ಶಾಲಾ ಪಠ್ಯದಲ್ಲಿ ರಾಮಾಯಣ, ಮಹಾಭಾರತ ಸೇರ್ಪಡೆ..? | NCERT ಸಮಿತಿ ಶಿಫಾರಸು | ಶಾಲಾ ಗೋಡೆಗಳ ಮೇಲೆ ಸಂವಿಧಾನದ ಪೀಠಿಕೆ |

November 22, 2023
12:24 PM
ಮಕ್ಕಳ ಮೌಲ್ಯಯುತ ಜೀವನಕ್ಕೆ ಶ್ರೀ ರಾಮಾಯಣ ಹಾಗೂ ಮಹಾಭಾರತ ಕಾವ್ಯಗಳು ಅವಶ್ಯಕವಾಗಿದೆ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿಸಮಿತಿಯ ಮುಖ್ಯಸ್ಥರು ಹೇಳಿದ್ದಾರೆ.

ಒಳ್ಳೆಯ ವಿಷಯ ಯಾವುದೇ ಇರಲಿ. ಅದು ಮಕ್ಕಳಿಗೆ(Children) ಸಣ್ಣ ವಯಸ್ಸಲ್ಲೇ ತಿಳಿಯಬೇಕು. ನಮ್ಮ ದೇಶದ ಸಂಸೃತಿಯನ್ನು ಸಾರುವ ಮಹಾಕಾವ್ಯ ರಾಮಾಯಣ(Ramayana) ಹಾಗೂ ಮಹಾಭಾರತದ(Mahabharata) ಬಗ್ಗೆ ಅದೆಷ್ಟೋ ಮಂದಿ ತಿಳಿದೇ ಇಲ್ಲ. ಈ ಬಗ್ಗೆ ಶಾಲಾ ಶಿಕ್ಷಣದಲ್ಲೇ(School Education) ಮಾಹಿತಿ ದೊರೆತರೆ ಒಳ್ಳೆಯದು. ಇದನ್ನು ಮನಗಂಡು ಹೊಸ ಪಠ್ಯಕ್ರಮದ ಅನುಸಾರ ಪಠ್ಯಪುಸ್ತಕಗಳನ್ನು(Text book) ಪರಿಷ್ಕರಿಸಲು ರಚಿಸಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿ( NCERT) ಇದೀಗ ಮಹತ್ವದ ಶಿಫಾರಸು(recommend) ಮಾಡಿದೆ. ಶಾಲಾ ಪಠ್ಯಪುಸ್ತಕದಲ್ಲಿ ಶ್ರೀ ರಾಮಾಯಣ ಹಾಗೂ ಮಹಾಭಾರತ ವಿಷಯಗಳ ಸೇರ್ಪಡೆಗೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.  ಇದೇ ವೇಳೆ ಶಾಲಾ ಗೋಡೆಗಳ ಮೇಲೆ ಸಂವಿಧಾನದ ಪೀಠಿಕೆಯನ್ನು(Preamble of the Constitution)ಬರೆಯುಂತೆ ಶಿಫಾರಸು ಮಾಡಿದೆ.

Advertisement
Advertisement
Advertisement

ಕಳೆದ ವರ್ಷ ಏಳು ಸದಸ್ಯರ ಸಮಿತಿಯನ್ನು ರಚನೆ ಮಾಡಲಾಗಿತ್ತು. ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆಗೆ ಈ ಸಮಿತಿ ಹಲವು ಶಿಫಾರಸು ನೀಡಿದೆ. ಸಮಿತಿ ಶಿಫಾರಸು ಮಾಡಿದ ಅಂಶಗಳನ್ನು 19 ಸದಸ್ಯರ ರಾಷ್ಟ್ರೀಯ ಪಠ್ಯಕ್ರಮ ಹಾಗೂ ಬೋಧನಾ ಕಲಿಕಾ ಸಾಮಾಗ್ರಿ ಸಮಿತಿ ಪರಿಶೀಲನೆ ನಡೆಸಿ ಪರಿಗಣಿಸಲಿದೆ.  ಶ್ರೀರಾಮಾಯಣ ಹಾಗೂ ಮಹಾಭಾರತ ಕಾವ್ಯಗಳನ್ನು ಪಠ್ಯದಲ್ಲಿ ಸೇರಿಸುವ ಜೊತೆ ಮೌಲ್ಯಗಳನ್ನು ತಿಳಿಸುವ ಪ್ರಯತ್ನವಾಗಬೇಕು. ಮಕ್ಕಳ ಮೌಲ್ಯಯುತ ಜೀವನಕ್ಕೆ ಶ್ರೀ ರಾಮಾಯಣ ಹಾಗೂ ಮಹಾಭಾರತ ಕಾವ್ಯಗಳು ಅವಶ್ಯಕವಾಗಿದೆ ಎಂದು ಸಮಿತಿಯ ಮುಖ್ಯಸ್ಥ ಸಿಐ ಐಸಾಕ್ ಹೇಳಿದ್ದಾರೆ.

Advertisement

7 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳನ್ನು ಪಠ್ಯದಲ್ಲಿ ಸೇರಿಸುವಂತೆ ಸಮಿತಿ ಶಿಫಾರಸು ಮಾಡಿದೆ. ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನ, ದೇಶಭಕ್ತಿ, ದೇಶದ ಬಗ್ಗೆ ಗೌರವ ಹಾಗೂ ಹೆಮ್ಮೆಯನ್ನು ಬೆಳೆಸುವಲ್ಲಿ  ಈ ಮಹಾಕಾವ್ಯಗಳು ನೆರವಾಗಲಿದೆ. ಭಾರತೀಯರು ತಮ್ಮ ಬೇರುಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ದೇಶ, ಸಂಸ್ಕೃತಿ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುವುದು ಮುಖ್ಯವಾಗಿದೆ ಎಂದು ಐಸಾಕ್ ಹೇಳಿದ್ದಾರೆ.

ಹೊಸ ಪಠ್ಯಕ್ರಮದ ಅನುಸಾರ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಎನ್‌ಸಿಇಆರ್‌ಟಿ ರಚಿಸಿರುವ ಹೊಸ ಸಮಿತಿಯಲ್ಲಿ ಬೆಂಗಳೂರಿನ ಇನ್ಫೋಸಿಸ್ ಫೌಂಡೇಶನ್‌ ಅಧ್ಯಕ್ಷೆ ಸುಧಾ ಮೂರ್ತಿ, ದಕ್ಷಿಣ ಕನ್ನಡ ಮೂಲದ ಸಂಸ್ಕೃತ ಶಿಕ್ಷಣ ತಜ್ಞ ಚಾ ಮು ಕೃಷ್ಣಶಾಸ್ತ್ರಿ, ಖ್ಯಾತ ಗಾಯಕ ಶಂಕರ್‌ ಮಹಾದೇವನ್‌, ಅರ್ಥಶಾಸ್ತ್ರಜ್ಞ ಸಂಜೀವ್‌ ಸನ್ಯಾಲ್‌ ಸೇರಿದಂತೆ ಹಲವು ಗಣ್ಯರಿದ್ದಾರೆ. ವಿಜ್ಞಾನ ಕುರಿತ ಉನ್ನತ ಮಟ್ಟದ ಸಮಿತಿಯೊಂದು ಇತ್ತೀಚೆಗೆ ಶಾಲಾ ಪಠ್ಯದಲ್ಲಿ ಇಂಡಿಯಾ ಬದಲು ಭಾರತ ಎಂದು ಉಲ್ಲೇಖಿಸಲು ಎನ್‌ಸಿಇಆರ್‌ಟಿಗೆ ಶಿಫಾರಸು ಮಾಡಿತ್ತು. ಇದು ವಿವಾದಕ್ಕೂ ಕಾರಣವಾಗಿತ್ತು.

Advertisement

The National Council of Educational Research and Training (NCERT), which has been formed to revise the textbooks according to the new syllabus, has now made an important recommendation. It has recommended to the government to include Sri Ramayana and Mahabharata in school textbooks. At the same time, it is recommended to write the Preamble of the Constitution on the school walls.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ| 21-11-2024 | ಮಳೆಯ ಸಾಧ್ಯತೆ ಕಡಿಮೆ | ನ.26 ಸುಮಾರಿಗೆ ಚಂಡಮಾರುತ ಸಾಧ್ಯತೆ |
November 21, 2024
2:52 PM
by: ಸಾಯಿಶೇಖರ್ ಕರಿಕಳ
ದ ಕ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ
November 20, 2024
8:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-11-2024 | ರಾಜ್ಯದಲ್ಲಿ ಒಣಹವೆ | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ |
November 20, 2024
5:38 PM
by: ಸಾಯಿಶೇಖರ್ ಕರಿಕಳ
ರಾಜ್ಯದ ಕೈಗಾರಿಕೆಗಳಲ್ಲಿ ಹಸಿರು ತಂತ್ರಜ್ಞಾನ ಅಳವಡಿಸಲು ಆದ್ಯತೆ | ಮುಖ್ಯಮಂತ್ರಿ ಸಿದ್ದರಾಮಯ್ಯ
November 20, 2024
5:05 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror