ಅಡ್ತಲೆಯಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಸಾರ್ವಜನಿಕ ಸಭೆ

January 10, 2022
11:05 PM

ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ ಇವರ ವತಿಯಿಂದ ಸಾರ್ವಜನಿಕ ಸಭೆ ಭಾನುವಾರ ಸಂಜೆ  ಅಡ್ತಲೆಯಲ್ಲಿ ನಡೆಯಿತು. ಈ ಸಂದರ್ಭ ವಿವಿಧ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಲಾಯಿತು.

Advertisement

ವೇದಿಕೆ ಅಧ್ಯಕ್ಷ  ಹರಿಪ್ರಸಾದ್ ಅಡ್ತಲೆ,  ಸಂಘಟನೆಯ ರಚನೆಯ ಉದ್ದೇಶದ ಬಗ್ಗೆ ಪ್ರಾಸ್ತವಿಕವಾಗಿ ಮಾಹಿತಿ ನೀಡಿದರು. ಪ್ರಮುಖವಾಗಿ ಅತ್ಯಂತ ಅಗಲ ಕಿರಿದಾದ ಅರಂತೋಡು – ಎಲಿಮಲೆ ರಸ್ತೆ ಅಗಲೀಕರಣ, ಅಡ್ತಲೆಯಲ್ಲಿ ಸರಕಾರಿ ಸ್ವಾಮ್ಯದ ಬಿ ಎಸ್‌ ಎನ್‌ ಎಲ್ ಟವರ್ ಕಾರ್ಯಾರಂಭ ಮತ್ತು ಅರಮನೆ‌ ಗಯದಲ್ಲಿ ಬಲ್ನಾಡು ಹೊಳೆಗೆ ಸೇತುವೆ ಅಥವಾ ಸುಸಜ್ಜಿತ ತೂಗು ಸೇತುವೆ ನಿರ್ಮಾಣ ಇತ್ಯಾದಿ ಹಲವಾರು ವರ್ಷಗಳ ಬೇಡಿಕೆಗಳಿಗೆ ಸರಕಾರದಿಂದ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಸಂಘಟಿತ ಹೋರಾಟ ನಡೆಸುವ ಉದ್ದೇಶದಿಂದ ನಾಗರಿಕ ಹಿತರಕ್ಷಣಾ ವೇದಿಕೆ ರಚಿಸಲಾಗಿದೆ ಎಂದರು.

ಅಡ್ತಲೆ ವಾರ್ಡ್ ಮಟ್ಟದಲ್ಲಿ ಕಳೆದ ಐದಾರು ವರ್ಷಗಳಿಂದ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಸದಸ್ಯರ ಅನುದಾನಗಳ ನೆರವಿನಿಂದ ನಿರಂತರವಾಗಿ ನಡೆಯುತ್ತಿವೆ.ನಿಕಟಪೂರ್ವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸದಸ್ಯರು ಹಾಗೂ ಹಾಲಿ ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ವಾರ್ಡ್ ನ ಸರ್ವತೋಮುಖ ಅಭಿವೃದ್ಧಿ ಮತ್ತು ಜನರ ಜೀವನ ಮಟ್ಟ ಸುಧಾರಣೆಗೆ ಪ್ರಾಮಾಣಿಕವಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇವರೆಲ್ಲರಿಗೆ ಎಲ್ಲ ಸಾರ್ವಜನಿಕ ಬಂಧುಗಳ ಪರವಾಗಿ ಅಭಿನಂದನೆಗಳು. ಆದರೆ ತಳಮಟ್ಟದ ಜನಪ್ರತಿನಿಧಿಗಳ ಆರ್ಥಿಕ ಅನುದಾನದ ವ್ಯಾಪ್ತಿಯನ್ನು ಮೀರಿದ ಮತ್ತು ಅತೀ ಅಗತ್ಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಲವಾರು ವರ್ಷಗಳಿಂದ ನಿರಂತರ ಮನವಿ ಮಾಡಿಯೂ  ಯಾವುದೇ ಸ್ಪಂದನೆ ದೊರೆಯದ ಕಾರಣ ಗ್ರಾಮಸ್ಥರ ನೆರವಿನೊಂದಿಗೆ ಸಂಘಟಿತ ಹೋರಾಟ ಮಾಡಿ ನ್ಯಾಯ ಪಡೆಯುವ ಉದ್ದೇಶದಿಂದ ನಾಗರಿಕ ಹಿತರಕ್ಷಣಾ ವೇದಿಕೆ ರಚನೆ ಮಾಡಲಾಗಿದೆ ಎಂದರು.

ಸಾರ್ವಜನಿಕರ ಸಲಹೆಯಂತೆ ರಸ್ತೆ ಅಗಲೀಕರಣ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಅರಂತೋಡು – ಎಲಿಮಲೆ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯನ್ನು ರಚಿಸಲಾಯಿತು. ಅಲ್ಲದೇ ಇನ್ನು ಮುಂದೆ ಎರಡೂ ಸಂಘಟನೆಗಳು ಜಂಟಿಯಾಗಿ ಹೋರಾಟವನ್ನು ತೀವ್ರಗೊಳಿಸುವ ನಿರ್ಧಾರಕ್ಕೆ ಬರಲಾಯಿತು. ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯ ಗೌರವಾಧ್ಯಕ್ಷರಾಗಿ  ಚಿದಾನಂದ ಮಾಸ್ಟರ್ ಅಡ್ತಲೆ, ಅಧ್ಯಕ್ಷರಾಗಿ ಮೋಹನ್ ಅಡ್ತಲೆ, ಉಪಾಧ್ಯಕ್ಷರುಗಳಾಗಿ, ರೇಣುಕಾ ಬಲ್ಕಾಡಿ ಹಾಗೂ ಸಂತೋಷ್ ಕಿರ್ಲಾಯ, ಕಾರ್ಯದರ್ಶಿಯಾಗಿ ತೀರ್ಥರಾಮ ಕೊಚ್ಚಿ, ಜತೆ ಕಾರ್ಯದರ್ಶಿಯಾಗಿ ನಂದಕುಮಾರ್ ಅಡ್ತಲೆ, ಖಜಾಂಜಿಯಾಗಿ ಸುನಿಲ್ ಅಡ್ತಲೆ ಆಯ್ಕೆಯಾದರು. ಸದಸ್ಯರುಗಳಾಗಿ ಶರತ್ ಚೋಡಿಪಣೆ, ದಾಮೋದರ ಪೂಜಾರಿಮನೆ, ಯಶವಂತ ನಂಗಾರು, ಕಿಶೋರ್ ಅಡ್ಕ, ನರೇಂದ್ರ ಚಿಮಾಡು, ಯಶವಂತ ಚಿಮಾಡು, ಯತೀಶ್ ದೀಟಿಗೆ, ಜೀವನ್ ಪಿಂಡಿಮನೆ, ದೊಡ್ಡಯ್ಯ ಪಿಂಡಿಮನೆ, ಹರೀಶ್ ಎ. ಕೆ. ಅಡ್ತಲೆ ಗಿರೀಶ್ ಎ. ಹೆಚ್.ಅಡ್ತಲೆ,ಪುರುಷೋತ್ತಮ್ ಓಟೆಡ್ಕ, ಕಮಲಾಕ್ಷ ಓಟೆಡ್ಕ, ಕರುಣಾಕರ ಮೇಲಡ್ತಲೆ, ಚೇತನ್ ಎಮ್. ಎ. ಬೆದ್ರುಪಣೆ, ಶಿವರಾಮ ಕಲ್ಲುಗದ್ದೆ, ಜ್ಞಾನೇಶ್ ಕಾಯರ, ಚರಣ್ ಕಾಯರ, ಜಯಪ್ರಕಾಶ್ ಬಲ್ಕಾಡಿ, ರವೀಂದ್ರ ಬಾಳೆತೋಟ, ಲವಕುಮಾರ್ ಬಲ್ಕಾಡಿ, ಸತೀಶ್ ಬಲ್ಕಾಡಿ, ಪುರುಷೋತ್ತಮ್ ಮೇಲಡ್ತಲೆ ಆಯ್ಕೆಯಾದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |
April 29, 2025
9:00 AM
by: The Rural Mirror ಸುದ್ದಿಜಾಲ
ಮಂಗಳ ಗ್ರಹ ಸಂಚಾರ ಯೋಗ | ಈ 7 ರಾಶಿಗೆ ರಾಜಯೋಗ
April 29, 2025
8:00 AM
by: ದ ರೂರಲ್ ಮಿರರ್.ಕಾಂ
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |
April 28, 2025
10:21 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 28-04-2025 | ಇಂದು ಅಲ್ಲಲ್ಲಿ ಗುಡುಗು ಸಹಿತ ಮಳೆ | ಮೇ 1ರಿಂದ ಮಳೆ ಹೆಚ್ಚಾಗುವ ಲಕ್ಷಣ
April 28, 2025
2:22 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group