ಕೃಷಿಯಲ್ಲಿ ಯುವ ರೈತನ ಸಾಧನೆ | 200 ರೂ. ಗೆ 1 ಕೆ.ಜಿ ಬೀನ್ಸ್ ಮಾರಾಟ ಮಾಡಿ 20 ಲಕ್ಷ ಬಂಪರ್‌ ಲಾಭ |

May 18, 2024
12:18 PM

ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಮಳೆ ಇಲ್ಲದೆ ಬೆಳೆ ಬೆಳೆದ ರೈತ(Farmer) ಕಂಗಾಲಾಗಿದ್ದ. ಇರುವ ನೀರಿನ ಮೂಲಗಳನ್ನು ಬಳಸಿ ಕೆಲ ರೈತರು ಬೆಳೆ ಬೆಳೆದಿದ್ದರು. ಈ ಮಧ್ಯೆ  ಬರದ ನಡುವೆಯೂ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ಯುವ ರೈತ ಗಿರೀಶ್‌, ಬೀನ್ಸ್‌ (Beans) ಬೆಳೆ ಬೆಳೆದು ಬಂಪರ್‌ ಲಾಭ(Profit) ಮಾಡಿ ಇದೀಗ ಸುದ್ದಿಯಾಗಿದ್ದಾರೆ.

Advertisement
Advertisement
ಹೌದು. ಇತ್ತೀಚೆಗೆ ರಾಜ್ಯ ಕಂಡ ಬಿಸಿಲಿನ ತಾಪಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯಷ್ಟೇ ಅಲ್ಲ, ರಾಜ್ಯದಲ್ಲಿ ಎಲ್ಲಿಯೂ ಹುರುಳಿಕಾಯಿ ಬೆಳೆಯಲು ಸಾಧ್ಯವಾಗಿಲ್ಲ. ರಣ ಬಿಸಿಲಿನ ತಾಪಮಾನಕ್ಕೆ ಹುರುಳಿಕಾಯಿ ಬೆಳೆ ಇಳುವರಿ ಬಂದಿಲ್ಲ. ಹಲವು ಕಡೆ ಬಿಸಿಲಿಗೆ ಹೂ ಬಾಡಿ ಉದುರಿ ಹೋಗಿದೆ. ಇದರಿಂದ ಹುರುಳಿಕಾಯಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಒಂದು ಕೆ.ಜಿ ಹುರುಳಿ ಬೆಲೆ ಇನ್ನೂರು ರೂಪಾಯಿಗೆ ಮಾರಾಟವಾಗುತ್ತಿದೆ. ಚಿಕ್ಕಬಳ್ಳಾಪುರ ತರಕಾರಿ ಮಾರುಕಟ್ಟೆಯಲ್ಲಿ ಖರೀದಿ ಮಾಡೋಣ ಅಂದ್ರೂ ಸಾಕಾಗುವಷ್ಟು ಬೀನ್ಸ್ ಸಿಗುತ್ತಿಲ್ಲ. ಒಂದೋ ಎರಡು ಮೂಟೆ ಬೀನ್ಸ್ ಬಂದರೆ ಅದಕ್ಕಾಗಿ ವರ್ತಕರ ನಡುವೆ ಭಾರೀ ಪೈಪೋಟಿ ಬೀಳುತ್ತಿದೆ.

ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ಗಿರೀಶ್, ಡಿಗ್ರಿ ಮುಗಿಸಿ ಖಾಸಗಿ ಕಂಪನಿಗೆ ಕೆಲಸಕ್ಕೆ ಸೇರಿಕೊಂಡಿದ್ದರು. ಬರುವ 15 ಸಾವಿರ ಸಂಬಳ ಸಾಕಾಗ್ತಾ ಇರಲಿಲ್ಲ. ಇದರಿಂದ ಕಂಪನಿ ಬಿಟ್ಟು ಊರಿಗೆ ಬಂದು ಇದ್ದ 8 ಎಕರೆ ಜಮೀನಿನಲ್ಲಿ ಎರಡು ಎಕರೆಯಲ್ಲಿ ಹುರುಳಿ ಬೀಜ ನಾಟಿ ಮಾಡಿದ್ದರು. ಕರೆಂಟ್ ಸಮಸ್ಯೆ ಇದ್ದರೂ ಜನರೇಟರ್ ಇಟ್ಟು ತೋಟಕ್ಕೆ ನೀರು ಹಾಯಿಸಿ ರಾತ್ರಿ ಹಗಲು ಕಷ್ಟ ಪಟ್ಟು ಬಂಪರ್ ಬೆಳೆ ಬೆಳೆದಿದ್ದಾರೆ.

Advertisement

ಇದೀಗ ತಾನು ಬೆಳೆದ ಬೆಳೆಗೆ ಬಂಗಾರದಂತಹ ಬೆಲೆ ಬಂದಿದ್ದು ಎರಡು ಟನ್ ಹುರಳಿಗೆ ಬರೋಬ್ಬರಿ ಇಪ್ಪತ್ತು ಲಕ್ಷ ಗಳಿಸಿದ್ದಾರೆ.  ಬರದ ನಡುವೆಯೂ ಬೀನ್ಸ್ ಬೆಳೆದ ರೈತನಿಗೆ  ಲಾಭ ಬಂದಿದ್ದು ಶ್ರಮದಾಯಕವಾಗಿ ಮಾಡಿದ ಕೃಷಿಯು ಈಗ ಕೈ ಹಿಡಿದಿದೆ.

Advertisement
  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 12-07-2024 | ಕರಾವಳಿ ಜಿಲ್ಲೆಗಳಾದ್ಯಂತ ಉತ್ತಮ ಮಳೆ ನಿರೀಕ್ಷೆ | ರಾಜ್ಯದ ವಿವಿದೆಡೆ ಸಾಮಾನ್ಯ ಮಳೆ |
July 12, 2024
2:21 PM
by: ಸಾಯಿಶೇಖರ್ ಕರಿಕಳ
ತಮಿಳುನಾಡಿನಿಂದ ಮತ್ತೆ ‘ಕಾವೇರಿ’ ಕಾಟ : ನಿತ್ಯ 1 ಟಿಎಂಸಿ ನೀರು ಹರಿಸಿ : ಕಾವೇರಿ ನೀರು ನಿಯಂತ್ರಣಾ ಸಮಿತಿ ಸೂಚನೆ
July 12, 2024
10:57 AM
by: The Rural Mirror ಸುದ್ದಿಜಾಲ
ಮಳೆಯ ನೀರನ್ನು ವಿಭಜಿಸುವ ಕರ್ನಾಟಕದ ಅದ್ಬುತ ಸ್ಥಳ
July 12, 2024
10:33 AM
by: The Rural Mirror ಸುದ್ದಿಜಾಲ
ಕಣ್ಮರೆಯಾದ ಅಚ್ಚ ಕನ್ನಡದ ಮಾತಿನ ಮಲ್ಲಿ ಅಪರ್ಣಾ | ಕ್ಯಾನ್ಸರ್‌ಗೆ ಬಲಿಯಾದ ಅಪರ್ಣಾ |
July 12, 2024
9:24 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror