ಅಡಿಕೆ ಆಮದು ತಡೆಯ ನಿಟ್ಟಿನಲ್ಲಿ ಡಿಜಿಎಫ್‌ಟಿ(DGFT) ಹುರಿದ ಅಡಿಕೆಯ ನೆಪದಲ್ಲಿ ಬರುವ ಅನಿರ್ಬಂಧಿತ ವಿದೇಶಿ ವ್ಯಾಪಾರವನ್ನು ರದ್ದು ಮಾಡಿದೆ. ಈ ಮೂಲಕ “ರೋಸ್ಟೆಡ್ ನಟ್ ಸೀಡ್ಸ್” ಅಡಿಯಲ್ಲಿ ಆಮದಾಗುತ್ತಿದ್ದ ಅಡಿಕೆಗೆ ನಿರ್ಬಂಧವಾಗಿದೆ. ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಕ್ಯಾಂಪ್ಕೋ ಅಧ್ಯಕ್ಷ ಕಿಶೊರ್ ಕುಮಾರ್ ಕೊಡ್ಗಿ ಶ್ಲಾಘಿಸಿದ್ದಾರೆ.……..ಮುಂದೆ ಓದಿ…..
ಎಪ್ರಿಲ್ 2 ರಂದು ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆಯು ಅಧಿಸೂಚನೆ ಹೊರಡಿಸಿದೆ. ಅದರ ಪ್ರಕಾರ HS code 08028090 ಮತ್ತು 20081920 ಅಡಿಯಲ್ಲಿ ಬರುವ “ಹುರಿದ ಅಡಿಕೆ”ಯನ್ನು “ಉಚಿತ” ಆಮದಿನಿಂದ “ನಿಷೇಧಿತ” ಎಂದು ಪರಿಷ್ಕರಿಸಿ ವರ್ಗೀಕರಿಸಲಾಗಿದೆ. ಇದರ ಜೊತೆಗೆ ಕನಿಷ್ಠ ಆಮದು ದರವನ್ನು ಪ್ರತೀ ಕೆಜಿಗೆ ರೂ 351 ನಿಗದಿಪಡಿಸಿದೆ. ಹೀಗಾಗಿ ಈ ಸಂಖ್ಯೆಯಡಿಯಲ್ಲಿಎಲ್ಲಾ ರೀತಿಯ ಸಂಸ್ಕರಿತ ಅಡಿಕೆಯನ್ನು ಸೇರಿಸಲಾಗಿದ್ದು, ಈಗ ಹುರಿದ ಅಡಿಕೆಯು ಸಹ ಸೇರ್ಪಡೆಗೊಂಡಿದೆ. ಕೆಲವು ತಿಂಗಳುಗಳ ಹಿಂದೆ ಹುರಿದ ಅಡಿಕೆ ಹೆಚ್ಚಿನ ಪ್ರಮಾಣದಲ್ಲಿ ಭಾರತದ ಮಾರುಕಟ್ಟೆಗೆ ಬಂದಿದ್ದರ ಪರಿಣಾಮ ಪಠೋರ ಮತ್ತಿತರ ಕೆಳದರ್ಜೆಯ ಅಡಿಕೆಯ ದರ ಕಡಿಮೆಯಾಗಿರುವುದಲ್ಲದೇ ಬೇಡಿಕೆ ಕುಂಠಿತವಾಗಿದ್ದನ್ನು ಗಮನಿಸಬಹುದಾಗಿದೆ ಎಂದು ಕ್ಯಾಂಪ್ಕೋ ಪ್ರಕಟಣೆಯಲ್ಲಿ ತಿಳಿಸಿದೆ.
To reduce arecanut imports, the DGFT has revoked the unrestricted foreign trade classification for roasted arecanut, effectively banning its import under the “roasted nut seeds” category. Campco President Kishore Kumar Kodgi has commended the central government for this decision.