Advertisement
ಅನುಕ್ರಮ

ಆರೋಗ್ಯಾಲಯ | ಸಣ್ಣ ಸಣ್ಣ ಆರೋಗ್ಯ ಸಮಸ್ಯೆಗೆ ಮನೆ ಮದ್ದು |

Share

ಮಳೆ, ಬಿಸಿಲು ಬಂದಾಗ ಆಗಾಗ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಒಂದು ಕಡೆಯಾದರೆ, ವಾತಾವರಣದ ಬದಲಾವಣೆಯ ಸಂದರ್ಭದಲ್ಲೂ ಆರೋಗ್ಯದ ಬದಲಾವಣೆ ಇರುತ್ತದೆ. ಇಂತಹ ಸಂದರ್ಭದ ಆರಂಭದಲ್ಲಿ  ಮನೆ ಮದ್ದು ಪರಿಣಾಮಕಾರಿಯಾಗಿರುತ್ತದೆ. ಅದೇನು ?

ಒಣ ಕೆಮ್ಮು ಮತ್ತು ಮನೆ ಮದ್ದು : ಶೀತದ ಕೆಮ್ಮು ಮತ್ತು ಒಣ ಕೆಮ್ಮು. ಶೀತದ ವಿಚಾರದಲ್ಲಿ ಮನುಷ್ಯನಿಗೆ ಎದುರಾಗುವ ಕೆಮ್ಮು, ಮೊದಲು ನೆಗಡಿಯಾಗಿ ಎದೆಯಲ್ಲಿ ಕಫ ಕಟ್ಟಿ ನಂತರ ಕೆಮ್ಮು ಪ್ರಾರಂಭವಾಗುತ್ತದೆ. ಆದರೆ ಒಣ ಕೆಮ್ಮು ಹಾಗಲ್ಲ. ಮೊದಲು ಗಂಟಲು ಕೆರೆತದಿಂದ ಉಂಟಾಗಿ ನಂತರ ಜ್ವರ ಮತ್ತು ಅಲರ್ಜಿಗೆ ಕಾರಣವಾಗುತ್ತದೆ.

1.ಜೇನು :ಇದು ದೊಂದೆಯಲ್ಲಿ ಒಂದು ಪದರವನ್ನು ಮಾಡಿ ದೊಂದೆಯ ಕೆರೆತ ಮತ್ತು ಇನ್ಫೆಕ್ಷನ್ ತಡೆಗಟ್ಟುತ್ತದೆ.ಇದನ್ನು ನೀರಿನೊಡನೆ ಸೇವಿಸಲು ಬಹುದು. ಜೇನನ್ನು 1 ವರ್ಷದ ಒಳಗಿನ ಮಕ್ಕಳಿಗೆ ಕೊಡುವುದು ಅಪಾಯಕಾರಿ. ಜೇನು ತುಪ್ಪದಲ್ಲೂ ಸಹ ಆಂಟಿ – ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳಿದ್ದು, ಮನುಷ್ಯನ ಆರೋಗ್ಯಕ್ಕೆ ಉಂಟಾಗುವ ಸೋಂಕುಗಳನ್ನು ನಿವಾರಣೆ ಮಾಡುವಲ್ಲಿ ಯಶಸ್ವಿಯಾಗುತ್ತದೆ.

2.ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಇನ್ಫೆಕ್ಷನ್ ತಡೆಗಟ್ಟಲುಬಹುದು.

3.ಶುಂಠಿ : ಶ್ವಾಸನಾಳದ ರಿಫ್ಲೆಕ್ಸ್ ಸಡಿಲಗೊಳಿಸಿ ಕಫವನ್ನು ಹೊರ ಹಾಕಲು ಪ್ರಯತ್ನಿಸುತ್ತದೆ.ಇನ್ಫೆಕ್ಷನ್ ತಡೆಗಟ್ಟುತ್ತದೆ.ಅತಿಯಾದ ಪ್ರಮಾಣ ಬೇಡ ಏಕೆಂದರೆ ಎದೆನೋವು,ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು.

4.ಅರಿಶಿ: ಅರಿಶಿನದಲ್ಲಿ ಅನೇಕ ಔಷಧೀಯ ಗುಣ ಲಕ್ಷಣಗಳಿವೆ. ಶೀತ, ನೆಗಡಿ ತರಹದ ಹಲವಾರು ಸಮಸ್ಯೆಗಳಿಗೆ ಅರಿಶಿನ ಒಳ್ಳೆಯ ಮನೆ ಮದ್ದು. ಕೆಮ್ಮು ಬಂದಾಗ ಹಾಲಿಗೆ ಸ್ವಲ್ಪ ಅರಿಶಿನ ಮಿಶ್ರಣ ಮಾಡಿ ಕುಡಿದರೆ ಒಳ್ಳೆಯ ಉಪಯೋಗವಾಗುತ್ತದೆ.

ದಿನೇ ದಿನೇ ಹೆಚ್ಚಾಗಿ ಬೇರೆ ರೀತಿಯ ರೋಗ ಲಕ್ಷಣಕ್ಕೆ ತಿರುಗಿದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡದೆ ಮೊದಲು ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ.

# ಡಾ.ಆದಿತ್ಯ ಭಟ್‌ ಚಣಿಲ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಡಾ.ಆದಿತ್ಯ ಭಟ್‌, ಚಣಿಲ, BHMS

ಹೋಮಿಯೋಪತಿ ವೈದ್ಯರು ಶ್ರೀ ಹೋಮಿಯೋ ಕೇರ್‌, ಕುಕ್ಕೆಸುಬ್ರಹ್ಮಣ್ಯ Ph: 8073052529

Published by
ಡಾ.ಆದಿತ್ಯ ಭಟ್‌, ಚಣಿಲ, BHMS

Recent Posts

‘ರೋಸ್ಟೆಡ್ ಅಡಿಕೆ’ ಆಮದು ವರ್ಗೀಕರಣಕ್ಕೆ ಮತ್ತೊಂದು ತಿರುವು – ಹೈಕೋರ್ಟ್ ತೀರ್ಪು ಉಲ್ಲೇಖಿಸಿ ಅರ್ಜಿ ತಿರಸ್ಕರಿಸಿದ ಮುಂಬೈ ಪ್ರಾಧಿಕಾರ

‘ರೋಸ್ಟೆಡ್ ಅಡಿಕೆ’ಯನ್ನು ಯಾವ ಸುಂಕ ವರ್ಗದಡಿ ಪರಿಗಣಿಸಬೇಕು ಎಂಬ ವಿವಾದಕ್ಕೆ ಮುಂಬೈ CAAR…

2 hours ago

ಬರಕ್ಕೆ ರಾಗಿ ಕೂಡ ಸೋಲುತ್ತಿದೆ – ‘ಬರ ನಿರೋಧಕ’ ಎಂದರೆ ಮಳೆ ಇಲ್ಲದಿದ್ದರೂ ಬೆಳೆಯುತ್ತದೆ ಎಂದಲ್ಲ!

ಮಳೆ ಇಲ್ಲದಿದ್ದರೆ ರಾಗಿ ಸೇರಿದಂತೆ ಬರ ಸಹಿಷ್ಣು ಬೆಳೆಗಳೂ ಉಳಿಯುವುದಿಲ್ಲ ಎಂಬುದನ್ನು ಕರ್ನಾಟಕದ…

3 hours ago

₹2,000ಕ್ಕಿಂತ ಹೆಚ್ಚಿನ UPI ವಹಿವಾಟಿನ MDRಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ

₹2,000ಕ್ಕಿಂತ ಹೆಚ್ಚಿನ ನಿರ್ದಿಷ್ಟ UPI ವ್ಯಾಪಾರಿ ವಹಿವಾಟುಗಳಿಗೆ MDR ವಿಧಿಸುವ ಕೇಂದ್ರದ ನಿರ್ಧಾರಕ್ಕೆ…

10 hours ago

ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಎರಡು ಪದಕ: ಪುರುಷರಿಗೆ ಬೆಳ್ಳಿ, ಮಹಿಳೆಯರಿಗೆ ಕಂಚು – ಪ್ರಧಾನಿ ಮೋದಿ ಅಭಿನಂದನೆ

ಸಮರ್ಕಂಡ್‌ನಲ್ಲಿ ನಡೆದ ಫಿಡೆ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಪುರುಷರ ತಂಡ ಬೆಳ್ಳಿ ಹಾಗೂ…

10 hours ago

ಮಳೆ ಬದಲಾಗಿದೆಯೇ? ಪ್ರಕೃತಿ ಬದಲಾಗಿದೆಯೇ? ಅಥವಾ ನಾವೇ ಬದಲಾಗಿದ್ದೇವೆಯೇ?

ಕಳೆದ ಕೆಲವು ದಶಕಗಳಲ್ಲಿ ಮಳೆಯ ಸಮಯ, ತೀವ್ರತೆ ಮತ್ತು ಹಂಚಿಕೆಯಲ್ಲಿ ಬದಲಾವಣೆ ಕಂಡುಬರುತ್ತಿರುವುದಕ್ಕೆ…

11 hours ago

ಹವಾಮಾನ ವರದಿ | 28-09-2026 | ಮುಂಗಾರು ಹಿಂದೆ ಸರಿಯುತ್ತಿದ್ದರೂ ಮಳೆ ಇನ್ನೂ ಮುಗಿದಿಲ್ಲ

ಮುಂಗಾರು ಹಿಂದೆ ಸರಿಯುವ ಪ್ರಕ್ರಿಯೆ ಆರಂಭವಾಗಿದ್ದರೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ ಗುಡುಗು…

12 hours ago