ಅಗ್ನಿಪಥ ಯೋಜನೆಗೆ ದಿಲ್ಲಿ ಹೈಕೋರ್ಟ್ ಅಸ್ತು | ರಾಷ್ಟ್ರೀಯ ಹಿತಾಸಕ್ತಿಯ ಯೋಜನೆ ಎಂದ ಕೋರ್ಟ್ |

February 28, 2023
2:35 PM

ದೇಶದ ಯುವಕರ ಶಕ್ತಿಯನ್ನು ಬಳಸಿಕೊಂಡು ಸೇನೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ  ಯೋಜನೆ  ಅಗ್ನಿಪಥ ಯೋಜನೆ. ಈ ಯೋಜನೆ ಜಾರಿಯಾದ ಕೋಡಲೇ ದೇಶದಾದ್ಯಂತ ಭಾರಿ ಪರ ವಿರೋಧ ಚರ್ಚೆಗಳು ನಡೆದವು. ಕೆಲವರು ಇದು ಸರಿಯಾದ ಯೋಜನೆ ಅಂದ್ರೆ ಇದರಿಂದ ಯುವಕರಿಗೆ ಏನು ಲಾಭವಿಲ್ಲ ಎಂದು ವಾದಿಸಿದರು. ಹಾಗಾಗಿ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳುವ ಕೇಂದ್ರ ಸರಕಾರದ ಅಗ್ನಿಪಥ ಯೋಜನೆಯನ್ನು ಪ್ರಶ್ನಿಸಿ ದಿಲ್ಲಿ ಹೈಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿತ್ತು.  ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್‌ ಅವರಿದ್ದ ವಿಭಾಗೀಯ ಪೀಠವು ಈಗ ಈ ಅರ್ಜಿಯನ್ನು ವಜಾಗೊಳಿಸಿದೆ. ದೇಶದ ಹಿತಸಾಕ್ತಿಯ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.

Advertisement
Advertisement
Advertisement
Advertisement

ನೇಮಕಾತಿ ಪ್ರಕ್ರಿಯೆಗಳ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ದಿಲ್ಲಿ ಹೈಕೋರ್ಟ್‌ ಕಳೆದ ವರ್ಷ ಡಿಸೆಂಬರ್‌ನಲ್ಲಿ ತೀರ್ಪು ಕಾಯ್ದಿರಿಸಿತ್ತು. ಸಶಸ್ತ್ರ ಪಡೆಗಳ ನೇಮಕಾತಿ ನಿಯಮಾವಳಿಗಳಿಗೆ ಮಹತ್ವದ ಬದಲಾವಣೆ ತರುವ ಮೂಲಕ 2022ರ ಜೂನ್‌ನಲ್ಲಿ ಅಗ್ನಿಪಥ ಯೋಜನೆಯನ್ನು ಪರಿಚಯಿಸಲಾಯಿತು. ಈ ಯೋಜನೆಯ ಅಡಿಯಲ್ಲಿ 17.5 ವರ್ಷ ವಯಸ್ಸಿನವರಿಂದ 21 ವರ್ಷ ವಯಸ್ಸಿನೊಳಗಿನ 46,000 ಜನರನ್ನು ‘ಅಗ್ನಿವೀರರು’ ಎಂಬ ಹೆಸರಿನಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

Advertisement

ಭಾರತೀಯ ಸೇನೆಯ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಗಳಿಗೆ ನಾಲ್ಕು ವರ್ಷದ ಅವಧಿಗೆ ನೇಮಕಾತಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಬಳಿಕ ಸರಕಾರವು 2022ನೇ ಸಾಲಿನ ನೇಮಕಾತಿಗೆ ಗರಿಷ್ಠ ವಯೋಮಿತಿಯನ್ನು 23 ವರ್ಷಕ್ಕೆ ವಿಸ್ತರಿಸಿತು. ನಾಲ್ಕು ವರ್ಷದ ಅವಧಿಯ ಸೇವೆ ಮತ್ತು ತರಬೇತಿಯನ್ನು ಪೂರೈಸಿದ ಅಗ್ನಿವೀರರಲ್ಲಿ ಶೇಕಡ 25ರಷ್ಟು ಅಭ್ಯರ್ಥಿಗಳನ್ನು ಮಾತ್ರ ಕಾಯಂ ಹುದ್ದೆಗಳಿಗೆ ನಿಯೋಜಿಸಲಾಗುತ್ತದೆ. ಉಳಿದ ಅಭ್ಯರ್ಥಿಗಳು ಸೇವೆಯಿಂದ ನಿವೃತ್ತಿ ಹೊಂದುತ್ತಾರೆ.

ಕೇಂದ್ರ ಸರಕಾರದಿಂದ ಈ ಯೋಜನೆಯ ಘೋಷಣೆಯಾಗುತ್ತಿದ್ದಂತೆ ದೇಶದ ಹಲವು ಭಾಗಗಳಲ್ಲಿ ಜೋರು ಪ್ರತಿಭಟನೆಗಳು ನಡೆದವು. ಕೆಲವು ಕಡೆ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿತು. ಈ ಯೋಜನೆಯಿಂದಾಗಿ ಉದ್ಯೋಗ ಭದ್ರತೆ ಇಲ್ಲದಾಗುತ್ತದೆ ಎಂದು ಚರ್ಚೆಗಳು ನಡೆದವು. ಪಿಂಚಣಿ ವ್ಯವಸ್ಥೆ ಇರುವುದಿಲ್ಲ ಹಾಗೂ ಸಾಮಾಜಿಕ ಭದ್ರತೆಯ ಅನುಕೂಲಗಳು ಇರುವುದಿಲ್ಲ, ನಾಲ್ಕು ವರ್ಷಗಳ ಬಳಿಕ ಅಗ್ನಿವೀರರು ನಿರುದ್ಯೋಗಿಗಳಾಗುತ್ತಾರೆ ಎಂದು ಉದ್ಯೋಗಾಕಾಂಕ್ಷಿಗಳ ಗುಂಪು ಆರೋಪಿಸಿತ್ತು.

Advertisement

ಕೈಗಾರಿಕಾ ವಲಯಗಳಲ್ಲಿ ಹಾಗೂ ಸಾರ್ವಜನಿಕ ವಲಯ ಸಂಸ್ಥೆಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡುವುದಾಗಿ ಕೇಂದ್ರ ಸರಕಾರ ತಿಳಿಸಿದೆ. ಭಾರತೀಯ ಸೇನೆಯು ನಾಲ್ಕು ವರ್ಷ ಸೇವೆ ಪೂರೈಸಿದವರಲ್ಲಿ ಶೇಕಡ 25ರಷ್ಟು ಅಗ್ನಿವೀರರು ಶಾಶ್ವತ ಸೇವೆಗೆ ನಿಯೋಜನೆಗೊಳ್ಳುವ ಅವಕಾಶ ಪಡೆಯುತ್ತಾರೆ. ಅಗ್ನಿವೀರರು ನಿಗದಿತ ಸೇವೆಯ ಪೂರೈಕೆ ಬಳಿಕ ಸಾಮಾನ್ಯ ಕೇಡರ್‌ಗೂ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಅಗ್ನಿಪಥ ಯೋಜನೆಯ ಅಡಿಯಲ್ಲಿ ನೇಮಕಗೊಳ್ಳುವ ಅಗ್ನಿವೀರಿಗೆ ಮೊದಲ ವರ್ಷ 4.76 ಲಕ್ಷ ರೂಪಾಯಿ ಸಂಬಳ ನಿಗದಿಯಾಗಿರಲಿದೆ. ತಿಂಗಳಿಗೆ ಸುಮಾರು 30 ಸಾವಿರ ರೂಪಾಯಿ ಸಿಗಲಿದೆ. ವರ್ಷದಿಂದ ವರ್ಷಕ್ಕೆ ವೇತನ ಶ್ರೇಣಿಯಲ್ಲಿ ಬದಲಾವಣೆಯಾಗಲಿದ್ದು, ಕೊನೆಯ ವರ್ಷ (4ನೇ ವರ್ಷ) ವೇತನವು 6.92 ಲಕ್ಷ ರೂಪಾಯಿಗೆ ಹೆಚ್ಚಲಿದೆ. ನಾಲ್ಕು ವರ್ಷಗಳ ನಂತರ ಅಗ್ನಿವೀರರಿಗೆ ಪಿಂಚಣಿ ಸಿಗುವುದಿಲ್ಲ. ಆದರೆ, ತಿಂಗಳ ವೇತನದಲ್ಲಿ ಶೇಕಡ 30ರಷ್ಟು ಸೇವಾ ನಿಧಿಗೆ ಕಡಿತಗೊಳಿಸಲಾಗುತ್ತದೆ. ಅಂತಿಮವಾಗಿ 10 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ನೀಡಲಾಗುತ್ತದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror