ಸುದ್ದಿಗಳು

#MysoreSandal | ಮೈಸೂರು ಸ್ಯಾಂಡಲ್‌ ಸೋಪ್‌ ಬ್ರಾಂಡ್ ಹೆಚ್ಚಿಸಲು ಕ್ರಮ |ತಜ್ಞರ ಸಲಹೆಗಳನ್ನು ಕೇಳಿದ ಸರ್ಕಾರ

Share

ಮೈಸೂರು ಸ್ಯಾಂಡಲ್‌ ಸಾಬೂನಿನ ಘಮಲು ಮತ್ತೆ ಎಲ್ಲೆಡೆ ಪಸರಿಸಲು ಸರ್ಕಾರ ನಿರ್ಧರಿಸಿದೆ.  ನಮ್ಮ ರಾಜ್ಯದ ಹೆಮ್ಮೆಯ ಬ್ರಾಂಡ್‌ ಅನ್ನು ಉನ್ನತಗೊಳಿಸಲು ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಮುಂದಾಗಿದ್ದಾರೆ. ಈ ಹಿನ್ನೆಲೆ ಮೈಸೂರು ಸ್ಯಾಂಡಲ್‌ ಸೋಪಿನ ಗತವೈಭವವನ್ನು ಮರುಕಳಿಸಲು ಉದ್ಯಮ  ಪರಿಣಿತರ ಸಲಹೆ, ಮಾರ್ಗದರ್ಶನ ಪಡೆಯಲು ಮುಂದಾಗಿದ್ದಾರೆ. ಬೇಡಿಕೆ ಹೆಚ್ಚಿಸಲು ಸಲಹೆಗಳನ್ನು ನೀಡುವಂತೆ ಕರೆ ನೀಡಿದ್ದಾರೆ.

Advertisement
ಈ ಬಗ್ಗೆ ಟ್ವೀಟ್‌ ಮಾಡಿರುವ ಕೈಗಾರಿಕಾ ಸಚಿವ ಎಂಬಿ ಪಾಟೀಲ್‌, ಕರ್ನಾಟಕ ಸಾಬೂನು ಮತು ಮಾರ್ಜಕ ನಿಯಮಿತದ ಅಡಿಯಲ್ಲಿನ ಮೈಸೂರು ಸ್ಯಾಂಡಲ್‌ ಸೋಪು ಕರ್ನಾಟಕದ ಅನರ್ಘ್ಯ ರತ್ನವಾಗಿದೆ. ಆದರೆ, ಸಂತೂರ್ ಸೋಪಿನ 1/3 ಭಾಗಕ್ಕಿಂತಲೂ ಮತ್ತು ರಾಷ್ಟ್ರಮಟ್ಟದಲ್ಲಿ ಲೈಫ್‌ಬಾಯ್ ಸೋಪಿನ 1/6 ಭಾಗಕ್ಕಿಂತಲೂ ಕಡಿಮೆ ಪ್ರಮಾಣದ ಬ್ರಾಂಡ್ ಆಗಿದೆ. ಮೈಸೂರು ಸ್ಯಾಂಡಲ್‌ ಸೋಪಿನ ರಫ್ತು ಆದಾಯ ಶೇ.3ರಷ್ಟು ಮಾತ್ರ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರು ಸ್ಯಾಂಡಲ್‌ ಸೋಪು ದಕ್ಷಿಣ ಭಾರತಕ್ಕೆ ಸೀಮಿತವಾದ ಬ್ರ್ಯಾಂಡ್ ಆಗಿದೆ. ತವರು ರಾಜ್ಯ ಕರ್ನಾಟಕದ ಮಾರುಕಟ್ಟೆಯಲ್ಲಿ ಕೂಡ ಮುಂಚೂಣಿಯಲ್ಲಿಲ್ಲ. ಮೆಡಿಮಿಕ್ಸ್, ಸಂತೂರ್, ಪತಂಜಲಿ ಸಾಬೂನುಗಳು ಮಾಡಬಹುದಾದ ಸಾಧನೆಯನ್ನು ಮೈಸೂರು ಸ್ಯಾಂಡಲ್‌ ಏಕೆ ಮಾಡಲು ಸಾಧ್ಯವಿಲ್ಲ? ಎಂದು ಎಂಬಿ ಪಾಟೀಲ್‌ ಪ್ರಶ್ನಿಸಿದ್ದು, ತಜ್ಞರ ಸಲಹೆಗಳಿಗೆ ಆಹ್ವಾನಿಸಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸಿನಂತೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಮೈಸೂರು ಸ್ಯಾಂಡಲ್  ಮಾರಾಟವನ್ನು ಹೆಚ್ಚಿಸಲು, ನಿಮ್ಮ ಸಲಹೆಗಳನ್ನು karnatakavision2030@gmail.com ಗೆ ಇಮೇಲ್ ಮಾಡಿ ಎಂದು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವೂ ಮೈಸೂರು ಸ್ಯಾಂಡಲ್‌ ಸೋಪ ಅನ್ನು ತಯಾರಿಸುತ್ತಿದೆ. ಸಂಪೂರ್ಣ ಗಂಧದೆಣ್ಣೆಯಿಂದ ತಯಾರಿಸಲಾಗುವ ಜಗತ್ತಿನ ಏಕೈಕ ಸಾಬೂನು ಎಂದು ಈ ಸೋಪು ಪ್ರಸಿದ್ಧವಾಗಿದೆ. 1916ರಿಂದ ಈ ಸಾಬೂನು ತಯಾರಾಗುತ್ತಿದ್ದು, ಆಗ ಮೈಸೂರು ಸಂಸ್ಥಾನದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಬೆಂಗಳೂರಿನಲ್ಲಿ ಸ್ಯಾಂಡಲ್‌ ಸೋಪ್ ಫ್ಯಾಕ್ಟರಿಯನ್ನು ಸ್ಥಾಪಿಸಿದರು.

ಮೊದಲನೇ ಮಹಾಯುದ್ಧದ ಸಮಯದಲ್ಲಿ ಯುರೋಪಿಗೆ ಶ್ರೀಗಂಧವನ್ನು ರಫ್ತು ಮಾಡಲು ಸಾಧ್ಯವಾಗದಿದ್ದಾಗ ಹೇರಳವಾಗಿ ಇದ್ದ ಗಂಧದ ಮರದ ದಾಸ್ತಾನನ್ನು ಬಳಸಿಕೊಂಡು ಸಾಬೂನು ತಯಾರಿಸಲು ಮುಂದಾದರು. ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್‌ ಎಂ ವಿಶ್ವೇಶ್ವರಯ್ಯ ಹಾಗೂ ಎಸ್‌ಜಿ ಶಾಸ್ತ್ರಿ ಅವರು ಮೈಸೂರು ಸ್ಯಾಂಡಲ್ ಸೋಪ್‍ನ ಪ್ರಮುಖ ಪ್ರವರ್ತಕರಾಗಿದ್ದಾರೆ. 1980ರಲ್ಲಿ ಸರ್ಕಾರಿ ಸೋಪ್ ಕಾರ್ಖಾನೆ ಮತ್ತು ಶಿವಮೊಗ್ಗದ ಗಂಧದೆಣ್ಣೆ ಕಾರ್ಖಾನೆಗಳನ್ನು ವಿಲೀನಗೊಳಿಸಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕಂಪನಿಯನ್ನಾಗಿ ಮಾಡಲಾಯಿತು. ಈ ಮೈಸೂರು ಸ್ಯಾಂಡಲ್‌ ಸೋಪ್‌ಗೆ ಜಿಐ ಟ್ಯಾಗ್‌ ಕೂಡ ಸಿಕ್ಕಿದೆ. ಆದರೆ, ಬ್ರಾಂಡ್‌ ಬೆಳೆಸುವಲ್ಲಿ ಕೆಎಸ್‌ಡಿಎಲ್‌ #KSDL ಹಿಂದುಳಿದಿದೆ. ಈಗಲಾದರು ಎಚ್ಚೆತ್ತುಕೊಂಡ ಸರ್ಕಾರ ನಮ್ಮ ರಾಜ್ಯದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪಿನ ಬ್ರಾಂಡ್ ಗೆ ಕಾಯಕಲ್ಪ ಒದಗಿಸುವ ಸಂಕಲ್ಪ ಮಾಡಲಿ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದು | ಮಿಜೋರಾಂ ಅಡಿಕೆ ಬೆಳೆಗಾರರಿಗೆ ಸವಾಲು

ಆಮದು ಕಾರಣದಿಂದ ಮಿಜೋರಾಂ ಅಡಿಕೆ ಬೆಳೆಗಾರರು ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ…

18 hours ago

ಈಗ ಮನಸುಗಳಿಗೇ ಒಂದು ಬ್ರಹ್ಮಕಲಶ ಯಾಕಾಗಬೇಕು…?

ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ.…

20 hours ago

ಉತ್ತರ ಭಾರತದಲ್ಲಿ ಆವರಿಸಿದ ಬಿಸಿಗಾಳಿ | 27 ಹವಾಮಾನ ಕೇಂದ್ರಗಳಲ್ಲಿ 43 ಡಿಗ್ರಿಗಿಂತ ಹೆಚ್ಚಿನ ತಾಪಮಾನ |

ಈ ವಾರ ದೆಹಲಿ, ರಾಜಸ್ಥಾನ , ಗುಜರಾತ್, ಮಧ್ಯಪ್ರದೇಶ , ಮಹಾರಾಷ್ಟ್ರ ಮತ್ತು…

20 hours ago

ಹೊಸರುಚಿ | ಗುಜ್ಜೆ ಕಡಲೆ ಗಸಿ

ಗುಜ್ಜೆ ಕಡಲೆ ಗಸಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 1…

20 hours ago

ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆಗೆ ಪ್ರಧಾನಿ ಕರೆ

ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆ ಸೇರಿದಂತೆ ಉತ್ತಮ ಯೋಗಕ್ಷೇಮಕ್ಕೆ 9 ಸಂಕಲ್ಪಗಳನ್ನು …

20 hours ago

ರೆಪೋ ದರದಲ್ಲಿ ಶೇಕಡ  0.25ರಷ್ಟು  ಕಡಿತ | ಶೇಕಡ 6.25ರಿಂದ ಶೇಕಡ 6ಕ್ಕೆ  ಇಳಿಕೆ

ಭಾರತೀಯ ರಿಸರ್ವ್ ಬ್ಯಾಂಕ್ ನ  ಹಣಕಾಸು ನೀತಿ ಸಮಿತಿ ಹಲವು  ಮಹತ್ವದ ನಿರ್ಧಾರಗಳನ್ನು…

21 hours ago