎಂಬಲ್ಲಿ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮಾರದಲ್ಲಿ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕೋಯಮಜಲು ಎಂಬಲ್ಲಿ ಭಾನುವಾರ ಸಂಜೆ ರಸ್ತೆ ಮೇಲೆ ಮಲಗಿದ ವ್ಯಕ್ತಿ ಮೇಲೆ ರೋಹಿತ್ ಎಂಬವರು ಚಲಾಯಿಸುತ್ತಿದ್ದ ಸ್ಕೂಟರ್ ಚಲಿಸಿ ರಸ್ತೆಯಲ್ಲಿ ಮಲಗಿದ್ದ ಕೃಷ್ಣಮೂರ್ತಿ ಎಂಬವರು ಗಾಯಗೊಂಡಿದ್ದರು. ವಿಡಿಯೋ ಇಲ್ಲಿದೆ…
ಗಾಯಗೊಂಡ ಅವರನ್ನು ತಕ್ಷಣವೇ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಘಟನೆಗೆ ಸ್ಕೂಟರ್ ಸವಾರನ ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿದೆ ಎಂದು ಪ್ರಕರಣ ದಾಖಲಾಗಿದೆ.#Accident pic.twitter.com/MkFz2xvJf5
— theruralmirror (@ruralmirror) September 14, 2021
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement




