#AdityaL1Launch | ಆದಿತ್ಯ ಎಲ್‌-1 ಯಶಸ್ವಿ ಉಡಾವಣೆ | ಸೋಲಾರ್ ಮಿಷನ್ ಹಿಂದೆಯೂ ಮಹಿಳಾ ಶಕ್ತಿ…| ರೈತನ ಮಗಳು ಯೋಜನೆಯ ನಿರ್ದೇಶಕಿ |

September 2, 2023
4:54 PM
ಭಾರತದ ಮಹತ್ವಾಕಾಂಕ್ಷೆಯ ಸೂರ್ಯಯಾನ ಯೋಜನೆ  ಆದಿತ್ಯ ಎಲ್‌-1  ಬಾಹ್ಯಾಕಾಶ ನೌಕೆಯನ್ನು ಶನಿವಾರ  ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.ಈ ಯೋಜನೆಯಲ್ಲಿ ಪ್ರಾಜೆಕ್ಟ್‌ ನಿರ್ದೇಶಕರಾಗಿ ತಮಿಳುನಾಡಿನ ರೈತನ ಮಗಳು ಕೆಲಸ ಮಾಡಿದ್ದರು.

ಭಾರತದ ಮಹತ್ವಾಕಾಂಕ್ಷೆಯ ಸೂರ್ಯಯಾನ ಯೋಜನೆ  ಆದಿತ್ಯ ಎಲ್‌-1  ಬಾಹ್ಯಾಕಾಶ ನೌಕೆಯನ್ನು ಶನಿವಾರ  ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಆದಿತ್ಯ ಎಲ್-1 ಲ್ಯಾಗ್ರೇಂಜ್ 1 ಅನ್ನು ತಲುಪಲು ಸುಮಾರು 4 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ. ಭೂಮಿ ಮತ್ತು ಸೂರ್ಯನ ನಡುವಿನ ಅಂತರವು ಹೆಚ್ಚಿರುವ ಕಾರಣದಿಂದ ದೀರ್ಘ ಸಮಯ ತೆಗೆದುಕೊಳ್ಳಲಿದೆ.ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿ ಎಲ್1 ಲ್ಯಾಗ್ರೇಂಜ್ ಬಿಂದುವಿದೆ. ಭಾರತದ ಮೊದಲ ಸೂರ್ಯ ಮಿಷನ್ ಸೌರ ಮಾರುತಗಳನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ.

Advertisement
Advertisement

ಸದ್ಯ ಆದಿತ್ಯ ಎಲ್​-1 ಹೊತ್ತ ರಾಕೆಟ್ ನಿಗದಿತ ಕಕ್ಷೆಯಲ್ಲಿ ಸಂಚರಿಸುತ್ತಿದೆ. 1 ಮತ್ತು 2ನೇ ಹಂತದಲ್ಲಿ ರಾಕೆಟ್​​ನಿಂದ ಯಶಸ್ವಿಯಾಗಿ ಬಾಹ್ಯಾಕಾಶ ನೌಕೆ ಬೇರ್ಪಟ್ಟಿದೆ. 3 ಹಾಗೂ 4 ನೇ ಹಂತದಲ್ಲೂ ರಾಕೆಟ್​​ನಿಂದ ಯಶಸ್ವಿಯಾಗಿ ಬೇರ್ಪಟ್ಟಿದ್ದು, ಈ ಕಾರ್ಯ ಯಶಸ್ವಿಯಾಗಿದೆ. ಒಟ್ಟು 15 ಲಕ್ಷ ಕಿ.ಮೀ. ದೂರ ಸಂಚರಿಸುವ ಆದಿತ್ಯ ಎಲ್-1 ನೌಕೆ, ನಿಗದಿತ ಸ್ಥಳಕ್ಕೆ ತಲುಪಲು ಸುಮಾರು 4 ತಿಂಗಳ ಕಾಲ ತೆಗೆದುಕೊಳ್ಳಲಿದೆ ಎಂದು ಇಸ್ರೋ ತಿಳಿಸಿದೆ. ಸೂರ್ಯನ ಮೇಲ್ಮೈ, ಸೂರ್ಯನ ಕಿರಣ, ತಾಪಮಾನ, ಸೌರಜ್ವಾಲೆ, ಸೂರ್ಯನ ಸುತ್ತಲಿನ ವಾತಾವರಣದ ಬಗ್ಗೆ ಆದಿತ್ಯ ಎಲ್​-1 ಅಧ್ಯಯನ ನಡೆಸಲಿದೆ. ಈ ವಿಚಾರದಲ್ಲಿ ಇಸ್ರೋ ವಿಜ್ಞಾನಿಗಳ ಅಧ್ಯಯನಕ್ಕೆ ಪೂರಕ ಚಿತ್ರಗಳನ್ನು, ಮಾಹಿತಿಗಳನ್ನು ಒದಗಿಸಲಿದೆ.

ಭಾರತದ ಮಹತ್ವಾಕಾಂಕ್ಷೆಯ ಸೂರ್ಯಯಾನ ಯೋಜನೆ  ಆದಿತ್ಯ ಎಲ್‌-1 ಇದರ ಕಾರ್ಯಕ್ರಮ ನಿರ್ದೇಶಕಿಯಾಗಿ  ನಿಗರ್ ಶಾಜಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕೂಡಾ ತಮಿಳುನಾಡು ಮೂಲದವರು. ಚಂದ್ರಯಾನದಲ್ಲೂ ತಮಿಳುನಾಡು ಮೂಲದವರು ನೇತೃತ್ವ ವಹಿಸಿದ್ದರು. ತಮಿಳುನಾಡಿನ ಮಾಯಿಲ್‌ಸಾಮಿ ಅಣ್ಣಾದೊರೈ ಮತ್ತು ಎಂ ವನಿತಾ ಚಂದ್ರಯಾನ 1 ಮತ್ತು 2 ನೇತೃತ್ವ ವಹಿಸಿದ್ದರು.

ಇದೀಗ ತಮಿಳುನಾಡಿನ ದಕ್ಷಿಣ ಜಿಲ್ಲೆ ತೆಂಕಶಿಯ ಮಹಿಳಾ ವಿಜ್ಞಾನಿ ನಿಗರ್ ಶಾಜಿ ಅವರು ಆದಿತ್ಯ ಎಲ್ 1 ಮಿಷನ್‌ನ ಯೋಜನಾ ನಿರ್ದೇಶಕರಾಗಿದ್ದಾರೆ.  ಶಾಜಿಯ ಅವರು ತಮಿಳುನಾಡಿನ ಸೆಂಗೊಟ್ಟೈ ಪಟ್ಟಣದವರು.  ಅಲ್ಲಿನ ರೈತ ಶೇಖ್ ಮೀರಾನ್ ಅವರ ಪುತ್ರಿ. ಶಾಜಿ ಅವರ ತಂದೆ ಕೃಷಿಕನಾಗಿ ಕೆಲಸ ಮಾಡುತ್ತಿದ್ದರು. ಸರ್ಕಾರಿ ಬಾಲಕಿಯರ  ಶಾಲೆಯಲ್ಲಿ ಓದಿದ ಶಾಜಿ ಅವರು ತಿರುನಲ್ವೇಲಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿ, 1987 ರಲ್ಲಿ,ಇಸ್ರೋ ಸೇರಿದರು.

ಆದಿತ್ಯ-ಐ1 ಮಿಷನ್‌ನಲ್ಲಿ ತೊಡಗಿಸಿಕೊಳ್ಳುವ ಮೊದಲು, ನಿಗರ್ ಶಾಜಿ ಅವರು ಭಾರತೀಯ ರಿಮೋಟ್ ಸೆನ್ಸಿಂಗ್, ಸಂವಹನ ಮತ್ತು ಅಂತರಗ್ರಹ ಉಪಗ್ರಹಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದರು. ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹ ರಿಸೋರ್ಸ್‌ಸ್ಯಾಟ್-2ಂ ಗಾಗಿ ಸಹಾಯಕ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ
January 30, 2026
8:10 AM
by: ದ ರೂರಲ್ ಮಿರರ್.ಕಾಂ
“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ
January 30, 2026
8:05 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ
January 30, 2026
7:57 AM
by: ಮಿರರ್‌ ಡೆಸ್ಕ್
ಬೇಸಿಗೆ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
January 30, 2026
7:27 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror