ಅಡಿಕೆಯ ಮಿತ ಬಳಕೆ ಆರೋಗ್ಯಕ್ಕೆ ಉತ್ತಮ | ಭಾರತದಲ್ಲಿ ಅಡಿಕೆಯ ಬಳಕೆ ಹೇಗೆ ? ಏಕೆ ? |

September 28, 2022
8:00 AM

ಪ್ರಪಂಚದಾದ್ಯಂತ ಅಡಿಕೆ ಹಾನಿಕಾರಕ ಎಂಬ ಭಯ ಹುಟ್ಟಿಸಲಾಗುತ್ತಿದೆ. ಅಡಿಕೆ ಕ್ಯಾನ್ಸರ್‌ಕಾರಕ ಎಂದೂ ಹೇಳಲಾಗುತ್ತದೆ. ಆದರೆ ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಅಡಿಕೆಯ ಬಳಕೆ ಪರಂಪರಾಗತವಾಗಿ ಬಂದಿದೆ. ಶತಮಾನಗಳಿಂದ ಅಡಿಕೆಯ ಮೂಲ ರೂಪದಲ್ಲಿ ಸೇವನೆ, ಅಡಿಕೆಯ ಮಿತ ಬಳಕೆ ಆರೋಗ್ಯದ ಮೇಲೆ ಯಾವ ಪರಿಣಾಮವೂ ಬೀರಿಲ್ಲ.ಹಾಗಿದ್ದರೆ ಭಾರತದಲ್ಲಿ ಅಡಿಕೆಯ ಬಳಕೆ ಹಾಗೂ ಅಡಿಕೆ ಹಾನಿಕಾರಕವಲ್ಲ ಎನ್ನುವ ಸಂದೇಶ ಸಾರಬೇಕಾಗಿದೆ.

Advertisement

ಭಾರತದಲ್ಲಿ ಪಾನ್ ತಿನ್ನುವ ಸಂಪ್ರದಾಯವು ಶತಮಾನಗಳಷ್ಟು ಹಳೆಯದು. ಗ್ರಾಮೀಣ ಭಾಗದಲ್ಲಿ ಇಂದಿಗೂ ಒಂದು ಬೀಡಾ ಇಲ್ಲದೇ ಇದ್ದರೆ ಯಾವ ಕಾರ್ಯಕ್ರಮಗಳೂ ಪರಿಪೂರ್ಣವಲ್ಲ. ಜನರು ಸಾಮಾನ್ಯವಾಗಿ ವೀಳ್ಯದೆಲೆ, ಸುಣ್ಣ ಮತ್ತು ಅಡಿಕೆಯ ಚೂರುಗಳೊಂದಿಗೆ ವೀಳ್ಯದೆಲೆಯನ್ನು ಜಗಿಯುತ್ತಾರೆ. ಆದರೆ ಬೇರೆ ಬೇರೆ ಕಡೆ ವಿಧಾನಗಳು ಮಾತ್ರಾ ಬೇರೆಯದೇ ಇದೆ. ದಕ್ಷಿಣ ಕನ್ನಡದ ಭಾಗದಲ್ಲಿ ಹಸಿ ಅಡಿಕೆಯನ್ನು ಜಗಿದರೆ, ಉತ್ತರ ಕನ್ನಡ ಭಾಗದಲ್ಲಿ ಕೆಂಪಡಿಕೆ ಜಗಿಯುತ್ತಾರೆ, ಉತ್ತರ ಭಾರತದ ಕಡೆಗೆ ಹೋದರೆ ಚಾಲಿ ಅಡಿಕೆಯನ್ನು ಜಗಿಯುತ್ತಾರೆ. ಅದನ್ನು ತಿನ್ನುವ ವಿಧಾನ ಮತ್ತು ರುಚಿ ವಿವಿಧ ಸ್ಥಳಗಳಲ್ಲಿ ಸ್ವಲ್ಪ ಭಿನ್ನವಾಗಿರುತ್ತದೆ. ಆದರೆ ನೀವು ವೀಳ್ಯದೆಲೆಯನ್ನು ಸರಳ ರೀತಿಯಲ್ಲಿ ಸೇವಿಸಿದರೆ, ಅದು ಅನೇಕ ಆರೋಗ್ಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುತ್ತವೆ, ಆರೋಗ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಶತಮಾನಗಳಿಂದಲೂ ಅನೇಕರು ಅಡಿಕೆ ಜಗಿಯುತ್ತಾರೆ, ಬೀಡಾ ಜಗಿಯುತ್ತಾರೆ. ವೀಳ್ಯದೆಲೆ ತಿನ್ನುವ ಪ್ರಯೋಜನಗಳು ಹೀಗಿವೆ…

ಕೆಮ್ಮು ಪರಿಹಾರ: ಆಂಟಿಆಕ್ಸಿಡೆಂಟ್‌ಗಳು ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ವೀಳ್ಯದೆಲೆಯಲ್ಲಿ ಕಂಡುಬರುತ್ತವೆ, ಇದು ಕೆಮ್ಮಿನ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಮಧುಮೇಹಿಗಳಿಗೆ ಪ್ರಯೋಜನಗಳು: ವೀಳ್ಯದೆಲೆಯಲ್ಲಿ ಮಧುಮೇಹ-ವಿರೋಧಿ ಗುಣಲಕ್ಷಣಗಳು ಕಂಡುಬರುತ್ತವೆ, ಇದು ಮಧುಮೇಹಿಗಳಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಇದನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬಹುದು.

ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸಿಕೊಳ್ಳಿ: ವೀಳ್ಯದೆಲೆಯನ್ನು ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆಯು ಆರೋಗ್ಯಕರವಾಗಿರುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುವಾಗ ಜೀರ್ಣಾಂಗ ವ್ಯವಸ್ಥೆಯನ್ನು ಹೆಚ್ಚಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ನೀವು ಜೀರ್ಣಕ್ರಿಯೆಯನ್ನು ಸುಧಾರಿಸಲು ಬಯಸಿದರೆ, ವೀಳ್ಯದೆಲೆ, ಬೀಡಾ ತಿನ್ನಿರಿ.

ಹಸಿವನ್ನು ಹೆಚ್ಚಿಸುತ್ತವೆ: ಹಸಿವಿನ ಕೊರತೆ ಇರುವವರು ಬೀಡಾ,ವೀಳ್ಯದೆಲೆಯನ್ನು ಸೇವಿಸಬೇಕು. ವೀಳ್ಯದೆಲೆಯನ್ನು ಜಗಿಯುವುದರಿಂದ ಹಸಿವು ಹೆಚ್ಚಾಗುತ್ತದೆ.

ಬಾಯಿ ಹುಣ್ಣುಗಳಿಂದ ಪರಿಹಾರ: ವೀಳ್ಯದೆಲೆಯ ಸೇವನೆಯಿಂದ ಬಾಯಿ ಹುಣ್ಣಿನ ಸಮಸ್ಯೆಯೂ ದೂರವಾಗುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾದ ಗುಣಲಕ್ಷಣಗಳು ಬಾಯಿಯಲ್ಲಿ ಸೋಂಕು ಹರಡುವುದನ್ನು ತಡೆಯಲು  ಸಹಾಯ ಮಾಡುತ್ತದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ
May 5, 2025
10:56 PM
by: ದ ರೂರಲ್ ಮಿರರ್.ಕಾಂ
ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ
May 5, 2025
12:21 PM
by: The Rural Mirror ಸುದ್ದಿಜಾಲ
ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ – ಅರಣ್ಯ ಸಚಿವ ಈಶ್ವರ ಖಂಡ್ರೆ
May 5, 2025
12:02 PM
by: The Rural Mirror ಸುದ್ದಿಜಾಲ
ಅಡಿಕೆ ಧಾರಣೆ ಏರಿಕೆಗೆ ಕಾರಣ ಇದೆ | ಈಗ ಅಡಿಕೆ ಮಾರುಕಟ್ಟೆಗೆ ಅನ್ವಯಿಸುವ ಸಿದ್ಧಾಂತಗಳು ಯಾವುದು..?
May 5, 2025
6:52 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group