ಮಳೆ, ಬಿಸಿಲು ಬಂದಾಗ ಆಗಾಗ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಒಂದು ಕಡೆಯಾದರೆ, ವಾತಾವರಣದ ಬದಲಾವಣೆಯ ಸಂದರ್ಭದಲ್ಲೂ ಆರೋಗ್ಯದ ಬದಲಾವಣೆ ಇರುತ್ತದೆ. ಇಂತಹ ಸಂದರ್ಭದ ಆರಂಭದಲ್ಲಿ ಮನೆ ಮದ್ದು ಪರಿಣಾಮಕಾರಿಯಾಗಿರುತ್ತದೆ. ಅದೇನು ?
ಒಣ ಕೆಮ್ಮು ಮತ್ತು ಮನೆ ಮದ್ದು : ಶೀತದ ಕೆಮ್ಮು ಮತ್ತು ಒಣ ಕೆಮ್ಮು. ಶೀತದ ವಿಚಾರದಲ್ಲಿ ಮನುಷ್ಯನಿಗೆ ಎದುರಾಗುವ ಕೆಮ್ಮು, ಮೊದಲು ನೆಗಡಿಯಾಗಿ ಎದೆಯಲ್ಲಿ ಕಫ ಕಟ್ಟಿ ನಂತರ ಕೆಮ್ಮು ಪ್ರಾರಂಭವಾಗುತ್ತದೆ. ಆದರೆ ಒಣ ಕೆಮ್ಮು ಹಾಗಲ್ಲ. ಮೊದಲು ಗಂಟಲು ಕೆರೆತದಿಂದ ಉಂಟಾಗಿ ನಂತರ ಜ್ವರ ಮತ್ತು ಅಲರ್ಜಿಗೆ ಕಾರಣವಾಗುತ್ತದೆ.
1.ಜೇನು :ಇದು ದೊಂದೆಯಲ್ಲಿ ಒಂದು ಪದರವನ್ನು ಮಾಡಿ ದೊಂದೆಯ ಕೆರೆತ ಮತ್ತು ಇನ್ಫೆಕ್ಷನ್ ತಡೆಗಟ್ಟುತ್ತದೆ.ಇದನ್ನು ನೀರಿನೊಡನೆ ಸೇವಿಸಲು ಬಹುದು. ಜೇನನ್ನು 1 ವರ್ಷದ ಒಳಗಿನ ಮಕ್ಕಳಿಗೆ ಕೊಡುವುದು ಅಪಾಯಕಾರಿ. ಜೇನು ತುಪ್ಪದಲ್ಲೂ ಸಹ ಆಂಟಿ – ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳಿದ್ದು, ಮನುಷ್ಯನ ಆರೋಗ್ಯಕ್ಕೆ ಉಂಟಾಗುವ ಸೋಂಕುಗಳನ್ನು ನಿವಾರಣೆ ಮಾಡುವಲ್ಲಿ ಯಶಸ್ವಿಯಾಗುತ್ತದೆ.
2.ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಇನ್ಫೆಕ್ಷನ್ ತಡೆಗಟ್ಟಲುಬಹುದು.
3.ಶುಂಠಿ : ಶ್ವಾಸನಾಳದ ರಿಫ್ಲೆಕ್ಸ್ ಸಡಿಲಗೊಳಿಸಿ ಕಫವನ್ನು ಹೊರ ಹಾಕಲು ಪ್ರಯತ್ನಿಸುತ್ತದೆ.ಇನ್ಫೆಕ್ಷನ್ ತಡೆಗಟ್ಟುತ್ತದೆ.ಅತಿಯಾದ ಪ್ರಮಾಣ ಬೇಡ ಏಕೆಂದರೆ ಎದೆನೋವು,ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು.
4.ಅರಿಶಿ: ಅರಿಶಿನದಲ್ಲಿ ಅನೇಕ ಔಷಧೀಯ ಗುಣ ಲಕ್ಷಣಗಳಿವೆ. ಶೀತ, ನೆಗಡಿ ತರಹದ ಹಲವಾರು ಸಮಸ್ಯೆಗಳಿಗೆ ಅರಿಶಿನ ಒಳ್ಳೆಯ ಮನೆ ಮದ್ದು. ಕೆಮ್ಮು ಬಂದಾಗ ಹಾಲಿಗೆ ಸ್ವಲ್ಪ ಅರಿಶಿನ ಮಿಶ್ರಣ ಮಾಡಿ ಕುಡಿದರೆ ಒಳ್ಳೆಯ ಉಪಯೋಗವಾಗುತ್ತದೆ.
ದಿನೇ ದಿನೇ ಹೆಚ್ಚಾಗಿ ಬೇರೆ ರೀತಿಯ ರೋಗ ಲಕ್ಷಣಕ್ಕೆ ತಿರುಗಿದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡದೆ ಮೊದಲು ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ.
# ಡಾ.ಆದಿತ್ಯ ಭಟ್ ಚಣಿಲ