Advertisement
Opinion

ಮಲೆನಾಡಿನ ಸಂಕಷ್ಟವೇ ಅವಕಾಶವಾಗಬಹುದೇ? : ‘ನಿರಪೇಕ್ಷಿತ ಕಾಡು ಕೃಷಿ’ ಹೊಸ ಪರಿಕಲ್ಪನೆ

Share

ಅದು ದಟ್ಟವಾದ ಪಶ್ಚಿಮ ಘಟ್ಟ ಕಾಡಿಗಂಟಿಕೊಂಡಿರುವ ಕುಂಬ್ರುಗುಡ್ಡ ಎಂಬ ಊರಿನ “ತಾಪವನ” ಎಂಬ ಮನೆ. ಶ್ರೀ ರಾಮಸ್ವಾಮಿ ಮತ್ತು ವಿಶಾಲಕ್ಷಮ್ಮ ದಂಪತಿಗಳ ಮನೆಯ ವಾಸಿಗಳು..

ಆಗ ಮದ್ಯರಾತ್ರಿ….. ಜೋರು ಮಳೆ ಗಾಳಿ ಬರುತ್ತಿದೆ…
ಮಳೆ ಬಿಟ್ಟಾಗ “ಕಪ್ಪೆಗಳು ” ಜೋರಾಗಿ ಇನ್ನಷ್ಟು ಮತ್ತಷ್ಟು ಕೂಗಿ ಮಳೆ ಹಾರೈಸುತ್ತಿದೆ…
ರಾಮಸ್ವಾಮಿಗಳ ಮನೆ ಎದುರ್ಗಡೆಯೇ ರಾಮಸ್ವಾಮಿಗಳ ಅಡಿಕೆ ತ್ಚಾಟ..!!
ಆಗೊಂದು ದೊಡ್ಡ ಬಿರುಗಾಳಿ ಬಂದ್ ಆ ಗಾಳಿಯ ತೀವ್ರತೆಗೆ “ಚಟಾರ್ ” ಎಂಬ ದೊಡ್ಡ ಸದ್ದು ಮಾಡುತ್ತಾ ಅಡಿಕೆ ಮರವೊಂದು ಮುರಿದುಬಿದ್ದ ಸೌಂಡ್ ಗೆ ಎಪ್ಪತ್ತೆಂಟು ವರ್ಷದ ರಾಮಸ್ವಾಮಿಗಳಿಗೆ ಎಚ್ಚರಿಕೆಯಾಗಿ ಪಕ್ಕದಲ್ಲೇ ಮಲಗಿದ್ದ ಹೆಂಯ ವಿಶಾಲಾಕ್ಷಿನ ಎಬ್ಬಿಸಿ …”ಯಂಥ ಮರೇತಿ ಈ ನಮೂನಿ ಮಳೆ ಗಾಳಿ ಬಂದರೆ ನಮ್ ತ್ವಾಟದ ಕಥೆ ಏನೇ…? ಕಳೆದ ವರ್ಷ ಅಂತೂ ಯಂತೂ ಅಡಿಕೆ ಫಸಲಿಲ್ಲ ..!! ಈ ವರ್ಷ ಮಳೆ ಕಮ್ಮಿ ಆದರೆ ನಾಕು ಅಡಿಕೆ ಕಾಳು ಅಡಿಕೆ ಆಗುತ್ತೇನೋ ಎಂಬಾಸೆ ನಮ್ಮದು.. ಈ ಆಳು ಕಾಳು ಬೇಸಾಯ ಗೊಬ್ಬರ , ಒಂದಕ್ಕೆರೆಡು ಪಟ್ಟಾದ ಔಷಧ ದ (ಬೋರ್ಡೋ ತುತ್ತಾ) ಬೆಲೆ…!! ಮಜೂರಿ..

ನಮ್ಮಂಥ ಮದ್ಯಮ ವರ್ಗದವರು ಕೃಷಿ ಮಾಡೋದು ಹೆಂಗೇ..? ತ್ವಾಟಕ್ಕೆ ಹೋಗೋಕೆ ಹೆದರಿಕೆ ಆಗುತ್ತದೆ..!! ಈ ಗಾಳಿ ಮಳೆಗೆ ಅಡಿಕೆ ಮರ ಮರ ಜಪ್ಪಿ‌ ಒಂದು ಕಡೆ ಅಡಿಕೆ ಉದುರಿದರೆ ಇನ್ನೊಂದು ಕಡೆಯಲ್ಲಿ ಮಂಗ ತರಿಯೋದು , ಮತ್ತೊಂದು ಕಡೆಯಲ್ಲಿ ಕೊಳೆ , ಮಗದೊಂದು ಕಡೆಯಲ್ಲಿ ಎಲೆಚುಕ್ಕಿ ರೋಗ ಬೇರೆ…!! ನಾವು ಜಮೀನು ಮನೆ ಬಿಟ್ಟು ಮಾಣಿ ಜೊತೆಗೆ ಬೆಂಗಳೂರು ಸೇರೋದೇ ಒಳ್ಳೆಯದೇನೋ..‌!! “ಅಂದರು. ಅದಕ್ಕೆ ಹೆಂಡತಿ ವಿಶಾಲಕ್ಷಮ್ಮ ” ಹಾಂ ಹಾಂ ನೀವು ಬೆಂಗಳೂರು ಸೇರಕ್ಕೆ “ಮಾಣಿ” ನೇ ಮೊನ್ನೆ ನಂಗೆ ಫೋನ್ ಮಾಡಿ “ಅಮ್ಮಾ ನಂಗ್ ಬೆಂಗಳೂರು ಬದಿ ಟೆಂನ್ಷನ್ ಜೀವನ ವೇ ಬೇಡವೇ ಬೇಡ.. ..‌ ನಾನು ಹಳ್ಳಿಗೆ ಬರ್ತೀನಿ ಅಂತ ಕೂತಿದಾನೆ…” ಅಂದರು.

ಹೊರಗಿನವರಿಗೆ ಈ ಮಲೆನಾಡು ಮಳೆ … ಈ ತಣ್ಣಗಿನ ವಾತಾವರಣ ಎಲ್ಲಾ ಚಂದ.. ಇಲ್ಲಿ ತ್ವಾಟ ಮನೆ ಮಾಡಿಕೊಂಡವರಿಗೆ ಮಳೆಗಾಲ ಬಂದ್ ತಕ್ಷಣ ಒಂಥರ ಚಳಿಜ್ವರ ಶುರುವಾಗುತ್ತದೆ.. ಪ್ಯಾಟೆಯವಕ್ಕೆ ಮಲೆನಾಡಿನ ಹಳ್ಳ , ಕೆಸರು ಗದ್ದೆ , ಮೋಡ ಕೌಚಿಕೊಂಡ ವಾತಾವರಣ ಎಲ್ಲಾ ಚಂದ.. ಇಲ್ಲೇ ಕೃಷಿ ಮಾಡಿಕೊಂಡ ಅದರಲ್ಲೂ ಅಡಿಕೆ ಕೃಷಿ ಮಾಡಿಕೊಂಡ ಅಡಿಕೆ ಬೆಳೆಗಾರ ರೈತರಿಗೆ ಒಂದೊಂದು ಮಳೆ ಬಂದಂಗೂ ಎದೆ ಡವ ಡವ ಹೊಡಕಣಕ್ಕೆ ಶುರುವಾಗುತ್ತದೆ… ಈ ಮಳೆ , ಮಂಗ , ಕಾಡುಕೋಣ , ಆನೆಗಳು, ಕಾಡುಹಂದಿ , ಕಡವೆ ಜಿಂಕೆಗಳು , ಮೊಲ , ಕೆಂಜಳಿಲು ಗಳ ಕಾಟದ ನಡುವೆ ಮಲೆನಾಡಿನ “ಅಡಿಕೆ ಕೃಷಿಕರು ” ಯಾವುದೋ “ಪ್ರಾಣಿ ಸಂಗ್ರಹಾಲಯದಲ್ಲಿ “ಕೃಷಿ ಮಾಡ್ತಿದ್ದಂಗನ್ನಿಸುತ್ತದೆ..!! . ಈ ವರ್ಷ ಮಳೆ ಕಮ್ಮಿ ಅಂತ ಮೊನ್ನೆ ಯಿಂದ ವಾಟ್ಸಾಪ್ ಗುಂಪಿನಲ್ಲಿ ಬರ್ತಿದೆ. ಆದರೆ ಘಾಟಿಗೆ ಹತ್ತಿರ ಇರೋ ಮಲೆನಾಡಿನಲ್ಲಿ ಹುಚ್ಚು ಮಳೆ ಹಾಳು ಮಳೆ ಬಂದೇ ಬರುತ್ತದೆ. ಎಷ್ಟೇ ಮಳೆ ಕಮ್ಮಿ ಯಾದರೂ ಮಲೆನಾಡಿಗರಿಗೆ ಒಂದಷ್ಟು ಅನಾಹುತ ಅಂತೂ ಆಗೇ ತೀರುತ್ತದೆ. ಮಲೆನಾಡಿಗರಿಗೆ ” ಮಳೆಗಾಲ ” ದಾಟಿದರೆ ಒಂದು ಜನ್ಮ ಮುಗಿಸಿದಂತೆ..!

ರಾಮಸ್ವಾಮಿ ಗಳಿಗೆ ಈ ಕೆಟ್ಟ ಪರಿಸ್ಥಿತಿ ಯಲ್ಲಿ ಮಗ ಮನೆಗೆ ಬರ್ತೀನಿ ಎಂದದ್ದು ರುಮ್ ಎನಿಸಿ ಇನ್ನಷ್ಟು ಮಂಡೆ ಬಿಸಿಯಾತು. “ನನಗೆ ನನ್ನ ಜೀವಮಾನಕ್ಕೇ ಈ ಮಲೆನಾಡಿನಲ್ಲಿ ಕೃಷಿ ಸಾಕು ಎನಿಸಿದೆ.  ನಿನ್ನ ಮಗನಿಗೆ ಒಂಚೂ ಬುದ್ದಿವಾದ ಹೇಳು…” ಎಂದರು .
ಹೆಂಡತಿ ವಿಶಾಲಕ್ಷಮ್ಮ ಗಂಡನಿಗೆ “ನಾಳೆ ಬೆಳಿಗ್ಗೆ ನೀವೇ ಮಾಣಿ ಹತ್ತಿರ ಏನಂತ ಕೇಳಿ ..‌ ಈಗ ಮನಕಣಿ ” ಅಂತ ಹೇಳಿ ಮಗ್ಗಲು ಬದಲಾಯಿಸಿದರು..

ಮಳೆ ಸದ್ದು ಹೆಚ್ಚಾಗ್ತನೇ ಇದೇ …  “ಹೋಯ್ ವಿಶಾಲಾಕ್ಷಿ..‌ ಇನ್ನೊಂದು ಹತ್ತು ದಿನ ಕರೆಂಟ್ ನಮಗಿಲ್ಲ ಕಣೆ.. ಕೆಇಬಿ” ಯವರಾದರೂ ಏನು ಮಾಡಲು ಸಾಧ್ಯ.. ನಾಳೆಯಿಂದ ಇನ್ವಾರ್ಟರ್ ನ್ನ ಸ್ವಲ್ಪ ಹಿತಮಿತವಾಗಿ ಬಳಸು..‌ “. ನಾ ಬಚ್ಚಲಿಗೆ ಹೋಗಿ ಬರ್ತೀನಿ…‌ ” ಎಂದು ಬ್ಯಾಟರಿ ಹಿಡದು ಯಜಮಾನರು ಬಚ್ಚಲಿಗೆ ಹೊರಟರು…

ರಾಮಸ್ವಾಮಿ ಗಳು ಬಚ್ಚಲಿಗೆ ಹೋಗಿ ಕ್ವಾಣೆಗೆ ಬರುವವರು ಮುಂಚೆಕಡೆ ಕಿಟಕಿ ಓಪನ್ ಮಾಡಿದವರು ಆ ಮೋಡ ಕಪ್ಪು ಗಟ್ಟಿದ ಕತ್ತಲಿನ ನಡುವೆ ಮನೆ ಅಂಗಳದ ತಗ್ಗಿನಲ್ಲಿದ್ದ ತ್ವಾಟದ ಅಡಿಕೆ ಮರಗಳು ತೂರಾಡುವುದನ್ನ ನೋಡಿದವರಿಗೆ ಇನ್ನಷ್ಟು ಮಂಡೆಬಿಸಿಯಾತು. ಕ್ವಾಣೆಗೆ ಬಂದು ಬೆಚ್ಚಗಿನ ಹೊದಕೆ ಮೈಮೇಲೆ ಎಳೆದು ಮುಸುಕು ಗಿರಿದು ಕೊಂಡರೂ ನಿದ್ರೆ ರಾಮಸ್ವಾಮಿ ಗಳ ಹತ್ತಿರಕ್ಕೂ ಸುಳಿಯಲಿಲ್ಲ…!!

ಮತ್ತೆ ಅರ್ಧಗಂಟೆಗೆ ರಾಮಸ್ವಾಮಿ ಗಳು ಬಚ್ಚಲಿಗೆ ಬ್ಯಾಟರಿ ಹಿಡಿದು ಹೊರಟರು.  ವಿಶಾಲಕ್ಷಮ್ಮ ಯಜಮಾನರಿಗೆ .. “ರೀ ಇವತ್ತು ನೀವು ಶುಗರ್ ಮಾತ್ರೆ ತಗುಣಲ್ವ..? ಅದೆಷ್ಟು ಸತಿ ಬಚ್ಚಲಿಗೆ ಹೋಗ್ತೀರ…? ” ಎಂದು ಕೇಳಿದರು ಸಿಟ್ಟು ಮತ್ತು ತಲೆಬಿಸಿಯಾಗಿ… ಅದಕ್ಕೆ ರಾಮಸ್ವಾಮಿ ಗಳು .. “ಈ ಥರ ಗಾಳಿ ಮಳೆ ಬರ್ತಿದೆ.. ನಮ್ಮ ವರ್ಷಾವದಿ ಉತ್ಪತ್ತಿ ಉದುರಿ ಹೋಗಿ ಕಪ್ ಮೂಲಕ ಹಳ್ಳದ ಪಾಲಾಗುತ್ತಿದೆ..‌ಇದರ ಮದ್ಯೆ ನಿನ್ನ ಮಗ ಬೇರೆ ಇಲ್ಲಿಗೆ ಬರ್ತೀನಿ ಅಂತಾನೆ ಅಂತ ಹೇಳ್ತಿಯಾ..‌? ತಲೆ ಬಿಸಿ ಹೆಚ್ಚಾಗಿ ಶುಗರ್ ಹೆಚ್ಚಾಗಿ ರೀಸಸ್ ಗೆ ಹೋಗುವಂಗಾಗದೇ ಇರುತ್ತದಾ…?” ಅಂತ ಮರು ಪ್ರಶ್ನಿಸಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಬೆಳಗಾತು…, ಎಲ್ಲೋ ಒಂದು ಮೂಲೆಯಲ್ಲಿ ಸಿಕ್ಕ ಒಂದು ಮುಷ್ಟಿ ಮೊಬೈಲ್ ನೆಟ್ವರ್ಕ್ ನಲ್ಲಿ ರಾಮಸ್ವಾಮಿಗಳು ಮಗನಿಗೆ ಫೋನ್ ಮಾಡಿ “ಮಾಣಿ ಎಂಥ ಕಥೆಯೋ ನಿಂದು ??!! ನಾವೆಲ್ಲ ಇಲ್ಲಿ ತ್ವಾಟ ಮನೆ ಹಾಳುಬಿಟ್ಟು ಪ್ಯಾಟೆ ಬದಿ ಸೇರಣ ಅಂದು ಕೊಂಡರೆ ನೀ ಈ ಕಾಡೂರಿಗೆ ಬಂದು ಕೃಷಿ ಮಾಡ್ತೀನಿ ಅಂತ ಅಮ್ಮ ನ ಹತ್ತಿರ ಹೇಳ್ತಿದ್ದಿ ಯಂತೆ ಹೌದನಾ…? ನಿಂಗೆ ಮಂಡೆ ಸರಿಯಿದ್ಯನ…? ” ಅಂತ ಸ್ಟ್ರಾಂಗ್ ಆಗಿ ಕ್ವಚ್ಷನ್ ಕೇಳಿದರು ಮಗನಿಗೆ.

ಮಗ ಅದಕ್ಕೆ “ಅಪ್ಪ ಅದು ಹಂಗಲ್ಲ… ನನ್ನ ಯೋಜನೆಯೇ ಬೇರೆ…. ನಮ್ಮ ಮನೆ ತೋಟದ ಕೋಗಿನ ಎಲ್ಲರ ತೋಟವನ್ನೂ ಖರೀದಿಸಿ , ತೋಟದ ತಲೆದಸಿ ದರೆ ಮೇಲೆ ಸಪರೇಟ್ ಸಪರೇಟ್ ಕಾಟೇಜು ನಮೂನೆಯ ಸಿಂಪಾಲ್ಲಾದ ಮನೆ ಕಟ್ಟುವುದು.. ತೋಟವನ್ನು ಎರಡೆರೆಡು ಎಕರೆ ವಿಭಾಗ ಮಾಡೋದು.. ಈ ತೋಟದಲ್ಲಿ ಹೈಬ್ರೀಡ್ ಮೇವಿನ ಹುಲ್ಲು ಬೆಳೆಯೋದು, ಕೋಕೋ ಬೆಳೆಯೋದು, ಬಾಳೆ ಬೆಳೆಯೋದು , ತೋಟದ ಸುತ್ತಲೂ ಎಲ್ಲೂ ಒಂದಡಿ ಜಾಗ ಬಿಡದೇ ಬಗೆ ಬಗೆಯ ಸೀಝನ್ ಹಣ್ಣಿನ ಗಿಡ ನೆಟ್ಟು ಡೆವಲಪ್ಮೆಂಟ್ ಮಾಡಿ ಪಟ್ಟಣದ ಶ್ರೀಮಂತರಿಗೆ ಈ ತೋಟ ಮನೇನ ಮಾರಾಟ ಮಾಡೋದು…
ರಾಮಸ್ವಾಮಿ- ಅಯ್ಯೋ ಮಾಣಿ.. ನಿನ್ನ ಹುಚ್ಚು ಕಥೆಗೆ ಕಲ್ ಹಾಕ್ತು… ಹೈಬ್ರೀಡ್ ಹುಲ್ಲು ತೋಟದಲ್ಲಿ ಬೆಳದರೆ ಕಾಡು ಕೋಣ , ಕಡವೆ ಗಳು ತ್ಚಾಟದಲ್ಲೇ ಉಳಿಯೋಲ್ವನೋ..? ಕೋಕೋ ಬೆಳದರೆ ” ಕಬ್ಬೆಕ್ಕು ” ಕೆಂಜಳಿಲು ” ಬರೋಲ್ವೇನೋ..? ನೀ ಹೇಳಿದ್ದೆಲ್ಲ ನಮ್ಮ ಕಡೆ ಬೆಳದರೆ ಕಾಡು ಪ್ರಾಣಿಗಳೆಲ್ಲಾ ನಮ್ಮ ತ್ವಾಟದಲ್ಲೇ ಖಾಯಂ ಆಗಿ ಉಳಿಪಾಯಣ ಮಾಡೋಲ್ವಾ..?? ”

ಮಗ – “ಅಪ್ಪಯ್ಯ .. ನೀವು ಮಲೆನಾಡನೋರಿಗೆ ಭಗವಂತ ಕೊಟ್ಟ ಮಲೆನಾಡಿನಲ್ಲಿರೋ ಇರೋ ಸಂಪನ್ಮೂಲಗಳ ಬಳಸಲು ಬರೋಲ್ಲ… ಮಳೆಗಾಲ ಇಡೀ ವಿಪರಮಿತ ಮಳೆ ತ್ವಾಟ ಪೂರಾ ಕೊಳೆ ಬಂದು ನಾಶ ಆತು ಅಂತ ಕೊರಗ್ತೀರ… ಹಾಗೆ ಕೊರಗೋದು ಬಿಡಿ… ಮನೆನ ಹೋಂ ಸ್ಟೇ ಮಾಡಿ.. ಇಲ್ಲ ಈ ಥರ ಡೆವಲಪ್ಮೆಂಟ್ ಮಾಡಿ ಮಾರಾಟ ಮಾಡಿ…

ಮನೆ ಮುಂಚೆಕಡೆ ಒಂದು ತ್ವಾಟದ ದಿಕ್ಕಿನಲ್ಲಿ ಒಂದು ಖುರ್ಚಿ ಹಾಕಿ ಅವರನ್ನು ಕೂರಿಸಿ ಅವರಿಗೆ ಬಿಸಿ ಬಿಸಿ ಕಾಪಿ ಮಾಡಿಕೊಟ್ಟು ಹಲಸಿನ ಹಪ್ಪಳ , ಹಲಸಿನ ಚಿಪ್ಸು ಮಾಡಿ ತಿನ್ನಲು ಕೊಟ್ಟು ಮಲೆನಾಡಿನ ಮಳೆ ನ ಎಂಜಾಯ್ ಮಾಡಿಸಿ . ತೋಟಕ್ಕೆ ಬರೋ ಕಾಡುಕೋಣ , ಕಡವೆ , ಜಿಂಕೆ , ಕೆಂಜಳಿಲು , ಮಂಗ , ನವಿಲು ಗಳನ್ನು ತೋರಿಸಿ ” ಅಗ್ರಿ ಫಾರೆಸ್ಟ್ರಿ ಟೂರಿಸಂ ” ಮಾಡಿಸಿ ..‌.

ಪೇಟೆ ಮಂದಿಗೆ ಕಾಡು ಪ್ರಾಣಿಗಳು ನಿಮ್ಮ ದೇ ಕೃಷಿ ಭೂಮಿಯಲ್ಲಿ.. ಅಗ್ರಿ ವೈಲ್ಡ್ ಫಾರೆಸ್ಟ್ ಫಾರ್ಮ್ ಲ್ಯಾಂಡ್.. ಎಂದು ಆಕರ್ಷಕ ಜಾಹೀರಾತು ನೀಡಿ.. ಇಲ್ಲಿ ಕೃಷಿ ಫಸಲು ಕೊನೆಯಲ್ಲಿ ಕಾಡು ಪ್ರಾಣಿಗಳು ತಿನ್ನಲಿ .. ಕೃಷಿ ಉತ್ಪನ್ನ ಗಳ ತಿನ್ನೋಕೆ ಬರುವ ಕಾಡು ಪ್ರಾಣಿಗಳ ಪಟ್ಟಣಿಗರಿಗೆ ತೋರಿಸಿ ಹಣ ಮಾಡಿ..‌ಇದು ಅವು ನಿಮ್ಮ ಕೃಷಿ ಬೆಳೆ ನಷ್ಟ ಮಾಡಿದ್ದಕ್ಕಿಂತ “ದುಪ್ಪಟ್ಟು” ಲಾಭ ನಿಮಗೆ ತರುತ್ತದೆ… ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ತೋಟ ಈಗ ನೀವು “ನಿತ್ ಮೆಟ್ಟಲ್ಲಿ ಮಾರಾಟ ಮಾಡುತ್ತೀರ ” ಎಂದರೆ ನಿಮ್ಮ ಗಳ ತೋಟಕ್ಕೆ ಮೂರು ಕಾಸೂ ಸಿಗೋಲ್ಲ.. ಆದರೆ ಹೀಗೆ ಡೆವಲಪ್ಮೆಂಟ್ ಮಾಡಿ “ಅಗ್ರಿ ವೈಲ್ಡ್ ಎನಿಮಲ್ ಫಾರೆಸ್ಟ್” ಎಂದು ಆಕರ್ಷಕ ಹೆಸರಿಟ್ಟು ಪಟ್ಟಣಿಗರಿಗೆ ಮಾರಾಟ ಮಾಡಿ ಲಾಭಗೊಳಿಸಿ…
ನಿಮ್ಮ ಕೃಷಿ ಬದುಕಿಡೀ ‘ಮಳೆಗಾಲದಲ್ಲಿ ಮಳೆ ಹೆಚ್ಚು , ಚಳಿಗಾಲದಲ್ಲಿ ಇನ್ನೊಂದು ಸಮಸ್ಯೆ ಬ್ಯಾಸಿಗೆಲಿ ನೀರಿಲ್ಲ ಅಂತ ಕೊರಗು , ಇದರ ಮದ್ಯೆ ಕಾಡು ಪ್ರಾಣಿಗಳ ಹಾವಳಿ ಅಂತ ಬೈತೀರ…” ಇದನ್ನೆಲ್ಲಾ ಬಿಟ್ಟು ಇದೇ ನಕಾರಾತ್ಮಕ ವಿಚಾರವನ್ನೇ ತೆಗೆದುಕೊಂಡು ಮಾರುಕಟ್ಟೆ ಮಾಡಿ. ನಾನು ನನ್ನ ಫ್ರೆಂಡ್ಸ್ ಜೊತೆಗೂಡಿ ಈ ಯೋಜನೆ ಸಾಕಾರ ಮಾಡುವವರಿದ್ದೇವೆ..” ಎಂದು ಮಗ ಫೋನ್ ಇಟ್ಟ‌ .‌

ಅಪ್ಪಯ್ಯ ರಾಮಸ್ವಾಮಿ ಗಳು ವಿಶಾಲಕ್ಷಮ್ಮ ತಂದು ಕೊಟ್ಟ ಬೆಲ್ಲದ ಕಾಪಿ ಕುಡೀತ ತ್ವಾಟದ ಕಡೆ ನೋಡತೊಡಗಿದರು. ಅತ್ತ ಮಗ ಬೆಂಗಳೂರಿನಲ್ಲಿ ಕೂತು “ನಿರ್ಗಮನ ನಿರಪೇಕ್ಷಿತ ಕಾಡು ಕೃಷಿ” ಎನ್ನುವ ಯೋಜನೆ ಗೆ ರೂಪುರೇಷೆ ಸಿದ್ದಪಡಿಸತೊಡಗಿದ.

The thought-provoking essay “Nirapekshita Kaadu Krishi” explores how the challenges faced by Malnad farmers—heavy rainfall, wildlife intrusion and crop losses could be transformed into opportunities through agri-forest tourism and nature-based rural enterprises. The essay argues that what farmers often see as problems may actually become valuable assets in a changing rural economy.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…

7 hours ago

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

1 day ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

1 day ago