ಚಿನ್ನ ಬೆಲೆ ಹಾಗೇ ಎತ್ತರಕ್ಕೇ ಏರುತ್ತಲೇ ಇದೆ. ಮಧ್ಯಮ ವರ್ಗ ಹಾಗೂ ಬಡವರು ಇದು ನಮ್ಮದಲ್ಲದ ವಸ್ತು ಎನ್ನು ಮಟ್ಟಿಗೆ ಚಿಂತಿತರಾಗಿದ್ದಾರೆ. ರಾಕೇಟ್ ವೇಗದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಏರುತ್ತಿದೆ. ಆಭರಣ ವ್ಯಾಪಾರ ಭಾರತದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭ. ಹಬ್ಬ, ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಖರೀದಿ ಭರಾಟೆ ಜೋರಾಗಿರುತ್ತದೆ. ಪ್ರಸ್ತುತ ಬೇಡಿಕೆಯ ಜೊತೆಗೆ ಇವೆರೆಡರ ಬೆಲೆಯೂ ಗಗನಕ್ಕೇರಿದೆ. ಈ ವರ್ಷ ಅಂತೂ ಚಿನ್ನ-ಬೆಳ್ಳಿ ದರಕ್ಕೆ ಮೂಗುದಾರ ಬೀಳುವಂತೆ ಕಾಣುತ್ತಿಲ್ಲ. ದೇಶ-ವಿದೇಶದಲ್ಲಿ ಆಗುತ್ತಿರುವ ಕೆಲ ಘಟನೆಗಳು, ಯುಸ್ ಡಾಲರ್, ಹಣದುಬ್ಬರ ಎಲ್ಲವೂ ಬೆಲೆ ಏರಿಕೆಗೆ ಸ್ಪಷ್ಟವಾಗಿ ಕಾರಣವಾಗಿವೆ.
ಇನ್ನೂ ಚಿನ್ನ ಒಡವೆಯಾಗಿಯಲ್ಲದೇ, ಹೂಡಿಕೆದಾರರ ನೆಚ್ಚಿನ ವಸ್ತುವಾಗಿ ಎಲ್ಲೆಡೆ ಗಮನಸೆಳೆಯುತ್ತಿದೆ. ಹಾಗಾಗಿ ಚಿನ್ನದ ಮೇಲಿನ ಹೂಡಿಕೆ ಆಕರ್ಷಕ ಹೂಡಿಕೆಯಾಗಿ ಮುನ್ನೆಲೆಗೆ ಬರುತ್ತಿದೆ. ಎಫ್‌ಡಿಯಂತಹ ಉಳಿತಾಯ ಯೋಜನೆಗಳನ್ನು ಹೇಗೆ ಮಾಡಿಸಿಕೊಳ್ಳುತ್ತೀರೋ ಅದೇ ರೀತಿ ಬಂಗಾರ ಮಾಡಿಸಿಕೊಳ್ಳುವುದು ಸಹ ಉಳಿತಾಯವಾಗಿದೆ. ಈಗಿನ ಬೆಲೆಯಿಂದಾಗಿ ಅನೇಕರಿಗೆ ಒಂದೇ ಬಾರಿಗೆ ಹೆಚ್ಚು ಮೌಲ್ಯದ ಚಿನ್ನ ಖರೀದಿ ಸಾಧ್ಯವಿಲ್ಲ. ಅಂಥವರು ಸಾಧ್ಯ ಆದಾಗಲೆಲ್ಲ ಎಷ್ಟಾಗತ್ತೋ ಅಷ್ಟು ಚಿನ್ನ ಖರೀದಿ ಮಾಡಿಟ್ಟುಕೊಳ್ಳಬೇಕು. ಈ ವಿದ್ಯಾಮಾನ ಹೂಡಿಕೆ ಜೊತೆಗೆ ಹಾಕಿಕೊಳ್ಳಲು ಬಂಗಾರ ಮಾಡಿಸಿಕೊಂಡತೆಯೂ ಆಗುತ್ತದೆ. ನಮ್ಮ ಓದುಗರ ಮಾಹಿತಿಗೆಂದು ಹಾಗೂ ಚಿನ್ನಾಭರಣ ಕೊಳ್ಳಬಯಸುತ್ತಿರುವ ಗ್ರಾಹಕರು ಹಾಗೂ ಹೂಡಿಕೆದಾರರಿಗೆ ಉಪಯುಕ್ತವಾಗಲೆಂದು ನಾವು ನಿತ್ಯದ ದರ ವಿವರದ ಅಪ್ಡೇಟ್ ನೀಡುತ್ತೇವೆ.
ಭಾರತದಲ್ಲಿ ಇಂದು ಚಿನ್ನದ ಬೆಲೆ: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಒಂದು ಗ್ರಾಂ) ರೂ. 6,629 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 6,689 ರೂ. 6,629, ರೂ. 6,629 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 6,644 ರೂ. ಆಗಿದೆ. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರ ನೋಡುವುದಾದರೆ ಒಂದು ಗ್ರಾಂ (1GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,423, ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 6,629 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,232 ಆಗಿದೆ. ಅದೇ ಎಂಟು ಗ್ರಾಂ (8GM) 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 43,384 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 53,032 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 57,856 ಆಗಿದೆ. ಇನ್ನು ಹತ್ತು ಗ್ರಾಂ (10GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 54,230 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 66,290 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 72,320 ಆಗಿದೆ. ಇನ್ನು ನೂರು ಗ್ರಾಂ (100GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,42,300 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 6,62,900 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,23,200 ಆಗಿದೆ.
ಬೆಳ್ಳಿ ದರ : ಇಂದು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ದರ ರೂ. 90,900 ಆಗಿದೆ. ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 909, ರೂ. 9,090 ಹಾಗೂ ರೂ. 90,900 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 95,500 ಆಗಿದ್ದರೆ, ದೆಹಲಿಯಲ್ಲಿ ರೂ. 90,900, ಮುಂಬೈನಲ್ಲಿ ರೂ. 90,900 ಹಾಗೂ ಕೊಲ್ಕತ್ತದಲ್ಲೂ ರೂ. 90,900 ಗಳಾಗಿದೆ.
(ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.)
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…