Advertisement
Exclusive - Mirror Hunt

ಅಡಿಕೆಯ ನಾಡಿನಲ್ಲಿ ಕಾಳುಮೆಣಸಿನಲ್ಲಿ ವಿಶೇಷ ಪ್ರಯೋಗ | ಅಡಿಕೆ ಭವಿಷ್ಯದ ಚರ್ಚೆಯ ನಡುವೆ ಕಾಳುಮೆಣಸು ಗಿಡಗಳ ಮೇಲೆ ಕರುಣೆ ತೋರಿದ ಕೃಷಿಕ ಕರುಣಾಕರ |

Share

ಅಡಿಕೆ ನಾಡು ವಿಸ್ತರಣೆಯಾಗುತ್ತಿದೆ. ಅದರ ಜೊತೆಗೇ ಚರ್ಚೆಯಾಗುತ್ತಿರುವುದು ಅಡಿಕೆ ಭವಿಷ್ಯ. ಅಡಿಕೆ ಮಾರುಕಟ್ಟೆ ಹೇಗಾಗಬಹುದು ಎನ್ನುವುದು ಅಡಿಕೆ ಬೆಳೆಗಾರರ ನಡುವೆ ಇರುವ ಪ್ರಶ್ನೆ. ಈ ನಡುವೆಯೇ ಅಡಿಕೆಯೆ ಪರ್ಯಾಯದ ಬಗ್ಗೆ ಚರ್ಚೆ, ಚಿಂತನೆ ಕೂಡಾ ನಡೆಯುತ್ತಿದೆ. ಇದೆಲ್ಲದರ ನಡುವೆ ಕಾಳುಮೆಣಸು ಕೃಷಿಯ ಬಗ್ಗೆ ಸದ್ದಿಲ್ಲದೆ ಹೊಸ ಪ್ರಯತ್ನ ನಡೆಸುತ್ತಿರುವವರು ಸುಳ್ಯ ತಾಲೂಕಿನ ಕೃಷಿಕ ಕರುಣಾಕರ.ಮುಂದೆ ಓದಿ..

Advertisement
Advertisement
ಪಿವಿಸಿ ಪೈಪ್‌ ಹಾಗೂ ಗ್ಲಿರಿಸೀಡಿಯಾದಲ್ಲಿ ಕಾಳುಮೆಣಸು ಬಳ್ಳಿ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡಿನ ಆಕ್ರಿಕಟ್ಟೆಯ ಕೃಷಿಕ ಕರುಣಾಕರ. ಅನೇಕ ವರ್ಷಗಳಿಂದಲೂ ಅಡಿಕೆ ಕೃಷಿ ಮಾಡಿಕೊಂಡು ಬಂದವರು. ಈಚೆಗೆ ಕೆಲವು ವರ್ಷಗಳಿಂದ ಕಾಳುಮೆಣಸು ಕೃಷಿಯಲ್ಲಿ ಆಸಕ್ತಿ ವಹಿಸಿ ವಿವಿಧ ಪ್ರಯೋಗ ಮಾಡಿದರು. ಅಡಿಕೆ, ತೆಂಗಿನ ಮರದಲ್ಲಿ ಕಾಳುಮೆಣಸು ಬಳ್ಳಿಗಳು ಇತ್ತು. ಆದರೆ ಅಡಿಕೆ ಕೊಯ್ಲು ವೇಳೆ ಅಡಿಕೆ ಗೊನೆ ಬಿದ್ದು ಕಾಳುಮೆಣಸು ಬಳ್ಳಿಗಳು ಹಾಳಾಗುತ್ತಿತ್ತು. ಅದಕ್ಕಾಗಿ  ಗ್ಲಿರಿಸೀಡಿಯಾದಲ್ಲಿ ಕಾಳುಮೆಣಸು ಬಳ್ಳಿ ನೆಡುವ ಮೂಲಕ ಹೊಸ ಪ್ರಯೋಗಗಳನ್ನು ನಡೆಸಲು ಮುಂದಾದರು. ಸುಮಾರು 300 ಗ್ಲಿರಿಸೀಡಿಯಾ ಗಿಡಗಳನ್ನು ನೆಟ್ಟು ಕಾಳುಮೆಣಸು ಬಳ್ಳಿಗಳನ್ನು ನೆಟ್ಟರು. ಅದರ ಯಶಸ್ಸಿನ ಬಳಿಕ ಈಗ ಪಿವಿಸಿ ಪೈಪ್‌ ಮೂಲಕ ಕಾಳುಮೆಣಸು ಬಳ್ಳಿ ನೆಡುವ ಪ್ರಯೋಗ ಮಾಡುತ್ತಿದ್ದಾರೆ. ಮುಂದೆ ಓದಿ

Advertisement
ಕೃಷಿಕ ಕರುಣಾಕರ

ಪಿವಿಸಿ ಪೈಪ್‌ ಕಾಂಕ್ರೀಟ್‌ ಮೂಲಕ ಲಂಬವಾಗಿ ನಿಲ್ಲಿಸಿ ಅದಕ್ಕೆ ಶೇಡ್‌ ನೆಟ್‌ ಅಳವಡಿಕೆ ಮಾಡಿ ಗಿಡ ನೆಟ್ಟಿದ್ದಾರೆ. ಗಿಡ ಮೇಲೆ ಬರುತ್ತಿದ್ದಂತೆಯೇ ಕಟಾವು ಮಾಡಲು ಅನುಕೂಲವಾಗುವಷ್ಟು ಎತ್ತರದವರೆಗೆ ಪೈಪ್‌ ಏರಿಸುವ ಯೋಚನೆಯನ್ನು ಮಾಡಿದ್ದಾರೆ ಕರುಣಾಕರ ಅವರು. ಇದ್ದ ರಬ್ಬರ್‌ ಮರಗಳನ್ನು ಕಡಿದು ಅಲ್ಲೂ ಕಾಳುಮೆಣಸು ಕೃಷಿಯನ್ನು ನಡೆಸುತ್ತಿರುವ ಕರುಣಾಕರ ಅವರು ಹೇಳುವ ಹಾಗೆ, ಪ್ರತಿ ದಿನವೂ ಶ್ರಮ ಬೇಡುವ ಕೃಷಿ ರಬ್ಬರ್.‌ ಆದರೆ ಈಗ ಕಾರ್ಮಿಕರ ಕೊರತೆಯೂ ಇರುವುದರಿಂದ ರಬ್ಬರ್‌ ಕೃಷಿಗೆ ವಿದಾಯ ಹೇಳಿ ಕಾಳುಮೆಣಸು ಕೃಷಿಯತ್ತ ಮನಸ್ಸು ಮಾಡಿರುವುದಾಗಿ ಹೇಳುತ್ತಾರೆ. ಕಾಳುಮೆಣಸು ಕೃಷಿಗೆ ದಿನವೂ ಓಡಾಡಬೇಕೆಂದಿಲ್ಲ. ಒಂದು ದಿನ ಶ್ರಮ ನೀಡುವಲ್ಲಿ ವಿಳಂಬವಾದರೂ ಪರವಾಗಿಲ್ಲ ಎನ್ನುತ್ತಾರೆ. ಮುಂದಿನ ಎರಡು ವರ್ಷಗಳಲ್ಲಿ 20 ಕ್ವಿಂಟಾಲ್‌ ಕಾಳುಮೆಣಸು ಕಟಾವು ಮಾಡಬೇಕು ಎನ್ನುವ ಗುರಿಯಲ್ಲಿ ನಿರಂತರ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ...ಮುಂದೆ ಓದಿ..

ಬೆಳೆದಿರುವ ಕಾಳುಮೆಣಸು ಬಳ್ಳಿ

ಕೃಷಿಯಲ್ಲಿ ಯಾವತ್ತೂ ಸೋಲು ಇಲ್ಲ. ಕೃಷಿಕನಾದವನು ಗಿಡ ನೆಡುವುದರಲ್ಲಿ ವಿಳಂಬ ಮಾಡಬಾರದು. ಅದೊಂದು ನಿರಂತರ ಪ್ರಕ್ರಿಯೆ. ಹೀಗಾಗಿ ಗಿಡ ಸಾಯುತ್ತದೆ ಎನ್ನುವ ಮನಸ್ಥಿತಿಯಲ್ಲಿ ಇರಲೇಬಾರದು. ವರ್ಷವೂ ಕಾಳುಮೆಣಸು ಬಳ್ಳಿ ನೆಡುತ್ತಲೇ ಹೋದರೆ ಯಾವ ಸಮಸ್ಯೆಯೂ ಇಲ್ಲ. ಗಿಡಗಳ ಆರೈಕೆ, ಪೋಷಕಾಂಶಗಳನ್ನು ನೀಡುವುದು ಹಾಗೂ ಸೂಕ್ತವಾದ ಗೊಬ್ಬರ ನೀಡುವುದು ಅಗತ್ಯವಾಗಿದೆ. ನನಗೂ ಈ ವಿಷಯದಲ್ಲಿ ಸರಿಯಾದ ಮಾಹಿತಿ ಸಿಗಲಿಲ್ಲ ಎನ್ನುತ್ತಾರೆ ಕರುಣಾಕರ ಅವರು. ಮುಂದೆ ಓದಿ..

Advertisement

 

ಅಡಿಕೆ ತೋಟದ ವಿಸ್ತರಣೆ, ಅಡಿಕೆಯ ವಿವಿಧ ರೋಗಗಳ ಬಗ್ಗೆಯೇ ಚರ್ಚೆಯಾಗುತ್ತಿರುವ ವೇಳೆ ಅಡಿಕೆಗೆ ಪರ್ಯಾಯ ಕೃಷಿಯ ಬಗ್ಗೆ ಯೋಚನೆಗಿಂತಲೂ ಪರ್ಯಾಯ ಬೆಳೆಯ ಕಡೆಗೆ ಗಮನಹರಿಸುವ ಮೂಲಕ ಕೃಷಿ ಬದುಕನ್ನು ಗಟ್ಟಿಗೊಳಿಸುವ, ಕೃಷಿ ಬದುಕು, ಭದ್ರವಾದ ಕೃಷಿಯ ಕೆಲಸದಲ್ಲಿರುವ ಕರುಣಾಕರ ಅವರ ಪ್ರಯತ್ನ, ಸಾಧನೆ ಮಾದರಿಯಾಗಿದೆ. ಅವರ ಕೃಷಿಯ ವಿಡಿಯೋ ಇಲ್ಲಿದೆ….

Advertisement

 

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಶಿಶಿಲದಲ್ಲಿರುವ ಈ ದೈವದ ವಿಶೇಷತೆ..! | ಜೋಡಿ ದೈವಗಳಿಗೆ ಜೀವಂತ ಕೋಳಿ ಅರ್ಪಣೆ |

ಗ್ರಾಮೀಣ ಭಾಗದ ನಂಬಿಕೆಗಳು ಮಾನಸಿಕವಾಗಿ ಹೆಚ್ಚು ಶಕ್ತಿ ನೀಡುತ್ತವೆ. ಅಂತಹದೊಂದು ನಂಬಿಕೆ ಶಿಶಿಲದಲ್ಲಿ…

44 seconds ago

ಕೋವಿ ಡಿಪಾಸಿಟ್‌ ಪ್ರಕರಣ | ಮಹತ್ವದ ತೀರ್ಪು | ಚುನಾವಣಾ ಕಾಲದಲ್ಲಿ ಕೋವಿ ಡಿಪಾಸಿಟ್‌ಗೆ ಪರಿಹಾರ |

ಚುನಾವಣೆಯ ಸಮಯದಲ್ಲಿ ಕೋವಿ ಠೇವಣಾತಿಯ ಬಗ್ಗೆ ಕೃಷಿಕರ ಸಂಕಷ್ಟಕ್ಕೆ ನ್ಯಾಯಾಲಯವು ಪರಿಹಾರ ನೀಡಿದೆ.

1 hour ago

ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದ ರೈತ | ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು..?

ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple…

9 hours ago

ಸ್ಟ್ರೀಟ್ ಫುಡ್ ವರ್ಸಸ್ ಆರೋಗ್ಯ | ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ

ಆಹಾರ ಹಾಗೂಆಹಾರ ಪದ್ಧತಿಗಳ ಬಗ್ಗೆ ವಿವೇಕ್‌ ಆಳ್ವ ಅವರು ಬರೆದಿದ್ದಾರೆ.

9 hours ago

ಸಕ್ಕರೆ ತಿನ್ನುವುದಕ್ಕಿಂತ ಶುಗರ್ ಫ್ರೀ ಸೇವನೆ ಹೆಚ್ಚು ಅಪಾಯಕಾರಿ…! |

`ಶುಗರ್ ಫ್ರೀ’(Sugar Free) ಎಂಬ ಹೆಸರಿನಲ್ಲಿ ಕೃತಕ ಸಿಹಿಕಾರಕಗಳ(Artificial sweet) ಟ್ರೆಂಡ್(Trend) ಹೆಚ್ಚುತ್ತಿರುವ…

10 hours ago