ಒಡಿಸಾದಲ್ಲಿ ಸಂಭವಿಸಿದ ರೈಲುಗಳ ದುರಂತದ ಬಳಿಕ ಇದೀಗ ಭಾರತೀಯ ರೈಲ್ವೆ ಇಲಾಖೆ ಎಚ್ಚರಿಕೆ ವಹಿಸಿದೆ. ಮುಂದೆ ಇಂತಹ ಪ್ರಕರಣಗಳು ಸಂಭವಿಸದಂತೆ ನೋಡಿಕೊಳ್ಳಲು ನಿರ್ಧರಿಸಿದೆ. ಅದಕ್ಕಾಗಿ ದೇಶದಾದ್ಯಂತ ಸಿಗ್ನಲಿಂಗ್ ವ್ಯವಸ್ಥೆ ಹಾಗೂ ಸುರಕ್ಷತಾ ಅಭಿಯಾನಕ್ಕೆ ಮುಂದಾಗಿದೆ.
Advertisement
ಒಡಿಸಾ ದುರ್ಘಟನೆ ಬಳಿಕ ರೈಲ್ವೇ ಇಲಾಖೆ ಅಧಿಕಾರಿಗಳು ದೇಶಾದ್ಯಂತ ಸುರಕ್ಷತಾ ಆಂದೋಲನವನ್ನು ಆಯೋಜಿಸಲು ಸಜ್ಜಾಗಿದ್ದಾರೆ. ಸಿಗ್ನಲಿಂಗ್ ವ್ಯವಸ್ಥೆ ಮತ್ತು ಇಂಟರ್‌ಲಿಂಕ್‌ನಲ್ಲಿನ ದೋಷಗಳಿಂದಾಗಿ ಒಡಿಶಾದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಇದೀಗ ಭಾರತೀಯ ರೈಲ್ವೆ ಅಧಿಕಾರಿಗಳು ದೇಶಾದ್ಯಂತ ಸಿಗ್ನಲಿಂಗ್ ವ್ಯವಸ್ಥೆ ಮತ್ತು ಡಬಲ್ ಲಾಕಿಂಗ್ ವ್ಯವಸ್ಥೆಯತ್ತ ಗಮನ ಹರಿಸಿದ್ದಾರೆ. ವಾರಕ್ಕೊಮ್ಮೆ ಸುರಕ್ಷತಾ ಅಭಿಯಾನ ನಡೆಸಿ ತಪಾಸಣೆ ನಡೆಸಲು ಮುಂದಾಗಿದ್ದಾರೆ.
Advertisement
ಒಡಿಸಾದಲ್ಲಿ ರೈಲು ಅಪಘಾತದ ಸ್ಥಳದಿಂದ ಎಲ್ಲವನ್ನೂ ತೆರವುಗೊಳಿಸಲಾಗಿದೆ. ರೈಲು ಸೇವೆಯು ಮೊದಲಿನಂತೆಯೇ ಮುಂದುವರಿಸಲಾಗಿದೆ. ಈ ಘಟನೆ ಕುರಿತು ಸಿಬಿಐ ತನಿಖೆಗೆ ರೈಲ್ವೇ ಇಲಾಖೆ ಶಿಫಾರಸು ಮಾಡಿರುವುದರಿಂದ ಶೀಘ್ರವೇ ಸಿಬಿಐ ಫೀಲ್ಟ್‌ಗೆ ಇಳಿಯಲಿದೆ. ಬಳಿಕ ಸಮಗ್ರ ತನಿಖೆ ನಡೆಸಿ ವರದಿ ನೀಡಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement