ವಾರದ ಅತಿಥಿ |10 ವರ್ಷಗಳ ಕಾಲ ಜಲಾಂದೋಲನದ ಅಭಿಯಾನ ಕೈಗೊಂಡ “ಅಡಿಕೆ ಪತ್ರಿಕೆ” | ಜಲಸಂರಕ್ಷಣೆಗಾಗಿ 25,000 ಕಿಮೀ ಓಡಾಡಿದ ಶ್ರೀಪಡ್ರೆ |

May 23, 2024
7:00 AM
ನೀರಿನ ಬಗ್ಗೆಯೂ, ಜಲಸಂರಕ್ಷಣೆಯ ಬಗ್ಗೆಯೂ ಬರೆಯಬಹುದು ಎಂದು ತೋರಿಸಿದ್ದು ಅಡಿಕೆ ಪತ್ರಿಕೆ. ಈಗ ಮಾತನಾಡುವ ಜಲಸಂರಕ್ಷಣೆಯ ಎಲ್ಲಾ ಮಾತುಗಳು 1996 ರಿಂದ ಅಡಿಕೆ ಪತ್ರಿಕೆ ಹಾಗೂ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರು ಹೇಳುತ್ತಲೇ ಬಂದಿದ್ದಾರೆ. ನೀರು ಉಳಿಸುವ ಬಗ್ಗೆ ಜಾಗೃತಿ ಮೂಡಿಸಿದ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರು ಈ ವಾರದ ಅತಿಥಿ. .

ಈ ಬಾರಿಯ ಬರಗಾಲ ಎಲ್ಲರನ್ನೂ ಎಚ್ಚರಿಸಿದೆ. ಪ್ರಕೃತಿ ಎಚ್ಚರಿಕೆಯನ್ನು ನೀಡಿದೆ. ನೀರು ಉಳಿಸಬೇಕು, ಕಾಡು ಉಳಿಯಬೇಕು ಎನ್ನುವ ಧ್ವನಿಗಳು ಕೇಳಲು ಆರಂಭವಾಗಿದೆ. ನೀರು ಉಳಿಸಬೇಕು ಎಂದಾಗಲೇ ಜಲಸಂರಕ್ಷಣೆ, ಜಲಾಂದೋಲನ ನೆನಪಾಗುತ್ತದೆ. ಆಗ ಅಡಿಕೆ ಪತ್ರಿಕೆ ನೆನಪಾಗುತ್ತದೆ. ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ನೆನಪಾಗುತ್ತಾರೆ.…….ಮುಂದೆ ಓದಿ…..

Advertisement
Advertisement

Advertisement

ಅಡಿಕೆ ಪತ್ರಿಕೆ 100 ಯಶೋಗಾಥೆಗಳನು ಪ್ರಕಟಿಸಿದೆ. ಅಂದರೆ ಸುಮಾರು 8 ವರ್ಷಗಳ ಕಾಲ ನೀರಿಗಾಗಿ ಪುಟ ಮೀಸಲು ಇರಿಸಿದೆ. ನೀರಿನ ಬಗ್ಗೆಯೂ ಬರೆಯಲು ಸಾಧ್ಯವಿದೆ ಎನ್ನುವುದನ್ನು ಅಡಿಕೆ ಪತ್ರಿಕೆ ತೋರಿಸಿದೆ, ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರು ನೀರಿನ ಯಶೋಗಾಥೆಯನ್ನು ಹುಡುಕಿ ಹುಡುಕಿ ತೆಗೆದಿದ್ದಾರೆ.…….ಮುಂದೆ ಓದಿ…..

ಈಗ ಅಡಿಕೆ ಪತ್ರಿಕೆ ಬಳಿ, ಶ್ರೀಪಡ್ರೆ ಅವರ ಬಳಿ ಜಲಾಂದೋಲನ, ಜಲ ಸಂರಕ್ಷಣೆಯ ಕಾಳಜಿಯ ಬಗ್ಗೆ ಸಾಮಾನ್ಯ ಜನರಿಗೂ ತಿಳಿಸಿದೆ. ಇನ್ನೂ ಹೆಚ್ಚಿನ ಅರಿವು ಮೂಡಬೇಕಿದೆ. ನೀರಿನ ಬಗ್ಗೆ ಎಚ್ಚರಿಸಿದ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರು ಈ ವಾರದ  ದ ರೂರಲ್ ಮಿರರ್.ಕಾಂ ಅತಿಥಿ. ಅವರ ಜೊತೆ ಮಾತನಾಡಿದ ಸಾರಾಂಶ ಇಲ್ಲಿದೆ……….ಮುಂದೆ ಓದಿ…..

Advertisement
ಶ್ರೀಪಡ್ರೆ
ಇಂದು ನೀರಿನ ಲಭ್ಯತೆ ಹೆಚ್ಚು ಮಾಡುವ ಅಗತ್ಯತೆ ತುರ್ತು ಇದೆ. ಏಕೆಂದರೆ 11 ತಿಂಗಳು ಕೃಷಿ ಮಾಡಿ ಕೇವಲ ಒಂದು ತಿಂಗಳಲ್ಲಿ ಕೃಷಿ ಸೋಲುವುದು ಅದರಲ್ಲೂ ನೀರಿಲ್ಲದೆ ಸೋಲುವುದು ಕಾಣುತ್ತದೆ. ಇದಕ್ಕೆ ಪರಿಹಾರ ಕಾಣುತ್ತಿಲ್ಲ. ವರ್ಷದಿಂದ ವರ್ಷದಕ್ಕೆ ನೀರಿನ ಮಟ್ಟ ಇಳಿಕೆಯಾಗುತ್ತಿದೆ.ಹೀಗಾಗಿ ಪರಿಹಾರ ಕಾಣಬೇಕಾದ್ದು ಹೌದು.
ಕಳೆದ ಹಲವು ವರ್ಷಗಳಿಂದಲೂ ಇಂತಹದ್ದೇ ಪರಿಸ್ಥಿತಿ ಬರುತ್ತಿದ್ದಾಗ, ನೀರಿಗಾಗಿ ಏನಾದರೂ ಮಾಡಬೇಕು ಎಂದು ಮನಸ್ಸಿಗೆ ಅನಿಸಿತ್ತು. ಅದಕ್ಕಾಗಿ 1996 ರಲ್ಲಿ ಅಡಿಕೆ ಪತ್ರಿಕೆ ಅಭಿಯಾನ ಆರಂಭ ಮಾಡಿತ್ತು. ನೀರಿನ ಯಶೋಗಾಥೆಯನ್ನು ಸತತವಾಗಿ ಪ್ರಕಟ ಮಾಡಿತು.ನೆಲ ಜಲ ಉಳಿವುದು ನೂರು ವಿಧಿ ಎಂಬ ಅಭಿಯಾನ ಶುರು ಮಾಡಿ 100 ಯಶೋಗಾಥೆಯನ್ನು ಪ್ರಕಟ ಮಾಡಿತು.
2002-2005 ರ ನಡುವೆ ಸುಮಾರು 25,000 ಕಿಮೀ ಓಡಾಟ ಮಾಡಿದೆ. ನೀರಿಂಗಿಸುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಸ್ವತ: ನಾನು ಭಾಗಿಯಾದೆ. ನೀರಿಂಸಿಸೋಣ ಬನ್ನಿ ಎಂಬ ಕಾರ್ಯಕ್ರಮ ಹಳ್ಳಿ ಹಳ್ಳಿಯಲ್ಲಿ ನಡೆಯಿತು. ಇದೇ ವೇಳೆ ವಿವಿಧ ಪತ್ರಿಕೆಗಳಲ್ಲಿ ನೀರಿನ ಯಶೋಗಾಥೆ ಪ್ರಕಟವಾಯಿತು. ನೀರು ಉಳಿಸಲು ಸಾಧ್ಯವಿದೆ ಎನ್ನುವುದು ಪರಿಚಯವಾಯಿತು.

ಅಡಿಕೆ ಪತ್ರಿಕೆ ಸತತವಾಗಿ ಈ ಬಗ್ಗೆ ಪ್ರಕಟ ಮಾಡಿದಾಗ ಇದೊಂದು ಹುಚ್ಚು ಅಂತ ಅನಿಸಿತು. ಜನರಿಗೆ ಮುಂದೆ ಬರಹುದಾದ ಸಮಸ್ಯೆಗಳ ಬಗ್ಗೆ ಅರಿವು ಇರಲಿಲ್ಲ. ಅದೆಲ್ಲಾ ಸುಮ್ಮನೆ ಎನ್ನುವ ಭಾವನೆ ಇತ್ತು. ಚಿಂತನೆ ನಡೆಸುವ ಬದಲಾಗಿ ಇದೊಂದು ಹುಚ್ಚು, ಬೇರೆ ಕೆಲಸ ಇಲ್ಲ ಎನ್ನವುದೇ ಹೆಚ್ಚಾಗಿತ್ತು, ಗೇಲಿ ಮಾಡುವುದೇ ಇತ್ತು.
ಆದರೆ, ನಮ್ಮಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಸಣ್ಣ ಕೆಲಸ ಮಾಡಿದರೆ , ಈ ವರ್ಷ ಬಂದಿರುವ, 2019 ರಲ್ಲಿ ಬಂದಿರುವ ಮಾದರಿಯ ಬರಗಾಲಕ್ಕೆ ಬೆಚ್ಚಿ ಬೀಳಬೇಕಾಗಿಲ್ಲ. ಇಂದಿಗೂ ಇಂತಹ ಬರವನ್ನು ಮೆಟ್ಟಿ ನಿಂತವರೂ ಇದ್ದಾರೆ. ಅವರೆಲ್ಲಾ ಸಣ್ಣ ಸಣ್ಣ ಕೆಲಸ ಮಾಡಿದ್ದಾರೆ.
ನೀರಿಂಗಿಸೋಣ ಕಾರ್ಯಕ್ರಮ ಹೆಚ್ಚಾಗಿ ಸಾಗರದ ಕಡೆ ನಡೆದಿದೆ. ಅಲ್ಲಿ ಹೆಚ್ಚಿನ ಕಡೆ ನೀರಿಗಾಗಿ ಪರದಾಟ ಬರುವುದಿಲ್ಲ ಕಾಡು ಇದೆ, ಅದರ ಉಳಿಸುತ್ತಾ ನೀರನ್ನು ಇಂಗಿಸಿದರೆ ನೀರಿನ ಸಮಸ್ಯೆ ಬಾರದು. ಅಂದು ಸುಮಾರು 8 ವರ್ಷಗಳ ಕಾಲ ನೀರಿನ ಬಗ್ಗೆ ಸತತವಾಗಿ ಬರೆದಾಗ ಅನೇಕರು ರೋಸಿ ಹೋಗಿದ್ದರು. ಕೆಲವರು ಕೇಳಿದ್ದರು. ಇನ್ನೂ ಕೆಲವರು ನೇರವಾಗಿ ಅಡಿಕೆ ಪತ್ರಿಕೆಯನ್ನು ಕೇಳಿರಲಿಲ್ಲ. ಇಂದು ಕೆಲವರು ಇದರ ಪ್ರಯೋಜನದ ಬಗ್ಗೆ ಹೇಳುತ್ತಾರೆ.
ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ನೀರು ಇಂಗಿಸುವ ತತ್ತ್ವ ಅಳವಡಿಕೆ ಮಾಡಿಕೊಂಡಿರೆ ಅವರವರ ಜಮೀನಲ್ಲಿ ನೀರು ಉಳಿಸಿಕೊಳ್ಳಲು ಸಾಧ್ಯವಿದೆ. ನೀರಿನ ವ್ಯಯ ಕಡಿಮೆ ಮಾಡಿ, ಬಾವಿಗಳಲಿ ನೀರು ಉಳಿಯುವ ಹಾಗೆ ಮಾಡಿದರೆ, ಕುಡಿಯುವ ನೀರಿಗೂ ಸಮಸ್ಯೆ ಆಗದು. ಅದಕ್ಕಾಗಿ ಮಳೆಗಾಲವನ್ನು ಸರಿಯಾಗಿ ಉಪಯೋಗಿಸಿಕೊಂಡು ನೀರು ಉಳಿಸುವ ಕೆಲಸ ಮಾಡಬೇಕಿದೆ.
ಶ್ರೀಪಡ್ರೆ
ಮನೆಯ ಛಾವಣಿ ನೀರನ್ನು ಬಾವಿಗೆ ನೀರು ಬಿಡಬಹುದು, ಹೀಗೆ ಮಾಡಿದರೆ ಬಾವಿ ಬತ್ತುವುದಿಲ್ಲ. ಕೇರಳದ ಸುಸ್ಥಿರ ಎನ್ನುವ ಸಂಸ್ಥೆ 18 ವರ್ಷಗಳಲ್ಲಿ 25 ಸಾವಿರ ಬಾವಿಗಳಿಗೆ ರೀಚಾರ್ಜ್‌ ಮಾಡಿದೆ. ಇದರ ಪ್ರಯೋಜನ ಅಪಾರ. ಮಳೆ ನೀರನ್ನು ಶೋಧಿಸಿ ಬಾವಿಗೆ ಬಿಡುವುದರಿಂದ ಒಂದೇ ವರ್ಷದಲ್ಲಿ ಫಲಿತಾಂಶ ತಿಳಿಯುತ್ತದೆ. ಬಾವಿ ಬತ್ತುವುದಿಲ್ಲ. ಹಾಗೆಂದು ಕೆಲವು ಭೂಮಿಯ ರಚನೆಯ ಕಾರಣದಿಂದ ನೀರು ಬರಿದಾದ್ದೂ ಇರುತ್ತದೆ.
ಈಗ ನೀರಿನ ಬಳಕೆ, ನೀರಿನ ಮ್ಯಾನೇಜ್ಮೆಂಟ್‌ ಮಾಡಬೇಕು. ಮಳೆಗೆ ನೀರು ಓಡದ ಹಾಗೆ ಮಾಡಬೇಕು. ಅಡಿಕೆ ಪತ್ರಿಕೆ ಅದನ್ನು 10 ವರ್ಷಗಳ ಕಾಲ ಅಂದೇ  ಮಾಡಿ, ಹೇಳಿ ತೋರಿಸಿದೆ. ಕಟ್ಟಗಳು, ಮದಕಗಳು ಕೂಡಾ ನೀರು ಉಳಿಸುವ ಕಾರ್ಯದಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. 
ಈ ವರ್ಷದ ಬರದ ಮೂಲಕ ಪ್ರಕೃತಿ ಎಚ್ಚರಿಸಿದೆ. ಇನ್ನಾದರೂ ನೀರಿನ ಬಗ್ಗೆ ಬಗ್ಗೆ ಎಚ್ಚರ ವಹಿಸಬೇಕು, ಜಲಸಾಕ್ಷರತೆಯನ್ನು ತಿಳಿಸಬೇಕು. ಅಲ್ಲದಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಾದ ದಿನವಂತೂ ಇದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಪಂಚಗವ್ಯ ಚಿಕಿತ್ಸೆ… | ಏನಿದು ಪಂಚಗವ್ಯ…? | ಈ ಚಿಕಿತ್ಸೆ ಪರಿಣಾಮಕಾರಿ ಹೇಗೆ..?
June 15, 2024
10:59 PM
by: ಮುರಲೀಕೃಷ್ಣ ಕೆ ಜಿ
Karnataka Weather | 15-06-2024 | ಕೆಲವು ಕಡೆ ತುಂತುರು ಮಳೆ | ಜೂನ್ 21ರಿಂದ ಉತ್ತಮ ಮಳೆಯ ಮುನ್ಸೂಚನೆ |
June 15, 2024
4:08 PM
by: ಸಾಯಿಶೇಖರ್ ಕರಿಕಳ
ಕೇರಳದಲ್ಲಿ ಲಘು ಭೂಕಂಪ | ಬೆಳ್ಳಂಬೆಳಗ್ಗೆ ಭಯಭೀತಗೊಂಡು ಮನೆಯಿಂದ ಹೊರ ಬಂದ ಜನ |
June 15, 2024
1:25 PM
by: The Rural Mirror ಸುದ್ದಿಜಾಲ
ಕರಾವಳಿಯಲ್ಲಿ ಚುರುಕುಗೊಂಡ ಮುಂಗಾರು | ಉಡುಪಿಯ ಈ ಬೀಚ್‌ಗಳಿಗೆ ಪ್ರವೇಶ ನಿರ್ಬಂಧ..!
June 15, 2024
1:15 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror