ಪಂಚಮಹಾಯಜ್ಞಗಳಲ್ಲಿ ಸುಲಭವಾಗಿ ಮತ್ತು ಎಲ್ಲರೂ ಮಾಡಬಹುದಾದ ಯಜ್ಞವೆಂದರೆ ಅಗ್ನಿಹೋತ್ರ.! ವೇದ(Veda) ಮತ್ತು ವೈದಿಕ(Vaidika) ಸಂಸ್ಕೃತಿಯಷ್ಟೇ ಅಗ್ನಿಹೋತ್ರದ ಇತಿಹಾಸವೂ ಪ್ರಾಚೀನವಾಗಿದೆ.
ಅನಾದಿಕಾಲದಿಂದಲೂ ಅಗ್ನಿಹೋತ್ರವು ಮನುಷ್ಯನ(Human)ದೈನಂದಿನ ದಿನಚರಿಯಲ್ಲಿ ಸಂಧ್ಯೆಯ ರೂಪದಲ್ಲಿ ಹಾಸು ಹೊಕ್ಕಾಗಿದೆ. ಶಾಸ್ತ್ರಗಳಿಗೆ ವಿರುದ್ಧವಾದ ಮನುಷ್ಯನ ಕರ್ಮಗಳಿಂದ ಪ್ರಕೃತಿಯಲ್ಲಿ(Environment) ಆಗುವ ಮಾಲಿನ್ಯವನ್ನು(Pollution) ಶಮನಗೊಳಿಸುವ ಉಪಕರಣವೆಂದರೆ ಅಗ್ನಿಹೋತ್ರ. ದೇವಯಜ್ಞ ಅಥವಾ ಅಗ್ನಿಹೋತ್ರವನ್ನು ಮಾಡುವುದರಿಂದ ವಾಯು(Air), ಮಳೆ(Rain) ಮತ್ತು ಜಲ(Water) ಇವುಗಳ ಶುದ್ಧಿಯಾಗುತ್ತದೆ, ಒಳ್ಳೆಯ ಮಳೆಯಾಗಿ ಸಂಪೂರ್ಣ ಜಗತ್ತಿಗೆ ಸುಖ ಪ್ರಾಪ್ತಿಯಾಗುತ್ತದೆ.
ಹವನಪಾತ್ರ : ಅಗ್ನಿಹೋತ್ರಕ್ಕಾಗಿ ವಿಶಿಷ್ಟ ಆಕಾರದ ತಾಮ್ರದ ಪಿರಮಿಡ್ ಪಾತ್ರೆ
ಗೋವಂಶದ ಬೆರಣಿ : ಅಗ್ನಿಹೋತ್ರಕ್ಕಾಗಿ ಅಗ್ನಿಯನ್ನು ತಯಾರಿಸಲು ದೇಶಿ ಗೋವುಗಳ ಸೆಗಣಿಯ ಬೆರಣಿ
ಅಕ್ಕಿ (ಅಕ್ಷತೆ) : ಪಾಲಿಶ್ ಮಾಡದ ಅಖಂಡ ಅಕ್ಕಿಯನ್ನೇ ಉಪಯೋಗಿಸಬೇಕು
ಆಕಳ ತುಪ್ಪ : ದೇಶಿ ಆಕಳಿನ ತುಪ್ಪವನ್ನು ಬಳಸಿ
ಶುದ್ಧ ಕರ್ಪೂರ : ಇದನ್ನು ಅಗ್ನಿ ಪ್ರಜ್ವಲಿಸಲು ಅಥವಾ ಆಹುತಿ ಎಂದು ಅರ್ಪಿಸಲು
ಇತರ ಸಾಮಗ್ರಿಗಳು : ಬೆಂಕಿ ಪೊಟ್ಟಣ, ತಾಮ್ರದ ತಟ್ಟೆ, ಚಮಚ, ಕೈಬೀಸಣಿಗೆ, ವಿಭೂತಿ ಸಂಗ್ರಹಿಸಿಡಲು ಗಾಜಿನ ಅಥವಾ ಮಣ್ಣಿನ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿಯೇ ಅಗ್ನಿಹೋತ್ರವನ್ನು ಮಾಡಬೇಕು
ಸೃಷ್ಟಿಯಲ್ಲಿರುವ ಪ್ರತಿಯೊಂದು ವಿಷಯವು ಸ್ಥಳ, ಕಾಲ ಮತ್ತು ಸಮಯಕ್ಕೆ ಬದ್ಧವಾಗಿರುತ್ತದೆ. ಕಾಲಕ್ಕನುಸಾರ ಪ್ರತಿಯೊಂದು ವಿಷಯದ ಸ್ಥಳ ಮತ್ತು ಅದಕ್ಕನುಸಾರ ಆ ಕೃತಿ ಘಟಿಸಲು ಬೇಕಾಗುವ ಸಮಯವು ಈಶ್ವರನ ಯೋಜನೆಯೇ ಆಗಿರುತ್ತವೆ. ಆದ್ದರಿಂದ ಯಾವುದಾದರೊಂದು ಕೃತಿಯನ್ನು ಕಾಲಕ್ಕನುಸಾರ (ಮುಹೂರ್ತಕ್ಕನುಸಾರ) ಮಾಡಿದರೆ ವ್ಯಕ್ತಿಗೆ ಅಪೇಕ್ಷಿತ ಲಾಭ ಸಿಗುತ್ತದೆ. ಆದುದರಿಂದ ಸೂರ್ಯೋದಯದ ಸಮಯದಲ್ಲಿ ಮತ್ತು ಸೂರ್ಯಾಸ್ತದ ಸಮಯದಲ್ಲಿ ಅಗ್ನಿಹೋತ್ರವನ್ನು ಮಾಡುವುದಕ್ಕೆ ಮಹತ್ವವಿದೆ.
ಅಗ್ನಿಹೋತ್ರದ ಪ್ರತ್ಯಕ್ಷ ಕೃತಿಯನ್ನು ಮಾಡುವ ವಿಧಾನ ಯೋಗ್ಯ ದಿಕ್ಕು : ಅಗ್ನಿಹೋತ್ರ ಮಾಡುವಾಗ ಪೂರ್ವದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು.
ಅಗ್ನಿಹೋತ್ರಕ್ಕಾಗಿ ಅಗ್ನಿಯನ್ನು ಪ್ರಜ್ವಲಿಸುವ ಕೃತಿ : ಹವನಪಾತ್ರೆಯಲ್ಲಿ ಎಲ್ಲಕ್ಕಿಂತ ಕೆಳಗೆ ಸಣ್ಣ ಆಕಾರದ ಒಂದು ಬೆರಣಿಯ ಚಪ್ಪಟೆ ತುಂಡನ್ನು ಇಡಬೇಕು. ಅದರ ಮೇಲೆ ತುಪ್ಪವನ್ನು ಹಚ್ಚಿದ ಬೆರಣಿಗಳ ತುಂಡುಗಳನ್ನು (ಬೆರಣಿಯ ನೇರ ಮತ್ತು ಅಡ್ಡ ತುಂಡುಗಳ 2-3 ಪದರು) ಇಡಬೇಕು. ಎರಡು ಬೆರಣಿಗಳ ನಡುವೆ ಗಾಳಿ ಓಡಾಡುವ ಹಾಗೆ ಟೊಳ್ಳಿರಬೇಕು. ನಂತರ ಬೆರಣಿಯ ಒಂದು ತುಂಡಿಗೆ ಆಕಳ ತುಪ್ಪವನ್ನು ಹಚ್ಚಿ ಪ್ರಜ್ವಲಿಸಬೇಕು ಮತ್ತು ಆ ತುಂಡನ್ನು ಹವನಪಾತ್ರೆಯಲ್ಲಿಡಬೇಕು. ಸ್ವಲ್ಪ ಸಮಯದಲ್ಲಿ ಬೆರಣಿಗಳ ಎಲ್ಲ ತುಂಡುಗಳು ಪ್ರಜ್ವಲಿಸುವವು. ಅಗ್ನಿಯನ್ನು ಪ್ರಜ್ವಲಿಸಲು ಗಾಳಿ ಹಾಕಲು ಕೈಬೀಸಣಿಗೆಯನ್ನು ಉಪಯೋಗಿಸಬೇಕು; ಬಾಯಿಯಿಂದ ಊದಿ ಅಗ್ನಿಯನ್ನು ಪ್ರಜ್ವಲಿಸಬಾರದು, ಏಕೆಂದರೆ ಹೀಗೆ ಮಾಡುವುದರಿಂದ ಬಾಯಿಯಲ್ಲಿನ ರೋಗಜಂತುಗಳು ಅಗ್ನಿಯಲ್ಲಿ ಹೋಗುತ್ತವೆ. ಅಗ್ನಿಯನ್ನು ಪ್ರಜ್ವಲಿಸಲು ಸೀಮೆಎಣ್ಣೆಯಂತಹ ಜ್ವಲನಶೀಲ ಪದಾರ್ಥಗಳನ್ನು ಉಪಯೋಗಿಸಬಾರದು. ಅಗ್ನಿಯನ್ನು ಧೂಮರಹಿತವಾಗಿ ಪ್ರಜ್ವಲಿಸಬೇಕು, ಅಂದರೆ ಅದರಿಂದ ಹೊಗೆ ಬರಬಾರದು.
ಹವನ ಸಾಮಗ್ರಿಗಳನ್ನು ಅಗ್ನಿಗೆ ಅರ್ಪಿಸುವುದು ಎರಡು ಚಿಟಿಕೆ ಅಕ್ಕಿಯನ್ನು ಅಂಗೈಯಲ್ಲಿ ಅಥವಾ ಒಂದು ತಾಮ್ರದ ತಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಅದರ ಮೇಲೆ ಕೆಲವು ಹನಿ ಆಕಳ ತುಪ್ಪವನ್ನು ಹಾಕಬೇಕು. ಸೂರ್ಯೋದಯಕ್ಕೆ (ಹಾಗೂ ಸೂರ್ಯಾಸ್ತದ) ಸರಿಯಾದ ಸಮಯದಲ್ಲಿ ಕೆಳಗೆ ನೀಡಿರುವ ಮಂತ್ರಗಳ ಪೈಕಿ ಮೊದಲನೆಯ ಸಾಲನ್ನು ಒಮ್ಮೆ ಹೇಳಬೇಕು ಮತ್ತು ಸ್ವಾಹಾ ಶಬ್ದವನ್ನು ಹೇಳಿದ ನಂತರ ಬಲಗೈಯ ಮಧ್ಯಮೆ (ಮಧ್ಯದ ಬೆರಳು), ಅನಾಮಿಕೆ (ಕಿರುಬೆರಳಿನ ಹತ್ತಿರದ ಬೆರಳು) ಮತ್ತು ಹೆಬ್ಬೆರಳಿನ ಚಿಟಿಕೆಯಲ್ಲಿ (ಈ ಸಮಯದಲ್ಲಿ ಹೆಬ್ಬೆರಳನ್ನು ಮೇಲ್ಮುಖವಾಗಿ ಅಂದರೆ ಆಕಾಶದತ್ತ ಮಾಡಿಡಬೇಕು) ಮೇಲಿನ ಅಕ್ಕಿ–ತುಪ್ಪದ ಮಿಶ್ರಣವನ್ನು ತೆಗೆದುಕೊಂಡು ಅಗ್ನಿಯಲ್ಲಿ ಹಾಕಬೇಕು. (ಬೆರಳುಗಳ ಚಿಟಿಕೆಯಲ್ಲಿ ಹಿಡಿಸುವಷ್ಟು ಅಕ್ಕಿ ಸಾಕಾಗುತ್ತದೆ.) (ಚಿತ್ರ ನೋಡಿ) ಆಮೇಲೆ ಎರಡನೇ ಸಾಲನ್ನು ಒಮ್ಮೆ ಹೇಳಬೇಕು ಮತ್ತು ಸ್ವಾಹಾ ಶಬ್ದವನ್ನು ಹೇಳಿದ ನಂತರ ಬಲಗೈಯಿಂದ ಮೇಲಿನ ಅಕ್ಕಿ–ತುಪ್ಪದ ಮಿಶ್ರಣವನ್ನು ಅಗ್ನಿಯಲ್ಲಿ ಹಾಕಬೇಕು.
ಪ್ರಿಯಾಂಕಾ ಗಾಡ್ಗೀಳ್, ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.