#KRSDam | ಕೊಂಚ ಭರವಸೆ ಮೂಡಿಸಿ ಮತ್ತೆ ಕೈಕೊಟ್ಟ ಮಳೆ | ಮೂರೇ ದಿನಕ್ಕೆ ಕೆಆರ್‌ಎಸ್ ಒಳಹರಿವಿನಲ್ಲಿ ತೀವ್ರ ಕುಸಿತ

October 6, 2023
4:50 PM
KRS Damನ 11,800 ಕ್ಯೂಸೆಕ್‍ನಿಂದ 4,046 ಕ್ಯೂಸೆಕ್‍ಗೆ ಒಳಹರಿವು ಇಳಿಕೆಯಾಗಿದ್ದು, ಇದರಿಂದ ಮತ್ತೆ ಮಂಡ್ಯ ಜಿಲ್ಲೆಯ ಅನ್ನದಾತರು ಸೇರಿದಂತೆ ಕಾವೇರಿ ನೀರು ಆಶ್ರಯಿಸಿದ ಜನರಿಗೆ ತೀವ್ರ ಆಘಾತ ಉಂಟಾಗಿದೆ. ಒಳಹರಿವು ಹೆಚ್ಚಳದಿಂದ ಕೆಆರ್‌ಎಸ್‌ಗೆ 3 ಟಿಎಂಸಿ ನೀರು ಹರಿದು ಬಂದಿತ್ತು. ಸದ್ಯ ಡ್ಯಾಂ 101.80 ಅಡಿ ಭರ್ತಿಯಾಗಿದೆ.

ಕಳೆದ ವಾರ ಕೊಂಚ ಮಟ್ಟಿಗೆ ಮಳೆ ಸುರಿಯವ ಲಕ್ಷಣ ಕಂಡುಬಂದಿತ್ತು. ಕೆಲವೆಡೆ ಮಳೆಯೂ ಅಗಿ ಸ್ವಲ್ಪ ಮಟ್ಟಿಗೆ ಕೆಆರ್ ಎಸ್ ಗೆ ನೀರು ಹರಿದು ಬಂದಿತ್ತು. ಆದರೆ ಮಳೆ ನಿರೀಕ್ಷೆಯಲ್ಲಿದ್ದ ಹಳೆ ಮೈಸೂರು ಭಾಗದ ಜನರಿಗೆ ಮತ್ತೆ ನಿರಾಸೆ ಉಂಟಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ನಿಂತ ಹಿನ್ನೆಲೆ ಮೂರೇ ದಿನಕ್ಕೆ ಕೆಆರ್‍ಎಸ್ ಡ್ಯಾಂಗೆ ಒಳಹರಿವು ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಮೂಲಕ ಡ್ಯಾಂಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಗಣನೀಯ ಇಳಿಕೆ ಕಂಡಿದೆ.

Advertisement
11,800 ಕ್ಯೂಸೆಕ್‍ನಿಂದ 4,046 ಕ್ಯೂಸೆಕ್‍ಗೆ ಒಳಹರಿವು ಇಳಿಕೆಯಾಗಿದ್ದು, ಇದರಿಂದ ಮತ್ತೆ ಮಂಡ್ಯ ಜಿಲ್ಲೆಯ ಅನ್ನದಾತರು ಸೇರಿದಂತೆ ಕಾವೇರಿ ನೀರು ಆಶ್ರಯಿಸಿದ ಜನರಿಗೆ ತೀವ್ರ ಆಘಾತ ಉಂಟಾಗಿದೆ. ಒಳಹರಿವು ಹೆಚ್ಚಳದಿಂದ ಕೆಆರ್‌ಎಸ್‌ಗೆ 3 ಟಿಎಂಸಿ ನೀರು ಹರಿದು ಬಂದಿತ್ತು. ಸದ್ಯ ಡ್ಯಾಂ 101.80 ಅಡಿ ಭರ್ತಿಯಾಗಿದೆ.

ಒಂದು ವೇಳೆ ಮಳೆ ಮುಂದುವರೆದರೆ ಬೆಳೆ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ದೂರಾಗುವ ನಿರೀಕ್ಷೆ ಜನರಲ್ಲಿತ್ತು. ಆದರೆ ಮೂರೇ ದಿನಕ್ಕೆ ಮಳೆರಾಯ ಕೈಕೊಟ್ಟಿದ್ದಾನೆ. ಇಂದರಿಂದ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾವೇರಿ ವಿವಾದ ಮುಂದುವರೆಯುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ.

ಮತ್ತೊಂದೆಡೆ ರಾಜ್ಯ ಸರ್ಕಾರ ಹಾಗೂ ಕಾವೇರಿ ಪ್ರಾಧಿಕಾರದ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆಗಳು ಇಂದು ಸಹ ಮುಂದುವರಿದಿವೆ. 32ನೇ ದಿನಕ್ಕೆ ರೈತ ಹಿತರಕ್ಷಣಾ ಸಮಿತಿಯ ಸತ್ಯಾಗ್ರಹ ಕಾಲಿಟ್ಟಿದೆ. ಇಂದಿನ ಧರಣಿಯಲ್ಲಿ ಪತ್ರಕರ್ತರು ಭಾಗಿಯಾಗಿ ಸರ್ಕಾರದ ಮೇಲೆ ಒತ್ತಡ ಹಾಕಲಿದ್ದಾರೆ. ಕನ್ನಡ ಸೇನೆಯಿಂದಲೂ ಸಂಜಯ ಸರ್ಕಲ್‍ನಿಂದ ವಿಶ್ವೇಶ್ವರಯ್ಯ ಪ್ರತಿಮೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಅತ್ತ ಶ್ರೀರಂಗಪಟ್ಟಣದಲ್ಲೂ ಸಹ ಭೂಮಿ ತಾಯಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

– ಅಂತರ್ಜಾಲ ಮಾಹಿತಿ

 

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬಂಡಿಪುರ ಅರಣ್ಯದಲ್ಲಿ ವಾಹನಗಳ ರಾತ್ರಿ ಸಂಚಾರ ನಿರ್ಬಂಧ ತೆರವಿಗೆ ಚರ್ಚಿಸಿ ನಿರ್ಧಾರ | ಅರಣ್ಯ ಸಚಿವ ಈಶ್ವರ್ ಖಂಡ್ರೆ
March 29, 2025
9:58 AM
by: The Rural Mirror ಸುದ್ದಿಜಾಲ
ಬೇಸಿಗೆ ಹಿನ್ನೆಲೆ | ರಾಜ್ಯದ ಜಲಾಶಯಗಳಿಂದ ಕುಡಿಯುವ ನೀರು ಬಿಡುಗಡೆ ಕುರಿತು ಚರ್ಚೆ
March 29, 2025
9:54 AM
by: The Rural Mirror ಸುದ್ದಿಜಾಲ
ವಿಶೇಷ ಕಾಫಿ ಉತ್ಪನ್ನಗಳ ಬಿಡುಗಡೆ | ಡಿಪ್ ಕಾಫಿ ಬ್ಯಾಗ್ ಗಳನ್ನು ಪರಿಚಯಿಸಿದ ಕಾಫಿ ಬೋರ್ಡ್
March 29, 2025
9:49 AM
by: The Rural Mirror ಸುದ್ದಿಜಾಲ
ರಸಗೊಬ್ಬರಗಳ ಬೆಲೆ ಸ್ಥಿರವಾಗಿರಿಸಲು ಕ್ರಮ | 45 ಕೆ.ಜಿ. ಯೂರಿಯಾ ಬೆಲೆ 242 ರೂ.ಗೆ ನಿಗದಿ
March 29, 2025
9:39 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group